Desi Swara: ಮೊಂತಿ ಆಚರಣೆ- ವರ್ಷದ ಮೊದಲ ಸುಗ್ಗಿ ಸಂಭ್ರಮ
ಕೊಂಕಣಿ ಕೂಟ ರೆಜಿನಾ ಅಸೋಸಿಯೇಶನ್
Team Udayavani, Sep 21, 2024, 12:54 PM IST
ರೆಜಿನಾ(ಕೆನಡಾ): ಕೊಂಕಣಿ ಕೂಟ ರೆಜಿನಾ ಅಸೋಸಿಯೇಶನ್ (ಕೆಕೆಆರ್) ತನ್ನ 2ನೇ ವರ್ಷದ ಮೊಂತಿ ಹಬ್ಬವನ್ನು ಸೆ.8ರಂದು ಸಾಸ್ಕಾಚೆವನ್ ಕೆನಡಾದ ರೆಜಿನಾದಲ್ಲಿರುವ ಹೋಲಿ ಟ್ರಿನಿಟಿ ಚರ್ಚ್ ಹಾಲ್‌ನಲ್ಲಿ ಆಚರಿಸಿತು. ಮೊಂತಿ ಹಬ್ಬದ ಆಚರಣೆಯು ಕರಾವಳಿ ಕರ್ನಾಟಕದ ಕ್ಯಾಥೋಲಿಕ್ ಸಮುದಾಯದಲ್ಲಿ ತನ್ನ ಸಂಪ್ರದಾಯವನ್ನು ಆಳವಾಗಿ ಬೇರೂರಿದೆ. ಈ ಹಬ್ಬವು ಕೆನಡಾ ದೇಶದಲ್ಲಿ ಆಚರಿಸುವ ಥ್ಯಾಂಕ್ಸ್ ಗಿವಿಂಗ್ ( ಅಕ್ಟೋಬರ್ ಎರಡನೇ ವಾರದಲ್ಲಿ) ಹಬ್ಬವನ್ನು ಹೋಲುತ್ತದೆ ಮತ್ತು ಭಾರತದಲ್ಲಿ ಇದನ್ನು ಕೇರಳದಲ್ಲಿ ಓಣಂ, ತಮಿಳುನಾಡಿನಲ್ಲಿ ಪೊಂಗಲ್, ನಾಗ ಪಂಚಮಿ ಹೀಗೆ ವಿವಿಧ ರೂಪದಲ್ಲಿ ಆಚರಿಸಲಾಗುತ್ತದೆ. ಮಾತೆ ಮೇರಿಯ ಜನ್ಮ ದಿನವನ್ನು ಆಚರಿಸುವುದು ಮತ್ತು ಋತುವಿನ ಮೊದಲ ಸುಗ್ಗಿ ಫಲವನ್ನು ಆನಂದಿಸುವುದು ಈ ಹಬ್ಬದ ಮೂಲತತ್ತ್ವ ವಾಗಿದೆ.
ಕರಾವಳಿಯ ಕ್ಯಾಥೋಲಿಕ್ ಸಮುದಾಯದವರು ಮಾತೆ ಮೇರಿ ಜನ್ಮದಿನದಂದು ಜಗತ್ತನ್ನು ರಕ್ಷಿಸುವ ಯೇಸುಕ್ರಿಸ್ತನನ್ನು ತಮಗೆ ಉಡುಗೊರೆಯಾಗಿ ನೀಡಿದಕ್ಕೆ ಮತ್ತು ಉತ್ತಮ ರೀತಿಯಲ್ಲಿ ಋತುವಿನ ಹೊಸ ಬೆಳೆಯನ್ನು ಒದಗಿಸಿದಕ್ಕಾಗಿ ಮೇರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಈ ಸಮಯದಲ್ಲಿ ಹೊಸ ಬೆಳೆಯನ್ನು ಭಕ್ತರಿಗೆ ಆಶೀರ್ವಾದದ ರೂಪದಲ್ಲಿ ನೀಡಲಾಗುತ್ತದೆ ಮತ್ತು ಇದನ್ನು ಪಡೆದವರು ತಮ್ಮ ತಮ್ಮ ಮನೆಗಳಲ್ಲಿ ಕುಟುಂಬದವರೊಂದಿಗೆ ಮಾತೆ ಮೇರಿಯ ಜನ್ಮ ದಿನವನ್ನು ಆಚರಿಸುತ್ತಾರೆ.
ಡೀನಾ ಲೋಬೋ ಲೂಯಿಸ್ ಸ್ವಾಗತಿಸಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಮ್ಮ ಸ್ವಾಗತ ಭಾಷಣದಲ್ಲಿ ಅವರು ಪ್ಯಾರಿಸ್ ಪ್ರಿಸ್ಟ್ ಹೋಲಿ ಟ್ರಿನಿಟ್ ಚರ್ಚ್‌ನಾ ಪಾದರ್ ಜಾಸ್ಪರ್, ಕೂಟದ ಸದಸ್ಯರು ಮತ್ತು ಅತಿಥಿಗಳನ್ನು ಸ್ವಾಗತಿಸಿ, ಸ್ಥಳೀಯ ಹಬ್ಬದ ಸಾರ ಮತ್ತು ಮಹತ್ವವನ್ನು ಎತ್ತಿ ತೋರಿಸಿದರು.
ಪಾದರ್ ಜಾಸ್ಪರ್ ಹೊಸ ಬೆಳೆಗಳಿಗೆ ಆಶೀರ್ವದಿಸಿದರು. ಅನಂತರ ಕೆಕೆಆರ್ ಅಸೋಸಿಯೇಶನ್ ಸದಸ್ಯರಿಂದ ಪ್ರಾರ್ಥನೆ ಮತ್ತು ಶ್ಲೋಕ ಗೀತೆಗಳನ್ನು ಹಾಡಲಾಯಿತು. ಭಕ್ತರು ಪುಷ್ಪಗಳನ್ನು ಅರ್ಪಿಸುವ ಮೂಲಕ ಮಾತೆ ಮೇರಿಯ ಆಶೀರ್ವಾದ ಪಡೆದರು. ನೆರೆದಿದ್ದ ಭಕ್ತರಿಗೆ ಹೊಸ ಬೆಳೆ( ನೊವೆಮ್)ಯ ಹಾಲು ನೀಡಲಾಯಿತು. ಧಾರ್ಮಿಕ ಕಾರ್ಯಕ್ರಮದ ಅನಂತರ ಸಾಂಸ್ಕೃತಿಕ ಮತ್ತು ಮನೋರಂಜನ ಕಾರ್ಯಕ್ರಮಗಳು ನಡೆದವು.
ಕೆಕೆಆರ್ ಅಸೋಸಿಯೇಶನ್ ಸದಸ್ಯರು ಪ್ರೀತಿ ಮತ್ತು ಸಮರ್ಪಣ ಭಾವದಿಂದ ತಯಾರಿಸಿದ ವಿವಿಧ ಬಗೆಯ ಆಹಾರವನ್ನು ಫಾದರ್ ಜಸ್ಪರ್ ಆಶೀರ್ವದಿಸಿದರು. ಊಟದ ಅನಂತರ ಟೀನಾ ಅವರ ನೇತೃತ್ವದಲ್ಲಿ ಕ್ರೀಡೆ ಮತ್ತುಮನೋರಂಜನ ಕಾರ್ಯಕ್ರಮಗಳು ನಡೆದವು.
ಫಾದರ್ ಜಾಸ್ಪರ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಮನೆಗಳಿಂದ ದೂರವಿದ್ದರು ಕೆನಡಾದ ರೆಜಿನಾದಲ್ಲಿ ಪ್ರಾಮಾಣಿಕ ಪ್ರಯತ್ನದಿಂದ ಮೊಂತಿ ಹಬ್ಬವನ್ನು ಆಚರಿಸಿದ ಪ್ರತಿಯೊಬ್ಬರನ್ನು ಅಭಿನಂದಿಸಿದರು ಮತ್ತು ಪ್ರತೀ ವರ್ಷವು ಈ ರೀತಿ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ನಡೆಸುವಂತೆ ಕೆಕೆಆರ್ ಅಸೋಸಿಯೇಶನ್‌ಗೆ ತಿಳಿಸಿದರು. ಕ್ರಿಸ್ ಡಿ’ಸೋಜಾ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾದ ಕೆಕೆಆರ್ ಅಸೋಸಿಯೇಶನ್ ಸದಸ್ಯರುಗಳಿಗೆ ಧನ್ಯವಾದ ಅರ್ಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.