Nagara Panchami: ನಾಗಾರಾಧನೆ ನಮ್ಮ ನಂಬಿಕೆ


Team Udayavani, Sep 18, 2024, 3:42 PM IST

14-uv-fusion

ಪಡುವಣ ಅರಬ್ಬಿ ಕಡಲ ತಡಿಯಿಂದ, ಮೂಡಣದ ಸಹ್ಯಾದ್ರಿ ತಪ್ಪಲು, ಬಡಗಣ ಕಲ್ಯಾಣಪುರದಿಂದ, ತೆಂಕಣ ಕಾಸರಗೋಡಿನ ಚಂದ್ರಗಿರಿಯವರೆಗಿನ ಭೂಭಾಗವನ್ನು ತುಳುನಾಡು ಎಂದು ಹೆಸರಿಸುತ್ತಾರೆ. ಇದನ್ನು ನಾಗಲೋಕವೆಂದೂ ಕರೆಯಲಾಗುತ್ತಿತ್ತು ಎಂಬುದಕ್ಕೆ ಹರಿವಂಶ, ಸ್ಕಂದ ಪುರಾಣ, ಪ್ರಪಂಚದ ಹೃದಯ, ನಾಗನಂದ ಎಂಬ ಗ್ರಂಥಗಳು, ಐತಿಹ್ಯಗಳು ಇಂಬು ನೀಡುತ್ತದೆ. ಪರ್ವತದ ಸಾಲಿಂದ ಹುಟ್ಟಿಕೊಂಡ ನದಿಗಳು ಇನ್ನೊಂದು ಕಡೆಯ ಸಮುದ್ರಕ್ಕೆ ಸೇರುವ ದೃಶ್ಯ, ಮುಗಿಲೆತ್ತರಕ್ಕೆ ಬೆಳೆದು ನಿಂತ ದಟ್ಟ ಕಾಡು, ಈ ಕಾಡಿನಲ್ಲಿ ಸ್ವಚ್ಛೆಂದವಾಗಿ ಅಲೆದಾಡುವ ಪ್ರಾಣಿ-ಪಕ್ಷಿಗಳು, ನಿರ್ಭಯವಾಗಿ ಸಂಚರಿಪ ಸರೀಸೃಪಗಳು- ಹೀಗೆ ತುಳುನಾಡು ಹಿಂದೊಮ್ಮೆ ಹೀಗಿತ್ತೆಂದು ಹೇಳಲು ಈಗ ವಿಷಾದವಾಗುತ್ತದೆ.

ಆರಂಭದ ಕಾಲದಲ್ಲಿ ಮನುಷ್ಯನು ಅಲೆಮಾರಿಯಾಗಿದ್ದು, ಆಲೋಚನಾ ಶಕ್ತಿ ಅಷ್ಟೊಂದು ಬೆಳೆದಿರಲಿಲ್ಲ. ಹಾಗಾಗಿಯೇ ಹೆಚ್ಚಾಗಿ ಕಾಡುಗಳೇ ಈತನ ವಾಸಸ್ಥಾನವಾಗಿತ್ತು. ಈ ಸಂದರ್ಭದಲ್ಲಿ ಸರೀಸೃಪಗಳು ಅದರಲ್ಲೂ “ಸಂಕಪಾಲ’ (ಶಂಖಪಾಲ, ಸಂಕಮಾಲೆ ಎಂದರೆ ಶಂಖಾಕೃತಿಯ ಹೆಡೆ ಇರುವ ಸರ್ಪ ಎಂದರ್ಥ) ಹಾವಿನ ಕಡಿತದಿಂದ ಹೆಚ್ಚಾಗಿ ಜೀವಿಗಳು ಹಾಗೂ ತನ್ನ ಸಹಚರರು ಸಾಯುವುದನ್ನು ಕಂಡ ಈತನಿಗೆ ಹಾವು ಎಂದರೆ ಮೃತ್ಯು ಎಂಬ ಕಲ್ಪನೆ ಬೆಳೆದಿರಬೇಕು. ಮುಂದೆ ಇದುವೇ ಹಾವಿನ ಬಗ್ಗೆ ಭಯಭಕ್ತಿ ಮೂಡಲು ಮತ್ತು ಕಾಲ ಕ್ರಮೇಣವಾಗಿ ಸರ್ಪಗಳ ಬಗ್ಗೆ ಪುರಾಣ ಐತಿಹ್ಯಗಳು ಬೆಳೆಯಲು ಕಾರಣವಾಗಿರಬೇಕು.

ಶ್ರೀಮನ್ಮಹಾಭಾರತದಲ್ಲಿ ಕಶ್ಯಪರಿಗೆ ಕದ್ರು ಮತ್ತು ವಿನತೆ ಎಂಬ ಇಬ್ಬರು ಪತ್ನಿಯರಿದ್ದರು. ಇವರಲ್ಲಿ ಕದ್ರುವಿಗೆ ಸಾವಿರ ನಾಗಗಳು ಜನಿಸುತ್ತವೆ ಎಂಬ ಉಲ್ಲೇಖವಿದೆ. ಹೀಗೆ ನಾಗಗಳ ಮೇಲೆ ದೈವಿಕ ಹಾಗೂ ಅಂಧಶ್ರದ್ಧೆ ಹೆಚ್ಚಾಗಿಯೇ ಇದೆ ಎಂದರೆ ತಪ್ಪಾಗಲಾರದು. ಆದುದರಿಂದಲೇ ಜಗತ್ತಿನ ಬಹುತೇಕ ಭಾಗಗಳಲ್ಲಿ, ಪ್ರಾಚೀನ ನಾಗರೀಕತೆಗಳಲ್ಲೂ ಜನರು ನಾಗರ ಹಾವುಗಳನ್ನು ಮನುಷ್ಯನ ಹಿತೈಷಿಗಳು ಎಂದು ನಂಬಿ ಆರಾಧಿಸಿಕೊಂಡು ಬಂದಿರುವುದನ್ನು ಗಮನಿಸಬಹುದು.

ಭಾರತದಲ್ಲಿ ಮೊದಲಿಗೆ ನಾಗಾರಾಧನೆ ಆರಂಭಗೊಂಡದ್ದು ಪಂಜಾಬ್‌ ಮತ್ತು ಕಾಶ್ಮೀರದಲ್ಲಿ ಎಂಬುದು ಪ್ರತೀತಿ. ಪಂಜಾಬಿನಲ್ಲಿ ವರ್ಷದ ಸಪ್ಟಂಬರ್‌ ತಿಂಗಳಿನಲ್ಲಿ “ಮಿರಾಸನ್‌’ ಎಂಬ ಜಾತಿಯ ನಾಗಾರಾಧಕರು ಗೋಧಿ ಅಥವಾ ಜೋಳದ ಹಿಟ್ಟಿ ನಿಂದ ನಾಗನ ಮೂರ್ತಿ ಮಾಡಿ ವೈಭವದಿಂದ ನಾಗ ಪೂಜೆಯನ್ನು ಈಗಲೂ ಮಾಡುತ್ತಾರೆ.

ಕಾಶ್ಮೀರ, ಸರೋವರಗಳ ನಾಡು ಎಂದು ಕರೆಯಲ್ಪಟ್ಟಿದ್ದು, ಈ ಸರೋವರಗಳನ್ನು ನಾಗಗಳು ರಕ್ಷಣೆ ಮಾಡಿಕೊಂಡು ಬರುತ್ತಿವೆ ಎಂದು ನೀಲಮತ ಪುರಾಣದಲ್ಲಿ ಉಲ್ಲೇಖವಿದೆ.

ಬುದ್ಧನು ಹುಟ್ಟಿದಾಗ ಆತನನ್ನು ಸ್ತುತಿಸಲೆಂದು ನಂದ ಮತ್ತು ಉಪನಂದ ಎಂಬ ಹೆಸರಿನ ನಾಗರು ಬಂದರೆಂದು ಉಲ್ಲೇಖವಿದ್ದು, ಬುದ್ಧನ ಜಾತಕ ಕಥೆಗಳು ನಾಗನ ಬಗ್ಗೆ ಹಲವಾರು ವಿಷಯಗಳನ್ನು ತಿಳಿಸುತ್ತವೆ. ಜೈನ ಧರ್ಮದಲ್ಲಿ ಕೂಡ ನಾಗಾರಾಧನೆಗೆ ಅವಕಾಶವಿದ್ದು, ಜೈನರ 24 ತೀರ್ಥಂಕರರ ಮೂರ್ತಿಗಳ ಪಕ್ಕದಲ್ಲಿ ಅವರನ್ನು ಗುರುತಿಸಲು ನಾಗಯಕ್ಷರ ಮೂರ್ತಿಗಳನ್ನು ಸ್ಥಾಪಿಸಲಾಗಿದೆ.

ಬಂಗಾಳದಲ್ಲಿ ಮಾನಸ (ಪಾರ್ವತಿ ದೇವಿಯ ಮಗಳು) ಎಂಬ ನಾಗದೇವತೆಯ ಆರಾಧನೆ ನಡೆಯುತ್ತದೆ. ಕೇರಳದಲ್ಲಿ ನಾಗಾರಾಧನ ಪದ್ಧತಿ ಬಹಳ ಪ್ರಾಚೀನ ಕಾಲದಿಂದಲೂ ಇದೆ. ತಮಿಳುನಾಡು, ಆಂಧ್ರಪ್ರದೇಶ ಹೀಗೆ ಭಾರತದ ಅನೇಕ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ನಾಗನ ಆರಾಧನೆ ನಡೆಯುತ್ತಾ ಬಂದಿದೆ.

ವಿದೇಶದಲ್ಲೂ ನಾಗಾರಾಧನೆಯ ಕುರುಹುಗಳಿದ್ದು, ಮೆಕ್ಸಿಕೋದ ಪುರಾಣದಲ್ಲಿ ಸಿಹೂಕೊಹಂಟೆ ಎಂಬ ನಾಗದೇವಿ ಒಂದು ಗಂಡು ಮತ್ತು ಹೆಣ್ಣು ಮಗುವಿಗೆ ಜನ್ಮನೀಡುತ್ತಾಳೆ. ಮುಂದೆ ಇವರಿಂದಲೇ ಮನುಕುಲ ಸೃಷ್ಟಿಯಾಯಿತು ಎಂಬ ಕಥೆಯಿದೆ. ಪ್ರಾಚೀನ ಗ್ರೀಕರ ಶಿಲ್ಪಕಲೆಗಳಲ್ಲಿ, ಗ್ರೀಸ್‌ ವೀರರ ಚಿತ್ರದ ಜತೆ ನಾಗನ ಅಥವಾ ನಾಗನ ಹೆಡೆಯ ಚಿತ್ರಗಳು ಕಂಡು ಬರುತ್ತವೆ.

ಈಜಿಪ್ಟಿನ ಸೂರ್ಯದೇವ ಹೆಲಿಯಸನು ನಾಗದೇವಿ ಓಪ್ಸಳನ್ನು ಮದುವೆಯಾದ ಎಂಬುದಾಗಿ ಅಲ್ಲಿನ ಪುರಾಣ ತಿಳಿಸುತ್ತದೆ. ರೋಮ್‌ ದೇಶದಲ್ಲಿನ ಎಪಿರಿಯಸ್‌ ಎಂಬ ಗುಹಾ ದೇವಾಲಯದಲ್ಲಿ ಮಹಿಳೆಯರು ನಾಗ ಪೂಜೆ ನಡೆಸುತ್ತಿದ್ದುದ್ದರ ಬಗ್ಗೆ ಉÇÉೇಖವಿದೆ.

ತುಳುನಾಡಿನ ವಾತಾವರಣದಲ್ಲಿ ಆದ್ರìತೆ ಮತ್ತು ದಟ್ಟವಾದ ಕಾಡು ಇರುವುದರಿಂದ ಪ್ರಾಚೀನ ಕಾಲದಿಂದಲೂ ಈ ಪ್ರದೇಶ ಸರೀಸೃಪಗಳ ಆವಾಸಸ್ಥಾನವಾಗಿದೆ. ಹಾಗಾಗಿಯೇ ನಮ್ಮ ಪೂರ್ವಜರು ತಾವು ನಂಬುವ ನಾಗನಿಗೆ ಕಾಡಿನ ತಂಪು ಜಾಗದಲ್ಲಿ ಒಂದು ಕಲ್ಲನ್ನು ಹಾಕಿ ಆರಾಧಿಸಿಕೊಂಡು ಬಂದಿದ್ದಾರೆ. ಮುಂದೆ ಇಂತಹ ಸ್ಥಳಗಳು ಬನ, ವನ, ಹಾಡಿ, ನಾಗಬನ, ಕಾಪು, ದೇವರ ಕಾಡು/ಹಾಡಿಗಳೆಂದು ಕರೆಯಲ್ಪಟ್ಟವು.

ಹಿಂದಿನ ಕಾಲದಲ್ಲಿ ನಾಗಬನಗಳು ಹೆಚ್ಚಾಗಿ ನದಿ, ಹಳ್ಳಗಳ ದಂಡೆಗಳಲ್ಲಿ, ಗದ್ದೆಯ ಬದುಗಳಲ್ಲಿ ರುವುದರಿಂದ ನಾಗ-ವೃಕ್ಷ-ಜಲ ಇವುಗಳ ಸಂಬಂಧ ಬಹಳ ಪ್ರಾಚೀನ ವಾದುದು ಎಂಬು ದನ್ನು ಗಮನಿಸ ಬಹುದು. ಮುಂದೆ ಇಲ್ಲಿ ಇನ್ನಷ್ಟು ಜಾತಿಯ ಮರಗಳು, ಸಸ್ಯವರ್ಗ ಗಳು ಬೆಳೆ ಯುತ್ತಾ ಆ ಪ್ರದೇಶವು ಬನ ಎಂದೆನಿಸಿ ಕೊಳ್ಳುತ್ತದೆ. ಮುಂದೆ ವರ್ಷಕ್ಕೊಮ್ಮೆ ಒಂದು ನಿರ್ದಿಷ್ಟ ದಿನದಂದು ಇಂತಹ ಬನಗಳ ಒಳಗೆ ಪ್ರವೇ ಶಿಸಲು ತಡೆ ಯೊಡ್ಡುವ ಪೊದೆ ಗಂಟಿಗಳನ್ನು ಕಡಿದು ದಾರಿ ಮಾಡಿ ಇಲ್ಲಿನ ಪ್ರಾಕೃತಿಕ ನಾಗಬನದಲ್ಲಿ ಪೂಜೆ ನಡೆಯುತ್ತಿತ್ತು.

ರಾಜಮನೆತನದ ಅವಧಿಯಲ್ಲಿ ನಾಗ ಶಿಲ್ಪಗಳನ್ನು ಮಾಡುವುದರ ಮೂಲಕ ನಾಗನ ಆರಾಧನೆಯನ್ನು ಮೊದಲಿ ಗಿಂತಲೂ ಶಾಸ್ತ್ರೋ ಕ್ತವಾಗಿ ಮಾಡಲು ಆರಂಭಿಸಿ ದರು. ಇದಕ್ಕೆ ಸಂಬಂಧಿಸಿ ದಂತೆ ತುಳುನಾಡಿನ ಅನೇಕ ನೆಲೆಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಪ್ರಾಚೀನ ನಾಗಶಿಲ್ಪ ಗಳು ಪತ್ತೆಯಾ ಗಿವೆ.

ಆದರೆ ಪ್ರಸ್ತುತ ನಾವು ಮಾಡುತ್ತಿರುವು ದಾದರೂ ಏನು? ಅಭಿವೃದ್ಧಿ, ನಗರೀಕರಣಗಳ ನೆಪವೊಡ್ಡಿ ಕಾಡುಗಳ ನಾಶ ಮಾಡಿ, ನಾಗಬನಗಳನ್ನು ಕಾಂಕ್ರೀಟಿಕರ ಣಗೊಳಿ ಸುವ ಮೂಲಕ, ಪೂರ್ವಜರ ಚಿಂತನೆ, ನಂಬಿಕೆಗಳನ್ನು ಮೌಡ್ಯ ಎಂದು ಬದಿಗೊತ್ತಿ, ಅಜ್ಞಾನವನ್ನು ಮೈಗಂಟಿ ಸಿಕೊಂಡು ನಮ್ಮದೇ ಆಡಂಭರದ ನಾಗರಾ ಧನೆಯನ್ನು ಮಾಡಿಕೊಳ್ಳುವ ಮೂಲಕ ಪರಿಸರವನ್ನು ಅವನತಿಯತ್ತ ತಳ್ಳುತ್ತಿದ್ದೇವೆ ಎಂದೆನಿಸುತ್ತಿಲ್ಲವೇ? ಇನ್ನು ಮುಂದಾದರೂ ಅಳಿದುಳಿದ ನಿಸರ್ಗದತ್ತ ಬನಗಳನ್ನು ಸಂರಕ್ಷಿಸುತ್ತ ಜೀವಸಂಕುಲ ಹಾಗೂ ನಮ್ಮದೇ ಮುಂದಿನ ಪೀಳಿಗೆಯ ಉಳಿವಿಗೆ ಆರೋಗ್ಯಪೂರ್ಣ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ.

ಶ್ರುತೇಶ್‌ ಆಚಾರ್ಯ

ಮೂಡುಬೆಳ್ಳೆ

ಟಾಪ್ ನ್ಯೂಸ್

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

IPL Mega Auction: Here’s what RCB’s team looks like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್‌ ಸಿಬಿ ತಂಡ ಹೀಗಿದೆ ನೋಡಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

IPL Mega Auction: Here’s what RCB’s team looks like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್‌ ಸಿಬಿ ತಂಡ ಹೀಗಿದೆ ನೋಡಿ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.