Kasaragod ಅಪರಾಧ ಸುದ್ದಿಗಳು
Team Udayavani, Sep 20, 2024, 9:14 PM IST
ಬಾಲಕಿಯನ್ನು ಸುತ್ತಾಡಿಸಿದ ಆಸ್ಪತ್ರೆ ನೌಕರ; ಕೇಸು
ಕಾಸರಗೋಡು: ಟ್ರೈನಿಂಗ್ ನರ್ಸಿಂಗ್ ಅಸಿಸ್ಟೆಂಟ್ ಆಗಿರುವ 17ರ ಹರೆಯದ ಬಾಲಕಿಯನ್ನು ಬೈಕ್‌ನಲ್ಲಿ ಕರೆದೊಯ್ದು ವಿವಿಧೆಡೆ ಸುತ್ತಾಡಿಸಿದ ಆಸ್ಪತ್ರೆಯ ಆಪರೇಶನ್ ಥಿಯೇಟರ್ ನೌಕರನ ವಿರುದ್ಧ ಕಾಸರಗೋಡು ಮಹಿಳಾ ಠಾಣೆಯ ಪೊಲೀಸರು ಕೇಸು ದಾಖಲಿಸಿದ್ದಾರೆ.
ಕಾಸರಗೋಡಿನ ಖಾಸಗಿ ಆಸ್ಪತ್ರೆಯೊಂದರ ಆಪರೇಶನ್ ಥಿಯೇಟರ್ ನೌಕರನಾದ ಮಲಪ್ಪುರಂ ನಿವಾಸಿ ಇಬಾನ್ ಮುಹಮ್ಮದ್ ವಿರುದ್ಧ ಕೇಸು ದಾಖಲಿಸಲಾಗಿದೆ. ಅಪ್ರಾಪ್ತ ವಯಸ್ಕ ಬಾಲಕಿಯನ್ನು ಈತ ಬೈಕ್‌ನಲ್ಲಿ ಕರೆದೊಯ್ಯುತ್ತಿರುವ ಬಗ್ಗೆ ನಾಗರಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಬೈಕ್ ಅಪಘಾತ: ಯುವಕ ಸಾವು
ಕಾಸರಗೋಡು: ಮಲೆನಾಡು ಹೆದ್ದಾರಿ ವೆಳ್ಳರಿಕುಂಡು ಕಾರ್ಯೋಟುಚಾಲ್‌ನಲ್ಲಿ ಸೆ. 19ರಂದು ರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಚುಳ್ಳಿ ಚರ್ಚ್ ಬಳಿಯ ನಿವಾಸಿ ಮೂನ್ನ್ ಪೀಡಿಗದ ಜೋಮಿ ಅವರ ಪುತ್ರ ಜೆಸ್ಟಿನ್ (26) ಸಾವಿಗೀಡಾದರು. ಜೆಸ್ಟಿನ್ ಚಲಾಯಿಸಿದ ಬೈಕ್ ನಿಯಂತ್ರಣ ಕಳೆದುಕೊಂಡು ಹೊಂಡಕ್ಕೆ ಬಿದ್ದು ಅಪಘಾತ ಸಂಭವಿಸಿತ್ತು. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ, ರಕ್ಷಿಸಲು ಸಾಧ್ಯವಾಗಲಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.