Milk ದರ ಏರಿಸಿದರೆ ರಾಜ್ಯಾದ್ಯಂತ ಪ್ರತಿಭಟನೆ: ಬಿಜೆಪಿ ಹಾಲು ಪ್ರಕೋಷ್ಠ
ದರ ಏರಿಸಿ ರಾಜ್ಯ ಸರಕಾರದಿಂದ ವಸೂಲಿ: ಎಚ್.ಡಿ. ಕುಮಾರಸ್ವಾಮಿ
Team Udayavani, Sep 15, 2024, 6:42 AM IST
ಬೆಂಗಳೂರು: ರಾಜ್ಯ ಸರಕಾರವು ನಂದಿನಿ ಹಾಲಿನ ದರ ಏರಿಸಲು ಹೊರಟಿರುವುದು ಸರಿಯಲ್ಲ. ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ರ್ಸಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಬಿಜೆಪಿ ಹಾಲು ಪ್ರಕೋಷ್ಠದ ಸಂಚಾಲಕ ರಾಘವೇಂದ್ರ ಶೆಟ್ಟಿ ಎಚ್ಚರಿಸಿದ್ದಾರೆ.
ಪತ್ರಿಕಾ ಪ್ರಕಟನೆ ನೀಡಿರುವ ಅವರು, ಹಾಲಿನ ದರ ಏರಿಸುವಂತೆ ಸಹಕಾರ ಸಚಿವರಿಗೆ ಮಾಗಡಿಯಲ್ಲಿ ಸಿಎಂ ಸೂಚಿಸಿರುವುದು ಖಂಡನೀಯ. ಈಗಾಗಲೇ ರಾಜ್ಯದ ಜನತೆ ನೀರು, ವಿದ್ಯುತ್, ಮನೆ ಬಾಡಿಗೆ ಸೇರಿದಂತೆ ಅನೇಕ ದರ ಏರಿಕೆಯ ಆಘಾತದೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ರಾಜ್ಯ ಸರಕಾರವು ಮೊದಲು ರೈತರ ಹಾಲಿನ ಸಬ್ಸಿಡಿ ಹಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಹಾಲಿನ ದರ ಏರಿಸಿ ರಾಜ್ಯ ಸರಕಾರದಿಂದ ವಸೂಲಿ: ಎಚ್.ಡಿ. ಕುಮಾರಸ್ವಾಮಿ
ಯಾರ ಬಳಿಯೋ ಕಿತ್ತುಕೊಂಡು ಯಾರಿಗೊ ದಾನ ಮಾಡಿದ ರೀತಿ ಇದೆ. ಗ್ರಾಹಕರ ಮೇಲೆ ಹೊರೆ ಹಾಕಿ ರೈತರಿಗೆ ಪ್ರೋತ್ಸಾಹಧನ ಕೊಡುತ್ತೇವೆ ಎನ್ನುತ್ತಾರೆ ಎಂದು ಹಾಲಿನ ದರ ಏರಿಕೆಯ ಬಗ್ಗೆಗಿನ ರಾಜ್ಯ ಸರಕಾರದ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಖಂಡಿಸಿದ್ದಾರೆ.
ಹಾಲು ಉತ್ಪಾದಕರ ಸಂಘದ ಜಿÇÉೆಗಳಲ್ಲಿ 1.50, 2 ರೂಪಾಯಿ ಏಕೆ ಕಡಿಮೆ
ಮಾಡಿದ್ದೀರಾ? ಬೆಲೆ ಏರಿಕೆ ದುಡ್ಡ ನ್ನು ರೈತರಿಗೆ ಕೊಡುತ್ತೇವೆ ಎನ್ನು ತ್ತೀದ್ದಿರಲ್ಲವೇ? ಹಾಗಾದೆರೆ ಯಾವ ಯಾವ ಜಿÇÉೆಯಲ್ಲಿ ಎಷ್ಟೆಷ್ಟು ಹಾಲಿನ ಪ್ರೋತ್ಸಾಹ ದರ ಕಡಿಮೆ ಮಾಡಿದ್ದೀರಾ? ದಾಖಲೆ ಇಲ್ವಾ, ಪಟ್ಟಿ ಇಲ್ವಾ? ರೈತರಿಗೆ ಕೊಡುತ್ತೇವೆ ಅಂತ ಸುಳ್ಳು ಹೇಳಿ, ಒಂದು ಕಡೆ ರೈತರಿಗೂ ಇಲ್ಲ, ಮತ್ತೂಂದು ಕಡೆ ಗ್ರಾಹಕರಿಗೂ ಇಲ್ಲ. ದುಡ್ಡು ಮಾತ್ರ ಸರಕಾರ ವಸೂಲಿ ಮಾಡುತ್ತಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.