KEA: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು
Team Udayavani, Sep 20, 2024, 11:58 PM IST
ಬೆಂಗಳೂರು:ಅಖಿಲ ಭಾರತ ಮಟ್ಟದಲ್ಲಿನ ವೈದ್ಯಕೀಯ ಸೀಟು ಉಳಿಸಿಕೊಳ್ಳಲು ಇಚ್ಛಿಸಿರುವವರು ಸೇರಿ ಇತರ ಒಟ್ಟು 206 ಮಂದಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ತಮಗೆ ಹಂಚಿಕೆಯಾಗಿದ್ದ ಸೀಟುಗಳನ್ನು ಶುಕ್ರವಾರ ರದ್ದು ಮಾಡಿಕೊಂಡಿದ್ದಾರೆ. ಇಷ್ಟೂ ಮಂದಿಯ ಸೀಟುಗಳನ್ನು ಮೆರಿಟ್ ಮೇಲೆ ಇತರ ಅರ್ಹರಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಪ್ರಾಧಿ ಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೈದ್ಯಕೀಯ ಕೋರ್ಸ್‌ನಲ್ಲಿ ಅತಿ ಹೆಚ್ಚು ಅಂದರೆ 107 ಮಂದಿ ತಮ್ಮ ಸೀಟುಗಳನ್ನು ರದ್ದುಪಡಿಸಿಕೊಂಡು ಕೆಇಎಗೆ ವಾಪಸ್ ಮಾಡಿದ್ದಾರೆ. ಹಾಗೆಯೇ ದಂತ ವೈದ್ಯಕೀಯದಲ್ಲಿ 20, ಆಯುಷ್ ಕೋರ್ಸ್ ನಲ್ಲಿ 33, ಎಂಜಿನಿಯರಿಂಗ್ ನಲ್ಲಿ 5 ಮತ್ತು ನರ್ಸಿಂಗ್ ನಲ್ಲಿ 4 ಮಂದಿ ಸೀಟು ರದ್ದು ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.