AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್: ದ.ಆಫ್ರಿಕಾಗೆ 177 ರನ್ ಅಂತರದ ಸೋಲು
Team Udayavani, Sep 21, 2024, 10:09 AM IST
ಶಾರ್ಜಾ: ದಕ್ಷಿಣ ಆಫ್ರಿಕಾ (South Africa) ತಂಡವನ್ನು ಸತತ ಎರಡು ಏಕದಿನ ಪಂದ್ಯಗಳಲ್ಲಿ ಸೋಲುಣಿಸಿದ ಅಫ್ಘಾನಿಸ್ಥಾನ ತಂಡವು (Team Afghanistan) ಐತಿಹಾಸಿಕ ಸರಣಿ ಗೆಲುವು ಸಾಧಿಸಿದೆ. ಶುಕ್ರವಾರ (ಸೆ.20) ನಡೆದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 177 ರನ್ ಗಳ ಬೃಹತ್ ಅಂತರದಲ್ಲಿ ಸೋಲನುಭವಿಸಿದೆ.
ಶಾರ್ಜಾದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡವು ರೆಹಮನುಲ್ಲಾ ಗುರ್ಬಾಜ್ (Rahmanullah Gurbaz) ಶತಕದ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿದರೆ, ದ.ಆಫ್ರಿಕಾ ತಂಡವು ಸ್ಪಿನ್ ದಾಳಿಗೆ ಸಿಲುಕಿ ಕೇವಲ 134 ರನ್ ಗೆ ಆಲೌಟಾಯಿತು. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಒಂದು ಪಂದ್ಯ ಉಳಿದಿರುವಂತೆ ತನ್ನ ವಶಕ್ಕೆ ಪಡೆಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಅಫ್ಘಾನ್ ಗೆ ಗುರ್ಬಾಜ್ ಮತ್ತು ರಿಯಾಜ್ ಹಸನ್ ಮೊದಲ ವಿಕೆಟ್ 88 ರನ್ ಜೊತೆಯಾಟವಾಡಿ ಆಧರಿಸಿದರು. ಎರಡನೇ ವಿಕೆಟ್ ಗೆ ಗುರ್ಬಾಜ್ ಜತೆ ಸೇರಿದ ರೆಹಮತ್ 100 ರನ್ ಜೊತೆಯಾಟವಾಡಿದರು. ಏಕದಿನ ಕ್ರಿಕೆಟ್ ನ ಏಳನೇ ಶತಕ ಬಾರಿಸಿದ ಗುರ್ಬಾಜ್ 105 ರನ್ ಗಳಿಸಿದರು. ರೆಹಮತ್ 50 ರನ್ ಮಾಡಿದರೆ, ಅಜ್ಮತುಲ್ಲಾಹ್ ಅಜೇಯ 86 ರನ್ ಮಾಡಿದರು.
312 ರನ್ ಗುರಿ ಬೆನ್ನತ್ತಿದ್ದ ದ.ಆಫ್ರಿಕಾ ನಾಯಕ ಬವುಮಾ ಮತ್ತು ಟೊನಿ ಡಿ ಜೋರ್ಜಿ ಮೊದಲ ವಿಕೆಟ್ ಗೆ 72 ರನ್ ಕಲೆ ಹಾಕಿದರು. ಬವುಮಾ 38 ಮತ್ತು ಟೊನಿ 31 ರನ್ ಮಾಡಿದರು. ಆದರೆ ಬಳಿಕ ಯಾವುದೇ ಆಟಗಾರ ನಿಂತು ಆಡಲಿಲ್ಲ. ರೀಜಾ ಹೆಂಡ್ರಿಕ್ಸ್ (17 ರನ್) ಏಡನ್ ಮಾರ್ಕ್ರಮ್ (21 ರನ್) ಗಳಿಸಿದ್ದು ಬಿಟ್ಟರೆ ಉಳಿದ್ಯಾರು ಎರಡಂಕಿ ಮೊತ್ತವನ್ನೂ ಕಲೆ ಹಾಕಲಿಲ್ಲ. ಕೊನೆಗೆ 34.2 ಓವರ್ ಗಳಲ್ಲಿ ಆಫ್ರಿಕಾ ಕೇವಲ 134 ರನ್ ಗೆ ಆಲೌಟಾಯಿತು.
ಅಫ್ಘಾನಿಸ್ಥಾನದ ಪರ ರಶೀದ್ ಖಾನ್ ಮತ್ತು ನಂಗೆಯಲಿಯಾ ಖರೋಟೆ ಸ್ಪಿನ್ ದಾಳಿ ನಡೆಸಿ ಹರಿಣಗಳ ಬ್ಯಾಟರ್ ಗಳನ್ನು ಕಟ್ಟಿ ಹಾಕಿದರು. ರಶೀದ್ ಖಾನ್ ಕೇವಲ 19 ರನ್ ನೀಡಿ 5 ವಿಕೆಟ್ ಕಿತ್ತರೆ, ನಂಗೆಯಲಿಯಾ ಖರೋಟೆ ನಾಲ್ಕು ವಿಕೆಟ್ ಪಡೆದರು. ರಶೀದ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ದಾಖಲೆ ಬರೆದ ಗುರ್ಬಾಜ್
ಶತಕ ಬಾರಿಸಿ ಮಿಂಚಿದ ಆರಂಭಿಕ ಆಟಗಾರ ರೆಹಮನುಲ್ಲಾ ಗುರ್ಬಾಜ್ ಏಕದಿನ ಕ್ರಿಕೆಟ್ ನಲ್ಲಿ ಅಫ್ಘಾನ್ ಪರ ಅತಿ ಹೆಚ್ಚು ಶತಕ ಬಾರಿಸಿದ ಬ್ಯಾಟರ್ ಎಂಬ ಖ್ಯಾತಿಗೆ ಪಾತ್ರರಾದರು. ಇದು ಗುರ್ಬಾಜ್ ಬಾರಿಸಿದ ಏಳನೇ ಶತಕ. ಅವರು ಆರು ಶತಕ ಬಾರಿಸಿದ್ದ ಮೊಹಮದ್ ಶೆಹಜಾದ್ ಅವರನ್ನು ಹಿಂದಿಕ್ಕಿದರು. ಇಬ್ರಾಹಿಂ ಜದ್ರಾನ್ ಮತ್ತು ರೆಹಮತ್ ಶಾ ತಲಾ ಐದು ಏಕದಿನ ಶತಕ ಹೊಡೆದಿದ್ದಾರೆ.
23 ವರ್ಷ ವಯಸ್ಸಿನ ಮೊದಲ ಅತಿ ಹೆಚ್ಚು ಏಕದಿನ ಶತಕ ಬಾರಿಸಿದವರ ಪಟ್ಟಿಯಲ್ಲಿ ಗುರ್ಬಾಜ್ ಮೂರನೇ ಸ್ಥಾನಕ್ಕೇರಿದರು. ಭಾರತದ ಸಚಿನ್ ತೆಂಡೂಲ್ಕರ್ ಮತ್ತು ದ.ಆಫ್ರಿಕಾದ ಕ್ವಿಂಟನ್ ಡಿಕಾಕ್ 23 ವರ್ಷದ ಮೊದಲು ಎಂಟು ಶತಕ ಹೊಡೆದಿದ್ದರು. ವಿರಾಟ್ ಕೊಹ್ಲಿ ಏಳು, ಬಾಬರ್ ಅಜಂ ಮತ್ತು ಉಪುಲ್ ತರಂಗ ತಲಾ ಆರು ಶತಕ ಬಾರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.