Delhi 5 ಸಾವಿರ ನಕಲಿ ವೀಸಾ ಸೃಷ್ಟಿ: 300 ಕೋ. ರೂ. ಸಂಪಾದನೆ!
ದಿಲ್ಲಿಯ ತಿಲಕ್‌ನಗರ ಕಾರ್ಖಾನೆಯ ದಂಧೆ ಬಯಲಿಗೆ
Team Udayavani, Sep 16, 2024, 7:30 AM IST
ಹೊಸದಿಲ್ಲಿ: ಪ್ರತೀ ತಿಂಗಳು 30ರಿಂದ 60 ನಕಲಿ ವೀಸಾಗಳ ತಯಾರಿ, 8ರಿಂದ 10 ಲಕ್ಷ ರೂ.ಗಳಿಗೆ ಪ್ರತೀ ವೀಸಾ ಮಾರಾಟ… ಹೀಗೆ ಐದು ವರ್ಷಗಳಿಂದ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಕಲಿ ವೀಸಾ ದಂಧೆ ನಡೆಸಿ ಖದೀಮರು ಸೃಷ್ಟಿ ಸಿದ್ದು 5 ಸಾವಿರ ನಕಲಿ ವೀಸಾ; ಸಂಪಾದಿಸಿದ್ದು 300 ಕೋಟಿ ರೂ!
ಹೌದು, ವಿದೇಶಗಳಿಗೆ ಹೋಗಿ ಉತ್ತಮ ಆದಾಯದೊಂದಿಗೆ ಐಷಾರಾಮಿ ಜೀವನ ನಡೆಸಬೇಕು ಎಂದುಕೊಂಡವರಿಗೆ ಅರ್ಹತೆ, ನಿಯಮ ಯಾವುದೂ ಇಲ್ಲದೆಯೇ ವಿದೇಶ ಪ್ರಯಾಣ ಸುಲಭಗೊಳಿಸುವಂಥ ದಂಧೆಯೊಂದು ಇತ್ತೀಚೆಗಿನ ವರ್ಷಗಳಲ್ಲಿ ತೀವ್ರಗೊಂಡಿತ್ತು. ಹೊಸದಿಲ್ಲಿಯ ತಿಲಕ್‌ನಗರದ ಕಾರ್ಖಾನೆಯೇ ಇದರ ಕೇಂದ್ರ ಜಾಲ. ಈ ಜಾಲವನ್ನೇ ಇಂದಿರಾ ಗಾಂಧಿ ಅಂ.ರಾ. ವಿಮಾನ ನಿಲ್ದಾಣ (ಐಜಿಐಎ)ದ ಪೊಲೀಸರು ಭೇದಿಸಿದ್ದು, 6 ಮಂದಿಯನ್ನು ಬಂಧಿಸಿದ್ದಾರೆ.
ಈ ಕುರಿತು ಐಜಿಐಎ ಡಿಸಿಪಿ
ಮಾಹಿತಿ ನೀಡಿದ್ದು, 6 ಮಂದಿ ಯನ್ನು ಬಂಧಿಸಲಾಗಿದೆ. 16 ನೇಪಾಲಿ, 2 ಭಾರತೀಯ ಪಾಸ್‌ಪೋರ್ಟ್‌ಗಳ ಜತೆಗೆ ಕೆಲವು ನಕಲಿ ಶೆಂಜೆನ್ ವೀಸಾ ವಶಪಡಿಸಿಕೊಂಡಿದ್ದೇವೆ ಎಂದಿದ್ದಾರೆ. ಕೃತ್ಯಕ್ಕೆ ಬಳಸುತ್ತಿದ್ದ 23 ಸ್ಟಾಂಪ್, 30 ವೀಸಾ ಸ್ಟಿಕರ್, ಲ್ಯಾಮಿನೇಟಿಂಗ್ ಹಾಳೆ, ಲ್ಯಾಪ್‌ಟಾಪ್ ಸಹಿತ ಹಲವು ವಸ್ತುಗಳನ್ನು ವಶಪಡಿಸಿಕೊಂಡಿ ರುವುದಾಗಿ ತಿಳಿಸಿದ್ದಾರೆ.
ಸೆ. 2ರಿಂದಲೇ ಬೇಟೆ ಆರಂಭ!
ಹರಿಯಾಣ ಮೂಲದ ಸಂದೀಪ್ ಎಂಬಾತ ಸೆ. 2ರಂದು ಸ್ವೀಡನ್ ನಕಲಿ ವೀಸಾ ಬಳಸಿ ಇಟಲಿಗೆ ತೆರಳಲು ಮುಂದಾಗಿದ್ದ ವೇಳೆ ಹೊಸದಿಲ್ಲಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದ. ಆತನ ಬೆನ್ನು ಹತ್ತಿದ ಪೊಲೀಸರಿಗೆ ಈ ಜಾಲದ ಸುಳಿವು ಸಿಕ್ಕಿತ್ತು. ಬಳಿಕ ವೀಸಾ ಏಜೆಂಟ್ ಆಸಿಫ್ ಅಲಿ ಹಾಗೂ ಆತನ ಸಹಚರ ಶಿವ ಗೌತಮ್, ನವೀನ್ ರಾಣಾರನ್ನು ಬಂಧಿಸಿದ್ದರು. ಬಳಿಕ ಇದೇ ಗ್ಯಾಂಗ್‌ನ ಬಲ್ಬಿರ್ ಸಿಂಗ್, ಜಸ್ವೀಂದರ್ ಸಿಂಗ್‌ನನ್ನು ಬಂಧಿಸಿದಾಗ ತಿಲಕ್‌ನಗರ ಫ್ಯಾಕ್ಟರಿಯ ಕರಾಳ ಮುಖ ಬಯಲಾಗಿದೆ. ಅನಂತರ ಪೊಲೀಸರು ಫ್ಯಾಕ್ಟರಿ ನಡೆಸುತ್ತಿರುವ ಮನೋಜ್ ಮೋಂಗಾನನ್ನು ಬಂಧಿಸಿದಾಗ 5 ವರ್ಷಗಳಿಂದ ನಡೆಯುತ್ತಿದ್ದ ದಂಧೆಯ ಸಂಪೂರ್ಣ ವಿವರ ಬಹಿರಂಗವಾಯಿತು. ಗ್ರಾಫಿಕ್ ಡಿಸೈನರ್ ಆಗಿದ್ದ ಮನೋಜ್ ತನ್ನ ಕೈಚಳವನ್ನೆಲ್ಲ ಈ ದಂಧೆಗೆ ಬಳಸಿದ್ದು, ಕೇವಲ 20 ನಿಮಿಷಗಳಲ್ಲಿ ವೀಸಾ ಸ್ಟಿಕರ್ ದುರಸ್ತಿ ಮಾಡುವ ಚಾಕಚಕ್ಯತೆಯನ್ನು ಈ ಖದೀಮರು ಮೈಗೂಡಿಸಿಕೊಂಡಿದ್ದರು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.