![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 16, 2024, 3:34 PM IST
ಬೆಂಗಳೂರು: ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Kiccha Sudeep) ಕನ್ನಡ ನಾಡು, ನುಡಿ ಭಾಷೆಯ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಾರೆ. ಎಂದಿಗೂ ಕನ್ನಡಕ್ಕೆ ಅವಮಾನವಾಗುವ ರೀತಿ ಘಟನೆಗಳು ನಡೆದರೆ ಅಲ್ಲಿ ಕಿಚ್ಚ ತನ್ನ ಧ್ವನಿಯನ್ನು ಎತ್ತುತ್ತಾರೆ.
ಇಂಥದ್ದೇ ಒಂದು ಸನ್ನಿವೇಶ ಸೈಮಾ ಅವಾರ್ಡ್ಸ್ (SIIMA) ಸಮಾರಂಭದಲ್ಲಿ ನಡೆದಿದೆ. ದುಬೈನಲ್ಲಿ ಎರಡು ದಿನಗಳ ದಕ್ಷಿಣ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.
ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಖ್ಯಾತ ಕಲಾವಿದರುಗಳು ಭಾಗಿಯಾಗಿದ್ದಾರೆ. ಕನ್ನಡದ ಕಿಚ್ಚ ಸುದೀಪ್ ಕೂಡ ಸೈಮಾದಲ್ಲಿ ಭಾಗಿಯಾಗಿದ್ದಾರೆ.
PRIDE OF KANNADA CINEMA ♥️
It’s not kannad ,, it’s KANNADA 💥💥
Boss on Fire mode @#SIIMA2024 ♥️#KicchaBOSS #MaxTheMovie#BRBFirstBlood pic.twitter.com/gWTUMik4s9
— K R R I I S S H H ™ 𝕏 (@krriisshhtveezz) September 15, 2024
ಈ ವೇಳೆ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬ ʼಕನ್ನಡʼ ಎನ್ನುವ ಪದವನ್ನು ʼಕನ್ನಡ್ʼ ಎಂದು ತಪ್ಪಾಗಿ ಉಚ್ಚರಿಸಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಅವರು ಕೊಟ್ಟ ಪ್ರತಿಕ್ರಿಯೆ ವೈರಲ್ ಆಗಿದೆ.
ಮುಂಬೈ ಜನರುʼ ಕನ್ನಡ್ʼ ಎಂದು ಹೇಳಿದಾಗ ನನಗೆ ಅರ್ಥವಾಗುತ್ತದೆ. ಆದರೆ ನೀವು ಹೈದರಾಬಾದ್ ಮೂಲದವರಾಗಿ ʼಕನ್ನಡ್ʼ ಹೇಳುವುದು ನನಗೆ ಸರಿ ಕಾಣಲ್ಲ ಎಂದು ಕಿಚ್ಚ ಹೇಳಿದ್ದಾರೆ. ತಕ್ಷಣ ನಿರೂಪಕ ಕ್ಷಮಿಸಿ ʼಕನ್ನಡʼ ಎಂದು ಹೇಳಿದ್ದಾರೆ. ಇದಕ್ಕೆ ಕಿಚ್ಚ ಯೆಸ್ ಕನ್ನಡ ಥ್ಯಾಂಕ್ಯೂ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕನ್ನಡ ಭಾಷಾ ವಿಚಾರವಾಗಿ ಈ ಹಿಂದೆ ಅಜಯ್ ದೇವಗನ್ ಅವರೊಂದಿಗೂ ಕಿಚ್ಚನ ಟ್ವೀಟ್ ವಾರ್ ಆಗಿತ್ತು. “ಹಿಂದಿ ರಾಷ್ಟ್ರೀಯ ಭಾಷೆಯಲ್ಲ” ಎಂದು ಕಿಚ್ಚ ಟ್ವೀಟ್ ಮಾಡಿದ್ದರು. ಇದಕ್ಕೆ ಅಜಯ್ ದೇವಗನ್ “ನಿಮ್ಮ ಪ್ರಕಾರ, ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ ಎಂದಾದರೆ ನಿಮ್ಮ ಮಾತೃಭಾಷೆಯಲ್ಲಿ ತಯಾರಾದ ಚಿತ್ರಗಳನ್ನು ಹಿಂದಿಗೆ ಡಬ್ ಮಾಡಿ ಏಕೆ ಬಿಡುಗಡೆ ಮಾಡುತ್ತೀರಿ? ಹಿಂದಿ ನಮ್ಮ ಮಾತೃಭಾಷೆ ಮತ್ತು ರಾಷ್ಟ್ರಭಾಷೆ ಆಗಿರುತ್ತದೆ ಮತ್ತು ಯಾವಾಗಲೂ ಇರುತ್ತದೆ.” ಎಂದು ಟ್ವೀಟ್ ಗೆ ರಿಪ್ಲೈ ಮಾಡಿದ್ದರು.
ಸದ್ಯ ಕಿಚ್ಚ ಸುದೀಪ್ ಶೀಘ್ರದಲ್ಲೇ ಬಿಗ್‌ಬಾಸ್ ಕನ್ನಡ -11ನ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ವಿಚಾರಕ್ಕೆ ಬಂದರೆ ʼಮ್ಯಾಕ್ಸ್ʼ ಬಳಿಕ ʼಬಿಲ್ಲ ರಂಗ ಬಾಷಾʼ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.