Oil Price; ಗ್ರಾಹಕರಿಗೆ ಖಾದ್ಯ ತೈಲ ಬೆಲೆಯೇರಿಕೆ ಬಿಸಿ

ಹಬ್ಬಗಳ ಸರಣಿ ಸನಿಹದಲ್ಲೇ ಲೀಟರ್‌ಗೆ 25 ರೂ. ದಿಢೀರ್‌ ಏರಿಕೆ!

Team Udayavani, Sep 15, 2024, 6:45 AM IST

1-oil

ಗದಗ: ದಸರಾ-ದೀಪಾವಳಿ ಸಹಿತ ಸರಣಿ ಹಬ್ಬಗಳ ಸಂಭ್ರಮದಲ್ಲಿರುವ ಜನತೆಗೆ ಅಡುಗೆ ಎಣ್ಣೆ ದರಗಳ ದಿಢೀರ್‌ ಏರಿಕೆ ಆಘಾತ ನೀಡಿದೆ. ಲೀಟರ್‌ ಎಣ್ಣೆಗೆ 20ರಿಂದ 25 ರೂ.ವರೆಗೆ ಏರಿಕೆಯಾಗಿದ್ದು, ಗ್ರಾಹಕರಿಗೆ ಹೊರೆಯಾಗಿದೆ.
ಒಂದು ವಾರದಿಂದ ಹಾವು-ಏಣಿಯಾಟ ನಡೆಸಿದ್ದ ಅಡುಗೆ ಎಣ್ಣೆ ದರ ಶನಿವಾರ ದಿಢೀರ್‌ ಗಗನಕ್ಕೇರಿದೆ. ತಾಳೆ ಎಣ್ಣೆ, ಸೋಯಾಬೀನ್‌ ಎಣ್ಣೆ ಹಾಗೂ ಸೂರ್ಯಕಾಂತಿ ರಿಫೈನ್‌x ಎಣ್ಣೆ ದರ ಒಂದೇ ದಿನದಲ್ಲಿ ಹೆಚ್ಚಳವಾಗಿದೆ. ಅಡುಗೆ ಎಣ್ಣೆ ಈಗಾಗಲೇ ಜಿಎಸ್‌ಟಿ ವ್ಯಾಪ್ತಿಗೆ ಸೇರಿದೆ. ಆದರೆ ಹೆಚ್ಚುವರಿಯಾಗಿ ಶೇ. 20ರಷ್ಟು ಆಮದು ಸುಂಕ ಹೇರಿದ್ದರಿಂದ ದರ ಹಠಾತ್‌ ಏರಿಕೆಯಾಗಿದೆ ಎಂಬುದು ವ್ಯಾಪಾರಿಗಳ ಅಭಿಪ್ರಾಯ.

ದ್ವಿತೀಯ ಶನಿವಾರ, ರವಿವಾರ ಹಾಗೂ ಸೋಮವಾರ ಈದ್‌-ಮಿಲಾದ್‌ ಹಿನ್ನೆಲೆಯಲ್ಲಿ ಸತತ ಮೂರು ದಿನ ಸರಕಾರಿ ರಜೆ ಇರುವ ಕಾರಣ ಮಂಗಳವಾರವೇ ಸುಂಕ ಕುರಿತು ನಿಖರ ಮಾಹಿತಿ ಜತೆಗೆ ಅಡುಗೆ ಎಣ್ಣೆ ದರದಲ್ಲಿ ಏರಿಕೆ ಹಾಗೂ ಇಳಿಕೆಯ ಸ್ಪಷ್ಟತೆ ತಿಳಿಯಲಿದೆ ಎನ್ನಲಾಗಿದೆ.

ಎರಡು ದಿನಗಳ ಹಿಂದೆ 15 ಲೀಟರ್‌ ಪ್ಯಾಕೆಟ್‌ಗಳಿರುವ ತಾಳೆ ಎಣ್ಣೆ ಬಾಕ್ಸ್‌ಗೆ 1,450 ರೂ. ಇತ್ತು. ಆದರೆ ಶುಕ್ರವಾರ ಸಂಜೆ ವೇಳೆಗೆ ಶೇ. 20ರಷ್ಟು ಆಮದು ಸುಂಕ ಹೆಚ್ಚಳದಿಂದ ಕೇವಲ 24 ತಾಸುಗಳ ಒಳಗೆ ಪ್ರತೀ ಬಾಕ್ಸ್‌ಗೆ 200ರಿಂದ 250 ರೂ. ಅಂದರೆ 1,650ರಿಂದ 1,700 ರೂ. ವರೆಗೆ ಏರಿಕೆಯಾಗಿದೆ.

ಲೀಟರ್‌ ಪ್ಯಾಕೆಟ್‌ಗೆ 98 ರೂ. ಇದ್ದ ಬೆಲೆ ಈಗ 120 ರೂ. ಆಗಿದೆ. ಇನ್ನೊಂದೆಡೆ 10 ಲೀ. ಪ್ಯಾಕೆಟ್‌ಗಳ ಸೂರ್ಯಕಾಂತಿ ಎಣ್ಣೆ ಬಾಕ್ಸ್‌ಗೆ 1,050 ರೂ. ಇದ್ದ ದರ ಈಗ 150ರಿಂದ 200 ರೂ. ಹೆಚ್ಚಳವಾಗಿ 1,220ರಿಂದ 1,300 ರೂ. ಆಗಿದೆ. ಲೀಟರ್‌ ಪ್ಯಾಕೆಟ್‌ಗೆ 105 ರೂ. ಇದ್ದ ಬೆಲೆ ಈಗ 125ಕ್ಕೇರಿದೆ ಎನ್ನಲಾಗಿದೆ.

ಲೀಟರ್‌ ಅಡುಗೆ ಎಣ್ಣೆಗೆ 20ರಿಂದ 25 ರೂ. ದರ ಹೆಚ್ಚಿಸಿರುವುದು ಗ್ರಾಹಕರ ಮೇಲೆ ಬರೆ ಎಳೆದಂತಾಗಿದೆ. ಈ ದರ ಇಳಿಕೆಯಾಗದಿದ್ದರೆ ಮುಂಬರುವ ದಸರಾ ಹಾಗೂ ದೀಪಾವಳಿ ಹಬ್ಬಗಳು ಬಡವರ ಪಾಲಿಗೆ ಹೊರೆಯಾಗಿ ಪರಿಣಮಿಸಲಿವೆ.
-ಸೋಮಶೇಖರ ಕರಸಿದ್ದಿಮಠ, ಗ್ರಾಹಕರು

ತಾಳೆ ಎಣ್ಣೆ, ಸೂರ್ಯಕಾಂತಿ ರಿಫೈನ್ಡ್ ಎಣ್ಣೆ ಸಹಿತ ಅಡುಗೆ ಎಣ್ಣೆ ಈಗಾಗಲೇ ಜಿಎಸ್‌ಟಿ ವ್ಯಾಪ್ತಿಗೆ ಸೇರಿತ್ತು. ಆಮದು ಸುಂಕವನ್ನು ಸೊನ್ನೆಗೆ ಇಳಿಸಲಾಗಿತ್ತು. ಶುಕ್ರವಾರ ಸಂಜೆ ಏಕಾಏಕಿ ಶೇ. 20ರಷ್ಟು ಆಮದು ಸುಂಕ ಹೇರಿದ್ದರಿಂದ ಅಡುಗೆ ಎಣ್ಣೆ ದರದಲ್ಲಿ ಭಾರೀ ಏರಿಕೆಯಾಗಿದೆ. ಮಂಗಳವಾರ ಮಧ್ಯಾಹ್ನದ ವರೆಗೆ ದರದಲ್ಲಿ ಯಾವುದೇ ವ್ಯತ್ಯಾಸ ಕಾಣದು. ಅಂದೇ ಅಡುಗೆ ಎಣ್ಣೆ ದರದಲ್ಲಿ ಏರಿಕೆ ಅಥವಾ ಇಳಿಕೆ ಕುರಿತು ತಿಳಿಯಲಿದೆ.
-ಹಿಮಾಂಶು ಜೈನ್‌, ವ್ಯಾಪಾರಸ್ಥರು

ಅರುಣಕುಮಾರ ಹಿರೇಮಠ

ಟಾಪ್ ನ್ಯೂಸ್

Kambala ಡಿ.12 ಸಾಂಪ್ರದಾಯಿಕ ಕೊರ್ಗಿಮನೆ ಕಂಬಳ

Kambala ಡಿ.12 ಸಾಂಪ್ರದಾಯಿಕ ಕೊರ್ಗಿಮನೆ ಕಂಬಳ

Alva’s Virasat-2024: ಮನಸೂರೆಗೊಂಡ ಗುಜರಾತಿ ನೃತ್ಯ

Alva’s Virasat-2024: ಮನಸೂರೆಗೊಂಡ ಗುಜರಾತಿ ನೃತ್ಯ

Alva’s Virasat-2024: ಆಳ್ವಾಸ್‌ ಕ್ಯಾಂಪಸ್‌ ಸಂಗೀತಮಯ

Alva’s Virasat-2024: ಆಳ್ವಾಸ್‌ ಕ್ಯಾಂಪಸ್‌ ಸಂಗೀತಮಯ

Alvas ವಿರಾಸತ್‌ನಲ್ಲಿ ಕೃಷಿ ಲೋಕದ ದಿಗ್ದರ್ಶನ: ವಿದ್ಯಾಗಿರಿ ಹಸುರು ಸಿಂಗಾರದ ಬೆಡಗಿ

Alvas ವಿರಾಸತ್‌ನಲ್ಲಿ ಕೃಷಿ ಲೋಕದ ದಿಗ್ದರ್ಶನ: ವಿದ್ಯಾಗಿರಿ ಹಸುರು ಸಿಂಗಾರದ ಬೆಡಗಿ

Mangaluru ವಿಶ್ವವಿದ್ಯಾನಿಲಯ ವಾರ್ಷಿಕ ಘಟಿಕೋತ್ಸವ: ನೋಂದಣಿಗೆ ಅವಕಾಶ

Mangaluru ವಿಶ್ವವಿದ್ಯಾನಿಲಯ ವಾರ್ಷಿಕ ಘಟಿಕೋತ್ಸವ: ನೋಂದಣಿಗೆ ಅವಕಾಶ

Kundapura: ಮೀನುಗಾರಿಕೆ ಅಭಿವೃದ್ಧಿಗೆ ಕ್ರಮ: ಸಂಸದ ರಾಘವೇಂದ್ರ ಮನವಿ

Kundapura: ಮೀನುಗಾರಿಕೆ ಅಭಿವೃದ್ಧಿಗೆ ಕ್ರಮ: ಸಂಸದ ರಾಘವೇಂದ್ರ ಮನವಿ

Udupi: ಅಂಬಲಪಾಡಿ ಜಂಕ್ಷನ್‌ನಲ್ಲಿ ಎಲಿವೇಟೆಡ್‌ ಫ್ಲೈಓವರ್‌ ಆಗಲಿ: ರಮೇಶ್‌ ಕಾಂಚನ್‌

Udupi: ಅಂಬಲಪಾಡಿ ಜಂಕ್ಷನ್‌ನಲ್ಲಿ ಎಲಿವೇಟೆಡ್‌ ಫ್ಲೈಓವರ್‌ ಆಗಲಿ: ರಮೇಶ್‌ ಕಾಂಚನ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಸ್‌.ಎಂ.ಕೃಷ್ಣಗೆ ಮರಣೋತ್ತರ “ಕರ್ನಾಟಕ ರತ್ನ’ ನೀಡಿ: ಅಶೋಕ್‌

ಎಸ್‌.ಎಂ.ಕೃಷ್ಣಗೆ ಮರಣೋತ್ತರ “ಕರ್ನಾಟಕ ರತ್ನ’ ನೀಡಿ: ಅಶೋಕ್‌

Hunasur: ಗೊಮ್ಮಟಗಿರಿಯಲ್ಲಿ ಮೂರು ದಿನಗಳ ಕಾಲ ಬಾಹುಬಲಿ ಮಸ್ತಕಾಭಿಷೇಕ

Hunasur: ಗೊಮ್ಮಟಗಿರಿಯಲ್ಲಿ ಮೂರು ದಿನಗಳ ಕಾಲ ಬಾಹುಬಲಿ ಮಸ್ತಕಾಭಿಷೇಕ

ಬೆಳಗಾವಿ ಘಟನೆ: ಹೋರಾಟಗಾರರ ವಿರುದ್ದದ ಎಲ್ಲ ಪ್ರಕರಣಗಳ ರದ್ಧುಪಡಿಸಬೇಕು: ವಚನಾನಂದ ಸ್ವಾಮೀಜಿ

ಬೆಳಗಾವಿ ಘಟನೆ: ಹೋರಾಟಗಾರರ ವಿರುದ್ದದ ಎಲ್ಲ ಪ್ರಕರಣ ರದ್ಧುಪಡಿಸಬೇಕು: ವಚನಾನಂದ ಸ್ವಾಮೀಜಿ

Madikeri: ವಧುವಿನ ಕೊಠಡಿಯಿಂದ ಚಿನ್ನಾಭರಣ ಕಳವು ಮಾಡಿದ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

Madikeri: ವಧುವಿನ ಕೊಠಡಿಯಿಂದ ಚಿನ್ನಾಭರಣ ಕಳವು ಮಾಡಿದ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

Sagara: ಖಾಸಗಿ ಲಾಡ್ಜ್‌ನಲ್ಲಿ ಶಿರಸಿ ಮೂಲದ ವ್ಯಕ್ತಿ ನೇಣಿಗೆ ಶರಣು

Sagara: ಖಾಸಗಿ ಲಾಡ್ಜ್‌ನಲ್ಲಿ ಶಿರಸಿ ಮೂಲದ ವ್ಯಕ್ತಿ ನೇಣಿಗೆ ಶರಣು

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

Yakshagana ಡಿ.14: ಹಿರಿಯಡಕ ಯಕ್ಷಗಾನ ಮೇಳದ ತಿರುಗಾಟ ಆರಂಭ

Yakshagana ಡಿ.14: ಹಿರಿಯಡಕ ಯಕ್ಷಗಾನ ಮೇಳದ ತಿರುಗಾಟ ಆರಂಭ

Kambala ಡಿ.12 ಸಾಂಪ್ರದಾಯಿಕ ಕೊರ್ಗಿಮನೆ ಕಂಬಳ

Kambala ಡಿ.12 ಸಾಂಪ್ರದಾಯಿಕ ಕೊರ್ಗಿಮನೆ ಕಂಬಳ

Alva’s Virasat-2024: ಮನಸೂರೆಗೊಂಡ ಗುಜರಾತಿ ನೃತ್ಯ

Alva’s Virasat-2024: ಮನಸೂರೆಗೊಂಡ ಗುಜರಾತಿ ನೃತ್ಯ

Alva’s Virasat-2024: ಆಳ್ವಾಸ್‌ ಕ್ಯಾಂಪಸ್‌ ಸಂಗೀತಮಯ

Alva’s Virasat-2024: ಆಳ್ವಾಸ್‌ ಕ್ಯಾಂಪಸ್‌ ಸಂಗೀತಮಯ

Alvas ವಿರಾಸತ್‌ನಲ್ಲಿ ಕೃಷಿ ಲೋಕದ ದಿಗ್ದರ್ಶನ: ವಿದ್ಯಾಗಿರಿ ಹಸುರು ಸಿಂಗಾರದ ಬೆಡಗಿ

Alvas ವಿರಾಸತ್‌ನಲ್ಲಿ ಕೃಷಿ ಲೋಕದ ದಿಗ್ದರ್ಶನ: ವಿದ್ಯಾಗಿರಿ ಹಸುರು ಸಿಂಗಾರದ ಬೆಡಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.