Desi Swara:ರಾಯರು ಬಂದರು ಐರ್ಲೆಂಡ್‌ ಕಡೆಗೆ-ಶ್ರೀ ಗುರುರಾಘವೇಂದ್ರ ಸ್ವಾಮಿಗಳ 353ನೇ ಆರಾಧನೆ

ಧರ್ಮದ ಪರಂಪರೆ ಹಾಗೂ ಸಂಸ್ಕೃತಿಯ ಬಗೆಗಿನ ಗೌರವ ಹೆಚ್ಚಾಗಿದೆ

Team Udayavani, Sep 21, 2024, 3:12 PM IST

Desi Swara:ರಾಯರು ಬಂದರು ಐರ್ಲೆಂಡ್‌ ಕಡೆಗೆ-ಶ್ರೀ ಗುರುರಾಘವೇಂದ್ರ ಸ್ವಾಮಿಗಳ 353ನೇ ಆರಾಧನೆ

ಪ್ರತೀ ವರ್ಷ ರಾಯರ ಆರಾಧನೆಗೆ ಮಠಕ್ಕೆ ಹೋಗಿ ಪೂಜೆ ಸಲ್ಲಿಸುವುದು ಅಭ್ಯಾಸವೇ ಆಗಿತ್ತು. ಈ ವರ್ಷ ನಾನು ಐರ್ಲೆಂಡ್‌ನ‌ಲ್ಲಿ ಇರುವ ಕಾರಣ ರಾಯರ ದರ್ಶನ ಸಿಗೋದಿಲ್ಲ ಎಂದು ಅಂದುಕೊಳ್ಳುವಷ್ಟರಲ್ಲಿ ರಾಯರೇ ಐರ್ಲೆಂಡ್‌ಗೆ ಬಂದಿದ್ದಾರೆ. ಅದೊಂದು ಕ್ಷಣ ರಾಯರ ಪವಾಡವೇ ಅನಿಸಿತು. ಇದಕ್ಕೆಲ್ಲ ಕಾರಣ ಜಿಬಿ ಮತ್ತು ಎಸ್‌ಆರ್‌ಎಸ್‌ಬಿ (ಗ್ರೇಟ್‌ ಬ್ರಿಟನ್‌ ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ, ಸ್ಲೋಕ್‌, ಯುಕೆ) ಸಂಘದ ಶ್ರೀಹರಿ, ಪ್ರಹ್ಲಾದ್‌, ಗೋಪಿ ಆಚಾರ್ಯ, ಗುರುರಾಜ ಹಾಗೂ ಲಿಮೆರಿಕ್‌ನ ಪವನ್‌ ಗುರುರಾಜ ರಾವ್‌, ಕೃಷ್ಣ ಮೂರ್ತಿ, ಮೋಹನ್‌ ಕುಮಾರ್‌, ಸಚಿನ್‌ ಕದಡಿ ಇವರಿಗೆ ಅನಂತಾನಂತ ಧನ್ಯವಾದಗಳು.

ಐರ್ಲೆಂಡ್‌ನ‌ಲ್ಲಿ ಮೊದಲ ಬಾರಿಗೆ ಶ್ರೀ ಗುರುರಾಘವೇಂದ್ರ ಸ್ವಾಮಿಗಳ 353ನೇ ಆರಾಧನೆ ಆ.31ರಂದು ವಿಜೃಂಭಣೆಯಿಂದ ನೆರ ವೇರಿತು. ಐರ್ಲೆಂಡ್‌ನ‌ ಲಿಮೆರಿಕ್‌ ನಗರದಲ್ಲಿರುವ ಅಹೆನ್‌ ಜಿಎಎ ಕ್ಲಬ್‌ನ ಕಮ್ಯೂನಿಟಿ ಹಾಲ್‌ನಲ್ಲಿ ನಡೆದ ಈ ಪವಿತ್ರ ಉತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡು ತಮ್ಮ ಭಕ್ತಿ ಹಾಗೂ ನಂಬಿಕೆ ತೋರಿಸಿದರು.

ಜಿಬಿ ಮತ್ತು ಎಸ್‌ಆರ್‌ಎಸ್‌ಬಿ ಸಂಘ ಟನೆಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆ, ಪೂರ್ಣಬೋಧ ಶ್ರೀ ರಾಘವೇಂದ್ರ ಸ್ತೋತ್ರ, ಕನಕಾಭಿಷೇಕ, ಪಂಚಾಮೃತ ಅಭಿಷೇಕ, ಪಲ್ಲಕ್ಕಿ ಉತ್ಸವ, ರಾಯರ ಪ್ರಸಾದ ವಿತರಣೆ ಹಾಗೂ ಹಲವಾರು ದೇವತಾ ಕಾರ್ಯಗಳು ಜರಗಿದವು. ಬೃಂದಾವನದ ಅಲಂಕಾರ ನೋಡಲು ಎರಡು ಕಣ್ಣು ಸಾಲದಂತಾಗಿತ್ತು.

ಬಾಳೆಎಲೆ ಊಟ ಮಾಡಿ ವರ್ಷವೇ ಆಗಿತ್ತು. ಕಡ್ಲೆಬೇಳೆ ಪಾಯಸ, ಹಯ ಗ್ರೀವ, ರಸಾಯನ, ವಾಂಗೀಬಾತ್‌, ಹುರಳಿಕಾಯಿ ಪಲ್ಯ, ಕೋಸಂಬರಿ… ಆಹಾ ಈಗಲೂ ನಾಲಿಗೆಗೆ ಮರೆಯಲಾಗದ ರುಚಿ. ಅಡುಗೆ ಮಾಡಿದ ಶ್ರೀಹರಿ, ಸಚಿನ್‌, ಗುರುರಾಜ್‌ ಅವರಿಗೆ ನಮೋ ನಮಃ. ಸಭೆಯಲ್ಲಿ ಮಾತನಾಡಿದ ಸಂಘಟಕರು “ಈ ಅಧ್ಯಾತ್ಮಿಕ ಕಾರ್ಯಕ್ರಮದಿಂದ ಕನ್ನಡಿಗರ ಒಂದುಗೂಡಿಸುವ ಸಂದೇಶ ನೀಡಿದ್ದು, ಇದರಿಂದ ಭಕ್ತರಲ್ಲಿ ಹಿಂದೂ ಧರ್ಮದ ಪರಂಪರೆ ಹಾಗೂ ಸಂಸ್ಕೃತಿಯ ಬಗೆಗಿನ ಗೌರವ ಹೆಚ್ಚಾಗಿದೆ’ ಎಂದು ಅಭಿಪ್ರಾಯಪಟ್ಟರು.

ಕನ್ನಡಿಗರ ಹಬ್ಬ, ಉತ್ಸವ, ಆರಾಧನೆಗಳಿಗೆ ಈಗಲೂ ವಿಶೇಷ ಮಹತ್ವವಿದೆ ಎಂಬುದಕ್ಕೆ ಈ ರಾಯರ ಆರಾಧನೆ ನಿಖರವಾಗಿ ಸಾಬೀತಾಗಿದೆ. ಇಂತಹ ಪುಣ್ಯಕಾರ್ಯಗಳು ಐರ್ಲೆಂಡ್‌ನ‌ಲ್ಲೂ ನೆರವೇರುಸಿತ್ತುರುವುದು ಒಂದು ವಿಶೇಷವೇ.

ಈ ರಾಯರ ಆರಾಧನೆ ಅಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬವೇ ಆಗಿದ್ದು, ಮುಂದಿನ ವರ್ಷಗಳಲ್ಲೂ ಇದೇ ರೀತಿಯ ಉತ್ಸವವನ್ನು ನಡೆಸಲು ಪ್ರತಿಜ್ಞೆ ಮಾಡಲಾಯಿತು. ಇಂತಹ ಕಾರ್ಯಕ್ರಮಗಳು ಬಾಂಧವ್ಯದ ಭಾವನೆ ಹಾಗೂ ಸಮಾಜವನ್ನು ಮತ್ತಷ್ಟು ಸಶಕ್ತ ಗೊಳಿಸುವಂತೆ ಮಾಡಲಿವೆ ಎಂದು ಭಕ್ತರು ಸಂತೋಷ ವ್ಯಕ್ತಪಡಿಸಿದರು. ನಮ್ಮ ಗೆಲುವಿನೆಡೆಗೆ ನಡೆಸುವ ಧೈರ್ಯ ತುಂಬುವ ಏಕೈಕ ಮಾತು, ಮಂತ್ರ ರಾಯರಿದ್ದಾರೆ. ಹರೇ ಶ್ರೀನಿವಾಸ.

*ಪ್ರೀತಮ್‌ ಬಾಬು, ಐರ್ಲೆಂಡ್

ಟಾಪ್ ನ್ಯೂಸ್

BBK11: ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಇರಲಿದೆ ಸ್ವರ್ಗ- ನರಕದ ಕಿಚ್ಚು.. ಹೊಸ ಪ್ರೋಮೊ ಔಟ್

BBK11: ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಇರಲಿದೆ ಸ್ವರ್ಗ- ನರಕದ ಕಿಚ್ಚು.. ಹೊಸ ಪ್ರೋಮೊ ಔಟ್

1-frr

Munirathna ವಿರುದ್ಧದ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರಕಾರ

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

1-dsad

Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್‌ನಲ್ಲಿ ಸಿಲುಕಿಕೊಂಡ ಮಹಿಳೆ!!

CHandrababu-Naidu

Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು

Theetrhalli–Sunil

Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ! 

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adsdasd

America; ಮಕ್ಕಳ ಆಸ್ಪತ್ರೆಗಾಗಿ ನಿಧಿ ಸಂಗ್ರಹಕ್ಕೆ ನಾಟ್ಯ ಸೇವಾ ಕಾರ್ಯಕ್ರಮ

Desi Swara: ಯುಎಐಯಲ್ಲಿ “ನಮ್ಮವರು ವಿಶ್ವಕರ್ಮ ಸಮಿತಿ’ ಉದ್ಘಾಟನೆ

Desi Swara: ಯುಎಐಯಲ್ಲಿ “ನಮ್ಮವರು ವಿಶ್ವಕರ್ಮ ಸಮಿತಿ’ ಉದ್ಘಾಟನೆ

Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ

Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ

Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

Desi Swara: ಸೌಪರ್ಣಿಕಾ ನದಿ ತೀರದಲ್ಲಿ- ಏಕಾಂತದಿ ತೆರೆದ ನೆನೆಪಿನ ಗುಚ್ಛಗಳು

Desi Swara: ಸೌಪರ್ಣಿಕಾ ನದಿ ತೀರದಲ್ಲಿ- ಏಕಾಂತದಿ ತೆರೆದ ನೆನೆಪಿನ ಗುಚ್ಛಗಳು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

BBK11: ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಇರಲಿದೆ ಸ್ವರ್ಗ- ನರಕದ ಕಿಚ್ಚು.. ಹೊಸ ಪ್ರೋಮೊ ಔಟ್

BBK11: ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಇರಲಿದೆ ಸ್ವರ್ಗ- ನರಕದ ಕಿಚ್ಚು.. ಹೊಸ ಪ್ರೋಮೊ ಔಟ್

1-bcci

INDvBAN Day 3: 515 ರನ್ ಚೇಸ್ ; ಬಾಂಗ್ಲಾ 4 ವಿಕೆಟ್ ನಷ್ಟಕ್ಕೆ 158 ರನ್

Bantwal: ನೇಣು ಬಿಗಿದು ಆತ್ಮಹತ್ಯೆ

Bantwal: ನೇಣು ಬಿಗಿದು ಆತ್ಮಹತ್ಯೆ

9

Uppur: ಮೃತದೇಹ ಪತ್ತೆ

8

Bantwal: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.