![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Sep 18, 2024, 8:30 PM IST
ಗಂಗೊಳ್ಳಿ: ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಗಂಗೊಳ್ಳಿಯ ಹರಿಕೃಷ್ಣ (65) ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಸಾವನ್ನಪ್ಪಿದ್ದಾರೆ.
ಸೆ. 15ರಂದು ಮತ್ಸ್ಯಜ್ಯೋತಿ ಗಿಲ್‌ನೆಟ್ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಅವರಿಗೆ ಸೆ. 17ರಂದು ಉಸಿರಾಟದ ಸಮಸ್ಯೆ ತಲೆದೋರಿತು. ಕೂಡಲೇ ಸಹೋದ್ಯೋಗಿಗಳು ದಡಕ್ಕೆ ಕರೆತಂದು ಆ್ಯಂಬುಲೆನ್ಸ್ ಮೂಲಕ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುದೊಯ್ದರು. ವೈದ್ಯರು ಪರೀಕ್ಷಿಸಿದಾಗ ಹರಿಕೃಷ್ಣ ಅದಾಗಲೇ ಮೃತಪಟ್ಟಿದ್ದರು.
ಪುತ್ರ ಮಹೇಶ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾರದೊಳಗೆ 3 ಸಾವು ಒಂದೇ ವಾರದಲ್ಲಿ ಕುಂದಾಪುರ, ಗಂಗೊಳ್ಳಿ ಠಾಣೆ ವ್ಯಾಪ್ತಿಯಲ್ಲಿ ಮೂವರು ಮೀನುಗಾರರು ಮೀನುಗಾರಿಕೆ ವೇಳೆ ಸಾವನ್ನಪ್ಪಿದ್ದಾರೆ. ಸೆ. 10ರಂದು ಮರವಂತೆ ಬಂದರಿನಿಂದ ತೆರಳಿದ್ದ ಚಂದ್ರ (43) ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಾವನ್ನಪ್ಪಿದ್ದರು. ಸೆ. 12ರಂದು ಕೋಡಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಶೇಷು (61) ಆಯತಪ್ಪಿ ಬೋಟಿನಿಂದ ನೀರಿಗೆ ಬಿದ್ದು ಸಾವನ್ನಪ್ಪಿದ್ದರು.
ಹಕ್ಲಾಡಿ: ವ್ಯಕ್ತಿ ನಾಪತ್ತೆ
ಗಂಗೊಳ್ಳಿ: ಗಾರೆ ಕೆಲಸಕ್ಕೆ ಹೋಗಿದ್ದ ಹಕ್ಲಾಡಿ ಗ್ರಾಮದ ನಿವಾಸಿ ಜಗದೀಶ (47) ಸೆ. 17ರಂದು ನಾಪತ್ತೆಯಾಗಿದ್ದಾರೆ.
ಬೆಳಗ್ಗೆ ಕೆಲಸಕ್ಕೆ ಹೋದವರು ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ತೆರಳಿದ್ದರು. ಸಂಜೆ ಬಾರದಿದ್ದಾಗ ಸಂಬಂಧಿಕರಲ್ಲಿ, ಆಸುಪಾಸಿನಲ್ಲಿ ವಿಚಾರಿಸಿದರೂ ಯಾವುದೇ ಸುಳಿವು ಪತ್ತೆಯಾಗಿರುವುದಿಲ್ಲ ಎಂದು ಪತ್ನಿ ಜಯಮಾಲಾ ಗಂಗೊಳ್ಳಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.