Test Cricket: ಲಂಕಾ-ನ್ಯೂಜಿಲ್ಯಾಂಡ್‌ ಟೆಸ್ಟ್‌ ಪಂದ್ಯಕ್ಕೆ ರೆಸ್ಟ್‌


Team Udayavani, Sep 21, 2024, 7:40 PM IST

7

ಗಾಲೆ: ಶ್ರೀಲಂಕಾ ಮತ್ತು ನ್ಯೂಜಿಲ್ಯಾಂಡ್‌ ನಡುವಿನ ಗಾಲೆ ಟೆಸ್ಟ್‌ ಪಂದ್ಯಕ್ಕೆ ಶನಿವಾರ ವಿಶ್ರಾಂತಿ ದಿನವಾಗಿತ್ತು. ದ್ವೀಪರಾಷ್ಟ್ರದಲ್ಲಿ ಶನಿವಾರ ಅಧ್ಯಕ್ಷೀಯ ಚುನಾವಣೆ ನಡೆದಿದ್ದು, ಲಂಕಾ ಕ್ರಿಕೆಟಿಗೆ ಸಂಬಂಧಿಸಿದವರೆಲ್ಲ ಮತದಾನದಲ್ಲಿ ಭಾಗಿಯಾಗಲು ಅನುಕೂಲವಾಗುವಂತೆ ವಿಶ್ರಾಂತಿ ನೀಡಲಾಗಿತ್ತು. ಮತ ಚಲಾಯಿಸಲು ಕೆಲವು ಕ್ರಿಕೆಟಿಗರು ಗಾಲೆಯಿಂದ 225 ಕಿ.ಮೀ. ದೂರದ ಕ್ಯಾಂಡಿಗೆ ತೆರಳಿದ್ದರು.

ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ 35 ರನ್ನುಗಳ ಸಣ್ಣ ಮುನ್ನಡೆ ಗಳಿಸಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್‌ ನಡೆಸುತ್ತಿರುವ ಶ್ರೀಲಂಕಾ 4ಕ್ಕೆ 237 ರನ್‌ ಮಾಡಿದ್ದು, 3ನೇ ದಿನದಾಟದ ಅಂತ್ಯಕ್ಕೆ 202 ರನ್‌ ಲೀಡ್‌ ಹೊಂದಿದೆ.

ಶ್ರೀಲಂಕಾದ 305 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬು ನೀಡಿದ ನ್ಯೂಜಿಲ್ಯಾಂಡ್‌ 340 ರನ್‌ ಗಳಿಸಿತು. ಪ್ರವಾಸಿಗರ ಕೊನೆಯ 5 ವಿಕೆಟ್‌ಗಳನ್ನು 49 ರನ್‌ ಅಂತರದಲ್ಲಿ ಉರುಳಿಸಿದ ಲಂಕಾ, ಭಾರೀ ಹಿನ್ನಡೆಯಿಂದ ಪಾರಾಯಿತು.

ನ್ಯೂಜಿಲ್ಯಾಂಡ್‌ 4ಕ್ಕೆ 255 ರನ್‌ ಗಳಿಸಿದಲ್ಲಿಂದ ದಿನದಾಟ ಮುಂದುವರಿಸಿತ್ತು. ಉಳಿದ 6 ವಿಕೆಟ್‌ಗಳಿಂದ ಕಿವೀಸ್‌ಗೆ ಗಳಿಸಲು ಸಾಧ್ಯವಾದದ್ದು 85 ರನ್‌ ಮಾತ್ರ. ಪ್ರಭಾತ್‌ ಜಯಸೂರ್ಯ 4 ವಿಕೆಟ್‌, ರಮೇಶ್‌ ಮೆಂಡಿಸ್‌ 3 ಮತ್ತು ಧನಂಜಯ ಡಿ ಸಿಲ್ವ 2 ವಿಕೆಟ್‌ ಉರುಳಿಸಿದರು. ಡ್ಯಾರಿಲ್‌ ಮಿಚೆಲ್‌ 57, ಗ್ಲೆನ್‌ ಫಿಲಿಪ್ಸ್‌ ಔಟಾಗದೆ 49 ರನ್‌ ಮಾಡಿದರು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆರಂಭಕಾರ ನಿಸ್ಸಂಕ (2) ಅವರನ್ನು ಶ್ರೀಲಂಕಾ ಬೇಗನೆ ಕಳೆದುಕೊಂಡಿತು. ದರೆ ದಿಮುತ್‌ ಕರುಣಾರತ್ನೆ (83) ಮತ್ತು ದಿನೇಶ್‌ ಚಂಡಿಮಾಲ್‌ (61) ಸೇರಿಕೊಂಡು 147 ರನ್‌ ಜತೆಯಾಟ ನಡೆಸುವಲ್ಲಿ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-305 ಮತ್ತು 4 ವಿಕೆಟಿಗೆ 237. ನ್ಯೂಜಿಲ್ಯಾಂಡ್‌-249.

ಟಾಪ್ ನ್ಯೂಸ್

mogasale

Felicitation ceremony: ಡಾ| ನಾ. ಮೊಗಸಾಲೆ ಪ್ರತಿಭೆ, ಪರಿಶ್ರಮ ಅನನ್ಯ: ಡಾ| ಹೆಗ್ಗಡೆ

Puttige-Shree

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಿ ಅಪಚಾರ: ಪರ್ಯಾಯ ಪುತ್ತಿಗೆ ಶ್ರೀ

Mangalore-Taxi-meet

Mangaluru: ಪ್ಯಾನಿಕ್‌ ಬಟನ್‌, ಜಿಪಿಎಸ್‌ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ

Tiger-Hunasuru

Nagarhole Park Tiger Fight: ಹುಲಿಗಳ ಕಾದಾಟ ಗಂಡು ಹುಲಿಗೆ ಗಾಯ!

Vijayapura-Sainik

Vijayapura: ನೌಕಾಪಡೆ ಅನೇಕ ಕಾರ್ಯಾಚರಣೆಯಲ್ಲಿದ್ದ ಹೆಲಿಕಾಪ್ಟರ್ ಸೈನಿಕ ಶಾಲೆಯಲ್ಲಿ ಸ್ಥಾಪನೆ

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

1-ammi

J&K Assembly polls; ಈಗ ಪಾಕಿಸ್ಥಾನವು ಮೋದಿಗೆ ಹೆದರುತ್ತಿದೆ: ಅಮಿತ್ ಶಾ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hangzhou Open: ಪ್ರಶಾಂತ್‌-ಜೀವನ್‌ ಸೆಮಿಗೆ

Hangzhou Open: ಪ್ರಶಾಂತ್‌-ಜೀವನ್‌ ಸೆಮಿಗೆ

AFC U20 Asian Cup Qualifiers: ಅಂಡರ್‌-20 ಏಷ್ಯಾ ಅರ್ಹತಾ ಫುಟ್‌ಬಾಲ್‌ಗೆ ಭಾರತ ತಂಡ

AFC U20 Asian Cup Qualifiers: ಅಂಡರ್‌-20 ಏಷ್ಯಾ ಅರ್ಹತಾ ಫುಟ್‌ಬಾಲ್‌ಗೆ ಭಾರತ ತಂಡ

Duleep Trophy: ಇಂಡಿಯಾ ಎ, ಡಿ  ತಂಡಗಳಿಗೆ 300 ಲೀಡ್‌

Duleep Trophy: ಇಂಡಿಯಾ ಎ, ಡಿ  ತಂಡಗಳಿಗೆ 300 ಲೀಡ್‌

Chess Olympiad: ಭಾರತದ ಗೆಲುವಿಗೆ ಬ್ರೇಕ್‌

Chess Olympiad: ಭಾರತದ ಗೆಲುವಿಗೆ ಬ್ರೇಕ್‌

1-bcci

INDvBAN Day 3: 515 ರನ್ ಚೇಸ್ ; ಬಾಂಗ್ಲಾ 4 ವಿಕೆಟ್ ನಷ್ಟಕ್ಕೆ 158 ರನ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

mogasale

Felicitation ceremony: ಡಾ| ನಾ. ಮೊಗಸಾಲೆ ಪ್ರತಿಭೆ, ಪರಿಶ್ರಮ ಅನನ್ಯ: ಡಾ| ಹೆಗ್ಗಡೆ

subharamaya-Swamiji

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ಪದಾರ್ಥಗಳ ಬಳಕೆ: ಸುಬ್ರಹ್ಮಣ್ಯ ಸ್ವಾಮೀಜಿ ಕಳವಳ

Puttige-Shree

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಿ ಅಪಚಾರ: ಪರ್ಯಾಯ ಪುತ್ತಿಗೆ ಶ್ರೀ

Mangalore-Taxi-meet

Mangaluru: ಪ್ಯಾನಿಕ್‌ ಬಟನ್‌, ಜಿಪಿಎಸ್‌ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ

R Ashok (2)

BJP; ವಿಪಕ್ಷ ನಾಯಕ ಆರ್‌. ಅಶೋಕ್‌ ನಡೆಗೆ ಕಾಂಗ್ರೆಸ್‌ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.