UV Fusion: ಬದುಕಬೇಕು ಅಂತರಾಳ ಒಪ್ಪುವಂತೆ


Team Udayavani, Sep 17, 2024, 8:29 PM IST

20-uv-fusion

ಬದುಕೆಂದರೆ ಕನಸುಗಳ ಮಹಾಪೂರ  ಕನಸುಗಳ ಮೂಟೆಯ ಹೊತ್ತು ಸಾಗುವ ಪಯಣ ಎಲ್ಲರೂ ತನ್ನವರೆಂದು ಒಂದಿಷ್ಟು ಸಂತೋಷ, ಬೊಗಸೆಯಷ್ಟು ಪ್ರೀತಿಗೆ ಹಾತೊರೆಯುವುದು ನಾವು ಕಾಣಬಹುದು.

ಬದುಕಿನಲ್ಲಿ ಅನೇಕ ಸಾರಿ ನಮ್ಮನ್ನ ನಾವು  ಬದಲಾಯಿಸಿಕೊಳ್ಳುವ ಅನಿವಾರ್ಯತೆ ನಮ್ಮೆದುರು ಇದ್ದೆ ಇರುತ್ತದೆ. ಒಬ್ಬರಿಗೆ ಒಳ್ಳೆಯವರಾಗೋಕೆ ಹೋಗಿ ಇನ್ನೊಬ್ಬರಿಗೆ ಕೆಟ್ಟವರಾಗುತ್ತೇವೆ. ನಾವು ನಮ್ಮಂತಿರಲು ಬಿಡದ ಇಕ್ಕಟ್ಟಿನ ಪರಿಸ್ಥಿತಿ. ಎಲ್ಲರ ಮೆಚ್ಚಿಸಲು ಹೋಗಿ ನಿನ್ನ ಸ್ವಇಚ್ಛೆ ಅದುಮಿ ಬಿಡಲಾಗುತ್ತದೆ.

ಇತರರ ಇಷ್ಟ ಕಷ್ಟಗಳಿಗಾಗಿ   ನಮ್ಮ ಕನಸುಗಳು ಕೈಜಾರುತ್ತವೆ  ನಮ್ಮ ಬದುಕು ನಮ್ಮ ಜವಾಬ್ದಾರಿ ನಾವು ನಾವೇ ಆಗಿರೊದು ಕೂಡ ಒಂದು ದೊಡ್ಡ ಜವಾಬ್ದಾರಿ ಎನಿಸಿಕೊಂಡಿದೆ.ನಮ್ಮ ಬದುಕು ಬೇರೆಯವರ ಹಿಡಿತದಲ್ಲಿದ್ದರೆ ಅವರ ಇಚ್ಛೆಯಂತೆ ನಮ್ಮ ಬದುಕು ನಡೆಯುತ್ತದೆ. ನಮಗೆ ಇಷ್ಟವಿಲ್ಲದ್ದನ್ನು ಮಾಡಬೇಕಾಗುತ್ತದೆ  ಆಗ ನಮ್ಮ ಮನಸ್ಸಿನ ವಿರುದ್ಧ ನಾವು ನಡೆದುಕೊಳ್ಳುತ್ತೇವೆ. ಆಗ ನಾವು ನಾವಾಗಿರುವುದಿಲ್ಲ. ನಮ್ಮಂತೆ ನಾವಿರದೆ ಇದ್ದಾಗ ನಮ್ಮ ಆಸೆ ಆಕಾಂಕ್ಷೆ ಕನಸು ನಮ್ಮ  ಜವಾಬ್ದಾರಿಗಳಿಗೆ ಬೆಲೆ ಎಲ್ಲಿ?

ಕಾಡಿನ ರಾಜ ಎನಿಸಿಕೊಂಡ ಸಿಂಹ ತನ್ನ ಮರಿಯನ್ನು ಗುಹೆಯಲ್ಲಿರಿಸಿ ಶತ್ರುವಿನ ಬಾಣಕ್ಕೆ ಬಲಿಯಾಗಿ ಪ್ರಾಣ ಬಿಡುತ್ತದೆ. ಬುದ್ಧ ತನ್ನ ಶಿಷ್ಯರೊಂದಿಗೆ ಕಾಡಿಗೆ ಬಂದಾಗ ನಡೆದ ವಿಷಯವೆಲ್ಲ ತನ್ನ ದಿವ್ಯ ದೃಷ್ಟಿಯಿಂದ ತಿಳಿದನು. ಸಿಂಹದ ಮರಿಯನ್ನು ಆಶ್ರಮಕ್ಕೆ ಕರೆದುಕೊಂಡು ಹೋದರು. ಸಿಂಹವನ್ನು ನೋಡಿ ಎಲ್ಲರೂ ಭಯಪಟ್ಟರು.

ದಿನ ಕಳೆದಂತೆ ಸಿಂಹವನ್ನು ಕೂಡ ಎಲ್ಲ ಸಾಕುಪ್ರಾಣಿಗಳಂತೆ ಕಾಣತೊಡಗಿದರು ಹಾಗೂ ಸಿಂಹ ಕೂಡ ಜಿಂಕೆಗಳ ಜತೆ ಆಡುತಿತ್ತು. ಸಸ್ಯ ಆಹಾರವನ್ನೆ ತಿನ್ನುತ್ತಿತ್ತು. ಒಂದು ದಿನ ಬುದ್ಧ ಸಿಂಹವನ್ನು  ಕರೆದು ಕಾಡಿಗೆ ಹಿಂತಿರುಗಲು ಹೇಳುತ್ತಾನೆ. ಸಿಂಹ ಆಶ್ರಮ ಬಿಟ್ಟು ಹೋಗಲಾರೆ ಎಂದು ದುಃಖಿಸುತ್ತದೆ. ಕಾಡಿಗೆ ರಾಜನ ಅವಶ್ಯಕತೆ ಇದೆ ನಿನ್ನ ಜವಾಬ್ದಾರಿ ನಿರ್ವಹಿಸು ಎಂದು ತಿಳಿಸಿ ಸಿಂಹವನ್ನು ಬಿಳ್ಕೊಡುತ್ತಾನೆ.

ಕಾಡಿಗೆ ಹೋದ ಸಿಂಹವು ಸಸ್ಯಾಹಾರ ಸೇವಿಸುವುದು ಜಿಂಕೆಗಳ ಹಿಂದೆ ತಿರುಗುವುದನ್ನು ನೋಡಿ ಎಲ್ಲ ಪ್ರಾಣಿಗಳಿಗೂ ಆಶ್ಚರ್ಯವಾಗುತ್ತದೆ. ಜಿಂಕೆಯೊಂದಿಗೆ ಸ್ನೇಹವಾಗುತ್ತೆ ಒಮ್ಮೆ ನೀರಿನಲ್ಲಿ ತನ್ನ ಪ್ರತಿಬಿಂಬವನ್ನು ಕಂಡು ಭಯಪಡುತ್ತೆ ಯಾರದೂ ಕ್ರೂರ ಪ್ರಾಣಿ ಆಗ ಪ್ರತಿಬಿಂಬ ಹೇಳುತ್ತೆ ಇದು ನೀನೆ ನೀನೊಬ್ಬ ಕ್ರೂರಿ, ನೀ ಇಷ್ಟು ಪ್ರೀತಿಸುತ್ತಿರುವ ಜಿಂಕೆಯನ್ನ ತಿಂದು ಬಿಡು ಎಂದು ಮನಸ್ಸು ಪದೇ ಪದೇ ಹೇಳುತ್ತದೆ ತನ್ನ ಮನಸ್ಸಿನ ಅಳಲನ್ನು ಬುದ್ಧನಿಗೆ ಹೇಳುತ್ತದೆ. ನಾನು ಮತ್ತೆ ಕಾಡಿಗೆ ಹೋಗಲಾರೆ ನಾ ಹೋದರೆ ನಾ ಪ್ರೀತಿಸುವ ಜಿಂಕೆಯನ್ನು  ತಿಂದುಬಿಡುತ್ತೇನೆ. ನಾನು ನನ್ನಿಂದ ದೂರ ಓಡಬೇಕಿದೆ ಆದರೆ ಎಲ್ಲಿ ಹೋಗಲಿ  ಎಂದು ಹೇಳುತ್ತದೆ. ಆಗ ಬುದ್ಧ ಹೇಳುತ್ತಾನೆ ನೀನು ಕಾಡಿಗೆ ಹೋಗು. ಸಿಂಹ ಅದಕ್ಕೆ ಪ್ರತ್ಯುತ್ತರವಾಗಿ ಹೋದರೆ ಜಿಂಕೆಯನ್ನು ತಿಂದು ಬಿಡುತ್ತೇನೆ ಎನ್ನುತ್ತದೆ. ಆಗ ಬುದ್ಧ ಹೇಳುತ್ತಾನೆ. ತಿಂದುಬಿಡು. ಆಗ ಸಿಂಹಕ್ಕೆ ಆಶ್ಚರ್ಯವಾಗುತ್ತದೆ.

ಬುದ್ಧ ತನ್ನ ಮಾತನ್ನು ಮುಂದುವರೆಸುತ್ತಾನೆ. ನೀನು ನೀನಾಗಿರು ಕಾಡಿಗೆ ಹಿಂತಿರುಗು ಯಾವುದೂ ಅಹಿತಕರ ಘಟನೆ ನಡೆಯುವುದಿಲ್ಲ ನಿನ್ನ ಕರ್ತವ್ಯ ಪಾಲನೆ ಮಾಡು. ಸಿಂಹ ಕಾಡಿಗೆ ಹಿಂತಿರುಗಿದಾಗ ತಾನು ಪ್ರಿತಿಸುತ್ತಿದ್ದ ಜಿಂಕೆಯ ವಿವಾಹ ಬೇರೊಂದು ಜಿಂಕೆಯ ಜತೆ ನಡೆದಿರುತ್ತದೆ.ಸಿಂಹವು ತನ್ನ ತನ ಕಳೆದುಕೊಂಡ ಬದುಕಲ್ಲ ನಮ್ಮ ವ್ಯಕ್ತಿತ್ವ ನಮ್ಮ ಜವಾಬ್ದಾರಿ ನಮ್ಮದೆ ಆಗಿರುತ್ತದೆ.

ಪ್ರೀತಿಯ ಜಿಂಕೆಯೂ ಕೂಡ ತನ್ನ ಬದುಕಿನಲ್ಲಿ ಪ್ರಕೃತಿಯ ಸಹಜತೆ ಯನ್ನು ಒಪ್ಪಿಕೊಂಡಿತು. ನಾನು ಕೂಡ ನನ್ನ ಕರ್ತವ್ಯ ಪಾಲನೆಯತ್ತ ಗಮನ ಹರಿಸುತ್ತೆನೆಂದು ಜೋರಾಗಿ ಘರ್ಜಿಸಿತು. ಈ ಹಿಂದೆ ಸಿಂಹ ಯಾವತ್ತೂ ಈ ರೀತಿ ಘರ್ಜಿಸಿರಲಿಲ್ಲ. ಕಾಡಿನಲ್ಲಿ ರಾಜನ ಆಗಮನ ಧ್ವನಿ ಕಂಪನ ತರಿಸಿತು.ಬದುಕಿನಲ್ಲಿ ನಮ್ಮ ವ್ಯಕ್ತಿತ್ವವನ್ನು ಅದುಮಿ ಬದುಕೊ ಅನಿವಾರ್ಯತೆಗಳು ಸಹಜ.

ಆದರೆ ಎಲ್ಲ ಅನಿವಾರ್ಯತೆಗಳನ್ನು ಮೀರಿ ನಮ್ಮೊಳಗಿನ ಧ್ವನಿಯನ್ನು ಆಲಿಸಲು ಕಲಿಯಬೇಕು. ನಾವು ನಮ್ಮನ್ನು, ನಮ್ಮ ದೃಷ್ಟಿ ಕೋನದಿಂದ ನೋಡದೆ ಸಮಾಜವೆಂಬ ಕನ್ನಡಕ ಧರಿಸಿ ನೋಡೊಕೆ ಶುರುಮಾಡಿದರೆ ಮುಗಿತು.ಜನರಿಗೆ ನಾವು ಹೇಗಿದ್ದರೂ ತೊಂದರೆನೆ. ಕಾಗೆಯನ್ನು ಕೋಗಿಲೆಯಾಗುವುದಕ್ಕೆ ಪ್ರೇರೆಪಿಸುವ ಜನ ಕೋಗಿಲೆಯನ್ನ ಮತ್ತೆಂದೂ  ಹಾಡದಂತೆ ನಿರಾಕರಿಸುತ್ತಾರೆ. ಯಾರು ಏನೆ ಹೇಳಿದರೂ ಓ ಮನವೇ   ನೀನು ನಿನ್ನಂತಿರು  ಜಗವನ್ನು ಮೆಚ್ಚಿಸಲಾಗದು. ಬದುಕಬೇಕು ತನ್ನಿಚ್ಛೆಯಂತೆ  ಅಂತರಾಳ ಒಪ್ಪುವಂತೆ.

-ಅಂಜಲಿ ಶ್ರೀನಿವಾಸ

ಬೆಂಗಳೂರು

ಟಾಪ್ ನ್ಯೂಸ್

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

J-P-Nadda

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.