Bullet Train; ಬೆಂಗಳೂರಿನಲ್ಲೇ ತಯಾರಾಗಲಿದೆ ದೇಶದ ಮೊದಲ ಬುಲೆಟ್ ರೈಲು?
Team Udayavani, Sep 22, 2024, 10:11 AM IST
ನವದೆಹಲಿ: ದೇಶದ ಮೊದಲ ಬುಲೆಟ್ ರೈಲು ಬೆಂಗಳೂರಿನಲ್ಲಿ ತಯಾರಾಗುವ ಸಾಧ್ಯತೆಗಳಿವೆ. ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ಕರೆದಿದ್ದ ಟೆಂಡರ್‌ನಲ್ಲಿ ಬೆಮೆಲ್ ಮಾತ್ರ ಭಾಗಿಯಾಗಿದ್ದು, ಇದು ಅಂತಿಮಗೊಳ್ಳುವ ಸಾಧ್ಯತೆ ಇದೆ. ಮುಂಬೈ-ಅಹಮದಾಬಾದ್ ನಡುವಿನ ಮಾರ್ಗದಲ್ಲಿ ಈ ರೈಲು ಸಂಚಾರ ನಡೆಸಲಿದ್ದು, ಬೆಮೆಲ್‌ನ ಬೆಂಗಳೂರಿನ ಘಟಕದಲ್ಲೇ ರೈಲು ತಯಾರಾಗಲಿದೆ ಎನ್ನಲಾಗಿದೆ.
“8 ಬೋಗಿಗಳನ್ನು ಒಳಗೊಂಡಿರುವ 2 ಬುಲೆಟ್ ರೈಲುಗಳ ನಿರ್ಮಾಣಕ್ಕೆ ಬೆಮೆಲ್ ಮಾತ್ರ ಅರ್ಜಿ ಸಲ್ಲಿಸಿದೆ, 1 ವಾರದಲ್ಲಿ ಟೆಂಡರ್ ಅಂತಿಮಗೊಳ್ಳಲಿದೆ’ ಎಂದು ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯ ಮುಖ್ಯಸ್ಥ ಸುಬ್ಟಾ ರಾವ್ ಹೇಳಿದ್ದಾರೆ. ಸದ್ಯಕ್ಕೆ 2 ರೈಲು ನಿರ್ಮಾಣಕ್ಕೆ ಮಾತ್ರ ಟೆಂಡರ್ ಕರೆಯಲಾಗಿದ್ದು, ಮುಂದಿನ 2.5 ವರ್ಷಗಳಲ್ಲಿ ಪೂರ್ಣ ಗೊಳ್ಳುವ ವಿಶ್ವಾಸವಿದೆ ಎಂದಿದ್ದಾರೆ.
ರೈಲಿನ ವಿಶೇಷತೆ: ಒಟ್ಟು 8 ಬೋಗಿಗಳನ್ನು ಹೊಂದಿರುವ ಬುಲೆಟ್ ರೈಲು ಗಂಟೆಗೆ 280ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, 250 ಕಿ.ಮೀ. ವೇಗದಲ್ಲಿ ಕಾರ್ಯನಿರ್ವಹಿಸಲಿದೆ. 8ರ ಪೈಕಿ 7 ಬೋಗಿಗಳಲ್ಲಿ 3+2 ಚೇರ್ ಇರಲಿದ್ದು, 1 ಬೋಗಿಯಲ್ಲಿ 2+2 ಚೇರ್ ಇರಲಿದೆ. ಒಂದು ರೈಲಿನ ನಿರ್ಮಾಣಕ್ಕೆ 200ರಿಂದ 250 ಕೋಟಿ ರೂ. ವೆಚ್ಚವಾಗಲಿದೆ ಎಂದು ಮೂಲಗಳು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.