Lineman: ಸೂಪರ್‌ಮ್ಯಾನ್‌ಗಳಿಗೆ ಸಲಾಂ


Team Udayavani, Sep 18, 2024, 12:33 PM IST

9-uv-fusion

ಜಗತ್ತು ತಂತ್ರಜ್ಞಾನದ ಆಧುನಿಕತೆಯೊಳಗೆ ಬಂಧಿಯಾಗಿದೆ. ಊರೆಲ್ಲ ಕತ್ತಲಾದಾಗ ಚಿಮಣಿ ದೀಪಗಳು, ಲ್ಯಾಂಪ್‌ಗಳು ಮನೆಯನ್ನು ಬೆಳಗುತ್ತಿದ್ದುದು ಒಂದು ಕಾಲವಾದರೆ ಇಂದು ವಿದ್ಯುತ್‌ ಎಂಬ ಹೊಸದೊಂದು ಶಕ್ತಿ ಬೆಳಗುತ್ತಿದೆ. ಹೊಸ ಹೊಸ ಆವಿಷ್ಕಾರಗಳು ನಮ್ಮ ಬದುಕಿಗೆ ಲಗ್ಗೆ ಇಟ್ಟಂತೆ ನಮ್ಮ ಬದುಕು ಅದರೊಂದಿಗೆ ಬೆಸೆದುಕೊಂಡು ಸಾಗುತ್ತಿವೆ. ಅಂತಹ ಒಂದು ಆವಿಷ್ಕಾರಗಳಲ್ಲಿ ವಿದ್ಯುತ್‌ ಕೂಡ ಒಂದು.

ಇಂದು ಎಲ್ಲ  ವಿದ್ಯುತ್‌ಮಯವಾಗಿದೆ ಎಂದರೆ ತಪ್ಪಾಗಲಾರದು. ಪ್ರತಿಯೊಂದು ನಮ್ಮ ದೈನಂದಿನ ಕಾರ್ಯಗಳು ವಿದ್ಯುತ್‌ ಇಲ್ಲದೆ ನಡೆಯುವುದು ಅಸಾಧ್ಯ ಎನ್ನುವ ರೀತಿಯಲ್ಲಿ ಅದು ನಮ್ಮ ಬದುಕಿಗೆ ಸಂಪೂರ್ಣವಾಗಿ ಆವರಿಸಿದೆ. ಒಂದು ವಸ್ತುವಿನ ವ್ಯವಸ್ಥೆ ಅಂದರೆ ಅವುಗಳ ನಿರ್ವಹಣೆ ಅತ್ಯಂತ ಮುಖ್ಯವಾಗಿರುತ್ತದೆ ಅಲ್ಲವೇ. ನಿರ್ವಹಕನಿಲ್ಲದೆ ಕಾರ್ಯವು ನಡೆಯವುದು ಅಸಾಧ್ಯ. ನಿರ್ವಹಣೆಯ ಹಿಂದೆ ಅದೆಷ್ಟು ಸವಾಲುಗಳು, ಕಠಿನ ಪರಿಸ್ಥಿತಿಗಳನ್ನು  ಎದುರಿಸಿ ಬದುಕು ಕಟ್ಟಿಕೊಳ್ಳುವ ಹರಸಾಹಸ ನಿರ್ವಹಕನದು. ಅಂತಹ ನಿರ್ವಹಕ ಕಾರ್ಯಗಳಲ್ಲಿ ಲೈನ್‌ಮ್ಯಾನ್‌ ಕಾರ್ಯ ಕೂಡ ಒಂದು.

ಪ್ರತಿಯೊಂದು ವಿಚಾರಕ್ಕೂ ವಿದ್ಯುತ್‌ ಅನ್ನು ಅವಲಂಬಿಸಿದ ನಾವು ಅದರಿಂದ ಉಂಟಾಗುವ ಸಮಸ್ಯೆಗಳಿಗೂ ಪರಿಹಾರ ಹುಡುಕುವ ಜಂಜಾಟದಲ್ಲಿರುತ್ತೇವೆ. ಇಂತಹ ವಿದ್ಯುತ್‌ ಹಾನಿಯಾದರೆ, ತೊಂದರೆಯಾದರೆ,  ತತ್‌ಕ್ಷಣ ಹಾಜರಿರುವವರೂ ನಮ್ಮೂರ ಲೈನ್‌ಮ್ಯಾನ್‌ಗಳು. ದೇಶಕ್ಕೆ ಯೋಧ, ರೈತ ಎಷ್ಟು ಮುಖ್ಯವೋ ಪ್ರತಿಯೊಂದು ಊರಿನಲ್ಲಿರುವ  ಲೈನ್‌ಮ್ಯಾನ್‌ ಕೆಲಸಗಾರರೂ ಕೂಡ ಅಷ್ಟೇ ಮುಖ್ಯ. ಮಳೆ ಗಾಳಿ, ಬಿಸಿಲು ಎನ್ನದೆ ವಿದ್ಯುತ್‌ನ ತೊಂದರೆಗಳನ್ನು ತಟ್ಟನೆ ಸರಿಪಡಿಸುವ ಮಹಾತ್ಕಾರ್ಯ ಅವರದು.

ಮಳೆಗಾಲದಲ್ಲಂತೂ ವಿರಾಮವಿರದ ಕೆಲಸ.ಗಾಳಿಯ ಅಬ್ಬರಕ್ಕೆ ಅದೆಷ್ಟು ಮರಗಳು ತಂತಿಯ ಮೇಲೆ ಬಿದ್ದು ಹಾನಿಗಳಗುತ್ತದೆ, ವಿದ್ಯುತ್‌ ಕಂಬಗಳು ನೆಲಕ್ಕಪ್ಪಳಿಸಿ ಬಿಡುತ್ತದೆ. ಇಂತಹ ಸಂದ‌ರ್ಭಗಳಲ್ಲಿ ತಟ್ಟನೆ ಕಾರ್ಯ ಪ್ರವೃತ್ತರಾಗುವ ಅವರ ಕಾರ್ಯವನ್ನು ಮೆಚ್ಚಲೇಬೇಕು. ಹಗಲು ಇರುಳು ಎನ್ನದೆ ಮಳೆ ಬಿಸಿಲಿಗೆ ನಲುಗದೆ ಜೀವ ಪಣಕಿಟ್ಟು  ತಮ್ಮ ಕೆಲಸ, ಕರ್ತವ್ಯವನ್ನು ಮಾಡುವ ಅವರ ಈ ಸಾಹಸವು ನಿಜಕ್ಕೂ ಶ್ಲಾಘನೀಯ.

ಇಂದು ವಿದ್ಯುತ್‌ ಇಲ್ಲದೆ ಕೆಲಸಗಳು ನಡೆಯುವುದು ತುಂಬಾ ವಿರಳ. ವಿದ್ಯುತ್‌ ಎಷ್ಟು ಉಪಕಾರಿಯೋ ಅಷ್ಟೇ ಅಪಾಯಕಾರಿಯೂ ಹೌದು. ಸಮಸ್ಯೆಗಳು ಅಂತೂ ಹೇಳತೀರದಷ್ಟು. ಜೋತು ಬಿದ್ದ ಲೈನ್‌ ವಯರ್‌ ಗಳಿಂದ ಹಿಡಿದು ದೊಡ್ಡ ದೊಡ್ಡ ಕರೆಂಟ್‌ ರಿಪೇರಿವರೆಗೂ ಕೆಲಸಗಳು ಅವರ ಹೆಗಲ ಮೇಲೆ ಇರುತ್ತದೆ. ಪ್ರಾಣದ ಹಂಗಿಲ್ಲದೆ ಕರೆಂಟ್‌ ಕಂಬ ಏರುವ ಅವರ ಸಾಹಸ ಅಚ್ಚರಿಪಡುವಂತದ್ದು.  ಎತ್ತರವಾದ ಕಂಬ ಏರಿ ಅದೆಷ್ಟೇ ಕಠಿನ ಕಾರ್ಯವನ್ನು ನಿರ್ವಹಿಸುವ ಅವರು ನಿಜಕ್ಕೂ ಹೀರೊಗಳಲ್ಲವೇ. ಹಳ್ಳಿ, ಪಟ್ಟಣ ಅರಣ್ಯ ಹೀಗೆ ಎಲ್ಲೆಂದರಲ್ಲಿ ಉಸಿರುಗಟ್ಟಿಸುವ ಕೆಲಸ ಅವರದು. ತಟ್ಟನೆ ಬರದಿದ್ದರೆ ನಾಗರಿಕರಿಗೆ ಅದೇನೂ ತೊಂದರೆಯಾಗಿಬಿಡುವುದೋ ಎಂದು ಎದ್ದು ಬಿದ್ದು ಕಾರ್ಯನಿರತರಾಗುವ ಅವರು ತಮ್ಮ ಬದುಕನ್ನು ಕೂಡ ಯೋಚನೆ ಮಾಡದೇ  ನಮ್ಮ ಆವಶ್ಯಕತೆಗಳಿಗಾಗಿ ದುಡಿಯುತ್ತಾರೆ. ತನ್ನ ಭವಿಷ್ಯವನ್ನು ಲೆಕ್ಕಿಸದೆ ನಾಗರಿಕರಿಗಾಗಿ ದುಡಿಯುವ ಅವರು ನಿಜವಾದ ಪವರ್‌ಮ್ಯಾನ್‌ಗಳು. ದೇಶದಲ್ಲಿ ರೈತ, ಯೋಧನಿಗೆ ನೀಡುವ ಗೌರವ ತಮ್ಮ ಪ್ರಾಣ ಪಣಕ್ಕಿಟ್ಟು ದುಡಿಯುವ ಲೈನ್‌ ಮ್ಯಾನ್‌ಗಳಿಗೂ ಸಿಗಬೇಕು, ಸೌಲಭ್ಯಗಳು ದೊರಕಬೇಕು. ನಮಗಾಗಿ ದುಡಿಯುವ ಅವರ ಕೆಲಸಗಳಿಗೆ ನನ್ನದೊಂದು ಸಲಾಂ.

-ವಿಜಯಲಕ್ಷ್ಮೀ ಬಿ. ಕೆಯ್ಯೂರು

ವಿವೇಕಾನಂದ ಕಾಲೇಜು ಪುತ್ತೂರು

ಟಾಪ್ ನ್ಯೂಸ್

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.