China Open 2024: ಒಲಿಂಪಿಕ್ ವಿಜೇತೆಗೆ ಮಾಳವಿಕಾ ಆಘಾತ
Team Udayavani, Sep 19, 2024, 7:45 AM IST
ಚಾಂಗ್ಝೂ (ಚೀನ): ಪ್ಯಾರಿಸ್ ಒಲಿಂಪಿಕ್ಸ್ ಬ್ಯಾಡ್ಮಿಂಟನ್ನಲ್ಲಿ ಕಂಚಿನ ಪದಕ ಗೆದ್ದ ಇಂಡೋನೇಷ್ಯಾದ ಗ್ರೆಗೊರಿಯಾ ಮರಿಸ್ಕಾ ತುನ್ಜುಂಗ್ ಅವರನ್ನು ಭಾರತದ ಮಾಳವಿಕಾ ಬನ್ಸೋಡ್ ನೇರ ಗೇಮ್ಗಳಲ್ಲಿ ಮಣಿಸಿದ್ದಾರೆ. ಬುಧವಾರದ “ಚೀನ ಓಪನ್ ಬ್ಯಾಡ್ಮಿಂಟನ್’ ಪಂದ್ಯಾವಳಿಯ ವನಿತಾ ಸಿಂಗಲ್ಸ್ನಲ್ಲಿ ಈ ಫಲಿತಾಂಶ ದಾಖಲಾಗಿದೆ. ಇದು ಮಾಳವಿಕಾ ಅವರ ಬ್ಯಾಡ್ಮಿಂಟನ್ ಬಾಳ್ವೆಯ ಅತೀ ದೊಡ್ಡ ಗೆಲುವಾಗಿದೆ.
22 ವರ್ಷದ, ವಿಶ್ವದ 43ನೇ ರ್ಯಾಂಕ್ ಆಟಗಾರ್ತಿಯಾದ ಮಾಳವಿಕಾ, ದಿಟ್ಟ ಹೋರಾಟವೊಂದನ್ನು ನಡೆಸಿ 7ನೇ ರ್ಯಾಂಕ್ನ ತುನ್ಜುಂಗ್ ಅವರನ್ನು 26-24, 21-19 ಅಂತರದಿಂದ ಹಿಮ್ಮೆಟ್ಟಿಸುವಲ್ಲಿ ಯಶಸ್ವಿ ಯಾದರು. 46 ನಿಮಿಷಗಳ ತನಕ ಇವರ ಹೋರಾಟ ಸಾಗಿತು. ಎಡಗೈ ಆಟಗಾರ್ತಿ ಯಾಗಿರುವ ಮಾಳವಿಕಾ ಇನ್ನು ಸ್ಕಾಟ್ಲೆಂಡ್ನ ಕ್ರಿಸ್ಟಿ ಗಿಲ್ಮೋರ್ ವಿರುದ್ಧ ಸೆಣಸಲಿದ್ದಾರೆ.
ಚೆನ್ನೈನ ಎಸ್.ಆರ್.ಎಂ. ಯುನಿವರ್ಸಿಟಿ ಯಲ್ಲಿ, ಕಂಪ್ಯೂಟರ್ ಸೈನ್ಸ್ನಲ್ಲಿ ಬಿ ಟೆಕ್ ಪದವಿ ಪಡೆದಿರುವ ಮಾಳವಿಕಾ ಬನ್ಸೋಡ್, ವನಿತಾ ಸಿಂಗಲ್ಸ್ನಲ್ಲಿ ಮುನ್ನಡೆದಿರುವ ಭಾರತದ ಏಕೈಕ ಆಟಗಾರ್ತಿ. ಉಳಿದಂತೆ ಆಕರ್ಷಿ ಕಶ್ಯಪ್, ಸಮಿಯಾ ಇಮಾದ್ ಫಾರೂಖೀ ಮೊದಲ ಸುತ್ತಿನಲ್ಲೇ ಪರಾಭವಗೊಂಡರು. ವನಿತಾ ಡಬಲ್ಸ್ನಲ್ಲಿ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್, ಮಿಶ್ರ ಡಬಲ್ಸ್ನಲ್ಲಿ ಬಿ ಸುಮಿತ್ ರೆಡ್ಡಿ-ಎನ್. ಸಿಕ್ಕಿ ರೆಡ್ಡಿ ಕೂಡ ಸೋತು ಹೋದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.