Udupi: ಭಕ್ತರಲ್ಲಿಗೆ ಭಾಗವತ ಭಂಡಾರಕೇರಿ ಶ್ರೀಗಳ ಸಾಧನೆ
ಚಾತುರ್ಮಾಸವ್ರತ ಸಮಾರೋಪದಲ್ಲಿ ಪುತ್ತಿಗೆ ಶ್ರೀ ಬಣ್ಣನೆ
Team Udayavani, Sep 18, 2024, 12:43 AM IST
ಉಡುಪಿ: ಭಾಗವತ ಸೂರ್ಯ ನನ್ನು ಭಕ್ತರ ಮನೆಗಳಿಗೆ ಒಯ್ದು ಬೆಳಕು ಹರಿಸಿದ ಭಂಡಾರಕೇರಿ ಶ್ರೀಪಾದರು ಜ್ಞಾನ ಭಾಸ್ಕರರು ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಬಣ್ಣಿಸಿದರು.
ಭಂಡಾರಕೇರಿ ಮಠದಲ್ಲಿ ಮಂಗಳವಾರ ಜರಗಿದ ಭಾಗವತ ನೀರಾ ಜನೋತ್ಸವ ಹಾಗೂ ಶ್ರೀ ವಿದ್ಯೇಶತೀರ್ಥ ಶ್ರೀಪಾದರ 45ನೇ ಚಾತುರ್ಮಾಸ ಸಮಾರೋಪ ಸಮಾರಂಭದಲ್ಲಿ ಪುತ್ತಿಗೆ ಶ್ರೀಗಳು ಆಶೀರ್ವಚನ ನೀಡಿದರು. ಶ್ರೀವಿದ್ಯೇಶತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, 1,008 ಮನೆ ಗಳಿಗೆ ಭಾಗವತ ತಲುಪಿಸುವ ಗುರಿ ಹೊಂದಿದ್ದು, ಈ ವರ್ಷದ ಅಂತ್ಯದೊಳಗೆ ಗುರಿ ತಲುಪುವ ಪ್ರಯತ್ನ ನಡೆದಿದೆ. ಆಧ್ಯಾತ್ಮಿಕವಾಗಿ ಸಮಾಜಮುಖೀ ಸೇವೆಗಳು ಹೆಚ್ಚೆಚ್ಚು ನಡೆಯಬೇಕು ಎಂದರು.
ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಭಕ್ತಿ ಜಾಗೃತಿ ಯಿಂದ ಜನರ, ಲೋಕೋದ್ಧಾರ ಸಾಧ್ಯ. ಅದಕ್ಕೆ ಎಲ್ಲರೂ ಆದ್ಯತೆ ನೀಡಬೇಕು ಎಂದು ಹೇಳಿದರು. ಶಾಸಕ ಯಶ್‌ಪಾಲ್ ಎ.ಸುವರ್ಣ, ಬಡಗುಬೆಟ್ಟು ಕ್ರೆಡಿಟ್ ಕೋ-ಆಪ್. ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿ ರಂಜನ್ ಕಲ್ಕೂರ ಉಪಸ್ಥಿತರಿದ್ದರು. ಡಾ| ಶ್ರೀನಿಧಿ ವಾಸಿಷ್ಠ ಸ್ವಾಗತಿಸಿ, ವಾಸುದೇವ ಭಟ್ ಪೆರಂಪಳ್ಳಿ ನಿರೂಪಿಸಿದರು.
ಶ್ರೀಕೃಷ್ಣನಿಗೆ ಚಿನ್ನದ ನಾಣ್ಯ ಸಮರ್ಪಣೆ
70ನೆಯ ಸಂವತ್ಸರದ ಅಂಗವಾಗಿ ಶ್ರೀವಿದ್ಯೇಶತೀರ್ಥ ಶ್ರೀಪಾದರು ಪರ್ಯಾಯ ಪುತ್ತಿಗೆ ಶ್ರೀಪಾದರ ಮಹತ್ವಾಕಾಂಕ್ಷೆಯ ಸ್ವರ್ಣ ಪಾರ್ಥಸಾರಥಿ ರಥ ನಿರ್ಮಾಣಕ್ಕೆ 70 ಚಿನ್ನದ ನಾಣ್ಯಗಳನ್ನು ಸಮರ್ಪಿಸಿದರು. ಒಟ್ಟು 418 ಮನೆಗಳಲ್ಲಿ ನಡೆದ ಭಾಗವತ ನೀರಾಜನ ಸಮರ್ಪಣೆ ದ್ಯೋತಕವಾಗಿ ಚಾತುರ್ಮಾಸ ವ್ರತ ಸಮಿತಿಯಿಂದ ಭಂಡಾರಕೇರಿ ಶ್ರೀಗಳಿಗೆ ನಡೆದ ನಾಣ್ಯ ತುಲಾಭಾರದಲ್ಲಿ 15 ಗ್ರಾಂ ಚಿನ್ನ, 418 ಗ್ರಾಂ ಬೆಳ್ಳಿಯನ್ನು ಸಮರ್ಪಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.