![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Sep 17, 2024, 8:51 PM IST
ಹೊಸದಿಲ್ಲಿ: ಕ್ವಾಡ್ ನಾಯಕರ ನಾಲ್ಕನೇ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸೆ.21 ರಿಂದ 23 ರವರೆಗೆ ಅಮೆರಿಕಕ್ಕೆ(United State Of America) ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಸೆ. 21ರಂದು ಕ್ವಾಡ್ ಶೃಂಗಸಭೆ
ಮೋದಿಯವರ ಅಮೆರಿಕ ಭೇಟಿಯ ಅತ್ಯಂತ ಪ್ರಮುಖ ಅಂಶ ಡೆಲವೇರ್‌ನ ವಿಲ್ಮಿಂಗ್ಟನ್‌ನಲ್ಲಿ ಸೆ.21ರಂದು ನಡೆಯುವ ಕ್ವಾಡ್ ನಾಯಕರ ಶೃಂಗಸಭೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಸ್ವಗ್ರಾಮದಲ್ಲಿ ಸಭೆ ಆಯೋಜಿಸಿದ್ದು, ಅವರು ಎರಡನೇ ಅವಧಿಗೆ ಸ್ಪರ್ಧಿಸುತ್ತಿಲ್ಲವಾದ್ದರಿಂದ ಶೃಂಗಸಭೆಯು ಮಹತ್ವದ್ದಾಗಿದೆ. ಮುಂದಿನ ವರ್ಷ ಭಾರತವು ಕ್ವಾಡ್ ಶೃಂಗಸಭೆ ಆಯೋಜಿಸಿದಾಗ, ಯುಎಸ್ ನೂತನ ಅಧ್ಯಕ್ಷರ ಹೊಂದಿರುತ್ತದೆ. ಕ್ವಾಡ್ ಶೃಂಗಸಭೆಯಲ್ಲಿ ಜಪಾನ್‌ನ ಫ್ಯೂಮಿಯೊ ಕಿಶಿಡಾ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಕೂಡ ಭಾಗವಹಿಸಲಿದ್ದಾರೆ.
ವಿದೇಶಾಂಗ ಸಚಿವಾಲಯದ ಪ್ರಕಾರ, ಕ್ವಾಡ್ ನಾಯಕರು ಕಳೆದ ಒಂದು ವರ್ಷದಲ್ಲಿ ಮೈತ್ರಿ ಸಾಧಿಸಿದ ಪ್ರಗತಿಯ ಪರಿಶೀಲಿಸುತ್ತಾರೆ. ತಮ್ಮ ಅಭಿವೃದ್ಧಿ ಗುರಿಗಳು ಮತ್ತು ಆಕಾಂಕ್ಷೆಗಳ ಪೂರೈಸುವಲ್ಲಿ ಇಂಡೋ-ಪೆಸಿಫಿಕ್ ದೇಶಗಳಿಗೆ ಸಹಾಯ ಮಾಡಲು ಅವರು ವರ್ಷದ ಕಾರ್ಯಸೂಚಿ ಹೊಂದಿಸುತ್ತಾರೆ ಎಂದು ಸಚಿವಾಲಯದ ಪ್ರಕಟಣೆ ಹೇಳಿದೆ.
ಸೆ.22ರಂದು ‘ಮೋದಿ ಮತ್ತು ಯುಎಸ್ ಪ್ರೋಗ್ರೆಸ್ ಟುಗೆದರ್’ ಕಾರ್ಯಕ್ರಮ
ನ್ಯೂಯಾರ್ಕ್‌ನಲ್ಲಿ, ಪ್ರಧಾನಿ ಮೋದಿ ಭಾನುವಾರ ನಸ್ಸೌ ವೆಟರನ್ಸ್ ಮೆಮೋರಿಯಲ್ ಕೊಲಿಜಿಯಂನಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪಿಟಿಐ ವರದಿ ಪ್ರಕಾರ, 24,000 ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ‘ಮೋದಿ ಮತ್ತು ಯುಎಸ್’ ಪ್ರೋಗ್ರೆಸ್ ಟುಗೆದರ್’ ಎಂಬ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಮೆರಿಕ ಮೂಲದ ಕಂಪನಿಗಳ ಸಿಇಒಗಳ ಜೊತೆಗೆ ಎಐ ಹಾಗೂ ಕ್ವಾಂಟಮ್ ಕಂಪ್ಯೂಟಿಂಗ್ , ಸೆಮಿ ಕಂಡಕ್ಟರ್ ಹಾಗೂ ಬಯೋ ಟೆಕ್ನಾಲಜಿ ಕುರಿತು ಸಹಯೋಗ ಸಾಧಿಸುವ ಕುರಿತು ಸಭೆ ನಡೆಸಲಿದ್ದಾರೆ.
ಸೆ.23ರಂದು ಯುಎನ್ ಸಾಮಾನ್ಯ ಸಭೆ
ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ‘ಭವಿಷ್ಯದ ಶೃಂಗಸಭೆ’ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವರ್ಷ, ಶೃಂಗಸಭೆಯ ಥೀಮ್ ‘ಉತ್ತಮ ನಾಳೆಗಾಗಿ ಬಹುಪಕ್ಷೀಯ ಪರಿಹಾರಗಳು’ ಎಂಬುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜಾಗತಿಕ ನಾಯಕರು ಶೃಂಗಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಶೃಂಗಸಭೆಯ ಹೊರತಾಗಿ, ಪ್ರಧಾನಿ ಹಲವಾರು ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳ ನಡೆಸಲಿದ್ದಾರೆ ಮತ್ತು ಪರಸ್ಪರ ಹಿತಾಸಕ್ತಿಯ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.