Ma’nene;ಸ್ಮಶಾನದಲ್ಲಿದ್ದ ಶವ ಮನೆಗೆ ತಂದು ಸಂಭ್ರಮಿಸ್ತಾರೆ! ಇದು ವಿಚಿತ್ರ ಅಚ್ಚರಿ ಸಂಪ್ರದಾಯ

ಅದೃಷ್ಟ ಖುಲಾಯಿಸುವ ನಿಗೂಢ ಆಚರಣೆ; ಇದೇನಿದು?

Team Udayavani, Sep 22, 2024, 10:00 AM IST

Ma’nene; ಪ್ರತಿ ವರ್ಷ ಶ*ವಗಳಿಗೆ ವಿಶಿಷ್ಟ ಗೌರವ!: ಅಚ್ಚರಿಗೊಳಪಡಿಸುವ ಸಂಪ್ರದಾಯ

ಯಾರಾದರು ಶವದೊಂದಿಗೆ ದಿನ ಕಳೆಯಲು ಬಯಸುತ್ತಾರೆಯೇ? ಬಯಸಿದರೂ ದಿನಗಟ್ಟಲೆ ಸಾಧ್ಯವೇ? ಇದು ಕೇಳಿಸಿಕೊಳ್ಳಲು ಭಯಾನಕವೆನಿಸಿದರೂ ಇಂತಹದ್ದೊಂದು ವಿಚಿತ್ರ ಸಂಪ್ರದಾಯ ಇಂಡೋನೇಷ್ಯಾದಲ್ಲಿ ಚಾಲ್ತಿಯಲ್ಲಿದೆ. ಇದೇನಪ್ಪಾ ಶವದೊಂದಿಗೆ ದಿನ ಕಳೆಯೋದಾ ಅಂತ ಪ್ರಶ್ನೆ ಮೂಡೋದು ಸಹಜ. ಈ ಕುರಿತ ಮಾಹಿತಿ ಇಲ್ಲಿದೆ.

ಇಂಡೋನೇಷ್ಯಾದ ದಕ್ಷಿಣ ಸುಲವೆಸಿ (South Sulawesi) ಬೆಟ್ಟಗಳಲ್ಲಿ ವಾಸಿಸುವ  ಟೊರಾಜನ್‌ (Torajan) ಎಂಬ ಜನಾಂಗದವರು ತಮ್ಮದೇ ವಿಶೇಷ ಸಂಪ್ರದಾಯದಿಂದ ಗುರುತಿಸಿಕೊಂಡಿದ್ದಾರೆ. ಇಲ್ಲಿಯ ಜನರು ಶವಗಳನ್ನು ಬಹಳ ಗೌರವದಿಂದ ನಡೆಸಿಕೊಳ್ಳುತ್ತಾರೆ ಹಾಗೆಯೇ ಅವುಗಳಿಗೆ ಆಹಾರವನ್ನು ನೀಡುವುದರ ಜತೆಗೆ ಜೀವವಿರುವವರಂತೆಯೇ ಬಟ್ಟೆಗಳನ್ನು ತೊಡಿಸುತ್ತಾರೆ. ಈ ಸಂಪ್ರದಾಯವನ್ನು ‘ಮಾ ನೆನೆ’ (Ma’nene) ಅಥವಾ ‘ಶವಗಳನ್ನು ಸ್ವಚ್ಛಗೊಳಿಸುವ ಸಮಾರಂಭ’ ಎಂದು ಕರೆಯಲಾಗುತ್ತದೆ.

ಈ ಸಂಪ್ರದಾಯದ ಹಿಂದೆ ಒಂದು ಕಥೆಯಿದೆ: ಸುಮಾರು ವರ್ಷಗಳ ಹಿಂದೆ ಪಾಂಗ್‌ ರುಮಾಸೆಕ್‌ ಎಂಬ ಬೇಟೆಗಾರನು ಟೊರಾಜನ್‌ ಕಾಡಿಗೆ ತೆರಳಿದ್ದಾಗ ಆತನಿಗೆ ಅನಾಥವಾಗಿ ಬಿದ್ದಿದ್ದ ಒಂದು ಅಸ್ಥಿಪಂಜರವು ಕಾಣಿಸಿತ್ತು. ಅಸ್ಥಿಪಂಜರವನ್ನು ಕಂಡ ಪಾಂಗ್‌ ರುಮಾಸೆಕ್‌ ಮರಣ ಹೊಂದಿದ ವ್ಯಕ್ತಿಯ ಹಣೆಬರಹಕ್ಕೆ ಬೇಸರಗೊಂಡ ಆ ಅಸ್ಥಿಪಂಜರಕ್ಕೆ ಬಟ್ಟೆಯನ್ನು ತೊಡಿಸಿ ನಂತರ ಅದನ್ನು ನೋಡಿಕೊಂಡನಂತೆ. ಅಂದಿನಿಂದ ಆತನ ಅದೃಷ್ಟ ಖುಲಾಯಿಸಿದ್ದು, ಕೃಷಿಯಲ್ಲಿಯೂ ಬಹಳ ಲಾಭವಾಗಿತ್ತೆಂಬ ನಂಬಿಕೆ ಇದೆ. ಅಂದಿನಿಂದ ಈ ಆಚರಣೆಯಲ್ಲಿ ಜನ ತೊಡಗಿಸಿಕೊಂಡಿದ್ದು ವಿಶಿಷ್ಟ ಆಚರಣೆ ಮಾಡುವುದರಿಂದ ಸುಗ್ಗಿಯಲ್ಲಿ ಅಧಿಕ ಫಸಲು ಬರುವುದು ಎಂಬ ನಂಬಿಕೆಯೂ ಹೆಚ್ಚಾಯಿತು. ಈ ಎಲ್ಲಾ ಕಾರಣಕ್ಕಾಗಿ ಜನರು ಬಹಳ ಭಯ ಭಕ್ತಿಯಿಂದ ಅತ್ಯಪರೂಪದ ಆಚರಣೆಯನ್ನು ನಡೆಸಿಕೊಂಡು ಬಂದಿದ್ದಾರೆ.

4 ರಿಂದ 5 ದಿನಗಳವರೆಗೆ ಆಚರಿಸುವ ಈ ʼಮಾ ನೆನೆʼ ಸಮಾರಂಭವು ಆಗಸ್ಟ್‌ ತಿಂಗಳಲ್ಲಿ ನಡೆಸಲಾಗುತ್ತದೆ. ಈ ಸಮಯದಲ್ಲಿ ಸ್ಮಶಾನದಿಂದ ತಮ್ಮ ಸಂಬಂಧಿಕರ ದೇಹವನ್ನು ಇರಿಸಿದ ಶವಪೆಟ್ಟಿಗೆಗಳನ್ನು ಮನೆಗೆ ತರಲಾಗುತ್ತದೆ. ನಂತರ ಶವಪೆಟ್ಟಿಗೆಗಳಲ್ಲಿ ಇರಿಸಲಾದ ದೇಹಗಳನ್ನು ಹೊರತೆಗೆದು ಸ್ವಚ್ಛಗೊಳಿಸಿ, ಹೊಸ ಬಟ್ಟೆಗಳನ್ನು ತೊಡಿಸಿ ಇತರ ಹೊಸದಾದ ವಸ್ತುಗಳನ್ನು ಇಡುತ್ತಾರೆ. ತದನಂತರ  ಬಿಸಿಲಿನಲ್ಲಿ ದೇಹಗಳನ್ನು ಒಣಗಿಸಲು ಬಿಡಲಾಗುತ್ತದೆ.

ಸಂಬಂಧಿಕರು ಶುಚಿಗೊಂಡ ಶವದೊಂದಿಗೆ ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ. ಈ ಸಂದರ್ಭ ಊರಿನ ಯುವಕರು ಒಟ್ಟು ಸೇರಿಕೊಂಡು ಹಾಡು ಕುಣಿತದೊಂದಿಗೆ ಕುಟುಂಬಕ್ಕೆ ಮನರಂಜನೆಯನ್ನು ನೀಡುತ್ತಾರೆ. ಎಲ್ಲಾ ಸಂಭ್ರಮ ಆಚರಣೆ ಮುಗಿದ ಬಳಿಕ ಶವವನ್ನು ಮರಳಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗುತ್ತಾರೆ. ಮರಳಿ ಮನೆಗೆ ಬಂದು ಮನೆಯಲ್ಲಿ ಎಲ್ಲರೂ ಸೇರಿಕೊಂಡು ತಯಾರಿಸಿದ ಸಾಂಪ್ರದಾಯಿಕವಾದ ಆಹಾರವನ್ನು ಜತೆಯಾಗಿ ಸೇವಿಸುತ್ತಾರೆ. ಈ ಮೂಲಕ  ಸಮಾರಂಭವು ಪೂರ್ಣವಾಗುತ್ತದೆ.

ಇಲ್ಲಿ ಮತ್ತೊಂದು ವಿಶೇಷವೆಂದರೆ ಅಂತ್ಯಕ್ರಿಯೆ ಸಮಾರಂಭ. ಇಲ್ಲಿನ ಜನರು ಅಂತ್ಯಕ್ರಿಯೆಯ ಸಮಾರಂಭವನ್ನು ʼರಾಂಬೂ ಸೊಲೊʼ(Rambu Solo) ಎಂದು ಆಚರಿಸುತ್ತಾರೆ. ಇದೊಂದು ದುಬಾರಿ ಕಾರ್ಯಕ್ರಮವಾಗಿದ್ದು ಕುಟುಂಬಸ್ಥರು ಇದಕ್ಕೆಂದು ಸುಮಾರು ಹತ್ತಾರು ಸಾವಿರ ರೂಪಾಯಿಗಳನ್ನು ವ್ಯಯಿಸುತ್ತಾರೆ.

ಕೆಲವೊಮ್ಮೆ ಹಣದ ಕೊರತೆಯಿಂದಾಗಿ ಕುಟುಂಬದ ಓರ್ವ ವ್ಯಕ್ತಿಯು ಮರಣಹೊಂದಿದ ಬಳಿಕ ಅವರ ಅಂತ್ಯಕ್ರಿಯೆಯು ತಿಂಗಳ ಬಳಿಕವೋ, ವರ್ಷಗಳ ನಂತರವೂ ಈ ಕ್ರಮ ನಡೆಯುತ್ತದೆ. ಅಂತಹ ಸಂದರ್ಭದಲ್ಲಿ ಆ  ಕುಟುಂಬವು ಅಂತ್ಯಕ್ರಿಯೆ ನಡೆಯುವ ದಿನಗಳವರೆಗೆ ರಾಸಾಯನಿಕ ಪದಾರ್ಥವನ್ನು ಬಳಸಿಕೊಂಡು ಮೃತ ದೇಹವನ್ನು ಮನೆಯಲ್ಲಿ ಇರಿಸಿಕೊಂಡು ಆತ/ ಆಕೆ ಇನ್ನೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನುವಂತೆ ನೋಡಿಕೊಳ್ಳುತ್ತಾರೆ. ದಿನಕ್ಕೆರಡು ಬಾರಿ ಆಹಾರ, ಪಾನೀಯ, ಹಾಗೂ ಸಿಗರೇಟನ್ನು ಮನೆಯವರು ಶವಕ್ಕೆ ನೀಡುತ್ತಾರೆ. ಅಂತ್ಯಕ್ರಿಯೆ ನಡೆಸುವವರೆಗೂ ಆತ್ಮವು ಭೂಮಿಯಲ್ಲಿಯೇ ಸಂಚರಿಸುತ್ತಾ ಇದ್ದು ಅಂತ್ಯಕ್ರಿಯೆಯ ಬಳಿಕ ಆತ್ಮಗಳ ಭೂಮಿ (land of spirits) ಯಾದ ‘ಪುಯಾ’ ಗೆ ತಮ್ಮ ಪಯಣವನ್ನು ಶುರು ಮಾಡುತ್ತದೆ ಎಂಬ ನಂಬಿಕೆ ಅಲ್ಲಿಯ ಜನರದ್ದಾಗಿದೆ.

ಮನೆಯಲ್ಲಿ ಇರಿಸಲಾದ ಶವವನ್ನು ಸಮಯಕ್ಕೆ ಸರಿಯಾಗಿ ಶುಚಿಗೊಳಿಸಿ, ಶುಭ್ರವಾದ ಬಟ್ಟೆಗಳನ್ನು ಶವಕ್ಕೆ ತೊಡಿಸಿ ಪ್ರಾರ್ಥನೆಯನ್ನು ನಡೆಸಲಾಗುತ್ತದೆ. ಜತೆಗೆ ಕೋಣೆಯ ಒಂದು ಮೂಲೆಯಲ್ಲಿ ಶೌಚಾಲಯದ ಸಾಂಕೇತಿಕವಾಗಿ ಒಂದು ಪಾತ್ರೆಯನ್ನು ಇಡಲಾಗುತ್ತದೆ. ಶವವನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಅವರ ಆತ್ಮವು ತೊಂದರೆ ನೀಡುವುದು ಎಂಬ ನಂಬಿಕೆಯಿಂದ ಕುಟುಂಬಸ್ಥರು ಮನೆಯಲ್ಲಿ ಶವವನ್ನು ಒಬ್ಬಂಟಿಯಾಗಿ ಬಿಟ್ಟು ಹೋಗುವುದಿಲ್ಲ, ರಾತ್ರಿ ದೀಪವನ್ನೂ ಆರಿಸುವುದಿಲ್ಲ.

ಮರಣ ಹೊಂದಿದ ವ್ಯಕ್ತಿಯ ದೇಹವನ್ನು ಮನೆಯಲ್ಲಿ ಇರಿಸಿದಷ್ಟು ದಿನ ಸಾಕಷ್ಟು ಹಣವನ್ನು ಕೂಡಿ ಇಟ್ಟು ದೊಡ್ಡ ರೀತಿಯಲ್ಲಿ ಅಂತ್ಯಕ್ರಿಯೆ ನಡೆಸುತ್ತಾರೆ. ಅಂತ್ಯಕ್ರಿಯೆಗೆ ದಿನ ಗೊತ್ತುಪಡಿಸಿದ ನಂತರ 12 ದಿನಗಳು ನಡೆಯುವ ಸಮಾರಂಭದಲ್ಲಿ ಡಜನ್‌ಗಟ್ಟಲೆ ಎಮ್ಮೆಗಳನ್ನು ಖರೀದಿಸಲಾಗುತ್ತದೆ. ನಂತರ ಅವುಗಳನ್ನು ಸಮಾರಂಭದಂದು ಬಲಿಕೊಡಲಾಗುತ್ತದೆ. ಇದಕ್ಕೆ ಕಾರಣ ಎಮ್ಮೆಗಳು ಮರಣ ಹೊಂದಿದ ವ್ಯಕ್ತಿಗೆ ವಾಹನದ ರೂಪದಲ್ಲಿ ಪುಯಾಗೆ ಹೋಗಲು ಸಹಾಯವಾಗುತ್ತವೆ ಎಂಬುದಾಗಿದೆ.

ಅಷ್ಟು ಮಾತ್ರವಲ್ಲದೆ ಸಮಾರಂಭಕ್ಕಾಗಿ ನೂರಾರು ಹಂದಿಗಳನ್ನೂ ಬಲಿಕೊಡಲಾಗುತ್ತದೆ. ಮರಣ ಹೊಂದಿದ ವ್ಯಕ್ತಿಯನ್ನು ʼಮಕುಲಾʼ ಎಂದು ಕರೆಯಲಾಗುತ್ತದೆ. ಆ ವ್ಯಕ್ತಿ ಬದುಕಿದ್ದಾಗ ಯಾವ ರೀತಿ ಗೌರವ ಕಾಳಜಿಯನ್ನು ನೀಡುತ್ತಿದ್ದರೋ ಅದೇ ರೀತಿ ಅವರ ಶವಕ್ಕೂ ಗೌರವ ಕಾಳಜಿಯನ್ನು ಅಲ್ಲಿನ ಜನರು ನೀಡುತ್ತಾರೆ. ಇಲ್ಲಿ ಮರಣ ಎನ್ನುವುದು ಕೇವಲ ಸಾಮಾಜಿಕ ಹಾಗೂ ಜೀವನದಲ್ಲಿ ನಡೆಯುವ ಒಂದು ಪ್ರಕ್ರಿಯೆಯಾಗಿದೆ. ಮರಣ ಹೊಂದಿದ ವ್ಯಕ್ತಿಯು ಸದಾ ಅವರೊಂದಿಗೆ ಇದ್ದು ಅವರನ್ನು ಕಾಪಾಡುತ್ತಾರೆ ಎಂಬ ನಂಬಿಕೆ ಇದೆ. ಕೊನೆಯಲ್ಲಿ ಊರಿನ ಜನರಿಗೆಲ್ಲಾ ಭೋಜನ ಕೂಟ ಏರ್ಪಡಿಸಲಾಗುತ್ತದೆ.

ಇಲ್ಲಿನ ಜನರು ಮರಣ ಹೊಂದಿದ ತಮ್ಮ ಸಂಬಂಧಿಕರ ದೇಹವನ್ನು ತುಂಬಾ ಜಾಗರೂಕತೆಯಿಂದ ಸಮಾಧಿ ಮಾಡುತ್ತಾರೆ. ಹಿಂದಿನ ಕಾಲದಲ್ಲಿ ಶವಗಳು ಬೇಗ ಹಾಳಾಗಂತೆ ತಡೆಯಲು ವಿಶೇಷವಾದ ಎಲೆಗಳನ್ನು ಮತ್ತು ಗಿಡಮೂಲಿಕೆಗಳನ್ನು ಬಳಸಲಾಗುತ್ತಿತ್ತು. ಈಗ ಅದರ ಬದಲು ಫಾರ್ಮಲಿನ್‌ (Formalin) ನನ್ನು ದೇಹಕ್ಕೆ ಹಚ್ಚುತ್ತಾರೆ. ಇದರಿಂದ ದೇಹವು 100 ವರ್ಷಕ್ಕೂ ಮೀರಿ ಹಾಳಾಗದಂತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಈ ಸಂಪ್ರದಾಯವು ಸಾವು ಮತ್ತು ಬದುಕಿನ ನಡುವೆ ಕಾಣದೆ ಇರುವ ಆಂತರಿಕ ಸಂಬಂಧವನ್ನು ಸೂಚಿಸುತ್ತದೆ. ಇಂಡೋನೇಷ್ಯಾದ ಜನರು ಆಚರಿಸುವ ಈ ಸಮಾರಂಭವನ್ನು ಎರಡನೇ ಅಂತ್ಯಕ್ರಿಯೆ ಎಂದು ಕರೆಯುತ್ತಾರೆ. ಮರಣವಾಗಲಿ, ಅಂತ್ಯಕ್ರಿಯೆಯಾಗಲಿ ಯಾವುದೂ ಸಂಬಂಧದ ಕೊನೆಯಲ್ಲ. ದೇಹ ಕಣ್ಮರೆಯಾದರೂ ಆತ್ಮವಿದೆ ಎಂಬ ನಂಬಿಕೆಯೇ ದೊಡ್ಡದು. ಪ್ರತೀ ಎರಡು ಮೂರು ವರ್ಷಕ್ಕೆ ಶವವನ್ನು ಹೊರತೆಗೆದು ಅದಕ್ಕೆ ತಕ್ಕ ಗೌರವ ಪ್ರೀತಿಯನ್ನು ನೀಡಿ ಟೊರಾಜನ್‌ನ ಜನರು ತಮ್ಮ ಸಂಬಂಧವನ್ನು, ನಂಬಿಕೆಯನ್ನು ಅನೂಚಾನವಾಗಿ ಉಳಿಸಿಕೊಂಡು ಬರುತ್ತಿದ್ದಾರೆ.

-ಪೂರ್ಣಶ್ರೀ.ಕೆ

ಟಾಪ್ ನ್ಯೂಸ್

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

6-tulsi

Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ : ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.