Loneliness: ಸುಖದ ಬದುಕಿನಲ್ಲಿ ಕಾಡುವ ಏಕಾಂಗಿತನ


Team Udayavani, Sep 17, 2024, 6:34 PM IST

16-uv-fusion

ಮನುಷ್ಯ ಅನಾಗರಿಕತೆಯಿಂದ ನಾಗರಿಕತೆಯೆಡೆಗೆ ಸಾಗಿ ಬಂದಿದ್ದಾನೆ. ಸ್ವತಃ ಬೇಟೆಯಾಡುವುದನ್ನು, ಅಡುಗೆ ಬೇಯಿಸುವುದನ್ನು, ಮನೆ ಕಟ್ಟುವುದನ್ನು ಎಲ್ಲವನ್ನು ಕಲಿತ ಇತ ಕಾಲ ಬದಲಾದಂತೆ ಸ್ವಾಭಿಮಾನವನ್ನು ಮರೆತು ಅಹಮಿನಲಿ ಮೆರೆಯತೊಡಗಿದ. ಪಡೆದಿದ್ದ ಸಂಸ್ಕಾರಗಳನು ಬದಿಗೊತ್ತಿ ಬರಿ ಅಂತಸ್ತು, ಐಶ್ವರ್ಯಗಳ ಬೆನ್ನೇರಿ ಮಾನವೀಯ ಮೌಲ್ಯಗಳನ್ನು ತೊರೆಯುತ್ತಿದ್ದಾನೆ. ಎಲ್ಲವೂ ಗಳಿಸಿದ್ದೇನೆಂಬ ಭರದಲ್ಲಿ ಸರ್ವವನ್ನು ಮರೆಯುತ್ತಿದ್ದಾನೆ.

ಸಮಾಜದಲ್ಲಿ ನಾವೊಬ್ಬ ಸ್ವತಂತ್ರ ಜೀವಿ ಅಷ್ಟೆ , ಆದರೆ ನನ್ನಿಂದಲೆ ಎಲ್ಲವೂ ನಡೆಯುತ್ತದೆಂಬುದು ಮೂರ್ಖತನ. ಅನಿಶ್ಚಿತ ಸುಖಕ್ಕಾಗಿ ನಿತ್ಯವೂ ಹಪಾಹಪಿ ಪಡುವ ಭಿಕ್ಷುಕರಂತೆ ಭಗವಂತನಲ್ಲಿ ಬೇಡುವ ಅತೃಪ್ತ ವ್ಯಕ್ತಿಗಳು ನಾವು. ಆತ ಕೊಟ್ಟಾಗ ಜಗತ್ತಿನಲ್ಲಿ ನಾನೇ ಶ್ರೀಮಂತನೆಂದು ಬೀಗುತ್ತೇವೆ, ದರ್ಪ ತೋರುತ್ತೇವೆ, ಅದೆ ಉಮೇದಿನಲ್ಲಿ ನಮ್ಮನ್ನು ಕೈಹಿಡಿದು ಬೆಳೆಸಿದವರನ್ನು ಮತ್ತು ಸಾಕಿದವರನ್ನು ದೂರ ತಳ್ಳುತ್ತೇವೆ ಇದು ಎಂದೂ ಶಾಶ್ವತವಲ್ಲ. ದರ್ಪಕ್ಕೊಂದು ಕೊನೆ ಇರಬೇಕಲ್ಲವೆ ಸಾವೆ ಇಲ್ಲದ ಹಿರಣ್ಯಕಶಪುವಿನ ಅಂತ್ಯಕ್ಕೆ ಅವನ ಉದ್ಧಟತನವೆ ಕಾರಣವಲ್ಲವೆ. ದರ್ಪವು ಕೊನೆಯಾದಾಗ ಪೆಚ್ಚುಮೋರೆ ಹಾಕಿಕೊಂಡು ಏಕಾಂಗಿಯಾಗಿ ಬಾಳು ಸಾಗಿಸಬೇಕಲ್ಲ ಎಂದು ಬೀಗಿ ಬದುಕಿದ್ದ ಶರೀರಕ್ಕೆ ಇಂದು ಬಾಗಿ ಬದುಕುವ ದುಃಸ್ಥಿತಿ ತಾನೆ ಬಂದೊದಗುತ್ತದೆ.

ಕಾಡಿನಲ್ಲಿ ಸಹಜವಾಗಿ ಅರಳುವ ಹೂವು ಯಾರ ಪ್ರೀತಿಯನ್ನು ಬಯಸುವುದಿಲ್ಲ ಬದಲಾಗಿ ತನ್ನ ಸುಗಂಧದಿಂದಲೆ ಸರ್ವರನ್ನು ತನ್ನಡೆಗೆ ಸೆಳೆಯುತ್ತದೆ.ದುಂಬಿಗಳು ಹೂಗಳನ್ನು ಅರಸಿ ಹೋಗುತ್ತವೆ ಹೊರತು ಹೂಗಳು ದುಂಬಿಗಳನ್ನಲ್ಲ. ಕೆಲವೆ ಗಂಟೆಗಳು ಅರಳಿ ಬಾಡಿದರೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಇನ್ನು ಸೂರ್ಯ ಚಂದ್ರರು ಏಕಾಂಗಿಗಳಲ್ಲ ಅವರು ಜಗತ್ತಿಗೆ ಬೆಳಕು ಕೊಡುವವರಾದರೂ ಅವರಿಗೆ ಸ್ವಲ್ಪವೂ ಕೂಡ ದರ್ಪವಿಲ್ಲ. ಇವರಿಲ್ಲದಿದ್ದರೆ ಇಡಿ ಜಗತ್ತೆ ಅಲ್ಲೋಲ ಕಲ್ಲೋಲವಾಗಿ ಜೀವನ ಅಯೋಮಯವಾಗುತ್ತದೆ.

ನೀರಿನ ವಿಷಯಕ್ಕೆ ಬಂದರೆ ಇದು ಕೂಡ ಏಕಾಂಗಿಯಲ್ಲ ಹೇಗೆಂದರೆ ಇದು ಹರಿಯುತ್ತ ಹರಿಯುತ್ತ ಸಾಗರವನ್ನು ಸೇರುತ್ತದೆ. ಮನುಷ್ಯ ಇವೆಲ್ಲದಕ್ಕಿಂತ ಹೊರತಾಗಿದ್ದಾನೆ ಹುಟ್ಟುವಾಗ ಏಕಾಂಗಿ ಸಾಯುವಾಗ ಏಕಾಂಗಿ ಬದುಕಿನ ಮೂರು ದಿನದಲ್ಲಿ ಏಕಾಂಗಿಯಾಗಿ ಮುಂದಿನ ಪೀಳಿಗೆಗೆ ಆಸ್ತಿಗಳಿಸಿಡುತ್ತಾನೆ. ಪರರ ಜತೆಗೆ ಬೆರೆಯಲಿಲ್ಲ. ಪರರ ಕಷ್ಟಗಳ ಆಲಿಸದೆ ಸಾಗಿದರೆ ಕೊನೆಗಾಲದಲ್ಲಿ ಸ್ಮಶಾನವು ಕೂಡ ಇವರನ್ನು ಪುರಸ್ಕರಿಸದಂತೆ ಇತ ಬದುಕುತ್ತಾನೆ.

ಜೀವನವೆಂಬ ಚದುರಂಗದಾಟದಲಿ ನಾವೆಲ್ಲ ಆನೆ, ಒಂಟೆ, ಕುದುರೆ, ಮಂತ್ರಿ, ರಾಜ, ಕಾಲಾಳು ಹೀಗೆ ನೂರೆಂಟು ಪಾತ್ರಗಳನ್ನು ನಿರ್ವಹಿಸುತ್ತೇವೆ. ಆಟ ಮುಗಿಯುವ ಸಮಯದಲ್ಲಿ ಒಬ್ಬರೆ ಉಳಿದು ಜಯಸಾಧಿಸಿದರೇನು ಬಂತು

ನಮ್ಮ ಬಾಳು ಇದರಂತೆ ಅಲ್ಲವೆ ಅಧಿಕಾರವೆಂಬ ನಶೆಯಲ್ಲಿ ಬೀಗುವ ಬದಲು ನಿಮ್ಮಲ್ಲಿ ನಾನು ಒಬ್ಬ ಈ ಪದವಿ ಪ್ರತಿಷ್ಠೆಗಳು ಎಲ್ಲವೂ ಕ್ಷಣಮಾತ್ರ. ಜಗತ್ತನ್ನೇ ಗೆದ್ದ ಅಲೆಕ್ಸಾಂರ್ಡ ಸಾಯುವಾಗ ತನ್ನ ಶಿಷ್ಯರಿಗೆ ಹೀಗೆ ಹೇಳಿದ ನಾನು ಸತ್ತಾಗ ನನ್ನ ಶವದ ಪೆಟ್ಟಿಗೆಯಿಂದ ಕೈಗಳು ಹೊರಬರುವಂತೆ ಮಾಡಿ ಅದರ ಜತೆಗೆ ಮಸಣಕ್ಕೆ ಹೋಗುವ ದಾರಿಯಲ್ಲಿ ಕೈಯೊಳಗೆ ಬಂಗಾರದ ವಸ್ತುಗಳನು ಹಾಕಿ ಅದು ಚೆಲ್ಲುತ್ತ ಹೋಗಲಿ ಶಿಷ್ಯರು ಸರಿ ಹಾಗೆ ಮಾಡುತ್ತೇವೆಂದರು. ಏಕೆ ಹೀಗೆ ಹೇಳಿದ್ದಾರೆ ಮಹಾರಾಜ ಎಂದಾಗ ನನ್ನ ಜೀವನದುದ್ದಕ್ಕೂ ನಾನು ಏಕಾಂಗಿಯಾಗೆ ಇದ್ದೆ. ಇಡಿ ದೇಶವನ್ನೆ ಗೆದ್ದೆ ಕೊನೆಗೆ ನಾನು ಏನನ್ನು ಒಯ್ಯಲಾಗಲಿಲ್ಲ. ಬರುವಾಗ ಹೇಗೆ ಒಂಟಿಯಾಗಿ ಬಂದೆನೋ ಹೋಗುವಾಗ ಹಾಗೆ ಒಬ್ಬನೆ ಹೊರಟಿದ್ದೇನೆ ಈ ಸತ್ಯ ಜಗತ್ತಿಗೆ ಗೊತ್ತಾಗಲಿ ಎಂಬುದು ಅದರ ಅರ್ಥ.

ಇದ್ದಾಗ ಎಲ್ಲವೂ ನಡೆದರೆ ಕೊನೆಗೆ ಯಾವುದು ನಡೆಯುವುದಿಲ್ಲ. ಅಂತ್ಯಕಾಲದಲ್ಲಿ ಗಂಜಿಯನ್ನು ಕುಡಿಸುವವರಿಲ್ಲದೆ ಒದ್ದಾಡಬೇಕಾಗುತ್ತದೆ. ಅಧಿಕಾರದಲ್ಲಿದ್ದಾಗ ತೋರಿದ ಜರ್ಬು ಈಗ ನಡೆಯುವುದಿಲ್ಲ. ಕೊನೆಗೆ ಒಂದು ದಿನ ಏಕಾಂಗಿಯಾಗಿ ಪರಮಾತ್ಮನ ಸಾನ್ನಿಧ್ಯವನ್ನು ಸೇರಿಬಿಡುತ್ತದೆ. ಇರುವಷ್ಟು ದಿನ ಎಲ್ಲರನ್ನೂ ಪ್ರೀತಿಯಿಂದ ಬೆರೆಯುತ್ತ ಹೋದರೆ ನಾವು ಕಾಲವಾಗಿ ಹೋದಮೇಲೂ ಜನ ನಮ್ಮನ್ನೂ ನೆನಪಿಡುತ್ತಾರೆ. ಏಕಾಂಗಿತನ ತೊರೆಯೋಣ ಜನರನ್ನು ಬೆರೆಯೋಣ.

- ಶಂಕರಾನಂದ

ಹೆಬ್ಟಾಳ

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.