PM Modi ಕಿಡಿ ; ರೊಹಿಂಗ್ಯಾ ಜತೆ ಜೆಎಂಎಂ ಶಾಮೀಲಾಗಿದೆ
Team Udayavani, Sep 16, 2024, 1:26 AM IST
ಜಮ್‌ಶೆಡ್‌ಪುರ: ಝಾರ್ಖಂಡ್‌ನಲ್ಲಿ ಆಡಳಿತ ನಡೆಸುತ್ತಿರುವ ಝಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷ ಬಾಂಗ್ಲಾದೇಶಿಗಳು ಮತ್ತು ರೊಹಿಂಗ್ಯಾಗಳ ಜತೆ ಶಾಮೀಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ವೋಟ್‌ಬ್ಯಾಂಕ್ ಹೆಚ್ಚಳ ಮಾಡಿಕೊಳ್ಳುವುದಕ್ಕಾಗಿ ಇವರು ಒಳನುಸುಳಲು ಸಹಾಯ ಮಾಡುತ್ತಿದೆ ಎಂದು ಹೇಳಿದ್ದಾರೆ.
ಇಲ್ಲಿನ ಗೋಪಾಲ್ ಮೈದಾನದಲ್ಲಿ ರಾಜ್ಯ ಬಿಜೆಪಿ ಆಯೋಜಿಸಿದ್ದ “ಪರಿವರ್ತನಾ ಮಹಾರ್ಯಾಲಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಜ್ಯ ದಲ್ಲಿರುವ ಆಡಳಿತ ಪಕ್ಷದ ಮೈತ್ರಿಕೂಟದ ವಿರುದ್ಧ ವಾಗ್ಧಾಳಿ ನಡೆಸಿದರು.
“ಸಂತಾಲ ಪರಗಣದಲ್ಲಿ ಆದಿವಾಸಿಗಳ ಜನಸಂಖ್ಯೆ ನಿರಂತರವಾಗಿ ಕುಸಿಯುತ್ತಿದೆ. ಇವರ ಭೂಮಿಯನ್ನು ಬಾಂಗ್ಲಾದೇಶದಿದ ಆಗಮಿಸುತ್ತಿರುವ ನುಸುಳು ಕೋರರು ಆಕ್ರಮಿಸಿಕೊಳ್ಳುತ್ತಿದ್ದಾರೆ. ಪಂಚಾಯತ್ ವ್ಯವಸ್ಥೆಯ ಮೇಲೆ ಪ್ರಾಬಲ್ಯ ಸಾಧಿಸಲು ಯತ್ನಿಸು ತ್ತಿದ್ದಾರೆ. ಇದರಿಂದಾಗಿ ಝಾರ್ಖಂಡ್‌ನ ಪುತ್ರಿಯರ ಮೇಲೆ ಅಪರಾಧಗಳು ಹೆಚ್ಚುತ್ತಿವೆ. ರಾಜ್ಯದಲ್ಲಿ ಹೆಚ್ಚಾಗುತ್ತಿರುವ ನುಸುಳುಕೋರರಿಂದ ಪ್ರತಿಯೊಬ್ಬ ಝಾರ್ಖಂಡ್ ನಿವಾಸಿ ಅಭದ್ರತೆ ಎದುರಿಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.
“ಜೆಎಂಎಂ ಈ ನುಸುಳುಕೋರರ ಜತೆ ಶಾಮೀಲಾಗಿದೆ. ಇವರು ಜೆಎಂಎಂನಲ್ಲೂ ತಮ್ಮ ಪ್ರಾಬಲ್ಯ ಸಾಧಿಸಲು ಮುಂದಾಗುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಎಂಎಂ ನಡುವೆ ಮೈತ್ರಿಕೂಟ ರಚನೆ ಯಾದಾಗಿನಿಂದ ಇವೆಲ್ಲವೂ ಆರಂಭವಾಗಿದೆ. ಈ ಮೈತ್ರಿಕೂಟಕ್ಕೆ ರಾಜ್ಯದ ಹಿತಕ್ಕಿಂತ ಓಟ್ ಬ್ಯಾಂಕ್ ಬೇಕಿದೆ. ರಾಜ್ಯದಲ್ಲಿ ನಡೆಯುತ್ತಿರುವ ನುಸುಳು ಕೋರರ ಬಗ್ಗೆ ಮಾಹಿತಿ ಕಲೆ ಹಾಕಲು ಹೈಕೋರ್ಟ್ ಸಮಿತಿಯನ್ನು ರಚನೆ ಮಾಡುವಂತಾಗಿದ್ದು ಸರಕಾರದ ನಿಲುವನ್ನು ತೋರಿಸುತ್ತದೆ. ಬಾಂಗ್ಲಾದೇಶ ಮತ್ತು ರೊಹಿಂಗ್ಯಾ ನುಸುಳುಕೋರರು ರಾಜ್ಯದ ಭದ್ರತೆಗೆ ಧಕ್ಕೆ ಒಡ್ಡಲಿದ್ದಾರೆ ಎಂದು ಅವರು ಹೇಳಿದರು.
6 ವಂದೇ ಭಾರತ್ ರೈಲಿಗೆ ಮೋದಿ ಚಾಲನೆ
ಬಿಹಾರ, ಝಾರ್ಖಂಡ್, ಒಡಿಶಾ ಮತ್ತು ಉತ್ತರಪ್ರದೇಶಗಳಲ್ಲಿ ಚಲಿಸುವ 6 ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ರವಿವಾರ ವರ್ಚುವಲ್ ಆಗಿ ಚಾಲನೆ ನೀಡಿದರು. ಅಲ್ಲದೇ ಝಾರ್ಖಂಡ್‌ನಲ್ಲಿ 660 ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು.
32,000 ಮಂದಿಗೆ ಪಿಎಂ ಆವಾಸ್ ಅನುಮತಿ ಪತ್ರ
ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆಯ 32,000 ಮಂದಿ ಫಲಾನುಭವಿಗಳಿಗೆ ಪ್ರಧಾನಿ ಮೋದಿ ಅವರು ರವಿವಾರ ಅನುಮತಿ ಪತ್ರಗಳನ್ನು ವಿತರಣೆ ಮಾಡಿದರು. ಅಲ್ಲದೇ ಮನೆ ನಿರ್ಮಾಣಕ್ಕೆ 32 ಕೋಟಿ ರೂ.ಗಳ ಮೊದಲ ಕಂತನ್ನು ಬಿಡುಗಡೆ ಮಾಡಿದರು. ಜತೆಗೆ ದೇಶಾದ್ಯಂತ 46,000 ಮಂದಿ ಫಲಾನುಭವಿಗಳಿಗೆ ವರ್ಚುವಲ್ ಆಗಿ ಕೀ ಗಳನ್ನು ವಿತರಣೆ ಮಾಡಿದರು.
ಜೆಎಂಎಂ, ಕಾಂಗ್ರೆಸ್, ಆರ್‌ಜೆಡಿ ರಾಜ್ಯದ ನಿಜವಾದ ಶತ್ರುಗಳು
ಝಾರ್ಖಂಡ್‌ನಲ್ಲಿ ಆಡಳಿತ ನಡೆಸುತ್ತಿರುವ ಜೆಎಂಎಂ, ಕಾಂಗ್ರೆಸ್ ಮತ್ತು ಆರ್‌ಜೆಡಿ ಪಕ್ಷಗಳು ರಾಜ್ಯದ ಶತ್ರುಗಳಾಗಿದ್ದಾರೆ. ಝಾರ್ಖಂಡ್ ರಚನೆಯ ದ್ವೇಷವನ್ನು ತೀರಿಸಿಕೊಳ್ಳಲು ಆರ್‌ಜೆಡಿ ಕಾಯುತ್ತಿದ್ದರೆ, ಕಾಂಗ್ರೆಸ್ ಝಾರ್ಖಂಡನ್ನು ಮೊದಲಿನಿಂ ದಲೂ ದ್ವೇಷಿಸುತ್ತದೆ. ದಿಲ್ಲಿಯಲ್ಲಿ ಆಡಳಿತ ನಡೆಸಿದರೂ ಹಿಂದುಳಿದ ವರ್ಗವನ್ನು ಮೇಲೆತ್ತಲು ಕಾಂಗ್ರೆಸ್ ಯತ್ನಿಸಲಿಲ್ಲ. ಈಗ ಜೆಎಂಎಂ ಗಣಿಗಾರಿಕೆ ಮೂಲಕ ರಾಜ್ಯವನ್ನು ಲೂಟಿ ಮಾಡುತ್ತಿದೆ. ಭ್ರಷ್ಟಾಚಾರದ ಪಾಠವನ್ನು ಕಾಂಗ್ರೆಸ್ ಈಗ ಜೆಎಂಎಂಗೂ ಕಲಿಸಿದೆ ಎಂದು ಅವರು ಹೇಳಿದ್ದಾರೆ.
ಬುಡಕಟ್ಟು, ಬಡವರು, ಸ್ತ್ರೀಯರ ಅಭಿವೃದ್ಧಿ ಕೇಂದ್ರದ ಆದ್ಯತೆ
ರಾಂಚಿ: ಝಾರ್ಖಂಡ್‌ನಲ್ಲಿರುವ ಬಡವರು, ಬುಡಕಟ್ಟು ಜನಾಂಗ, ಮಹಿಳೆಯರು ಮತ್ತು ಯುವಕರ ಅಭಿವೃದ್ಧಿ ಕೇಂದ್ರ ಸರಕಾರದ ಆದ್ಯತೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಭಿವೃದ್ಧಿಗಾಗಿ ಕೇಂದ್ರ ಸರಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಈ ವರ್ಷ ಝಾರ್ಖಂಡ್‌ಗೆ 7,000 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಈ ಹಿಂದಿನ 10 ವರ್ಷಗಳ ಬಜೆಟ್‌ಗೆ ಹೋಲಿಸಿದರೆ ಇದರ ಪ್ರಮಾಣ ಶೇ.16ರಷ್ಟು ಹೆಚ್ಚಿದೆ. ರೈಲ್ವೇ ವಿದ್ಯುದೀಕರಣ ಯೋಜನೆಯಲ್ಲಿ ಝಾರ್ಖಂ ಡನ್ನು ಸಹ ಸೇರ್ಪಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.