Kunigal: ಹಿಂದೂ ಮುಸ್ಲಿಂ ಭಾವೈಕ್ಯತೆ, ಸಂಗಮಕ್ಕೆ ಸಾಕ್ಷಿಯಾದ ಈದ್ ಮಿಲಾದ್ ಮೆರವಣಿಗೆ

ಮುಸ್ಲಿಂ ಭಾಂದವರಿಂದ ಗಣಪನಿಗೆ ನಮನ, ಹಿಂದು ಭಾಂದವರಿಂದ ಸಹಿ ತಿಂಡಿ, ತಂಪು ಪಾನಿಯ ವಿತರಣೆ 

Team Udayavani, Sep 16, 2024, 9:02 PM IST

Kunigal: ಹಿಂದು ಮುಸ್ಲಿಂ ಭಾವೈಕ್ಯತೆ, ಸಂಗಮಕ್ಕೆ ಸಾಕ್ಷಿಯಾದ : ಈದ್ ಮೀಲಾದ್ ಮೆರವಣಿಗೆ

ಕುಣಿಗಲ್: ಕುಣಿಗಲ್ ಪಟ್ಟಣದಲ್ಲಿ ಈದ್ ಮೀಲಾದ್ ಮೆರವಣಿಗೆ ಅದ್ದೂರಿಯಾಗಿ ನಡೆಯಿತು, ಮುಸ್ಲಿಂ ಭಾಂದವರಿಗೆ ಭಜರಂಗ ದಳ, ಹಿಂದೂ ಮಹಾ ಗಣಪತಿಯ ಸಂಘಟನೆ ಕಾರ್ಯಕರ್ತರು ತಂಪು ಪಾನಿಯಾನ, ಸಿಹಿ ತಿಂಡಿ ವಿತರಣೆ ಮಾಡುವ ಮೂಲಕ ಹಿಂದೂ ಮುಸ್ಲಿಂ ಭಾವೈಕ್ಯತೆ ಸಂಗಮಕ್ಕೆ ಸಾಕ್ಷಿಯಾದರು.

ತಾಲೂಕಿನ ನೆರೆಯ ನಾಗಮಂಗಲ ತಾಲೂಕಿನಲ್ಲಿ ಕ್ಷುಲಕ ಕಾರಣಕ್ಕಾಗಿ ಹಿಂದೂ ಮುಸ್ಲಿಂ ಭಾಂದವರ ಮಧ್ಯೆ ಗಲಾಟೆ ನಡೆದು, ಅಲ್ಲಿ ಅಶಾಂತಿಗೆ ಕಾರಣವಾಗಿದೆ, ಆದರೆ ಕುಣಿಗಲ್‌ನಲ್ಲಿ ಸೋಮವಾರ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ  ಹಿಂದೂ ಮುಸ್ಲಿಂ ಭಾಂದವರು ಒಟ್ಟಾಗಿ   ಶುಭಾಷಯ ವಿನಿಮಯ ಮಾಡಿಕೊಂಡಿದ್ದು, ತಾಲೂಕಿನ ಶಾಂತಿಯ ಸಂಕೇತವಾಗಿದೆ, ಜತೆಗೆ ಇತರೆ ತಾಲೂಕಿಗೆ ಕುಣಿಗಲ್ ಮಾದರಿಯಾಗಿದೆ, ಇದರ ಹೆಗ್ಗಳಿಗೆ ಪೊಲೀಸ್ ಇಲಾಖೆಗೆ ಸಲ್ಲಬೇಕಾಗಿದೆ.

ಸೋಮವಾರ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮ ಜಯಂತಿಯ ಅಂಗವಾಗಿ ಸಾವಿರಾರು  ಮುಸ್ಲಿಂ ಭಾಂದವರು, ಕೈಯಲ್ಲಿ ರಾಷ್ಟ್ರಧ್ವಜ ಮತ್ತು ಹಸಿರು ಧ್ವಜ ಹಿಡಿದುಕೊಂಡು ಮೆರವಣಿಗೆ ಮೂಲಕ ಪಟ್ಟಣದ ಕೋಟೆ ಪ್ರದೇಶದಿಂದ ಹಳೇಯ ರಾಷ್ಟ್ರೀಯ ಹೆದ್ದಾರಿ 48 ರ ಬಿ.ಎಂ ರಸ್ತೆ, ನ್ಯಾಯಾಲಯದ ಮುಂಭಾಗದ ಮಾರ್ಗವಾಗಿ ಮದ್ದೂರು ರಸ್ತೆ, ಗುಜ್ಜಾರಿಮೊಹಲ್ಲಾ ಮೂಲಕ ಚಿಕ್ಕಕೆರೆ ಸಮೀಪದ ದರ್ಗಾಕ್ಕೆ  ಪ್ರಾರ್ಥನೆ ಸಲ್ಲಿಸಿ, ಬಳಿಕ ಎನ್.ಹುಚ್ಚಮಾಸ್ತಿಗೌಡ ಸರ್ಕಲ್ ಬಳಿ ಮೆರವಣಿಗೆ ಭಾಗವಹಿಸಿತ್ತು.

ಹಿಂದೂ ಸಂಘಟನೆಯಿಂದ ತಂಪು ಪಾನಿಯ ವಿತರಣೆ : ಮೆರವಣಿಗೆಯಲ್ಲಿ ಪಾಲ್ಗೊಂಡಿದ ಮುಸ್ಲಿಂ ಭಾಂದವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಬಜರಂಗ ದಳ, ಹಿಂದೂ ಮಹಾ ಗಣಪತಿಯ ಸಂಘಟನೆ ಕಾರ್ಯಕರ್ತರು ಈದ್ ಮಿಲಾದ್ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು ಬಳಿಕ ಸಿಹಿ ತಿಂಡಿ, ತಂಪು ಪಾನೀಯ ವಿತರಣೆ ಮಾಡುವ ಮೂಲಕ ರಾಷ್ಟ್ರೀಯ ಭಾವೈಕ್ಯತೆ ಮೆರೆದರು.

ಮುಸ್ಲಿಂರಿಂದ ಗಣಪತಿಗೆ ಮಾಲಾರ್ಪಣೆ : ಖಾಸಗಿ ಬಸ್ ನಿಲ್ದಾಣದಲ್ಲಿ ಬಜರಂಗದಳದಿಂದ ಪ್ರತಿಷ್ಠಾಪಿಸಿರುವ ಹಿಂದೂ ಮಹಾ ಗಣಪತಿ ದೇವಾಲಯಕ್ಕೆ ತೆರಳಿದ ಮುಸ್ಲಿಂ ಭಾಂದವರು ಗಣಪತಿಗೆ ಮಾಲಾರ್ಪಣೆ ಮಾಡಿ ಹಿಂದೂ ಭಾಂದವರ ಹೌದಾರ್ಯವನ್ನು ಮನಸಾರೆ ಕೊಂಡಾಡಿದರು.

ಭಾವೈಕ್ಯತೆಗೆ ಸಾಕ್ಷಿಯಾದ ಪೊಲೀಸ್ ಇಲಾಖೆ : ಇತ್ತೀಚಿಗೆ ರಾಜ್ಯದಲ್ಲಿ ಕ್ಷುಲಕ ಕಾರಣಕ್ಕೆ ಮತೀಯ ಗಲಬೆಗಳು ನಡೆಯುತ್ತಿದ್ದು, ಜನರ ಅಶಾಂತಿಗೆ ಕಾರಣವಾಗಿದೆ, ಇದನ್ನು ಅರಿತ ಡಿವೈಎಸ್‌ಪಿ ಟಿ.ಎ.ಓಂಪ್ರಕಾಶ್, ವೃತ್ತ ನಿರೀಕ್ಷಕ ಎಸ್.ಬಿ.ನವೀನ್‌ಗೌಡ, ಅವರು ಹಿಂದೂ, ಮುಸ್ಲಿಂ ಭಾಂದವರ  ಶಾಂತಿ ಸಭೆ ನಡೆಸಿ ಗಣಪತಿ ಹಬ್ಬ ಮತ್ತು ಈದ್ ಮಿಲಾದ್ ಶಾಂತಿಯುತವಾಗಿ ನಡೆಯಬೇಕು ಎರಡು ಧರ್ಮದ ಜನರು ಹಬ್ಬಗಳನ್ನು ಸೌಹಾರ್ಧತವಾಗಿ ಆಚರಿಸಿ ಜನರ ನೆಮ್ಮದಿಗೆ   ಶ್ರಮಿಸುವ ಮೂಲಕ ಭಾವೈಕ್ಯತೆಗೆ ಕಾರಣರಾಗಬೇಕೆಂದು ಸಲಹೆ ನೀಡಿದರು, ಇದನ್ನು ಪರಿಪಾಲಿಸಿದ ಎರಡು ಧರ್ಮದ ಜನರು ಸೋಮವಾರ ಶಾಂತಿಯುತವಾಗಿ ಈದ್ ಮಿಲಾದ್ ಮೆರವಣಿಗೆ ನಡೆಯಲು ಪೊಲೀಸ್ ಇಲಾಖೆ ಕೈಗೊಂಡ ಕ್ರಮ ನಾಗರೀಕರ ಪ್ರಶಂಸೆಗೆ ಕಾರಣವಾಗಿದೆ.

ದೇಶಕ್ಕೆ ಮಾದರಿ :  ಎಎಸ್‌ಪಿ ಮಹಮ್ಮದ್ ಖಾದರ್ ಮಾತನಾಡಿ ಇಂತಹ ಒಂದು ಕ್ಷಣ ನನ್ನ ಸೇವಾ ಅವಧಿಯ 30 ವರ್ಷದಲ್ಲಿ ನೋಡಿರಲಿಲ್ಲ, ಇಂತಹ ಸಾಮರಸ್ಯ, ಭಾಂದವ್ಯ, ಇಡೀ ಕರ್ನಾಟಕಕ್ಕೆ ಅಲ್ಲ, ಇಡೀ ಭಾರತದಲ್ಲಿ ಇತಿಹಾಸ ಸೃಷ್ಠಿಸುವಂತ ನಡೆ, ಬಜರಂಗದಳ, ಹಿಂದೂ ಮಹಾ ಸಂಘಟನೆಗಳ ಕಾರ್ಯಕರ್ತರು, ಮುಸ್ಲಿಂ ಭಾಂದವರಿಗೆ ಸಹಿ ಹಾಗೂ ತಂಪು ಪಾನಿಯ ವಿತರಣೆ ಮಾಡುವ ಮೂಲಕ ಸೌಹಾರ್ದ ಮೆರೆದಿದ್ದಾರೆ, ಎಲ್ಲರೂ ಭಾರತದ ಪ್ರಜೆಗಳಾಗಿ ಬದುಕಬೇಕಾಗಿದೆ, ಮುಸ್ಲಿಂ ಭಾಂದವರು ಗಣಪತಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಖುಷಿ ತಂದಿದೆ, ಇದು ಇದೇ ರೀತಿ ಮುಂದುವರೆದು, ದೇಶದ ಉದ್ದಗಲಕ್ಕೂ ಮಾದರಿಯಾಗಲಿ ಎಂದು ಹೇಳಿದರು,

ಪುರಸಭಾ ಮಾಜಿ ಅಧ್ಯಕ್ಷ ರೆಹಮಾನ್‌ಷರೀಪ್ ಮಾತನಾಡಿ  ಹಿಂದೂ, ಮುಸ್ಲಿಂ ಜಾತಿ ಹೆಸರಿನಲ್ಲಿ ಕೆಲ ವ್ಯಕ್ತಿಗಳು ಆಶಾಂತಿ ಸೃಷ್ಟಿಸುತ್ತಿದ್ದಾರೆ, ಆದರೆ ಪೊಲೀಸರು ಕರೆದಿದ್ದ ಶಾಂತಿ ಸಭೆಯಲ್ಲಿ ತಾಲೂಕಿನ ಹಿಂದೂ ಮುಸ್ಲಿಂ ಭಾಂದವರು ಒಂದು ತಾಯಿ ಮಕ್ಕಳಂತೆ ಇದ್ದೇವೆ ಕೋಟೆ ಪ್ರದೇಶಕ್ಕೆ ಗಣಪತಿ ಮೆರವಣಿಗೆ ಬಂದಾಗ ಮುಸ್ಲಿಂ ಭಾಂದವರು ಭಾವನಾತ್ಮಕವಾಗಿ ಬರಮಾಡಿಕೊಂಡು ಹಿಂದೂ ಭಾಂದವರಿಗೆ ತಂಪು ಪಾನೀಯ ನೀಡುತ್ತಿರುವುದು ಹಿಂದಿನಿಂದ ನಡೆದುಕೊಂಡು ಬರುತ್ತಿದೆ ಎಂದರು.

ಹಿಂದೂ ಸಂಘಟನೆಯ ಕಾರ್ಯಕರ್ತ ವಕೀಲ ಸತೀಶ್ ಮಾತನಾಡಿ ಸೌಹಾರ್ದಿತವಾಗಿ ಹಿಂದೂ, ಮುಸ್ಲಿಂ ಒಟ್ಟಿಗೆ ಸೇರುವುದು ಬಹಳ ಸಂತಸ ವಿಚಾರ, ನಾವೆಲ್ಲರೂ ಸ್ವಾರ್ಥವನ್ನು ಬಿಟ್ಟು ದೇಶವನ್ನು ಕಟ್ಟಲು ಕೈ ಜೋಡಿಸೋಣ ಎಂದು ಕರೆ ನೀಡಿದರು,

ಉತ್ತಮ ಬೆಳವಣಿಗೆ 
ಈದ್ ಮಿಲಾದ್ ಮೆರವಣಿಗೆಯಲ್ಲಿ ಭಾಗವಹಿಸಿದ ಮುಸ್ಲಿಂ ಭಾಂದವರಿಗೆ ಹಿಂದೂ ಭಾಂದವರು ಸ್ವಾಗತಿಸಿ ಸಿಹಿ ತಿಂಡಿ ತಂಪು ಪಾನೀಯಾನ ನೀಡಿರುವುದು ಮತ್ತು ಮುಸ್ಲಿಂ ಗಣಪತಿಗೆ ಮಾಲಾರ್ಪಣೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ ಇದು ನನಗೆ ಖುಷಿ ತಂದಿದೆ, ಹಿಂದೂ, ಮುಸ್ಲಿಂ ಭಾಂದವರು ಒಂದೇ ತಾಯಿಯ ಮಕ್ಕಳಂತೆ ನಡೆದುಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ.
– ಡಾ.ಹೆಚ್.ಡಿ.ರಂಗನಾಥ್, ಶಾಸಕ      

ಈ ವೇಳೆ ಪುರಸಭಾ ಸದಸ್ಯರಾದ ಕೋಟೆ ನಾಗಣ್ಣ, ಸೆಮೀವುಲ್ಲಾ, ಮಾಜಿ ಉಪಾಧ್ಯಕ್ಷ ಅಬ್ದುಲ್ ಅಮೀದ್, ಕಸಾಪ ಅಧ್ಯಕ್ಷ ಡಾ.ಕಪನಿಪಾಳ್ಯರಮೇಶ್, ವಕೀಲ ಜಗದೀಶ್, ತಾಲೂಕು ಬಜರಂಗದಳದ ಅಧ್ಯಕ್ಷ ಗಿರೀಶ್, ಪದಾಧಿಕಾರಿಗಳಾದ ಪುರುಷೋತ್ತಮ್, ಹೇಮಂತ್, ಡಾ.ಜಿ.ಪರಮೇಶ್ವರ್ ಯುವ ಸೈನ್ಯ ರಾಜ್ಯಾಧ್ಯಕ್ಷ ನಗುತಾ ರಂಗನಾಥ್, ಸ್ಟುಡಿಯೋ ಗುರು, ಕೆವಿಆರ್ ರಘು ಮತ್ತಿತರರು ಇದ್ದರು.

 

ಟಾಪ್ ನ್ಯೂಸ್

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

4-kunigal

Kunigal: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ

14-kunigal

Kunigal: ಟೈರ್ ಸ್ಪೋಟಗೊಂಡು ಕಾರು ಪಲ್ಟಿ: ಐಟಿ ಉದ್ಯೋಗಿ ದುರ್ಮರಣ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Belagavi: Let there be a full discussion of issues in the plenary session: Dr. Prabhakar Kore

Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್‌ ಕೋರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.