International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ

ಪ್ರಜಾಪ್ರಭುತ್ವ ಬದುಕು ವಿಶ್ವಕ್ಕೆ ಒಂದುಮಾದರಿ

Team Udayavani, Sep 15, 2024, 10:03 AM IST

International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ

ವಿಶ್ವ ಸಂಸ್ಥೆ 2007ರಂದು ಒಂದು ಘನ ನಿರ್ಧಾರ ತೆಗೆದುಕೊಂಡು ಸೆಪ್ಟೆಂಬರ್‌ 15ರಂದು ವಿಶ್ವ ವ್ಯಾಪಿಯಾಗಿ ಪ್ರಜಾಪ್ರಭುತ್ವ ದಿನವಾಗಿ ಆಚರಿಸೇೂಣ ಅನ್ನುವ ಸಂಕಲ್ಪಗೆ ಬಂದ ದಿನವದು. ವಿಶ್ವ ಸಂಸ್ಥೆಯ 193 ಸದಸ್ಯ ರಾಷ್ಟ್ರಗಳಲ್ಲಿ ಹೆಚ್ಚಿನ ದೇಶಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡು ನಡೆಯುತ್ತಿರುವ ದೇಶಗಳು ಹಾಗಂತ ಎಲ್ಲಾ ದೇಶಗಳು ಸಂಪೂರ್ಣವಾದ ಪ್ರಜಾಪ್ರಭುತ್ವ ದೇಶವೆಂದು ಕರೆಯುವುದು ಕೂಡಾ ತಪ್ಪಾಗ ಬಹುದು.

ಉದಾ:ಚೀನಾ, ರಷ್ಯಾದಂತಹ ದೇಶಗಳು.ಅದೇ ಭಾರತಕ್ಕೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶೇಷವಾದ ಸ್ಥಾನ ಮಾನವಿದೆ. ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಪ್ರಜಾಪ್ರಭುತ್ವ ದೇಶವಿದ್ದರೆ ಅದು ಭಾರತ..ಮಾತ್ರವಲ್ಲ ಪ್ರಜಾಸತ್ತಾತ್ಮಕ ತತ್ವಗಳನ್ನು ಮೈಗೂಡಿಸಿ ಗೊಂಡು ನಡೆಯುತ್ತಿರುವ ಹೆಗ್ಗಳಿಕೆ ನಮಗಿದೆ.ಸರಿ ಸುಮಾರು 97 ಕೇೂಟಿಗೂ ಮಿಕ್ಕಿ ಮತದಾರರನ್ನು ಹೊಂದಿರುವ ವಿಶ್ವದ ಏಕೈಕ ದೇಶವೆಂದರೆ ಅದು ಭಾರತ. ನಮ್ಮ ಸಂವಿಧಾನದ ಆಶಯದಂತೆ ನಿಯಮ ಬದ್ಧವಾಗಿ ಮುಕ್ತ ಪಾರದರ್ಶಕವಾದ ಚುನಾವಣೆಗಳನ್ನು ನಡೆಸಿಕೊಂಡು ಬಂದಿರುವ ಕೀರ್ತಿಯೂ ನಮಗಿದೆ.

ಅದಕ್ಕಾಗಿಯೇ ಇಂಗ್ಲಿಷ್‌ನಲ್ಲಿ ಒಂದು ಮಾತಿದೆ “Elections are the barometer of democracy “.ಈ ಅರ್ಥದಲ್ಲಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಅತ್ಯಂತ ಪಾರದರ್ಶಕವಾಗಿ ಯಾವುದೆ ಹೆಚ್ಚಿನ ಗೊಂದಲವಿಲ್ಲದೆ ಚುನಾವಣೆಗಳನ್ನು ನಡೆಸಿ ಸರ್ಕಾರಗಳನ್ನು ಸ್ಥಾಪನೆ ಮಾಡಿದ ಕೀರ್ತಿ ನಮ್ಮ ಸ್ವಾಯತ್ತತೆ ಸಂಸ್ಥೆಯಾದ ಚುನಾವಣಾ ಆಯೇೂಗಕ್ಕಿದೆ. ಈ ನಿಟ್ಟಿನಲ್ಲಿ ನಮ್ಮ ರಾಜಕೀಯ ಪ್ರಜಾಪ್ರಭುತ್ವ ಬದುಕು ವಿಶ್ವಕ್ಕೆ ಒಂದುಮಾದರಿ ಎಂದೇ ಹೇಳ ಬೇಕು.

ಪ್ರಜಾಪ್ರಭುತ್ವ ಅಂದರೆ ಬರೇ ರಾಜಕೀಯ ಬದುಕು ಒಂದೇ ಅಲ್ಲ..ಇದರ ಜೊತೆಗೆ ಆರ್ಥಿಕ ಬದುಕು ಅಷ್ಟೇ ಮುಖ್ಯ.ಸ್ವಾತಂತ್ರ್ಯ ಪ್ರಾಪ್ತವಾಗಿ ಈ ಏಳುವರೆ ದಶಕಗಳ ಕಾಲದಲ್ಲಿ ಭಾರತ ಆಥಿ೯ಕವಾಗಿ ಸಾಕಷ್ಟು ಬೆಳದಿದೆ. ಜೀವನಮಟ್ಟವೂ ಸುಧಾರಣೆಯಾಗಿದೆ.1950ರ ಕಾಲದಲ್ಲಿ ಒಟ್ಟಾರೆ ದೇಶದಲ್ಲಿ ಸಾಕ್ಷರತಾ ಪ್ರಮಾಣವಿದ್ದದ್ದು ಕೇವಲ ಶೇ.24ರಷ್ಟು ಇದು ಈಗ ಶೇ.74ರ ಗಡಿ ದಾಟಿದೆ. ಕೃಷಿ ಕೈಗಾರಿಕೆ ತಾಂತ್ರಿಕತೆಯಲ್ಲೂ ಕೂಡಾ ಸಾಕಷ್ಟು ಬೆಳೆದಿದೆ. ವಿಶ್ವದಲ್ಲಿಯೇ ಐದನೇ ಆರ್ಥಿಕ ಶಕ್ತಿಯಾಗಿ ಭಾರತ ನಿಂತಿದೆ. ಅನ್ನುವುದು ನಮ್ಮ ಬೆಳವಣಿಗೆಯ ವೇಗವನ್ನು ಸೂಚಿಸುವ ಸೂಚ್ಯಂಕವೂ ಹೌದು.

ಆದರೂ ಕೂಡಾ ಈ ಆರ್ಥ ಕ ಸ್ವಾತಂತ್ರ್ಯ ದೇಶದ ಒಳಗೆ ಎಲ್ಲರಿಗೂ ಸರಿ ಸಮಾನವಾಗಿ ದಕ್ಕಿದೆ ಅನ್ನುವುದನ್ನು ಕೂಡ ನಾವು ಆತ್ಮ ವಿಮರ್ಶೆ ಮಾಡಿಕೊಳ್ಳ ಬೇಕಾದ ದಿನವೂ ಹೌದು. ಇಂದಿಗೂ ಅದೇಷ್ಟೊ ಮಂದಿ ಭಾರತೀಯರು ಬಡತನದ ರೇಖೆಗಿಂಯ ಕೆಳಗೆ ಬದುಕುತ್ತಿದ್ದಾರೆ. ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವುದನ್ನು ನೇೂಡ ಬೇಕಾಗಿದೆ. ಗಾಂಧೀಜಿಯವರು ಹೇಳಿದ ಮಾತು ಇಲ್ಲಿ ನೆನಪಿಸಲೇ ಬೇಕು “ಎಲ್ಲಿಯ ತನಕ ನಮ್ಮ ಜನಸಾಮಾನ್ಯರಿಗೆ ಆರ್ಥಿಕ ಸ್ವಾತಂತ್ರ್ಯ ಸಿಗುವುದಿಲ್ಲವೊ ಅಲ್ಲಿಯ ತನಕ ಈ ರಾಜಕೀಯ ಸ್ವಾತಂತ್ರ್ಯಕ್ಕೆ ಯಾವುದೆ ಅರ್ಥ ಬರುವುದಿಲ್ಲ “.

ಈ ಮಾತು ಸತ್ಯ ಅನ್ನುವುದು ಈಗ ನಮಗೆ ಅರ್ಥ ವಾಗಲೂ ಶುರುವಾಗಿದೆ. ನಿರುದ್ಯೋಗದ ಸಮಸ್ಯೆ ಜೀವಂತವಾಗಿಯೇ ಇದೆ.ಇದರ ಕಡೆಗೂ ಹೆಚ್ಚಿನ ಆದ್ಯತೆ ನೀಡಬೇಕಾದ ಅನಿವಾರ್ಯತೆಯೂ ಇದೆ. ಕೃಷಿ ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬು. ಇದನ್ನು ಇನ್ನಷ್ಟು ವೈಜ್ಞಾನಿಕ ತಂತ್ರಗಾರಿಕೆ ನಡೆಯಲ್ಲಿ ಅಭಿವೃದ್ಧಿ ಪಡಿಸ ಬೇಕಾಗಿದೆ.ಇದು ನಮ್ಮ ದೇಶದ ಉದ್ಯೋಗ ಸೃಷ್ಟಿಯ ಮೊದಲ ಕ್ಷೇತ್ರ ಅನ್ನುವುದನ್ನುನಾವು ಎಂದೂ ಮರೆಯ ಬಾರದು.

ಸಾಮಾಜಿಕ ಪ್ರಜಾಪ್ರಭುತ್ವ ವ್ಯವಸ್ಥೆಯ ಕಡೆಗೂ ದೃಷ್ಟಿ ಹರಿಸ ಬೇಕಾಗಿದೆ. ಮೊದಲಿನಿಂದಲೂ ನಮ್ಮ ದೇಶ ವಿವಿಧತೆಯಲ್ಲಿ ಏಕತೆಯ ಭಾವ ಬೆಳೆಸಿಕೊಂಡು ಬಂದ ಭೂಮಿ ಅನ್ನುವ ಹೆಸರು ನಮಗಿದೆ. ಇದು ನಮ್ಮೆಲ್ಲರ ಶಕ್ತಿಯೂ ಹೌದು ಸೌಂದರ್ಯತೆಯು ಹೌದು. ಜಾತ್ಯತೀತ ಅನ್ನುವ ಪದ ಬರೇ ಸಂವಿಧಾನದ ಪೀಠಿಕೆಗೆ ಸೀಮಿತವಾಗದೆ ನಮ್ಮೆಲ್ಲರ ಹೃದಯದಲ್ಲಿ ಪಡಿಮೂಡಿ ಬರಬೇಕಾಗಿದೆ. ಈ ಸೌಹಾರ್ದ ಮನಸ್ಸು ಸರ್ವ ಜಾತಿ ಧರ್ಮಿಯರ ಉಸಿರಾಗ ಬೇಕು..ಇದು ಇಂದಿನ ಅನಿವಾರ್ಯತೆ ಕೂಡಾ.ಈ ಭಾವನೆಗೆ ಧಕ್ಕೆ ತರುವ ರಾಜಕೀಯ ಶಕ್ತಿಯ ಕಡೆಗೆ ನಾವು ಹೆಚ್ಚು ಜಾಗೃತರಾಗ ಬೇಕು.

ಭಯೇೂತ್ಪಾದನೆ, ಭ್ರಷ್ಟಾಚಾರ, ಕೇೂಮು ಸಂಘಷ೯ ನಮ್ಮ ದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲುಗಳು..ಇದನ್ನು ಸಮಥ೯ವಾಗಿ ಎದುರಿಸುವಲ್ಲಿ ನಾವೆಲ್ಲರೂ ಒಂದೇ ಮನಸ್ಸಿನಲ್ಲಿ ಮುಂದಾಗ ಬೇಕಾದ ಅಗತ್ಯವಿದೆ. ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಯ ಸಂದರ್ಭದಲ್ಲಿ ನಾವು ಗಂಭೀರವಾಗಿ ಚಿಂತನೆ ಮಾಡ ಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ ಪ್ರಜಾಪ್ರಭುತ್ವದ ಯಶಸ್ವಿಗೆ ಬೇಕಾದ ನಾಲ್ಕು ಸ್ತಂಭಗಳು.ಸಮಾನತೆ ಸ್ವಾತಂತ್ರ್ಯ ನ್ಯಾಯ ಭಾತೃತ್ವ ಭಾವ..ಯಾವುದೇ ಒಂದು ದೇಶದಲ್ಲಿ ಕಾನೂನಿನ ಸಮಾನ ರಕ್ಷಣೆ ಮತ್ತು ಅನುಷ್ಠಾನವಾದಾಗ ಅಲ್ಲಿ ಪ್ರಜಾಪ್ರಭುತ್ವ ಮೌಲ್ಯ ಸುರಕ್ಷಿತವಾಗಿದೆ ಅನ್ನುವುದರ ಅರ್ಥ. “All are equal but some are more equal” ಎಲ್ಲರೂ ಸಮಾನರು ಕೆಲವರು ಹೆಚ್ಚಿಗೆ ಸಮಾನರು” ಅನ್ನುವ ಪರಿಸ್ಥಿತಿ ಬರ ಬಾರದು. ಅಲ್ಲಿ ಪ್ರಜಾಪ್ರಭುತ್ವ ಕ್ಷೀಣಿಸುತ್ತಾ ಇದೆ ಅನ್ನುವುದರ ಅರ್ಥ. ಸ್ವಾತಂತ್ರ್ಯವೂ ಅಷ್ಟೇ ಅಭಿವ್ಯಕ್ತಿ ಸ್ವಾತಂತ್ರ್ಯ ಕೂಡಾ ಅಷ್ಟೇ ಮುಖ್ಯ.ಇಂದು ಈ ಮಾಧ್ಯಮಗಳು ಯಾವುದೊ ಪಕ್ಷ, ಜಾತಿ ಧರ್ಮ ಕ್ಕೆ ಅಂಟಿಕೊಂಡು ನಿಂತಿರುವುದು ಅಪಾಯಕಾರಿ ಬೆಳವಣಿಗೆ ಎಂದೇ ಭಾವಿಸ ಬೇಕು.

ಪ್ರಜಾಪ್ರಭುತ್ವ ದಿನಾಚರಣೆಗೆ ಕರೆಕೊಟ್ಟ ವಿಶ್ವ ಸಂಸ್ಥೆ ಕೂಡಾ ಪ್ರಜಾಸತ್ತಾತ್ಮಕ ರೀತಿಯಲ್ಲಿ ವರ್ತಿಸುವ ಇಚ್ಛಾ ಶಕ್ತಿ ಕಳೆದುಕೊಂಡಿದೆ.ವಿಶ್ವ ಸಂಸ್ಥೆಯಲ್ಲಿ ಯಾವುದೇ ನಿಣ೯ಯವನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ತೆಗೆದುಕೊಳ್ಳುತ್ತಿಲ್ಲ. ಬದಲಾಗಿ ಅಲ್ಲಿನ ಐದು ಖಾಯಂ ಸದಸ್ಯರುಗಳು ತಮ್ಮ ಅನುಕೂಲಕ್ಕೆ ಸರಿಯಾಗಿ ನಿರ್ಧಾರ ತೆಗೆದು ಕೊಳ್ಳುತ್ತಿರುವುದು ಕೂಡಾ ಪ್ರಜಾಪ್ರಭುತ್ವ ಮೌಲ್ಯ ಗಳಿಗೆ ವಿರುದ್ಧವಾಗಿರುವುದು. ವಿಶ್ವ ಸಂಸ್ಥೆ ಅಂದರೆ ಅಮೇರಿಕಾ..ಅಮೇರಿಕಾ ಅಂದರೆ ವಿಶ್ವಸಂಸ್ಥೆ ಅನ್ನುವ ರೀತಿಯಲ್ಲಿ ಬೆಳೆದು ಬಂದಿದೆ. 193 ಸದಸ್ಯ ರಾಷ್ಟ್ರ ಗಳ ನಿರ್ಧಾರಕ್ಕೂ ಬೆಲೆಕೊಡುವ ಬಹುಮತದ ಅಭಿಪ್ರಾಯಕ್ಕೆ ಬೆಲೆ ಬರ ಬೇಕಾಗಿದೆ.

ಒಟ್ಟಿನಲ್ಲಿ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಯ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಮೌಲ್ಯಧಾರಿತ ಬದುಕಿನ ವಿವಿಧ ಆಯಾಮಗಳತ್ತ ಗಂಭೀರವಾಗಿ ಗಮನ ಹರಿಸ ಬೇಕಾದ ಅನಿವಾರ್ಯತೆ ಬಾಹ್ಯವಾಗಿಯೂ ಮತ್ತು ಆಂತರಿಕವಾಗಿಯೂ ಇದೆ ಅನ್ನುವುದು ಜನಸಾಮಾನ್ಯರ ಮನದಾಳದ ಆಶಯದ ಮಾತು.

ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಉಡುಪಿ.

ಟಾಪ್ ನ್ಯೂಸ್

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

6-tulsi

Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.