MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ
Team Udayavani, Sep 19, 2024, 3:22 AM IST
ಮಣಿಪಾಲ: ಫ್ರಾನ್ಸ್ ನ ಯುರೆಕ್ಸ್ಪೋ ಲಿಯಾನ್ನಲ್ಲಿ ಸೆ.10ರಿಂದ 15ರ ವರೆಗೆ ಜರಗಿದ 47ನೇ ವಿಶ್ವ ಕೌಶಲ ಸ್ಪರ್ಧೆಯ ಪಾಕಶಾಲೆ(ಅಡುಗೆ) ವಿಭಾಗದಲ್ಲಿ ಮಾಹೆ ವಿ.ವಿ.ಯ ವಾಗ್ಶಾದ ವಿದ್ಯಾರ್ಥಿ ಮಂಗಳೂರಿನ ಕಾರ್ಸ್ಟ್ರೀಟ್ನ ಹರ್ಷವರ್ಧನ್ ಅವರು ಮೆಡಲಿಯನ್ ಆಫ್ ಎಕ್ಸಲೆನ್ಸ್ ಪದಕ ಗಳಿಸಿ ವಿಶೇಷ ಸಾಧನೆ ಮಾಡಿದ್ದಾರೆ ಎಂದು ವಾಗ್ಶಾ ಪ್ರಾಂಶುಪಾಲ ಚೆಫ್ ಡಾ| ತಿರುಜ್ಞಾನಸಂಬಾಂತಮ್ ತಿಳಿಸಿದ್ದಾರೆ.
ವಿವಿಧ ಕೌಶಲಕ್ಕೆ ಸಂಬಂಧಿಸಿ ಸ್ಪರ್ಧೆಗಳು ನಡೆದಿದ್ದು, 70ಕ್ಕೂ ಹೆಚ್ಚು ದೇಶಗಳಿಂದ 1,400 ಸ್ಪರ್ಧಿಗಳು ಭಾಗವಹಿಸಿದ್ದರು. ಕೇಂದ್ರ ಸರಕಾರದ ಪ್ರತಿಭೆ ಶೋಧ ಕಾರ್ಯಕ್ರಮದ ಮೂಲಕ ದೇಶದ 60 ಸ್ಪರ್ಧಿಗಳು ವಿವಿಧ 52 ಕೌಶಲ ವಿಭಾಗದಲ್ಲಿ ಸ್ಪರ್ಧಿಸಿದ್ದರು. ತಂಡವು 3 ಕಂಚಿನ ಪದಕಗಳು ಮತ್ತು 12 ಮೆಡಾಲಿಯನ್ಗಳ ಮನ್ನಣೆಯನ್ನು ಪಡೆದಿದೆ ಎಂದು ಬುಧವಾರ ವಾಗ್ಶಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹರ್ಷವರ್ಧನ್ ಮಾತನಾಡಿ, ಮಾಹೆ ಹಾಗೂ ವಾಗ್ಶಾ ನೀಡಿದ ಪ್ರೇರಣದಾಯಿ ಕಾರ್ಯದಿಂದ ಇದು ಸಾಧ್ಯವಾಗಿದೆ. ಈ ಪದಕ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.