INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್, ಜಡೇಜಾ; ಶತಕ ಬಾರಿಸಿದ ಲೋಕಲ್ ಬಾಯ್
Team Udayavani, Sep 19, 2024, 5:21 PM IST
ಚೆನ್ನೈ: ಪ್ರವಾಸಿ ಬಾಂಗ್ಲಾದೇಶ ವಿರುದ್ದ ಟೆಸ್ಟ್ ಸರಣಿಯ (Test series) ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಉತ್ತಮ ಹಿಡಿತ ಸಾಧಿಸಿದೆ. ಮೊದಲ ದಿನದಾಟದ ಅಂತ್ಯಕ್ಕೆ ಭಾರತವು ಆರು ವಿಕೆಟ್ ನಷ್ಟಕ್ಕೆ 339 ರನ್ ಪೇರಿಸಿದೆ.
ಒಂದು ಹಂತದಲ್ಲಿ 144 ರನ್ ಗೆ ಆರು ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಲೋಕಲ್ ಬಾಯ್ ಅಶ್ವಿನ್ (Ravichandran Ashwin) ಮತ್ತು ರವೀಂದ್ರ ಜಡೇಜಾ (Ravidra Jadeja) ಆಸರೆಯಾದರು. ಅವರಿಬ್ಬರು ಮುರಿಯದ ಏಳನೇ ವಿಕೆಟ್ ಗೆ 195 ರನ್ ಜೊತೆಯಾಟವಾಡಿದರು.
ಎಂ.ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ನಾಯಕ ನಜ್ಮುಲ್ ಹುಸೇನ್ ಶಾಂಟೋ ಅವರು ಮೊದಲು ಭಾರತವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು.
ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆರಂಭದಲ್ಲಿಯೇ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ನಾಯಕ ರೋಹಿತ್ ಶರ್ಮಾ 6 ರನ್ ಗಳಿಸಿದರೆ, ಶುಭಮನ್ ಗಿಲ್ 0, ವಿರಾಟ್ ಕೊಹ್ಲಿ 6 ರನ್ ಮಾಡಿ ಪೆವಿಲಿಯನ್ ಸೇರಿದರು. ಆದರೆ ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ ಮತ್ತು ರವಿ ಅಶ್ವಿನ್ ತಂಡದವನ್ನು ಭಾರೀ ಕುಸಿತದಿಂದ ಪಾರು ಮಾಡಿದರು.
ಒಂದೆಡೆ ವಿಕೆಟ್ ಉರುಳಿತ್ತದ್ದರು ಗಟ್ಟಿಯಾಗಿ ನಿಂತ ಯಶಸ್ವಿ ಜೈಸ್ವಾಲ್ 56 ರನ್ ಗಳಿಸಿದರು. ಅಪಘಾತದ ಬಳಿಕ ಮೊದಲ ಬಾರಿ ಟೆಸ್ಟ್ ಆಡುತ್ತಿರುವ ರಿಷಭ್ ಪಂತ್ 39 ರನ್ ಮಾಡಿದರು. ಅವರು ಮತ್ತು ಜೈಸ್ವಾಲ್ ನಾಲ್ಕನೇ ವಿಕೆಟ್ ಗೆ 62 ರನ್ ಜೊತೆಯಾಟವಾಡಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಕೆಎಲ್ ರಾಹುಲ್ 16 ರನ್ ಮಾತ್ರ ಮಾಡಿದರು.
ತಂಡವು 144 ರನ್ ಗಳಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜೊತೆಯಾದ ಅಶ್ವಿನ್-ಜಡೇಜಾ ಭಾರತವನ್ನು ಸುಸ್ಥಿತಿಗೆ ತಂದರು. ತವರಿನ ಅಂಗಳದಲ್ಲಿ ಆಡುತ್ತಿರುವ ಅಶ್ವಿನ್ ಅಮೋಘ ಶತಕ ಬಾರಿಸಿ ಮಿಂಚಿದರು. 112 ಎಸೆತ ಎದುರಿಸಿದ ಅಶ್ವಿನ್ ಹತ್ತು ಬೌಂಡರಿ ಮತ್ತು ಎರಡು ಸಿಕ್ಸರ್ ನೆರವಿನಿಂದ 102 ರನ್ ಮಾಡಿದರು. ಇದು ಟೆಸ್ಟ್ ನಲ್ಲಿ ಅಶ್ವಿನ್ ಅವರ ಆರು ಶತಕವಾಗಿದೆ. ಚೆನ್ನೈನಲ್ಲಿ ಎರಡನೇ ಶತಕ.
ಅಶ್ವಿನ್ ಗೆ ಜೊತೆಯಾದ ರವೀಂದ್ರ ಜಡೇಜಾ 117 ಎಸೆತಗಳಲ್ಲಿ ಅಜೇಯ 86 ರನ್ ಗಳಿಸಿದರು.
ಹಸನ್ ಮಹಮೂದ್ ಆರಂಭಿಕ ನಾಲ್ಕು ವಿಕೆಟ್ ಕಿತ್ತು ಮಿಂಚಿದರು. ನಹೀದ್ ರಾಣಾ ಮತ್ತು ಮೆಹದಿ ಹಸನ್ ತಲಾ ಒಂದು ವಿಕೆಟ್ ಕಿತ್ತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Perth test: ಜೈಸ್ವಾಲ್-ರಾಹುಲ್ ಅಜೇಯ ಆಟ; ಪರ್ತ್ ನಲ್ಲಿ ಭಾರತದ ಮೇಲಾಟ
Mother: ಅಮ್ಮನ ಜೀವನವೇ ಆದರ್ಶ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.