Raichur: ಬಿಜೆಪಿಯವರು ಮೈಮೇಲೆ ಬಂದಂತೆ ಆಡುತ್ತಿದ್ದಾರೆ: ಸಚಿವ ಎನ್.ಎಸ್.ಭೋಸರಾಜು
Team Udayavani, Sep 18, 2024, 1:18 PM IST
ರಾಯಚೂರು: ಬಿಜೆಪಿಯವರು ಮೈಮೇಲೆ ಬಂದಂತೆ ಆಡುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಕೆಲಸ ಆಗುತ್ತಿಲ್ಲ ಎಂದು ಜನರಿಗೆ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ಹೇಳಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿಯವರಿಗೆ ಸಾಮಾನ್ಯ ಜ್ಞಾನ ಇಲ್ಲದಂತಾಗಿದೆ. ಪ್ರಹ್ಲಾದ ಜೋಶಿ, ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾದರೂ ರಾಜ್ಯದಲ್ಲಿ ನಡೆಯುವ ಸಣ್ಣ ಘಟನೆಗಳಿಗೂ ಪ್ರತಿಕ್ರಿಯೆ ನೀಡುವ ಮೂಲಕ ತಮ್ಮ ಅಸ್ತಿತ್ವ ಸಾಬೀತು ಮಾಡಿಕೊಳ್ಳುತ್ತಿದ್ದಾರೆ. ಆರ್.ಅಶೋಕ ಬಾಯಿಗೆ ಬದ್ಧತೆ ಇಲ್ಲ. ಸಂಬಂಧ ಇಲ್ಲದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅವರಿಗೆ ಏನಾದರೂ ಕೆಲಸ ಇದೆಯಾ? ಎಂದು ವಾಗ್ದಾಳಿ ನಡೆಸಿದರು.
ತಾಲೂಕು ಮಟ್ಟದಲ್ಲಿ ಆಗಿರುವ ವಿಷಯವನ್ನು ರಾಷ್ಟ್ರಮಟ್ಟದಲ್ಲಿ ಮಾತನಾಡ್ತಾರೆ ಎಂದರೆ ಬಿಜೆಪಿಯವರಿಗೆ ಏನಾದರೂ ನೈತಿಕತೆ ಇದೆಯಾ ? ನಾಗಮಂಗಲ ಗಲಾಟೆಯನ್ನು ರಾಷ್ಟ್ರಮಟ್ಟದ ವಿಷಯ ಮಾಡಿದ್ದಾರೆ. ದೇಶದ ಪ್ರಧಾನಿಯೊಬ್ಬರು ಗಣೇಶ ಪೂಜೆಗೆ ಮುಖ್ಯ ನ್ಯಾಯಾಧೀಶರ ಮನೆಗೆ ಹೋಗುತ್ತಾರೆಂದರೆ ಏನು ಹೇಳಬೇಕು. ಪ್ರಧಾನಿಯವರಿಗೆ ತಮ್ಮದೇ ಆದ ಶಿಷ್ಟಾಚಾರ ಇರುತ್ತದೆ. ಅದೆಲ್ಲ ಮೀರಿ ನಡೆದುಕೊಳ್ಳುವ ಮೂಲಕ ಯಾವ ಸಂದೇಶ ಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಾಲ್ಮೀಕಿ ಹಗರಣ ವಿಚಾರದಲ್ಲಿ ಕೇಂದ್ರ ಸರ್ಕಾರ ಸಿಬಿಐ, ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುದು ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಇಲ್ಲಿ ದಾಖಲಾದ ಆರೋಪಗಳೆಲ್ಲ ನಿರಾಧಾರ. ಈ ವಿಚಾರದಲ್ಲಿ ನ್ಯಾಯಾಲಯದ ತೀರ್ಪು ಅಂತಿಮವಾಗುತ್ತದೆ. ಆದರೆ, ಇಡಿ, ಸಿಬಿಐ ಬಳಸಿಕೊಂಡು ರಾಜಕೀಯಕ್ಕೆ ತಳಕು ಹಾಕುವುದು ಮೋದಿ , ಶಾ ನೀತಿಯಾಗಿದೆ. ಕಳೆದ 10 ವರ್ಷದಲ್ಲಿ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಕುಲಗೆಡಿಸಿದೆ ಎಂದು ಟೀಕಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.