World Book of Records; ಪ್ರಜಾಪ್ರಭುತ್ವ ಮಾನವ ಸರಪಳಿಗೆ ವಿಶ್ವದಾಖಲೆ ಗರಿ
ಉಡುಪಿ ಜಿಲ್ಲೆ 234 ಕಿ.ಮೀ. ಮಾನವ ಸರಪಳಿ; ಅತೀ ಉದ್ದದ್ದು ಎಂಬ ಹೆಗ್ಗಳಿಕೆ
Team Udayavani, Sep 22, 2024, 6:55 AM IST
ಬೆಂಗಳೂರು: ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲ ಪಡಿಸುವ ಉದ್ದೇಶದಿಂದ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಪ್ರಜಾಪ್ರಭುತ್ವ ದಿನಾ ಚರಣೆ ಅಂಗವಾಗಿ ಇತ್ತೀಚೆಗೆ ರಾಜ್ಯವ್ಯಾಪಿ ಹಮ್ಮಿ ಕೊಂಡಿದ್ದ ಮಾನವ ಸರಪಳಿ ಕಾರ್ಯಕ್ರಮ ವಿಶ್ವದಾಖಲೆ ಪುಟ ಸೇರು ವುದರ ಜತೆಗೆ ದೇಶಕ್ಕೆ ಹೊಸ ಸಂದೇಶವನ್ನು ರವಾನಿಸುವಲ್ಲಿ ಯಶಸ್ವಿಯಾಗಿದೆ.
ಸಂವಿಧಾನದ ಆಶಯಗಳನ್ನು ಗಟ್ಟಿ ಗೊಳಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಮಾನವ ಸರಪಳಿ ಕಾರ್ಯಕ್ಕೆ ಇಡೀ ದೇಶ ಹೆಮ್ಮೆಪಟ್ಟಿದ್ದು, ಆ ಮೂಲಕ ಸರಕಾರದ ಉದ್ದೇಶ ಸಾರ್ಥಕವಾಗಿದೆ. ಒಂದಾಗಿ ಬಾಳುವ ಮಂತ್ರವನ್ನು ಪಠಿಸುವುದರ ಜತೆಗೆ ವೈವಿಧ್ಯ ದಲ್ಲಿ ಏಕತೆಯ ಸಂದೇಶ ವನ್ನು ಇಡೀ ಮನು ಕುಲಕ್ಕೆ ಸಾರಿದೆ.
ಸೆ. 15ರಂದು ಬೀದರ್‌ನಿಂದ ಚಾಮ ರಾಜ ನಗರದವರೆಗೆ ಮಾನವ ಸರಪಳಿ ಸೃಷ್ಟಿಯಾಗಿ ಕುವೆಂಪು ಅವರ “ಮನುಷ್ಯ ಜಾತಿ ತಾನೊಂದೇ ವಲಂ’ ಸಂದೇಶವನ್ನು ಇಡೀ ವಿಶ್ವಕ್ಕೆ ನೆನಪಿಸಿತು. ಸುಮಾರು 2,500 ಕಿ.ಮೀ. ಮಾನವ ಸರಪಳಿ ನಿರ್ಮಿಸಿ “ನಾವೆಲ್ಲರೂ ಒಂದೇ’ ಎಂಬ ಸಂದೇಶವನ್ನು ಎಲ್ಲೆಡೆ ಪಸರಿಸಲಾಯಿತು.
ಶಾಲಾ ಕಾಲೇಜು ಮಕ್ಕಳಿಂದ ಹಿಡಿದು ಹಿರಿಯರವರೆಗೆ 25 ಲಕ್ಷಕ್ಕೂ ಹೆಚ್ಚು ಮಂದಿ ಮಾನವ ಸರಪಳಿಯಲ್ಲಿ ಭಾಗವಹಿಸಿ ವಿಶ್ವದಾಖಲೆ ಪುಟ ಸೇರುವಂತೆ ಮಾಡಿದರು.
ಸರಕಾರಕ್ಕೆ ವಿಶ್ವ ದಾಖಲೆ ಆರಂಭಿಕ ಪುರಸ್ಕಾರ
ಮಾನವ ಸರಪಳಿ ಹಬ್ಬದಲ್ಲಿ ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಶಿಕ್ಷಣ ಇಲಾಖೆ ಸಹಿತ 8 ಇಲಾಖೆಗಳು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದವು. ಉಳಿದ 25ಕ್ಕೂ ಹೆಚ್ಚು ಇಲಾಖೆಗಳು ನಾನಾ ರೀತಿಯಲ್ಲಿ ತಮ್ಮದೇ ಸಹಭಾಗಿತ್ವ ನೀಡಿ ಸರಕಾರದ ಸದುದ್ದೇಶವನ್ನು ಸಫಲಗೊಳಿಸಿದವು. 25 ಲಕ್ಷಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸಿ ಮಾನವ ಸರಪಳಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಇಂಥ ಯಶಸ್ವಿ ಪ್ರಯೋಗ ವಿಶ್ವದಲ್ಲೇ ಪ್ರಥಮ ಬಾರಿಗೆ ನಡೆದಿದ್ದು, ಇದಕ್ಕೆ ವಿಶ್ವ ದಾಖಲೆ ಆರಂಭಿಕ ಪುರಸ್ಕಾರ ಲಭಿಸಿದೆ. ಲಂಡನ್‌ನಲ್ಲಿರುವ ವಿಶ್ವ ದಾಖಲೆ ಸಂಸ್ಥೆಯ ಕರ್ನಾಟಕ ಪ್ರತಿನಿಧಿ ಶೈಲಜಾ ಅವರು ಬೆಂಗಳೂರಿನಲ್ಲಿ ನಡೆದ ಬೃಹತ್ ಹಾಗೂ ವರ್ಣರಂಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರ ಹೆಸರಿನಲ್ಲಿ ಪುರಸ್ಕಾರ ನೀಡಿ ಗೌರವಿಸಿದರು.
ಮೆಚ್ಚುಗೆಗೆ ಪಾತ್ರವಾದ ಜಿಲ್ಲೆಗಳು
ರಾಜ್ಯದ 31 ಜಿಲ್ಲೆಗಳ ಪೈಕಿ ಗದಗ ಜಿಲ್ಲೆಯಲ್ಲಿ 2,18,891 ಮಂದಿ ಭಾಗವಹಿಸಿದ್ದು, ಅತೀ ಹೆಚ್ಚು, ಶೇ. 21 ಜನರ ಭಾಗವಹಿಸುವಿಕೆಯೊಂದಿಗೆ ಮುಂಚೂಣಿ ಜಿಲ್ಲೆ ಎಂಬ ಹೆಗ್ಗಳಿಕೆ ಪಾತ್ರವಾಯಿತು. ಉಡುಪಿ ಜಿಲ್ಲೆಯಲ್ಲಿ 234 ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಿಸಿದ್ದು, ಇದು ಅತೀ ಉದ್ದದ ಮಾನವ ಸರಪಳಿ ಎಂಬ ಹೆಗ್ಗಳಿಕೆ ಗಳಿಸಿದೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವಿಶೇಷ ವಿನ್ಯಾಸದ ಹಾಗೂ ವಿಭಿನ್ನ ಸಂದೇಶಗಳನ್ನು ಸಾರುವ ಉಡುಗೆ-ತೊಡುಗೆ, ವೇಷಭೂಷಣ ಹಾಗೂ ಕಲಾ ಪ್ರಕಾರಗಳ ಬಳಕೆ ಮಾಡಿ ಪ್ರಜಾಪ್ರಭುತ್ವದ ಮಹತ್ವ ಸಾರಲಾಯಿತು. ಸಂವಿಧಾನದ ಪೀಠಿಕೆ ಓದಿ ಜಾಗೃತಿ ಮೂಡಿಸಲಾಯಿತು. ಐತಿಹಾಸಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯ ವ್ಯಾಪಿ ಸುಮಾರು 10 ಲಕ್ಷ ಗಿಡಗಳನ್ನು° ನೆಡಲಾಯಿತು. ರಾಜಧಾನಿ ಬೆಂಗಳೂರಿನಲ್ಲಿ ಹೊಸಕೋಟೆಯಿಂದ ಹೆಜ್ಜಾಲದ ವರೆಗೆ 60 ಸಾವಿರ ಜನರಿಂದ 92 ಕಿ.ಮೀ. ಮಾನವ ಸರಪಳಿ ಸೃಷ್ಟಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕಾರ್ಯಕ್ಕೆ ಕೈ ಜೋಡಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.