FIH: ಪ್ರಶಸ್ತಿ ಸ್ಪರ್ಧೆಯಲ್ಲಿ ಹರ್ಮನ್, ಶ್ರೀಜೇಶ್
Team Udayavani, Sep 17, 2024, 10:50 PM IST
ಲಾಸನ್ನೆ: ಭಾರತ ತಂಡದ ನಾಯಕ ಹರ್ಮನ್ಪ್ರೀತ್ ಸಿಂಗ್ ಅವರನ್ನು ಮಂಗಳವಾರ ಎಫ್ಐಎಚ್ ವರ್ಷದ ಸ್ಟಾರ್ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ವರ್ಷದ ಶ್ರೇಷ್ಠ ಗೋಲ್ಕೀಪರ್ ಗೌರವಕ್ಕೆ ಪಿ.ಆರ್. ಶ್ರೀಜೇಶ್ ಸ್ಪರ್ಧೆಯಲ್ಲಿದ್ದಾರೆ.
ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ ಆಟಗಾರರ ಪಟ್ಟಿಯನ್ನು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್ಐಎಚ್) ಪ್ರಕಟಿಸಿದೆ. ಹರ್ಮನ್ಪ್ರೀತ್ ಮತ್ತು ಶ್ರೀಜೇಶ್ ಅವರು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಅದ್ಭುತ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸ್ಟಾರ್ ಆಟಗಾರ ಪ್ರಶಸ್ತಿಗಾಗಿ ಹರ್ಮನ್ಪ್ರೀತ್ ಅವರು ಥಿಯರಿ ಬ್ರಿಕ್ಮನ್ (ನೆದರ್ಲೆಂಡ್ಸ್), ಜೋಯೆಪ್ ಡಿ ಮೊಲ್ (ನೆದರ್ಲೆಂಡ್ಸ್), ಹಾನ್ನೆಸ್ ಮುಲ್ಲರ್ (ಜರ್ಮನಿ) ಮತ್ತು ಜಾಕ್ ವಾಲೇಸ್ (ಇಂಗ್ಲೆಂಡ್) ಅವರೊಂದಿಗೆ ಸ್ಪರ್ಧೆಯಲ್ಲಿದ್ದಾರೆ.
ಶ್ರೀಜೇಶ್ ಅವರು ಸ್ಟಾರ್ ಗೋಲ್ಕೀಪರ್ ಪ್ರಶಸ್ತಿಯಾಗಿ ಪಿರ್ಮಿನ್ ಬ್ಲಾಕ್ (ನೆದರ್ಲೆಂಡ್ಸ್), ಲೂಯಿಸ್ ಕಾಲ್ಜಾಡೊ (ಸ್ಪೇನ್), ಜೀನ್ ಪಾಲ್ ಡ್ಯಾನೆಬರ್ಗ್ (ಜರ್ಮನಿ) ಮತ್ತು ತೋಮಸ್ ಸ್ಯಾಂಟಿಯಾಗೊ (ಆರ್ಜೆಂಟೀನಾ) ಅವರೊಂದಿಗೆ ಸ್ಪರ್ಧೆಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ
High Court: ಬಾಂಬ್ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್ ರದ್ದು
15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿನ್ ಸನಿಲ್ ಕುರ್ಕಾಲು
Commonwealth ಚಾಂಪಿಯನ್ಶಿಪ್ : ಅಲ್ಲುರಿ ಅಜಯ್ಗೆ ಬಂಗಾರ
High Court; “ಅರ್ಧ ಪಾಕಿಸ್ಥಾನ’: ಯತ್ನಾಳ್ ಹೇಳಿಕೆಗೆ ಹೈಕೋರ್ಟ್ ಸಿಟ್ಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.