Puttur: ಸಂಪ್ಯ ಮದ್ರಸಾದಲ್ಲಿ ಹಳೆ ಕಾಲದ ವಸ್ತು ಪ್ರದರ್ಶನ
ಗಮನ ಸೆಳೆಯುತ್ತಿದೆ 1 ಕೋಟಿ ಮುಖಬೆಲೆಯ ನೋಟು
Team Udayavani, Sep 17, 2024, 12:55 PM IST
ಪುತ್ತೂರು: ಎರಡು ಸಾವಿರ ರೂ. ನೋಟು ನೋಡುವುದು ಸಾಮಾನ್ಯ.ಆದರೆ ಇಲ್ಲಿರುವುದು ಲಕ್ಷ ಅಲ್ಲ, ಕೋಟಿ ಮುಖಬೆಲೆಯ ನೋಟು.
ಸಂಪ್ಯ ಮುಹ್ಯದ್ದೀನ್ ಜುಮಾ ಮಸೀದಿ ಬಳಿಯಲ್ಲೇ ಇರುವ ದಾರುಲ್ ಉಲೂಂ ಮದ್ರಸಾದಲ್ಲಿ ಏರ್ಪಡಿಸಿರುವ ವಸ್ತು ಪ್ರದರ್ಶನ ಹಲವು ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ. ಇದರಲ್ಲಿ ಕೋಟಿ ಮುಖಬೆಲೆ ನೋಟು ಕೂಡ ಒಂದಾಗಿದೆ. ಕಳೆದ ಎರಡು ದಿನಗಳಿಂದ ಪ್ರದರ್ಶನ ನಡೆಯುತ್ತಿದೆ. ವಿವಿಧ ದೇಶಗಳಿಂದ ಸಂಗ್ರಹಿಸಿದ ನಾಣ್ಯ, ನೋಟುಗಳು ಇಲ್ಲಿದೆ.
ಕೋಟಿ ರೂ.ಬೆಲೆಯ ನೋಟು
ಇದು ಯುಗೋಸ್ಲೋವಿಯಾದ ಕರೆನ್ಸಿ. ಭಾರತದಲ್ಲಿ ಇಷ್ಟು ಮೌಲ್ಯದ ಒಂದು ನೋಟನ್ನು ಕಾಣಲು ಸಾಧ್ಯವಿಲ್ಲ. ಯುಗೋಸ್ಲೋವಿಯಾದಲ್ಲಿದ್ದ ಕೋಟಿ ಮುಖಬೆಲೆಯ ನೋಟನ್ನು ಸಂಗ್ರಹಿಸಿ ತಂದವರು ಅಬ್ದುಲ್ ಸಮದ್ ಬಾವಾ ಹಾಜಿ. ಕೋಟಿ ಮುಖಬೆಲೆಯ ನೋಟು ಮಾತ್ರವಲ್ಲ 5 ಸಾವಿರ, 50 ಸಾವಿರ ಮುಖಬೆಲೆಯ ನೋಟುಗಳನ್ನು ಕಾಣಬಹುದು. ಇವೆಲ್ಲ ವಿದೇಶಿ ಕರೆನ್ಸಿಗಳೇ ಆದರೂ ಅದರ ಮೌಲ್ಯವನ್ನು ಇಲ್ಲಿಗೆ ತುಲನೆ ಮಾಡಿದರೆ ಅಷ್ಟು ಮೌಲ್ಯ ಇಲ್ಲಿ ಇರದೆಯೂ ಇರಬಹುದು. ಆದರೆ ಬೇರೆ ಬೇರೆ ರಾಷ್ಟ್ರಗಳಲ್ಲಿ ಇರುವ ನೋಟುಗಳ ಬಗ್ಗೆ ಜನರಿಗೆ ಮಾಹಿತಿ ಪಡೆಯಲು ಇದೊಂದು ಉತ್ತಮ ವೇದಿಕೆಯಾಗಿದೆ.
ಜನರಿಗೆ ಪರಿಚಯಕ್ಕೆ
ಹಳೆ ವಸ್ತುಗಳು, ಹಳೆ ನಾಣ್ಯ, ನೋಟುಗಳ ಪರಿಚಯ ಸಾರ್ವಜನಿಕರಿಗೆ ಆಗಬೇಕು ಎಂಬ ಉದ್ದೇಶದಿಂದ ಪ್ರದರ್ಶನ ಏರ್ಪಡಿಸಲಾಗಿದೆ. ಬೇರೆ ಬೇರೆ ದೇಶದ ಕರೆನ್ಸಿಗಳನ್ನು ಸಂಗ್ರಹಿಸಿಟ್ಟಿದ್ದು, ಆ ದೇಶ, ಆ ಊರುಗಳಿಗೆ ಹೋದಾಗ ಸಂಗ್ರಹಿಸುವ ಪ್ರಯತ್ನ ಮಾಡಿದ್ದೇವೆ. ಸಂಪ್ಯ ಮಸೀದಿಯಲ್ಲಿ ಪ್ರದರ್ಶನ ನಡೆಯುತ್ತಿದೆ.
-ಅಬ್ದುಲ್ ಸಮದ್ ಬಾವಾ ಹಾಜಿ
ವಿವಿಧ ಸಂಗ್ರಹಗಳ ಪ್ರದರ್ಶನ
ಸಂಪ್ಯ ಜಮಾತಿಗೆ ಒಳಪಟ್ಟು 450ರಷ್ಟು ಮನೆಗಳಿವೆ. ಇಲ್ಲಿನ ಮದ್ರಸಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಕಂಚು ತಾಮ್ರದ ನಾಣ್ಯ, ಪುರಾತನ ಕಾಲದ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಅವುಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.
-ಅಬೂಬಕ್ಕರ್ ಕಲ್ಲರ್ಪೆ, ಕಾರ್ಯದರ್ಶಿ ಮುಹ್ಯಿದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿ
ಏನೇನಿದೆ ಇಲ್ಲಿ
ಮುಘಲ್ ದೊರೆಗಳ, ಈಸ್ಟ್ ಇಂಡಿಯಾ ಕಂಪೆನಿಯ ಕರೆನ್ಸಿಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಶಾತವಾಹನರ ಕಾಲದ ಕರೆನ್ಸಿ, ತರಹೇವಾರಿ ನಾಣ್ಯಗಳು. ರಾಜರುಗಳ ಕಾಲದ ನಾಣ್ಯಗಳು, ಬೆಳ್ಳಿ- ತಾಮ್ರದ ನಾಣ್ಯಗಳು, ತಿರುವನಂತಪುರಂನ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ನಿರ್ಮಾಣ ಸಂದರ್ಭ ಚಾಲ್ತಿಯಲ್ಲಿದ್ದ ಕರೆನ್ಸಿಗಳಾದ 1 ಪೈ, 2 ಪೈ, ಸ್ಟಾಂಪ್ ಸಂಗ್ರಹಗಳು ಇಲ್ಲಿವೆ. ಗಾಂಧೀಜಿ ಬಳಸುತ್ತಿದ್ದ ಗಡಿಯಾರವನ್ನೇ ಹೋಲುವ ಬೆಳ್ಳಿಯ ಪುಟ್ಟ ಕ್ಲಾಕ್, ನಶ್ಯದ ಡಬ್ಬ (ಬೆಳ್ಳಿ), ಸೇರು, ಪಾವು, ನೊಗ, ವಿವಿಧ ಪಾತ್ರಗಳು, ಗ್ರಾಮೋ ಫೋನ್, ಗ್ಯಾಸ್ ಲೈಟ್, ಗಿಂಡಿ, ಕೊಂಡೆ, ಒತ್ತುಮಣೆ ಹೀಗೆ ಹಳೆ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಸಾರ್ವಜನಿಕ ಪ್ರದರ್ಶನ
ಪ್ರದರ್ಶನಕ್ಕೆ ಮೊದಲು ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಮಸೀದಿ ಆವರಣದಲ್ಲಿ ವಿವಿಧ ರೀತಿಯ ಗಿಡಗಳನ್ನು ನೆಡಲಾಯಿತು. ಶಾಸಕ ಅಶೋಕ್ ಕುಮಾರ್ ರೈ ಸಹಿತ ಗಣ್ಯರು ಭೇಟಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.