Shalivahana Shake Movie Review: ಟೈಮ್ ಲೂಪ್ ಕಥೆಯ ʼಶಾಲಿವಾಹನ ಶಕೆ’
Team Udayavani, Sep 14, 2024, 2:38 PM IST
ಹಳ್ಳಿಯಲ್ಲಿ ಜಾಲಿಯಾಗಿ ಓಡಾಡಿಕೊಂಡಿರುವ ಹುಡುಗನಿಗೆ ಊರ ಕೆರೆಯಲ್ಲೊಂದು ಶಂಖ ಸಿಗುತ್ತದೆ. ಅಲ್ಲಿಂದ ಆತನಿಗೆ ಬಗೆ ಬಗೆಯ ಕನಸುಗಳು ಬೀಳತೊಡಗುತ್ತದೆ. ಇಲ್ಲಿ ಹಲವು ಘಟನೆಗಳು ನಡೆದಂತೆ ಆಗುತ್ತದೆ. ಆದರೆ, ನಡೆದಿರುವುದಿಲ್ಲ. ನಾಳೆ ನಡೆಯುವ ಘಟನೆ ಆತ ಇವತ್ತೇ ಕಂಡಿರುತ್ತಾನೆ.. ಇದೇ ಟೈಮ್ ಲೂಪ್.. ಈ ವಾರ ತೆರೆಕಂಡಿರುವ “ಶಾಲಿವಾಹನ ಶಕೆ’ ಸಿನಿಮಾ ಟೈಮ್ ಲೂಪ್‌ನೊಂದಿಗೆ ಸಾಗುವ ಪ್ರಯತ್ನ.
ಅಲ್ಲಿಗೆ ಇದೊಂದು ರೆಗ್ಯುಲರ್ ಅಂಶವನ್ನು ಬಿಟ್ಟು ಮಾಡಿದ ಸಿನಿಮಾವೆಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ತುಮಕೂರು ಬಳಿಯ ಹಳ್ಳಿಯೊಂದರಲ್ಲಿ ನಾಲ್ಕು ಹುಡುಗರ ಮಧ್ಯೆ ನಡೆಯುವ ಕಥೆಗೆ ಟೈಮ್ ಲೂಪ್ ಸ್ಪರ್ಶ ನೀಡಲಾಗಿದೆ. ಇಲ್ಲಿ ನೀವು ಒಮ್ಮೆ ನೋಡಿದ ದೃಶ್ಯ ಮತ್ತೂಮ್ಮೆ ನಿಮ್ಮ ಮುಂದೆ ಬರುತ್ತದೆ. ತೆರೆಮೇಲೆ ಏನಾಗುತ್ತಿದೆ ಎಂಬ ಸಣ್ಣ ಗೊಂದಲದ ಜೊತೆಗೇ ಸಾಗುವ ಸಿನಿಮಾ ಅಂತಿಮವಾಗಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದೆ.
ಇಲ್ಲೊಂದು ಶಂಖವಿದೆ. ಇಡೀ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸುವುದೇ ಆ ಶಂಖ. ಅದೇ ಸಿನಿಮಾದ ಹೈಲೈಟ್. ಚಿತ್ರಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಒಂದು ವೇಳೆ ಜೀವನದಲ್ಲಿ ನಡೆದ ಘಟನೆಯನ್ನು ಸರಿಪಡಿಸಿಕೊಳ್ಳಲು ಉತ್ತಮ ಚಾನ್ಸ್ ಸಿಕ್ಕರೆ ಏನು ಮಾಡಬಹುದು ಎನ್ನುವುದನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಪ್ರೇಕ್ಷಕನ ಯೋಚನೆಗೆ ಒಂದಷ್ಟು ಕೆಲಸ ಕೊಡುವ ಸಿನಿಮಾ “ಶಾಲಿವಾಹನ ಶಕೆ’ ಎಂದರೆ ತಪ್ಪಲ್ಲ. ಏಕೆಂದರೆ ನೇರ ನಿರೂಪಣೆ ಇಲ್ಲದೇ ಸಾಗುವ ಸಿನಿಮಾವಿದು.
ಅದಕ್ಕೆ ಮತ್ತದೇ ಕಾರಣ ಟೈಮ್ ಲೂಪ್. ಚಿತ್ರದಲ್ಲಿ ಲವ್ ಸ್ಟೋರಿಯೂ ಇದೆ. ಪ್ರಯತ್ನವಾಗಿ ಚಿತ್ರವನ್ನು ಮೆಚ್ಚಬಹುದು ಗಿರೀಶ್ ನಿರ್ದೇಶನದ ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ. ಗಿರೀಶ್‌ಗೆ ಜೋಡಿಯಾಗಿ ನಟಿ ಸುಪ್ರೀತಾ ಬಣ್ಣ ಹಚ್ಚಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.