Price Hike; ಅಡುಗೆ ಎಣ್ಣೆ ದರ ದಿಢೀರ್ ಏರಿಕೆ: ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಶಾಕ್

ಶೇ. 20ರಷ್ಟು ಇಂಪೋರ್ಟ್ ಡ್ಯೂಟಿ ಟ್ಯಾಕ್ಸ್ ಹೆಚ್ಚಳದಿಂದ ಎಣ್ಣೆ ದರ ಗಗನಕ್ಕೆ

Team Udayavani, Sep 14, 2024, 6:55 PM IST

Sudden rise in cooking oil prices

ಗದಗ: ದಸರಾ, ದೀಪಾವಳಿ ಸೇರಿ ಸರಣಿ ಹಬ್ಬಗಳ ಸಂಭ್ರಮದಲ್ಲಿದ್ದ ಜನತೆಗೆ ಅಡುಗೆ ಎಣ್ಣೆ ದರವು (Cooking oil Price) ದಿಢೀರ್ ಶಾಕ್ ನೀಡಿದೆ. ಲೀಟರ್ ಎಣ್ಣೆಗೆ 20ರಿಂದ 25 ರೂ. ಗೆ ಏರಿಕೆಯಾಗಿದ್ದರಿಂದ ಗ್ರಾಹಕರಿಗೆ ಬರೆ ಎಳೆದಂತಾಗಿದೆ.

ಕಳೆದೊಂದು ವಾರದಿಂದ ಹಾವು ಏಣಿಯಾಟ ನಡೆಸಿದ್ದ ಅಡುಗೆ ಎಣ್ಣೆ ದರವು ಶನಿವಾರ ದಿಢೀರ್ ಗಗನಕ್ಕೇರಿದೆ. ಕೇವಲ ಒಂದೇ ದಿನದ ಅವಧಿಯಲ್ಲಿ ಪಾಮ್ ಆಯಿಲ್, ಸೋಯಾಬಿನ್ ಎಣ್ಣೆ ಹಾಗೂ ಸೂರ್ಯಕಾಂತಿ ರಿಫೈಂಡ್ ಆಯಿಲ್ ದರ ಹೆಚ್ಚಳವಾಗಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.

ಅಡುಗೆ ಎಣ್ಣೆಯು ಈಗಾಗಲೇ ಜಿಎಸ್‌ಟಿ ವ್ಯಾಪ್ತಿಗೆ ಸೇರಿದೆ. ಆದರೆ, ಅಡುಗೆ ಎಣ್ಣೆಗೆ ಹೆಚ್ಚುವರಿಯಾಗಿ ಶೇ. 20ರಷ್ಟು ಇಂಪೋರ್ಟ್ ಡ್ಯೂಟಿ ಟ್ಯಾಕ್ಸ್ ಹೆಚ್ಚಳ ಮಾಡಿದ್ದರಿಂದ ಎಣ್ಣೆ ದರ ಗಗನಕ್ಕೇರಿದೆ ಎನ್ನುತ್ತಿದ್ದಾರೆ ಅಡುಗೆ ಎಣ್ಣೆ ವ್ಯಾಪಾರಿಗಳು.

ಎಡರನೇ ಶನಿವಾರ, ರವಿವಾರ ಹಾಗೂ ಸೋಮವಾರ ಈದ್ ಹಬ್ಬವಿರುವುದರಿಂದ ಸತತವಾಗಿ ಮೂರು ದಿನಗಳ ಕಾಲ ಸರಕಾರಿ ರಜೆ ಇರುವುದರಿಂದ ಮಂಗಳವಾರವೇ ಇಂಪೋರ್ಟ್ ಡ್ಯೂಟಿ ಟ್ಯಾಕ್ಸ್ ಕುರಿತು ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಅಲ್ಲದೆ, ಮಂಗಳವಾರವೇ ಅಡುಗೆ ಎಣ್ಣೆಯ ದರದಲ್ಲಿ ಏರಿಕೆ ಹಾಗೂ ಇಳಿಕೆಯ ಮಾಹಿತಿ ಲಭ್ಯವಾಗಲಿದೆ. ಅಲ್ಲಿಯವರೆಗೆ ಅಡುಗೆ ಎಣ್ಣೆ ದರವು ಗ್ರಾಹಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಲಿದೆ.

ಪಾಮ್ ಆಯಿಲ್ ಬಾಕ್ಸ್ ದರ ದಿಡೀರ್ ಏರಿಕೆ

ಕಳೆದ ಎರಡು ದಿನಗಳ ಹಿಂದೆ 15 ಲೀಟರ್ ಹೊಂದಿದ ಪಾಮ್ ಆಯಿಲ್ ಬಾಕ್ಸ್‌ ಗೆ 1,450 ರೂ. ನಿಗದಿಯಾಗಿತ್ತು. ಆದರೆ, ಶುಕ್ರವಾರ ಸಂಜೆ ವೇಳೆಗೆ ಶೇ. 20ರಷ್ಟು ಇಂಪೋರ್ಟ್ ಡ್ಯೂಟಿ ಟ್ಯಾಕ್ಸ್ ಹೆಚ್ಚಳದಿಂದ ಕೇವಲ 24 ಗಂಟೆಯೊಳಗಾಗಿ ಬಾಕ್ಸ್ ಒಂದಕ್ಕೆ 200ರಿಂದ 250 ರೂ. ಅಂದರೆ 1,650ರಿಂದ 1,700 ರೂ. ವರೆಗೆ ಏರಿಕೆಯಾಗಿದೆ. ಲೀಟರ್ ಪಾಕೆಟ್‌ ಗೆ 98 ರೂ. ಇದ್ದ ಬೆಲೆ ಈಗ 120ಕ್ಕೇರಿದೆ.

ಸೂರ್ಯಕಾಂತಿ ರಿಫೈಂಡ್ ಆಯಿಲ್ ದರವೂ ಹೆಚ್ಚಳ

ಕಳೆದ ಎರಡು ದಿನಗಳ ಹಿಂದೆ 10 ಲೀಟರ್ ಹೊಂದಿದ ಸೂರ್ಯಕಾಂತಿ ರಿಫೈಂಡ್ ಆಯಿಲ್ ಬಾಕ್ಸ್‌ ಗೆ 1,050 ರೂ. ನಿಗದಿಯಾಗಿತ್ತು. ಆದರೆ, ಶುಕ್ರವಾರ ಸಂಜೆ ವೇಳೆಗೆ ಶೇ. 20ರಷ್ಟು ಇಂಪೋರ್ಟ್ ಡ್ಯೂಟಿ ಟ್ಯಾಕ್ಸ್ ಹೆಚ್ಚಳದಿಂದ ಕೇವಲ 24 ಗಂಟೆಯೊಳಗಾಗಿ ಬಾಕ್ಸ್ ಒಂದಕ್ಕೆ 150ರಿಂದ 200 ರೂ. ಅಂದರೆ 1,220ರಿಂದ 1,300 ರೂ. ವರೆಗೆ ಏರಿಕೆಯಾಗಿದೆ. ಲೀಟರ್ ಪಾಕೆಟ್‌ಗೆ 105 ರೂ. ಇದ್ದ ಬೆಲೆ ಈಗ 125ಕ್ಕೇರಿದೆ. ಇದರಿಂದಾಗಿ ಗ್ರಾಹಕರಿಗೆ ಭಾರಿ ಹೊಡೆತ ಬಿದ್ದಂತಾಗಿದೆ.

ಪಾಮ್ ಆಯಿಲ್, ಸೂರ್ಯಕಾಂತಿ ರಿಫೈಂಡ್ ಆಯಿಲ್ ಸೇರಿ ಅಡುಗೆ ಎಣ್ಣೆಯು ಈಗಾಗಲೇ ಜಿಎಸ್‌ಟಿ ವ್ಯಾಪ್ತಿಗೆ ಸೇರಿತ್ತು. ಇಂಪೋರ್ಟ್ ಡ್ಯೂಟಿ ಟ್ಯಾಕ್ಸ್ ಸೊನ್ನೆಗೆ ಇಳಿಸಲಾಗಿತ್ತು. ಶುಕ್ರವಾರ ಸಂಜೆ ಏಕಾಏಕಿ ಇಂಪೋರ್ಟ್ ಡ್ಯೂಟಿ ಟ್ಯಾಕ್ಸ್ ಶೇ. 20ರಷ್ಟು ಹೆಚ್ಚಿಸಿದ್ದರಿಂದ ಅಡುಗೆ ಎಣ್ಣೆ ದರದಲ್ಲಿ ಭಾರಿ ಏರಿಕೆ ಕಂಡಿದೆ. ಮಂಗಳವಾರ ಮಧ್ಯಾಹ್ನದವರೆಗೆ ದರದಲ್ಲಿ ಯಾವುದೇ ವ್ಯತ್ಯಾಸ ಕಾಣದು. ಅಂದೇ ಅಡುಗೆ ಎಣ್ಣೆ ದರದಲ್ಲಿ ಏರಿಕೆ ಅಥವಾ ಇಳಿಕೆ ಕುರಿತು ತಿಳಿಯಲಿದೆ ಎನ್ನುತ್ತಾರೆ ಗ್ರೇನ್ ಮಾರುಕಟ್ಟೆ ವ್ಯಾಪಾರಸ್ಥ ಹಿಮಾಂಶು ಜೈನ್.

ಲೀಟರ್ ಅಡುಗೆ ಎಣ್ಣೆಗೆ 20ರಿಂದ 25 ರೂ. ದರ ಹೆಚ್ಚಿಸಿರುವುದು ಗ್ರಾಹಕರ ಮೇಲೆ ಬರೆ ಎಳೆದಂತಾಗಿದೆ. ಬಡವರು, ಕೂಲಿಕಾರ್ಮಿಕರು, ಮಧ್ಯಮ ವರ್ಗದವರು ಪಾಮ್ ಆಯಿಲ್ ಹೆಚ್ಚಾಗಿ ಬಳಸುತ್ತಾರೆ. ಪಾಮ್ ಆಯಿಲ್ ದರದಲ್ಲಿ ಕೂಡ ಹೆಚ್ಚಳವಾಗಿದ್ದರಿಂದ ತೊಂದರೆ ಅನುಭವಿಸುವಂತಾಗಿದೆ. ಅಡುಗೆ ಎಣ್ಣೆ ದರ ಇಳಿಕೆಯಾಗದಿದ್ದರೆ ಮುಂಬರುವ ದಸರಾ ಹಾಗೂ ದೀಪಾವಳಿ ಹಬ್ಬಗಳು ಬಡವರ ಪಾಲಿಗೆ ಶಾಪವಾಗಿ ಪರಿಣಮಿಸಲಿವೆ ಎನ್ನುತ್ತಾರೆ ಸೋಮಶೇಖರ ಕರಸಿದ್ದಿಮಠ.

ಟಾಪ್ ನ್ಯೂಸ್

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.