Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

ರಿನ್ಸನ್‌ ಜೋಸ್‌ರ ಬಲ್ಗೇರಿಯಾ ಕಂಪೆನಿ ಹಣ ಬಳಕೆ ಆರೋಪ

Team Udayavani, Sep 21, 2024, 6:30 AM IST

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

ನ್ಯೂಯಾರ್ಕ್‌: ನಾಲ್ಕು ದಿನಗಳ ಹಿಂದೆ ಲೆಬನಾನ್‌ನಲ್ಲಿ ಸಂಭವಿಸಿದ 1 ಸಾವಿರಕ್ಕೂ ಅಧಿಕ ಪೇಜರ್‌ಗಳ ಸ್ಫೋಟಕ್ಕೆ ಈಗ ಕೇರಳ ನಂಟು ಪತ್ತೆಯಾಗಿದೆ!

ಲೆಬನಾನ್‌ ಹೆಜ್ಬುಲ್ಲಾ ಬಂಡುಕೋರರು ಖರೀದಿಸಿದ್ದ ಪೇಜರ್‌ಗಳನ್ನು ಬಲ್ಗೇರಿಯಾ ಮೂಲದ ಕಂಪೆನಿಯೊಂದು ತಯಾರಿಸಿದೆ. ಈ ಕಂಪೆನಿಯು ಕೇರಳ ಮೂಲದ ರಿನ್ಸನ್‌ ಜೋಸ್‌ ಅವರಿಗೆ ಸೇರಿದೆ. ಆದರೆ ಬಲ್ಗೇರಿಯಾದ ಭದ್ರತಾ ಸಂಸ್ಥೆಯು ಈ ಆರೋಪವನ್ನು ತಳ್ಳಿ ಹಾಕಿದ್ದು, ಕಂಪೆನಿಗೆ ಕ್ಲೀನ್‌ಚಿಟ್‌ ನೀಡಿದೆ.

39 ವರ್ಷದ ರಿನ್ಸನ್‌ ಜೋಸ್‌ ಕೇರಳದ ವಯನಾಡಿನ ಮಾನಂತವಾಡಿಯವರಾಗಿದ್ದು, ನಾರ್ವೆ ದೇಶದ ಪೌರತ್ವ ಹೊಂದಿದ್ದಾರೆ. ರಿನ್ಸನ್‌ ಜೋಸ್‌ ಒಡೆತನದ ನೋರ್ಟ ಗ್ಲೋಬಲ್‌ ಸಂಸ್ಥೆಯು ಪೇಜರ್‌ಗಳ ಖರೀದಿಗಾಗಿ ಹಣ ವರ್ಗಾವಣೆ ನಡೆಸಿದೆ ಎಂಬ ಆರೋಪ ಕೇಳಿ ಬಂದಿತ್ತು.

ತೈವಾನ್‌ ಕಂಪೆನಿ ಬ್ರ್ಯಾಂಡ್‌ ಅಷ್ಟೇ!
ಲೆಬನಾನ್‌ನಲ್ಲಿ ಸ್ಫೋಟಗೊಂಡ ಪೇಜರ್‌ಗಳನ್ನು ತೈವಾನ್‌ ಕಂಪೆನಿ ಗೋಲ್ಡ್‌ ಅಪೋಲೋ ಪೂರೈಸಿತ್ತು ಎಂದು ಹೇಳಲಾಗಿತ್ತು. ಆದರೆ ಕಂಪೆನಿಯು ಈ ಸ್ಪಷ್ಟನೆ ನೀಡಿ, ಈ ಪೇಜರ್‌ಗಳನ್ನು ತಾನು ತಯಾರಿಸಿದ್ದಲ್ಲ. ಪೇಜರ್‌ಗಳಿಗೆ ನಮ್ಮ ಬ್ರ್ಯಾಂಡ್‌ ಬಳಸಿಕೊಳ್ಳಲಾಗಿದೆ ಎಂದು ಹೇಳಿದೆ.

ಇಸ್ರೇಲ್‌ನಿಂದ ನಕಲಿ ಕಂಪೆನಿ
ಸ್ಫೋಟಗೊಂಡ‌ ಪೇಜರ್‌ಗಳನ್ನು ಹಂಗೇರಿ ಮೂಲದ ಬಿಎಸಿ ಕನ್ಸಲ್ಟಿಂಗ್‌ ಕಂಪೆನಿ ತಯಾ ರಿಸಿದೆ. ಇದಕ್ಕಾಗಿ ಅದು ತಮ್ಮ ಜತೆ 3 ವರ್ಷ ಗಳ ಒಪ್ಪಂದ ಮಾಡಿಕೊಂಡಿತ್ತು ಎಂದು ತೈವಾನ್‌ ಕಂಪೆನಿ ಹೇಳಿಕೊಂಡಿದೆ.

ವಾಸ್ತವದಲ್ಲಿ ಬಿಎಸಿ ಕನ್ಸಲ್ಟಿಂಗ್‌ ಕಂಪೆನಿಯು ಇಸ್ರೇಲ್‌ ಸೃಷ್ಟಿಸಿದ ನಕಲಿ ಕಂಪೆನಿಯಾಗಿದೆ ಎನ್ನಲಾಗಿದೆ. ಘಟನೆಯ ಬಳಿಕ ತನಿಖೆಯ ಹಾದಿ ತಪ್ಪಿಸಲು ಇಸ್ರೇಲ್‌ ನಕಲಿ ಕಂಪೆನಿಗಳ ಹೆಸರಲ್ಲಿ ವ್ಯವಹಾರ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕೇರಳ ವ್ಯಕ್ತಿ ಕಂಪೆನಿಗೆ ತಳಕು: ವಾಸ್ತವದಲ್ಲಿ ಪೇಜರ್‌ಗಳಿಗಾಗಿ ಬಿಎಸಿ ಕನ್ಸಲ್ಟಿಂಗ್‌ ಕಂಪೆನಿಯು ತೈವಾನ್‌ನ ಗೋಲ್ಡ್‌ ಅಪೋಲೋ ಹಾಗೂ ನೋರ್ಟ ಗ್ಲೋಬಲ್‌(ಕೇರಳ ವ್ಯಕ್ತಿಯ ಕಂಪೆನಿ)ಜತೆ ಒಪ್ಪಂದ ಮಾಡಿಕೊಂಡಿತ್ತು ಎಂದು ಮೂಲಗಳನ್ನು ಉಲ್ಲೇಖೀಸಿ ಬಲ್ಗೇರಿಯಾದ ಮಾಧ್ಯಮವೊಂದು ವರದಿ ಮಾಡಿದೆ. ಪೇಜರ್‌ಗಳ ಖರೀದಿಗಾಗಿ ಈ ನೋರ್ಟ ಗ್ಲೋಬಲ್‌ ಹಣ ವರ್ಗಾವಣೆ ಮಾಡಿತ್ತು ಎಂದು ಹೇಳಲಾಗಿದೆ.

ರಿನ್ಸನ್‌ ತಂದೆ ಟೈಲರ್‌! ರಿನ್ಸನ್‌ ಜೋಸ್‌ ತಂದೆ ವಯನಾಡಿನ ಮಾನಂತವಾಡಿಯಲ್ಲಿ ಟೈಲರ್‌ ಆಗಿದ್ದಾರೆ. ಸ್ಥಳೀಯವಾಗಿ ಅವರು ಟೈಲರ್‌ ಜೋಸ್‌ ಎಂದೇ ಖ್ಯಾತರು. ನವೆಂಬರ್‌ನಲ್ಲಿ ರಿನ್ಸನ್‌ ನಮ್ಮ ಭೇಟಿಗೆ ಬಂದು 2 ತಿಂಗಳು ಇಲ್ಲಿಯೇ ಇದ್ದು ವಾಪಸ್‌ ಹೋಗಿದ್ದ. ಆತ ಯಾವ ಕಂಪೆನಿ ಹೊಂದಿದ್ದಾನೆ ಎಂದು ತಿಳಿಸಿರಲಿಲ್ಲ ಎಂದು ಅವರ ಮಾವ ತಂಕಚನ್‌ ತಿಳಿಸಿದ್ದಾರೆ.

ಕೇರಳ ವ್ಯಕ್ತಿ ಕಂಪೆನಿಗೆ
ಬಲ್ಗೇರಿಯಾ ಕ್ಲೀನ್‌ಚಿಟ್‌
ಪೇಜರ್‌ಗಳ ಸ್ಫೋಟಕ್ಕೆ ಸಂಬಂಧಿಸಿ ದಂತೆ ಬಲ್ಗೇರಿಯಾದ ರಾಷ್ಟ್ರೀಯ ಭದ್ರತಾ ಸಂಸ್ಥೆ (ಬಿಎಎನ್‌ಎಸ್‌), 2022ರಲ್ಲಿ ಆರಂಭವಾದ ಕೇರಳದ ರಿನ್ಸನ್‌ ಜೋಸ್‌ ಅವರ ಕಂಪೆನಿ ನೋರ್ಟ ಗ್ಲೋಬಲ್‌ಗೆ ಕ್ಲೀನ್‌ ಚಿಟ್‌ ನೀಡಿದೆ. ಅಲ್ಲದೆ ಬಲ್ಗೇ ರಿಯಾದ ಮೂಲಕ ಯುರೋಪ್‌ಗೆ ಈ ಪೇಜರ್‌ಗಳು ರವಾನೆಯಾಗಿರುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಸಂಸ್ಥೆ ತಿಳಿಸಿದೆ. ಬಿಎಸಿ ಕನ್ಸಲ್ಟಿಂಗ್‌ ಕೂಡ ನಕಲಿ ಕಂಪೆನಿಯಾಗಿದ್ದು, ಯಾವುದೇ ಚಟು ವಟಿಕೆಯನ್ನು ಹೊಂದಿಲ್ಲ ಎಂದು ತಿಳಿಸಿದೆ.

ಏನಿದು ಆರೋಪ?
– ಪೇಜರ್‌ ಸ್ಫೋಟದಲ್ಲಿ ವಯನಾಡು ಮೂಲದ ರಿನ್ಸನ್‌ ಜೋಸ್‌ರ ಕಂಪೆನಿ ತಳಕು.
– ಪೇಜರ್‌ ಖರೀದಿ ಸಂಬಂಧ ರಿನ್ಸನ್‌ರ ನೋರ್ಟ ಗ್ಲೋಬಲ್‌ನಿಂದ ಹಣ ವರ್ಗಾವಣೆ.
– ರಿನ್ಸನ್‌ ಜೋಸ್‌ ಕಂಪೆನಿ ಯಾವುದೇ ಪಾತ್ರವಲ್ಲ ಎಂದ ಬಲ್ಗೇರಿಯಾ ತನಿಖಾ ಸಂಸ್ಥೆ.
– ಸ್ಫೋಟಗೊಂಡ ಪೇಜರ್‌ಗಳ ಬಲ್ಗೇರಿಯಾ ಮೂಲಕ ಯುರೋಪ್‌ಗೆ ಹೋಗಿಲ್ಲ: ಸಂಸ್ಥೆ.
– ತನಿಖೆ ಹಾದಿ ತಪ್ಪಿಸಲು ಇಸ್ರೇಲ್‌ನಿಂದ ನಕಲಿ ಕಂಪೆನಿಗಳ ಸೃಷ್ಟಿ: ವರದಿಗಳು.

ಟಾಪ್ ನ್ಯೂಸ್

Mudigere: 30 ಅಡಿ ಎತ್ತರದಿಂದ ಪಂಚಾಯಿತಿ ಆವರಣಕ್ಕೆ ಬಿದ್ದ ಕಾರು… ಮೂವರ ಸ್ಥಿತಿ ಗಂಭೀರ

Mudigere: 30 ಅಡಿ ಎತ್ತರದಿಂದ ಪಂಚಾಯಿತಿ ಆವರಣಕ್ಕೆ ಬಿದ್ದ ಕಾರು… ಮೂವರ ಸ್ಥಿತಿ ಗಂಭೀರ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮುಲ್ ಸ್ಪಷ್ಟನೆ

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

ISREL

Israel- ಹೆಜ್ಬುಲ್ಲಾ ನಡುವೆ ಬಾಂಬ್‌ಗಳ ಸುರಿಮಳೆ! ; 100 ರಾಕೆಟ್‌ ಲಾಂಚರ್‌ ಧ್ವಂಸ

Chinese Zoo: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ…

China: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ: ಬೌ.. ಬೌ.. ಎಂದಾಗಲೇ ಗೊತ್ತು

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

ನಟಿಯಾಗುವ ಕನಸು ಕಂಡಿದ್ದ ದ್ರುವಿ ಪಟೇಲ್ ಗೆ ‘ಮಿಸ್ ಇಂಡಿಯಾ ವರ್ಲ್ಡ್‌ವೈಡ್ 2024’ ಕಿರೀಟ

ನಟಿಯಾಗುವ ಕನಸು ಕಂಡಿದ್ದ ಧ್ರುವಿ ಪಟೇಲ್ ಗೆ ‘Miss India Worldwide 2024’ ಕಿರೀಟ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Mudigere: 30 ಅಡಿ ಎತ್ತರದಿಂದ ಪಂಚಾಯಿತಿ ಆವರಣಕ್ಕೆ ಬಿದ್ದ ಕಾರು… ಮೂವರ ಸ್ಥಿತಿ ಗಂಭೀರ

Mudigere: 30 ಅಡಿ ಎತ್ತರದಿಂದ ಪಂಚಾಯಿತಿ ಆವರಣಕ್ಕೆ ಬಿದ್ದ ಕಾರು… ಮೂವರ ಸ್ಥಿತಿ ಗಂಭೀರ

Langoti Man Movie Review

Langoti Man Movie Review: ಸಂಪ್ರದಾಯದ ಕೊಂಡಿಯಲ್ಲಿ ಲಂಗೋಟಿ!

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.