Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್ಐಎಗೆ ವಹಿಸಲಿ: ಶಾಸಕ ಸುನಿಲ್ ಕುಮಾರ್
Team Udayavani, Sep 17, 2024, 1:31 AM IST
ಉಡುಪಿ: ರಾಜ್ಯದಲ್ಲಿ ಕೆಲವು ಮುಸ್ಲಿಮರಿಂದ ಹಿಂದೂಗಳ ಮೇಲೆ ದಾಳಿಯಾದಾಗಲೆಲ್ಲ ಕೇರಳದ ನಂಟು ಸದ್ದು ಮಾಡುತ್ತಿದೆ. ಬಂಟ್ವಾಳ ಮತ್ತು ಮಂಡ್ಯದ ಘಟನೆಯನ್ನು ಎನ್ಐಎಗೆ ಒಪ್ಪಿಸಿದರೆ ಸತ್ಯ ಹೊರಗೆ ಬರಲಿದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮಂಡ್ಯದಲ್ಲಿ ನಡೆದ ಘಟನೆಯಲ್ಲಿ ಕೇರಳದ ಆರೋಪಿಗಳು ಇದ್ದರು. ಇಂತಹ ದಾಳಿ ನಡೆದಾಗ ಪಿಎಫ್ಐ ಪಾತ್ರ ಮತ್ತೆ ಮತ್ತೆ ಸಾಬೀತಾಗಿದೆ. ಕೇರಳದ ನಂಟು ತುಂಬಾ ಸಲ ಕೇಳಿ ಬಂದಿದೆ. ಸರಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ, ಓಲೈಕೆ ರಾಜಕಾರಣದಿಂದ ಹೊರಬಂದು ಆಂತರಿಕ ಭದ್ರತೆಯ ಸವಾಲು ಎಂದು ಪರಿಗಣಿಸಿ, ಸೂಕ್ತ ತನಿಖೆ ನಡೆಸಿ ಎಂದು ಆಗ್ರಹಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.