UV Fusion: ಏಕಾಂಗಿ ಪಯಣ


Team Udayavani, Sep 17, 2024, 2:25 PM IST

2-uv-fusion

ನನ್ನ ಶೈಕ್ಷಣಿಕ ಕಲಿಕೆ, ಹಾಗೂ ಸಂದರ್ಶನ ನಡೆಸುವ ಉದ್ದೇಶದಿಂದ ನನ್ನ ಜೀವನದಲ್ಲಿಯೇ ಮೊದಲ ಬಾರಿಗೆ ಒಬ್ಬಂಟಿಯಾಗಿ ರಾಜ್ಯದ ರಾಜಧಾನಿ ಬೆಂಗಳೂರಿಗೆ ಪಯಣ ಬೆಳಿಸಿದೆ.

ಆತುರವಾಗಿ ಶುರುವಾದ ನನ್ನ ಪಯಣ ಅಷ್ಟೊಂದು ಸುಸಜ್ಜಿತವಾಗಿ ಏರ್ಪಾಡಾಗಿರಲಿಲ್ಲ. ಆದರೂ ನನ್ನ ಕುಟುಂಬದವರ ಸಹಾಯ ಪಡೆದುಕೊಂಡು ಹೋದೆ. ಆದರೆ ನನಗೆ ಏನು ಒಂದು ದೈರ್ಯ, ಕೈಯಲ್ಲಿ ದುಡ್ಡು ಒಂದಿದ್ರೆ ಎಲ್ಲಿಗೆ ಬೇಕಾದರೂ ಹೋಗಿ ಬರಬಹುದು ಎಂದು.

ಪಯಣದುದ್ದಕ್ಕೂ ನನ್ನ ಜೀವನದಲ್ಲಿ ಇದುವರೆಗೂ ನಾನು ಸರಿ ತಪ್ಪುಗಳನ್ನು ಯೋಚಿಸುತ್ತಾ ಕುಳಿತಾಗ, ನನಗೆ ಅರಿವಾದದ್ದು ಎಂದರೆ ನನ್ನ ಜೀವನದಲ್ಲಿ ಇದುವರೆಗೆ ತೆಗೆದುಕೊಂಡ ನಿರ್ಧಾರಗಳಲ್ಲಿ ಯಾವ ಒಂದು ನಿರ್ಧಾರವು ಸರಿಯಾಗಿಲ್ಲ ಏಕೆಂದರೆ ತೆಗೆದುಕೊಂಡ ನಿರ್ಧಾರಗಳ ಮೇಲೆ ನನ್ನ ಜೀವನ ಪಯಣ ಸಾಗೆಯಿಲ್ಲ.

ಜೀವನದಲ್ಲಿ ನಾನು ಯೋಚಿಸಿದ್ದೆ ಬೇರೆ ಸಾಗಿದ ರೀತಿಯೇ ಬೇರೆ. ಮೂಲತಃ ನಾನು ಕಡಿಮೆ ಸ್ನೇಹಿತರನ್ನು ಹೊಂದಿದ್ದು, ಕೊನೆವರೆಗೂ ಸ್ನೇಹವನ್ನು ಉಳಿಸಿಕೊಳ್ಳಬೇಕೆಂಬ ಬಯಕೆ. ಪಯಣದುದಕ್ಕೂ ಯೋಚಿಸಿದಾಗ ನನಗೆ ಅರಿವಾಗಿದ್ದು ಆ ಒಂದು ಬಯಕೆಗೆ ನಾನು ಅರ್ಹನಲ್ಲ.

ಅದೇರೀತಿ ವಿದ್ಯಾಭ್ಯಾಸ ಕುರಿತು ತೆಗೆದುಕೊಂಡ ನಿರ್ಧಾರಗಳು, ನನ್ನ ಪದವಿ ಮುಗಿಯುವವರೆಗೂ ಯಾವುದೇ ರೀತಿಯ ಭವಿಷ್ಯದ ಕುರಿತು ಆಲೋಚನೆ ಮಾಡದೇ ಕಲಿಕೆ ಮುಗಿಸಿದೆ. ನಂತರ ಅರಿವಾದದ್ದು ನನ್ನ ಪದವಿಯಿಂದ ಏನು ಪ್ರಯೋಜನ ಇಲ್ಲ ಎಂದು.

ನಂತರ ಹೇಗಾದರೂ ಮಾಡಿ ಉದ್ಯೋಗ ಹುಡುಕಬೇಕೆಂಬ ಆಸೆಯಿಂದ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸಲು ಮುಂದಾದೆ, ಆದರೆ ಅಲ್ಲಿಯೂ ಕೂಡ ದಿಟ್ಟ ನಿರ್ಧಾರವಿಲ್ಲದೆ ಮತ್ತೆ ವಿಫ‌ಲನಾಗಿ ಕೊನೆಗೆ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆಯಲು ಮುಂದಾದೆ. ಇದೆಲ್ಲವನ್ನೂ ಪಯಣದುದಕ್ಕೂ ಯೋಚಿಸಿದಾಗ ಅರಿವಾದದ್ದು ಯಾಕೆ ನನ್ನ ವಿದ್ಯಾಭ್ಯಾಸದಲ್ಲಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲವೆಂದು.

ಒಂದು ವೇಳೆ ಒಳ್ಳೆಯ ಪದವಿ ಅಥವಾ ಶ್ರದ್ಧೆಯಿಂದ ಅಭ್ಯಾಸ ಮಾಡಿದ್ದರೆ ಅಂದುಕೊಂಡ ಹಾಗೆ ಇಷ್ಟೊತ್ತಿಗೆ ಒಂದು ಒಳ್ಳೆಯ ಉದ್ಯೋಗದಲ್ಲಿ ಇರುತ್ತಿದ್ದೆ. ಇದೆಲ್ಲವನ್ನೂ ಯೋಚಿಸಿಕೊಂಡು ಸಾಗುವಾಗ ಇದಕ್ಕೆ ಮೂಲ ಕಾರಣ ಹುಡುಕುವ ತವಕ ಹೆಚ್ಚಿತ್ತು. ಈ ರೀತಿಯಾಗಲು ನನ್ನ ಸೋಮಾರಿತನ ಕಾರಣವೋ, ನನ್ನ ಕುಟುಂಬದ ಜವಾಬ್ದಾರಿಗಳು ಕಾರಣವೋ ಯಾವುದು ಎಂಬುದು ತಿಳಿಯದಂತಾಗಿ ಮುಖವಿಶ್ಮಿತನಾದೆ.

ಆದರೆ ನನ್ನ ಏಕಾಂಗಿ ಪಯಣವು ನಾನು ಮಾಡಿದ ಎಲ್ಲ ಸರಿತಪ್ಪುಗಳನ್ನು ನನಗೆ ಅರಿವು ಮಾಡಿಕೊಟ್ಟು, ಜೀವನದಲ್ಲಿ ಬಂದ ಯಾವ ಸಂಬಂಧವನ್ನು ಕಳೆದುಕೊಳ್ಳಬೇಡ  ಹಾಗೂ ತೆಗೆದುಕೊಂಡ ನಿರ್ಧಾರಗಳ ಮೇಲೆ ನಿರಂತರ ಪರಿಶ್ರಮ ಕಾರ್ಯನಿರ್ವಹಿಸಬೇಕು ಎಂದು ಮನವರಿಕೆ ಮಾಡಿಕೊಟ್ಟಿತು. ಜೀವನದಲ್ಲಿ ಪ್ರತಿಯೊಬ್ಬರೂ ಏಕಾಂಗಿಯಾಗಿ ಹೋರಾಟ ನಡೆಸುವುದು ಅತ್ಯವಶ್ಯಕ ಮತ್ತು ಅನಿವಾರ್ಯ ಕೂಡ.

-ಮಡು ಮೂಲಿಮನಿ

ಧಾರವಾಡ

ಟಾಪ್ ನ್ಯೂಸ್

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು

delhi air

Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-uv-fusion

Discipline: ಬದುಕಿನಲ್ಲಿ ಶಿಸ್ತಿರಲಿ

14-uv-fusion

Mother: ಅಮ್ಮನ ಜೀವನವೇ ಆದರ್ಶ

13-uv-fusion

Childhood Days: ಮರಳಿ ಬಾರದ ಬಾಲ್ಯ ಜೀವನ

12-uv-fusion

UV Fusion: ಅಂದು ಇಂದು- ಮಕ್ಕಳೆಲ್ಲ ಈಗ ಮಾಡ್ರನೈಸ್ಡ್‌

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.