BJP; ಬೇಗುದಿಗೆ ವರಿಷ್ಠರ ಸೂತ್ರ : ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆ ಇಲ್ಲ

ಒಪ್ಪುತ್ತಾರೆಯೇ ಭಿನ್ನರು?

Team Udayavani, Sep 22, 2024, 6:58 AM IST

Vijayendra (2)

 

ಬೆಂಗಳೂರು: ರಾಜ್ಯ ಬಿಜೆಪಿಯ ಎರಡು ಬಣಗಳ ನಡುವೆ ಹೊಂದಾಣಿಕೆ ತರುವುದು ಬಿಜೆಪಿ ವರಿಷ್ಠರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಸದ್ಯಕ್ಕೆ “ಕೊಡು-ಬಿಡು’ ತಂತ್ರಕ್ಕೆ ಶರಣಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಯ ಬೇಡಿಕೆಯನ್ನು ತಿರಸ್ಕರಿಸಿರುವ ವರಿಷ್ಠರು ಕೋರ್‌ ಕಮಿಟಿ ಪುನಾರಚನೆ ಹಾಗೂ ಸಂಘಟನ ಪ್ರಧಾನ ಕಾರ್ಯದರ್ಶಿ ನೇಮಕಕ್ಕೆ ಒಪ್ಪಿದ್ದಾರೆ. ಈ ಮೂಲಕ ಭಿನ್ನರ ಬಣದ ಬೇಡಿಕೆಗೆ ವರಿಷ್ಠರು ಭಾಗಶಃ ಒಪ್ಪಿದಂತಾಗಿದೆ.

ಕಳೆದ ವಾರ ನಡೆದ ಸಂಘದ ಸಮನ್ವಯ ಸಭೆಯ ಬಳಿಕ ರಾಜ್ಯದ ವಾಸ್ತವ ಸ್ಥಿತಿಗತಿ ಬಗ್ಗೆ ವರಿಷ್ಠರಿಗೆ ವರದಿ ಸಲ್ಲಿಕೆಯಾಗಿದೆ. ಆದರೆ ರಾಜಿ ಆಗಬೇಕಿದ್ದ ರಾಜ್ಯ ಘಟಕದ ಉಭಯ ಬಣಗಳು ಮಾತ್ರ ಇನ್ನೂ ಮುಖಾಮುಖೀ ಆಗಿಲ್ಲ. ನಾಗಮಂಗಲಕ್ಕೆ ಭೇಟಿ ನೀಡಿದ್ದನ್ನು ಬಿಟ್ಟರೆ ಬಿಜೆಪಿಯ ಇತ್ತಂಡ ಒಟ್ಟಿಗೆ ಸೇರಿಲ್ಲ. ಆದರೆ ವರಿಷ್ಠರು ಮಾತ್ರ ಸಂಘಟನ ದೃಷ್ಟಿಯಿಂದ ಮದ್ದು ಅರೆಯುವುದಕ್ಕೆ ಪ್ರಯತ್ನವನ್ನು ಪ್ರಾರಂಭಿಸಿದ್ದಾರೆ.

2 ಸಲಹೆ ಕೇಳಿದ್ದ ವರಿಷ್ಠರು
ಸಭೆಯ ಬಳಿಕ ಭಿನ್ನರ ಬಣದ ಮುಖಂಡರೊಬ್ಬರಿಗೆ ರಾಜ್ಯ ಬಿಜೆಪಿಯ ಸುಧಾರಣೆಗಾಗಿ “ನಿಮ್ಮ ಎರಡು ಸಲಹೆಗಳನ್ನು ಬರೆದುಕೊಡಿ’ ಎಂದು ಸಂಘದ ಹಿರಿಯರು ಸೂಚಿಸಿದ್ದರು. “ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆ ಮಾಡುವುದು’ ಎಂಬುದು ಎರಡು ಸಲಹೆಗಳ ಪೈಕಿ ಮೊದಲನೆಯದಾಗಿತ್ತು. ಇದಕ್ಕೆ ಕಡ್ಡಿ ತುಂಡು ಮಾಡಿದಂತೆ “ಅಸಾಧ್ಯ’ ಎಂಬ ಉತ್ತರ ಕಳುಹಿಸಲಾಗಿದೆ. ಈ ಮೂಲಕ ವಿಜಯೇಂದ್ರ ಅವರ ಬದಲಾವಣೆಯನ್ನು ಬಯಸುತ್ತಿದ್ದವರಿಗೆ ಹೊಂದಿಕೊಂಡು ಹೋಗಿ ಎಂಬ ಸಂದೇಶವನ್ನು ವರಿಷ್ಠರು ಹಾಗೂ ಸಂಘ ನೀಡಿದಂತಾಗಿದೆ. ಸದ್ಯಕ್ಕೆ ಈ ಉತ್ತರ ವಿಜಯೇಂದ್ರ ಬಣದಲ್ಲಿ “ಸಂತೋಷ’ ಮೂಡಿಸಿದೆ.

ಕೋರ್‌ ಕಮಿಟಿ ಪುನಾರಚನೆಗೆ ಅಸ್ತು
ಇವೆಲ್ಲವುಗಳ ಮಧ್ಯೆ ಪಕ್ಷದ ವ್ಯವಸ್ಥೆ ಸರಿಪಡಿಸುವುದಕ್ಕಾಗಿ ಕೋರ್‌ ಕಮಿಟಿ ಪುನಾರಚನೆಗೆ ವರಿಷ್ಠರು ಹಸುರು ನಿಶಾನೆ ತೋರಿದ್ದಾರೆ ಎಂದು ಬಿಜೆಪಿ ಉನ್ನತ ಮೂಲಗಳು ಖಚಿತಪಡಿಸಿವೆ. ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್‌ ದಾಸ್‌ ಅಗರ್ವಾಲ್‌ ಅವರು ಹಾಲಿ ಕೋರ್‌ ಕಮಿಟಿ ಸದಸ್ಯರ ಪಟ್ಟಿಯನ್ನು ತರಿಸಿಕೊಂಡಿದ್ದಾರೆ. ಪ್ರದೇಶ ಹಾಗೂ ಜಾತಿ ಸಮೀಕರಣದ ಆಧಾರದ ಮೇಲೆ ಅತೀ ಶೀಘ್ರದಲ್ಲೇ ಪರಿಷ್ಕೃತ ಪಟ್ಟಿ ಬಿಡುಗಡೆಯ ಭರವಸೆ ನೀಡಲಾಗಿದೆ. ಈ ಸಮಿತಿಯಲ್ಲಿ ನಿರೀಕ್ಷೆಯಂತೆ ವಿಜಯೇಂದ್ರ ವಿರೋಧಿ ಬಣಕ್ಕೆ ಆದ್ಯತೆ ಸಿಗುವ ಸಾಧ್ಯತೆ ಕಡಿಮೆ ಇದೆ. ಜತೆಗೆ ಸಂಘಟನ ಪ್ರಧಾನ ಕಾರ್ಯದರ್ಶಿ ನಿಯೋಜನೆಗೆ ಸಂಘದ ಹಿರಿಯರೊಬ್ಬರ ನಿಯೋಜನೆ ಪ್ರಸ್ತಾವವನ್ನು ಅಂಗೀಕರಿಸಲಾಗಿದೆ. ಈ ಮೂಲಕ ಪಕ್ಷದಲ್ಲಿ ಸಮತೋಲನ ತರುವುದಕ್ಕಾಗಿ ಸದ್ಯಕ್ಕೆ ಮಧ್ಯಮ ಮಾರ್ಗವೊಂದನ್ನು ವರಿಷ್ಠರು ಕಂಡುಕೊಂಡಂತಾಗಿದೆ.

ವರಿಷ್ಠರ ಸೂತ್ರವೇನು?
ಪ್ರದೇಶ, ಜಾತಿ ಸಮೀಕರಣದ ಮೇಲೆ ಕೋರ್‌ ಕಮಿಟಿ ರಚನೆ
ಸಂಘಟನಾ ಕಾರ್ಯದರ್ಶಿ ಹುದ್ದೆಗೆ ಸಂಘದ ಹಿರಿಯರ ನಿಯೋಜನೆ
ಡಿಸೆಂಬರ್‌ನಲ್ಲಿ ಮತ್ತೂಂದು “ಆಂತರಿಕ ಮಂಥನ’ ಸಾಧ್ಯತೆ
ಹೊಂದಿಕೊಂಡು ಹೋಗುವಂತೆ ವರಿಷ್ಠರು, ಸಂಘ ದ ಸಲಹೆ
ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಆದ್ಯತೆ ನೀಡಲು ಸೂಚನೆ

ಸಿ.ಡಿ. ಬಿಡುಗಡೆಯಿಂದ ರಮೇಶ್‌ ಜಾರಕಿಹೊಳಿ ಅವರಿಗೆ ಭಾರೀ ಅವಮಾನವಾಗಿದೆ. ಇದರ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಇದ್ದಾರೆ ಎಂಬ ಸಿಟ್ಟು ರಮೇಶ್‌ ಜಾರಕಿಹೊಳಿ ಅವರಿಗಿದೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ.-ಬಸನಗೌಡ ಪಾಟೀಲ್‌ ಯತ್ನಾಳ್‌, ಬಿಜೆಪಿ ಶಾಸಕ

ಡಿಸೆಂಬರ್‌ ಬಳಿಕ ಮತ್ತೊಮ್ಮೆ “ಮಂಥನ’
ಸದಸ್ಯತ್ವ ಅಭಿಯಾನಕ್ಕೆ ಮೊದಲ ಆದ್ಯತೆ ನೀಡುವಂತೆ ಬಿಜೆಪಿಯ ವರಿಷ್ಠರು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜ್ಯಾದ್ಯಂತ ಪ್ರವಾಸವನ್ನು ಚುರುಕುಗೊಳಿಸಿದ್ದಾರೆ. ಸದಸ್ಯತ್ವ ಅಭಿಯಾನದ ಬಳಿಕ ಡಿಸೆಂಬರ್‌ ತಿಂಗಳಲ್ಲಿ ಮತ್ತೂಂದು ಬಾರಿ “ಆಂತರಿಕ ಮಂಥನ’ ನಡೆಸುವ ಸಾಧ್ಯತೆ ಇದೆ. ಇದು ಸುಧಾರಣೆ ಮಾಡಿಕೊಳ್ಳುವುದಕ್ಕಾಗಿ ಎರಡು ಬಣಗಳಿಗೆ ನೀಡಿದ ಅಂತಿಮ ಗಡುವು ಎಂದೇ ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

Gangolli; ಮಹಾಂಕಾಳಿ ದೇಗುಲದ ಚಿನ್ನಾಭರಣ ಕಳವು; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದ ಅರ್ಚಕ

Gangolli; ಮಹಾಂಕಾಳಿ ದೇಗುಲದ ಚಿನ್ನಾಭರಣ ಕಳವು; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದ ಅರ್ಚಕ

Development of 2-dose vaccine for HIV prevention: MIT

HIV vaccine; ಎಚ್‌ಐವಿ ತಡೆಗೆ 2 ಡೋಸ್‌ ಲಸಿಕೆ ಅಭಿವೃದ್ಧಿ: ಎಂಐಟಿ

India’s first bullet train to be made in Bangalore?

Bullet Train; ಬೆಂಗಳೂರಿನಲ್ಲೇ ತಯಾರಾಗಲಿದೆ ದೇಶದ ಮೊದಲ ಬುಲೆಟ್‌ ರೈಲು?

Ma’nene; ಪ್ರತಿ ವರ್ಷ ಶ*ವಗಳಿಗೆ ವಿಶಿಷ್ಟ ಗೌರವ!: ಅಚ್ಚರಿಗೊಳಪಡಿಸುವ ಸಂಪ್ರದಾಯ

Ma’nene;ಸ್ಮಶಾನದಲ್ಲಿದ್ದ ಶವ ಮನೆಗೆ ತಂದು ಸಂಭ್ರಮಿಸ್ತಾರೆ! ಇದು ವಿಚಿತ್ರ ಅಚ್ಚರಿ ಸಂಪ್ರದಾಯ

ಮುಂಜಾನೆ ಮನೆಗೆ ನುಗ್ಗಿ ಪುಣೆ ಉದ್ಯಮಿಯ ಹತ್ಯೆ ; ಪತ್ನಿಗೂ ಗಂಭೀರ ಗಾಯ

Karwar: ಮುಂಜಾನೆ ಮನೆಗೆ ನುಗ್ಗಿ ಉದ್ಯಮಿಯ ಹತ್ಯೆ ; ಪತ್ನಿಗೂ ಗಂಭೀರ ಗಾಯ

Duleep trophy

Duleep trophy: ಇಂಡಿಯಾ ಸಿ, ಬಿ ಮಧ್ಯೆ ಪ್ರಶಸ್ತಿಗೆ ಪೈಪೋಟಿ; ಯಾರಿಗೆ ಸಿಗಲಿದೆ ಟ್ರೋಫಿ? 

We are not against anyone…: PM Modi at Quad Summit

Quad Summit; ನಾವು ಯಾರ ವಿರುದ್ದವೂ ಅಲ್ಲ…: ಕ್ವಾಡ್ ಸಭೆಯಲ್ಲಿ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಜಾನೆ ಮನೆಗೆ ನುಗ್ಗಿ ಪುಣೆ ಉದ್ಯಮಿಯ ಹತ್ಯೆ ; ಪತ್ನಿಗೂ ಗಂಭೀರ ಗಾಯ

Karwar: ಮುಂಜಾನೆ ಮನೆಗೆ ನುಗ್ಗಿ ಉದ್ಯಮಿಯ ಹತ್ಯೆ ; ಪತ್ನಿಗೂ ಗಂಭೀರ ಗಾಯ

School bag

School; ಶೀಘ್ರವೇ ಶಾಲಾ ಮಕ್ಕಳಿಗೆ ಆ್ಯಪ್‌ ಆಧಾರಿತ ಹಾಜರಾತಿ?

BY-Vijayendra

Government Failure: ಹಿಂದೂಗಳ ಮೇಲೆ ಕಾಂಗ್ರೆಸ್‌ ಸರಕಾರ ದಬ್ಬಾಳಿಕೆ: ಬಿಜೆಪಿ

Thavar chand gehlot

Karnataka Govt; ರಾಜ್ಯಪಾಲ ಅರ್ಕಾವತಿ ಬಾಣ :ಕಾಳಗ ಈಗ ಮತ್ತೊಂದು ಸುತ್ತಿಗೆ!

1-qwewqwqe

World Book of Records; ಪ್ರಜಾಪ್ರಭುತ್ವ ಮಾನವ ಸರಪಳಿಗೆ ವಿಶ್ವದಾಖಲೆ ಗರಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

2

Crime: ಪ್ರೇಯಸಿ ಜತೆ ಸುತ್ತಾಡಿದ್ದಕ್ಕೆ ಹತ್ಯೆಗೈದ ಪ್ರಿಯಕರ!

Gangolli; ಮಹಾಂಕಾಳಿ ದೇಗುಲದ ಚಿನ್ನಾಭರಣ ಕಳವು; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದ ಅರ್ಚಕ

Gangolli; ಮಹಾಂಕಾಳಿ ದೇಗುಲದ ಚಿನ್ನಾಭರಣ ಕಳವು; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದ ಅರ್ಚಕ

Arrested: ಐಪಿಎಸ್‌ ಅಧಿಕಾರಿ ಪುತ್ರನ ಮೇಲೆ ಹಲ್ಲೆ; ಇಬ್ಬರ ಬಂಧನ

Arrested: ಐಪಿಎಸ್‌ ಅಧಿಕಾರಿ ಪುತ್ರನ ಮೇಲೆ ಹಲ್ಲೆ; ಇಬ್ಬರ ಬಂಧನ

Development of 2-dose vaccine for HIV prevention: MIT

HIV vaccine; ಎಚ್‌ಐವಿ ತಡೆಗೆ 2 ಡೋಸ್‌ ಲಸಿಕೆ ಅಭಿವೃದ್ಧಿ: ಎಂಐಟಿ

India’s first bullet train to be made in Bangalore?

Bullet Train; ಬೆಂಗಳೂರಿನಲ್ಲೇ ತಯಾರಾಗಲಿದೆ ದೇಶದ ಮೊದಲ ಬುಲೆಟ್‌ ರೈಲು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.