Desi Swara: ಮಸ್ಕತ್‌- 40ನೇ ವರ್ಷದ ಗಣೇಶೋತ್ಸವ-ಮೂರು ದಿನದ ಉತ್ಸವ

ಪಂಚಾಮೃತಾಭಿಷೇಕ ಮತ್ತು ಗಣಹೋಮ ಕಾರ್ಯಕ್ರಮಗಳು ನೆರವೇರಿತು.

Team Udayavani, Sep 14, 2024, 1:35 PM IST

Desi Swara: ಮಸ್ಕತ್‌- 40ನೇ ವರ್ಷದ ಗಣೇಶೋತ್ಸವ-ಮೂರು ದಿನದ ಉತ್ಸವ

ಒಮಾನ್‌: ಒಮಾನ್‌ ಮಹಾಗಣೇಶೋತ್ಸವ ಸಮಿತಿಯ ತುಳುಕೂಟ ಮಸ್ಕತ್‌ ವತಿಯಿಂದ ಸೆ.7-9ರ ವರೆಗೆ ಮಸ್ಕತ್‌ನ ಶಿವ ದೇವಸ್ಥಾನದ ಸಭಾಂಗಣದಲ್ಲಿ ಸಾಂಪ್ರದಾಯಿಕ ಮತ್ತು ಪರಿಸರ ಸ್ನೇಹಿಯಾಗಿ ಭಕ್ತಿ ಹಾಗೂ ಉತ್ಸುಕತೆಗೆ ರೂಪಕವಾಗಿರುವ ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಭಕ್ತಿ ಭಾವದ ಈ 40ನೇ ವರ್ಷದ ಸಂಭ್ರಮಾಚರಣೆಯಲ್ಲಿ ಉತ್ಸುಕತೆಯಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು. ಅನಿವಾಸಿ ಭಾರತೀಯರು ಮಾತ್ರವಲ್ಲದೇ ನೆರೆಯ ದೇಶಗಳಾದ ನೇಪಾಲ, ಥೈಲ್ಯಾಂಡ್‌, ಬಾಂಗ್ಲಾದೇಶ, ಶ್ರೀಲಂಕಾ, ದುಬೈ, ಬಹ್ರೈನ್‌, ಕುವೈಟ್‌ನಿಂದಲೂ ಅನೇಕ ಭಕ್ತರು ಉಪಸ್ಥಿತರಿದ್ದರು. ಮೊದಲನೇ ದಿನ ಪ್ರಧಾನ ಅರ್ಚಕರಾದ ಶಂಕರ್‌ ನಾರಾಯಣ ಅಡಿಗ ಅವರ ನೇತೃತ್ವದಲ್ಲಿ ಪ್ರತಿಷ್ಠಾಪನೆ, ಪಂಚಾಮೃತಾಭಿಷೇಕ ಮತ್ತು ಗಣಹೋಮ ಕಾರ್ಯಕ್ರಮಗಳು ನೆರವೇರಿತು.

ಈ ಭವ್ಯ ಉತ್ಸವದ ಮೂರು ದಿನಗಳು ಪುಣ್ಯಾಃವಾಚನ, ಗಣಹೋಮ, ಮಹಾಪೂಜೆ, ರಂಗಪೂಜೆ ಮತ್ತು ಪುಷ್ಪಾರ್ಚನೆಯಂತಹ ವಿವಿಧ ಪೂಜೆಗಳಿಂದ ಕೂಡಿತ್ತು. ಭಕ್ತರು ಮುಂತಾದ ನೈವೇದ್ಯಗಳನ್ನು ಅರ್ಪಿಸಿ ಹರಕೆ ತೀರಿಸುವ ಮೂಲಕ ಗಣೇಶನ ಆಶೀರ್ವಾದ ಪಡೆದರು.

ಓಂ ಶ್ರೀ ಗಣೇಶ ವೃಂದವು ಭಜನೆ ಮತ್ತು ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಮೂರು ದಿನದ ಉತ್ಸವದಲ್ಲಿ, ಮುಂಜಾನೆಯಿಂದ ತಡರಾತ್ರಿಯವರೆಗೆ ದೇವಾಲಯದಲ್ಲಿ ವಿವಿಧ ಸಾಂಸ್ಕೃತಿಕ ಮತ್ತು ಭಕ್ತಿ ವೈಭವದ ಸಂಭ್ರಮಾಚರಣೆಗೆ ಭಕ್ತರು ಸಾಕ್ಷಿಯಾದರು.

ದೇವಾಲಯದ ಪ್ರವೇಶದ್ವಾರ ಮತ್ತು ಸಭಾಂಗಣವನ್ನು ಬಾಳೆಗಿಡ, ಮಾವಿನ ಎಲೆ, ಕಬ್ಬು, ಎಳನೀರು, ಖರ್ಜೂರ ಮತ್ತು ಹೂವುಗಳಿಂದ ಅಲಂಕರಿಸಲಾಯಿತು. ಸಭಾಂಗಣದ ಗೋಡೆಗಳನ್ನು ಹೂವಿನ ಮಾಲೆ ಮತ್ತು ಗಾಢವರ್ಣದ ಕೃತಕ ಬೆಳಕಿನಿಂದ ಅಲಂಕರಿಸಲಾಯಿತು.

ಜೇಡಿ ಮಣ್ಣಿನಿಂದ ತಯಾರಿದ ಗಣೇಶ ಮೂರ್ತಿಯನ್ನು ಚಿನ್ನದ ಕೀರಿಟ, ಚಿನ್ನದ ಸರ ಮತ್ತು ಪರಿಮಳಯುಕ್ತವಾದ ಮಂಗಳೂರು ಮಲ್ಲಿಗೆ, ಗುಲಾಬಿ, ಕಮಲ, ಮಾರಿಗೋಲ್ಡ್‌ ಹೂವುಗಳಿಂದ ಅಲಂಕರಿಸಲಾಯಿತು. ಉತ್ಸಾಹಿ ಮತ್ತು ಸೃಜನಾತ್ಮಕ ಸ್ವಯಂಸೇವಕರ ತಂಡವು ಸಭಾಂಗಣಕ್ಕೆ ಹಬ್ಬದ ಮತ್ತ ಸಾಂಪ್ರದಾಯಿಕ ಸೌಂದರ್ಯದ ವಾತಾವರಣವುನ್ನು ಕಲ್ಪಿಸಿದರು.

ಪ್ರತಿಭಾವಂತರಾದ ಪಾರು ನೆಗಂಧಿ ಮತ್ತು ಪ್ರಗ್ನಾಶಾ ಅವರು ಮಂಟಪದ ಮುಂಭಾಗದಲ್ಲಿ ಗಣೇಶನನ್ನು ರಂಗೋಲಿ ರೂಪದಲ್ಲಿ ಕಲಾತ್ಮಕವಾಗಿ ಚಿತ್ರಿಸಿದರು. ಧಾರ್ಮಿಕ ಸಂಕೇತಗಳಿಂದ ಆಲಂಕರಿಸಲ್ಪಟ್ಟ ರಂಗೋಲಿ ವಿನ್ಯಾಸಕ್ಕೆ ಹೊಳೆಯುವ ಕೃತಕ ಕಲ್ಲುಗಳನ್ನು ಬಳಸಲಾಗಿತ್ತು.

ಸಂಪ್ರದಾಯಗಳನ್ನು ಅನುಸರಿಸಿ, ಗಣಪತಿ ಬಪ್ಪಾ ಮೋರಿಯಾ, ಮಂಗಳ ಮೂರ್ತಿ ಮೋರಿಯಾ ಎಂದು ಸೆ.9ರ ರಾತ್ರಿಯಂದು ಗಣೇಶನನ್ನು ವಿಸರ್ಜಿಸಲಾಯಿತು. ಮೂರು ದಿನವು ಭಕ್ತರಿಗೆ ಲಡ್ಡು ಪ್ರಸಾದವನ್ನು ವಿತರಿಸಲಾಯಿತು. ಮಂಗಳೂರಿನ ಸಾಂಪ್ರದಾಯಿಕ ಆಹಾರವನ್ನು ಮಹಾಪ್ರಸಾದದ ರೂಪದಲ್ಲಿ ನೆರೆದಿದ್ದ ಭಕ್ತರಿಗೆ ವಿತರಿಸಲಾಯಿತು.

ಒಮಾನ್‌ ಸಲ್ತ್‌ನತ್‌ನಾ ಭಾರತದ ರಾಯಭಾರಿಯಾದ ಅಮಿತ್‌ ನಾಗರಾಜ್‌, ವಿವಿಧ ವ್ಯಾಪಾರ ವಲಯದ ಗಣ್ಯರುಗಳಾದ ಎಚ್‌.ಇ. ಶೇಖ್‌ ಅನಿಲ್‌ ಖೀಮಿ, ಅಶ್ವಿ‌ನ್‌ ಬಾಯಿ ಧರ್ಮಸ್ಯ ಮತ್ತು ಕುಟುಂಬ, ಬಕುಲ್‌ ಬಾಯಿ ಮೆಹ್ತಾ ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ಶಿಲ್ಪ ಕಲಾವಿದ ಸದಾಶಿವ ಕಾಮತ್‌ ಅವರು ಭವ್ಯವಾದ ಪರಿಸರ ಸ್ನೇಹಿ ಮಣ್ಣಿನ ಮೂರ್ತಿಯನ್ನು ನಿರ್ಮಿಸಿದರು. ಸಮಿತಿಯ ಸದಸ್ಯರು, ಅಸಂಖ್ಯಾಕ ಸ್ವಯಂಸೇವಕರು ಸಮರ್ಪಣ ಭಾವದಿಂದ ಮೂರು ದಿನಗಳ ಉತ್ಸವದ ಯಶಸ್ಸಿಗೆ ಸಹಕರಿಸಿದರು.

ಒಮಾನ್‌ ಗಣೇಶೋತ್ಸವ ಸಮಿತಿಯ ಸಂಚಾಲಕರಾದಚ ಎಸ್‌.ಕೆ ಪೂಜಾರಿ ಅವರ ಮಾರ್ಗದರ್ಶನದಲ್ಲಿ, ಸ್ವಯಂ ಸೇವಕರುಗಳಾದ ಉಮೇಶ್‌ ಬಂಟ್ವಾಳ್‌, ಶಶಿಧರ್‌ ಶೆಟ್ಟಿ ಮಲ್ಲಾರ್‌, ನಾಗೇಶ್‌ ಶೆಟ್ಟಿ ಕಿನ್ನಿಗೋಳಿ, ಡಾ| ಸಿ.ಕೆ.ಅಂಚನ್‌, ರವಿ ಕಾಂಚನ್‌, ಗುರುದಾಸ್‌ ಪೆಜತ್ತಾಯ, ದೇವಾನಂದ ಅಮೀನ್‌, ಸುಕುಮಾರ್‌ ಅಂಚನ್‌, ಸಚಿನ್‌ ಕಾಮತ್‌ ಇವರುಗಳ ಅವಿರತ ಪ್ರಯತ್ನದಿಂದ ಮೂರು ದಿನದ ಉತ್ಸವವು ಯಶಸ್ವಿಯಾಗಿ ನೆರವೇರಿತು. ಹಿರಿಯ ಸಮಿತಿಯ ಸದಸ್ಯರು ಸಹಕರಿಸಿದರು.

ಸೆ.20: ಸಂಗೀತ ಸಂಧ್ಯಾ
40ನೇ ಗಣೇಶೋತ್ಸವದ ಅಂಗವಾಗಿ ವಿದೂಷಿ ನಾದಿನ್ನಿ ರಾವ್‌ ಮತ್ತು ತಂಡದಿಂದ ಭವ್ಯವಾದ ಸಂಗೀತ ಸಂಧ್ಯಾವನ್ನು ಸೆ. 20ರಂದು ದಸೆùಟ್‌ನಾ ಶ್ರೀ ಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮವು ಸಂಜೆ 5 ಗಂಟೆಗೆ ಆರಂಭವಾಗಿಲಿದ್ದು, ಎಲ್ಲರಿಗೂ ಮುಕ್ತ ಪ್ರವೇಶವಿರುತ್ತದೆ.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.