Dengue fever: ನಗರದಲ್ಲಿ ಡೆಂಘೀ ಹತೋಟಿಗೆ ತಂದ ಬಿಬಿಎಂಪಿ

Team Udayavani, Sep 22, 2024, 11:08 AM IST

Dengue fever: ನಗರದಲ್ಲಿ ಡೆಂಘೀ ಹತೋಟಿಗೆ ತಂದ ಬಿಬಿಎಂಪಿ

ಬೆಂಗಳೂರು: ಜನರಲ್ಲಿ ಭಯ ಹುಟ್ಟುಹಾಕಿದ್ದ ಡೆಂಘೀ ಮಣಿಸುವಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಯಶಸ್ವಿಯಾಗಿದೆ. ಮೂರ್‍ನಾಲ್ಕು ತಿಂಗಳ ಹಿಂದೆ ದಾಖಲಾಗುತ್ತಿದ್ದ ಡೆಂಘೀ ಪ್ರಕರಣಗಳ ಸಂಖ್ಯೆಗಳಿಗೆ ಹೋಲಿಸಿದರೆ ಶೇ.75 ರಷ್ಟು ಡೆಂಘೀ ರಾಜಧಾನಿಯಲ್ಲಿ ನಿಯಂತ್ರಣಕ್ಕೆ ಬಂದಿದೆ. ಪಾಲಿಕೆ ಎಂಟೂ ವಲಯಗಳಿಗೆ ಹೋಲಿಕೆ ಮಾಡಿದಾಗ ಅಪಾಯದ ಮಟ್ಟವನ್ನು ತಲುಪಿದ್ದ ಮಹದೇವಪುರ ವಲಯದಲ್ಲಿ ಡೆಂಘೀ ಸಂಖ್ಯೆ ಕ್ಷೀಣಿಸಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಎರಡ್ಮೂರು ತಿಂಗಳ ಹಿಂದೆ ಪ್ರತಿದಿನ 400 ಪ್ರಕರಣಗಳು ದಾಖಲಾಗುತ್ತಿದ್ದವು, ಇದೀಗ ನಿತ್ಯ 50 ರಿಂದ 60 ಡೆಂಘೀ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈ ಸಂಖ್ಯೆ ಮತ್ತಷ್ಟು ಗಣನೀಯ ಇಳಿಕೆಯಾಗುವ ನಿರೀಕ್ಷೆ ಇದೆ. ಡೆಂಘೀ ನಿಯಂತ್ರಣ ನಿಟ್ಟಿನಲ್ಲಿ ಪಾಲಿಕೆ ಭಿನ್ನ ಕ್ರಮಗಳನ್ನು ಸೂಕ್ತ ಸಮಯದಲ್ಲಿ ವಹಿಸಿದ್ದು ಹತೋಟಿಗೆ ಕಾರಣ ಎನ್ನಲಾಗಿದೆ.

ಈ ಹಿಂದೆ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು 12,625 ಡೆಂಘೀ ಪ್ರಕರಣಗಳು ದಾಖಲಾಗಿದ್ದವು. ಆದರೆ ಆಗಸ್ಟ್‌ನಲ್ಲಿ ಈ ಸಂಖ್ಯೆ 11,525 ಕ್ಕೆ ಇಳಿಕೆಯಾಯಿತು. ಸೆಪ್ಟೆಂಬರ್‌ನಲ್ಲಿ ಆರಂಭದಲ್ಲಿ 1,100 ಹೊಸ ಪ್ರಕರಣಗಳು ದಾಖಲಾಗಿವೆ. ಡೆಂ à ಹತೋಟಿಗೆ ತರುವ ಕೆಲಸ ನಡೆದಿದೆ. ನಗರದಲ್ಲಿ ಸೊಳ್ಳೆ ನಿಯಂತ್ರಿಸಲು ನಿರಂತರವಾಗಿ ಫಾಗಿಂಗ್‌ ವ್ಯವಸ್ಥೆ, ಸ್ವಚ್ಛತೆ ಅರಿವು, ಕೊಳೆಗೇರಿ ಪ್ರದೇಶಗಳಲ್ಲಿ ಓವಿ ಟ್ರ್ಯಾಪ್‌ ಅಳವಡಿಕೆ, ಮನೆ ಮನೆಗೆ ಭೇಟಿ ನೀಡಿ ಲಾರ್ವಾ ಪತ್ತೆ, ಡ್ರೈ ಡೇ ಆಚರಣೆ ಮತ್ತಿತರ ಕ್ರಮಗಳಿಂದ ಡೆಂಘೀ ನಿಯಂತ್ರಣವಾಗಿದೆ.

ಡೆಂಘೀ ಪೀಡಿತ ಮಹದೇವಪುರದಲ್ಲಿ ಇಳಿಕೆ: ಮಹದೇವಪುರ ವಲಯದಲ್ಲಿ ಡೆಂಘೀ ದಿನೇ ದಿನೆ ನಿಯಂತ್ರಣಕ್ಕೆ ಬರುತ್ತಿದೆ. ಡೆಂಘೀ ಪೀಡಿತ ಪ್ರದೇಶವೆಂದು ಹೇಳಲಾಗಿದ್ದ ಮಹದೇವಪುರದಲ್ಲಿ ಈವರೆಗೂ ಒಟ್ಟು 3,402 ಪ್ರಕರಣಗಳು ವರದಿಯಾಗಿವೆ. ಕಳೆದ ಆಗಸ್ಟ್‌-31ರ ವರೆಗೆ 3,154 ಪ್ರಕರಣಗಳು ದಾಖಲಾಗಿದ್ದವು. ಸೆಪ್ಟೆಂಬರ್‌ನಲ್ಲಿ 265 ಪ್ರಕರಣಗಳು ಪತ್ತೆಯಾಗಿದ್ದು, ಡೆಂಘೀ ಉಪಟಳ ಮತ್ತಷ್ಟು ಇಳಿಕೆಯಾಗಿದೆ. ಕಳೆದ ವಾರದಲ್ಲಿ ಈ ವಲಯದಲ್ಲಿ 116 ಹೊಸ ಪ್ರಕರಣಗಳು ವರದಿಯಾಗಿದ್ದವು. ಇತ್ತೀಚಿನ ಒಂದೆರಡು ದಿನಗಳಲ್ಲಿ ಪ್ರತಿ 24 ಗಂಟೆಗಳಲ್ಲಿ 17 ಪ್ರಕರಣಗಳು ವರದಿಯಾಗಿದೆ.

ಪೂರ್ವ ವಲಯದಲ್ಲಿ ಇಳಿಕೆ: ಬಿಬಿಎಂಪಿಯ ಪೂರ್ವ ವಲಯ ಎರಡನೇ ಅತಿ ಹೆಚ್ಚು ಡೆಂಘೀ ಪ್ರಕರಣಗಳುಳ್ಳ ಪ್ರದೇಶವಾಗಿದ್ದು ಅಲ್ಲಿ ಕೂಡ ನಿಯಂತ್ರಣ ಸಾಧಿಸಲಾಗಿದೆ. ಈವರೆಗೂ ಇಲ್ಲಿ 2,700 ಡೆಂಘೀ ಪ್ರಕರಣಗಳು ದಾಖಲಾಗಿದೆ. ಆಗಸ್ಟ್‌ನಲ್ಲಿ 2,447 ಪ್ರಕರಣಗಳು ಪತ್ತೆಯಾಗಿದ್ದವು, ಆದರೆ ಸೆಪ್ಟೆಬರ್‌ನಲ್ಲಿ ಈ ಸಂಖ್ಯೆ 253ಕ್ಕೆ ಇಳಿಕೆಯಾಯಿತು. ಪೂರ್ವ ವಲಯದಲ್ಲಿ ಕಳೆದ ವಾರದಲ್ಲಿ 104 ಮತ್ತು ಕಳೆದ 24 ಗಂಟೆಗಳಲ್ಲಿ 15 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಬೊಮ್ಮನಹಳ್ಳಿ ವಲಯದಲ್ಲಿ ಮತ್ತಷ್ಟು ಹತೋಟಿಯಲ್ಲಿದೆ.ಈವರೆಗೂ 1,364 ಪ್ರಕರಣಗಳು ವರದಿಯಾಗಿದ್ದು ಆಗಸ್ಟ್‌ -31ರ ವರೆಗೆ 1,265 ಮತ್ತು ಸೆಪ್ಟೆಂಬರ್‌ನಲ್ಲಿ 99 ಪ್ರಕರಣಗಳು ದಾಖಲಾಗಿವೆ. ಕಳೆದ ವಾರದಲ್ಲಿ 49 ಹೊಸ ಪ್ರಕರಣಗಳು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಸರಹಳ್ಳಿಯಲ್ಲಿ ಕಡಿಮೆ ಪ್ರಕರಣ: ಮಹದೇವಪುರ ವಲಯಕ್ಕೆ ಹೋಲಿಕೆ ಮಾಡಿದಾಗ ಇದಕ್ಕೆ ತದ್ವಿರುದ್ಧವಾಗಿ ದಾಸರಹಳ್ಳಿ ವಲಯದಲ್ಲಿ ಅತಿ ಕಡಿಮೆ ಪ್ರಕರಣಗಳು ದಾಖಲಾಗಿವೆ. ಈವರೆಗೂ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಕೇವಲ 160 ಪ್ರಕರಣಗಳು ಕಂಡು ಬಂದಿವೆ. ಆಗಸ್ಟ್‌ನಲ್ಲಿ 123 ಪ್ರಕರಣಗಳಿದ್ದು ಆದರೆ ಸೆಪ್ಟೆಂಬರ್‌ನಲ್ಲಿ 37 ಪ್ರಕರಣಗಳು ದಾಖಲಾಗಿವೆ. ಈ ಅಂಕಿ -ಸಂಖ್ಯೆಗಳನ್ನು ಗಮನಿಸಿದಾಗ ದಾಸರಹಳ್ಳಿ ವಲಯದಲ್ಲಿ ಡೆಂಘೀ ನಿಯಂತ್ರದಲ್ಲಿರುವುದು ತೋರುತ್ತದೆ.

ಡೆಂಘೀ ಹತೋಟಿಗೆ ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ , ಫಾಗಿಂಗ್‌ ಕಾರ್ಯಾಚರಣೆ ಮತ್ತಿತರ ಕ್ರಮಗಳ ಜತೆಗೆ ಕೊಳಗೇರಿ ಪ್ರದೇಶಗಳಲ್ಲಿ ಪ್ರಯೋಗಿಕವಾಗಿ ಓವಿ ಟ್ರ್ಯಾಪ್‌ ಅಳವಡಿಕೆ ಮಾಡಲಾಗಿದೆ. ಈ ಎಲ್ಲ ಕಾರಣದಿಂದಾಗಿ ಡೆಂ à ನಿಯಂತ್ರಣಕ್ಕೆ ಬಂದಿದೆ. ಡಾ.ಸೈಯದ್‌ ಸಿರಾಜುದ್ದೀನ್‌ ಮದನಿ, ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ

ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

Shimoga; ಎಲ್ಲರ ಮನ ಗೆದ್ದಿದ್ದ ಇಟ್ಟಿಗೆ ಹಳ್ಳಿಯ ʼ108 ಆಂಬುಲೆನ್ಸ್ʼ ಹೋರಿ ಇನ್ನಿಲ್ಲ…!

Shimoga; ಎಲ್ಲರ ಮನ ಗೆದ್ದಿದ್ದ ಇಟ್ಟಿಗೆ ಹಳ್ಳಿಯ ʼ108 ಆಂಬುಲೆನ್ಸ್ʼ ಹೋರಿ ಇನ್ನಿಲ್ಲ…!

11

KS Eshwarappa: ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೋ,ಇಲ್ಲ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ

Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ ಸುಪ್ರೀಂ ಕೋರ್ಟ್

Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ, ಸುಪ್ರೀಂ ಕೋರ್ಟ್

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

Kiccha Sudeep: ನಮ್ಮ ಚಿತ್ರರಂಗದ ಬಗ್ಗೆ ಹೆಮ್ಮೆ ಇದೆ: ಸುದೀಪ್‌

Kiccha Sudeep: ನಮ್ಮ ಚಿತ್ರರಂಗದ ಬಗ್ಗೆ ಹೆಮ್ಮೆ ಇದೆ: ಸುದೀಪ್‌

belagaviBelagavi; 2ಎ ಮೀಸಲಾತಿ ‌ವಿಚಾರವಾಗಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪಂಚಮಸಾಲಿ ಶ್ರೀ

Belagavi; 2ಎ ಮೀಸಲಾತಿ ‌ವಿಚಾರವಾಗಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪಂಚಮಸಾಲಿ ಶ್ರೀ

Viral Video: ತೆರೆದ ಬಾವಿ ಮೇಲೆ ಕೂತು ಮಹಿಳೆಯ ರೀಲ್ಸ್..‌ ಕಾಲಿನಲ್ಲಿ ನೇತಾಡಿದ ಮಗು.!

Viral Video: ತೆರೆದ ಬಾವಿ ಮೇಲೆ ಕೂತು ಮಹಿಳೆಯ ರೀಲ್ಸ್..‌ ಕಾಲಿನಲ್ಲಿ ನೇತಾಡಿದ ಮಗು.!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Crime: ಪ್ರೇಯಸಿ ಜತೆ ಸುತ್ತಾಡಿದ್ದಕ್ಕೆ ಹತ್ಯೆಗೈದ ಪ್ರಿಯಕರ!

Arrested: ಐಪಿಎಸ್‌ ಅಧಿಕಾರಿ ಪುತ್ರನ ಮೇಲೆ ಹಲ್ಲೆ; ಇಬ್ಬರ ಬಂಧನ

Arrested: ಐಪಿಎಸ್‌ ಅಧಿಕಾರಿ ಪುತ್ರನ ಮೇಲೆ ಹಲ್ಲೆ; ಇಬ್ಬರ ಬಂಧನ

parappana agrahara prison

Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್‌ ಫೋನ್‌ ಅಂಗಡಿ!

Alert Cop Averts Mishap After Bmtc Bus Driver  got chest pain

Bengaluru; ಬಸ್‌ ಡ್ರೈವರ್‌ಗೆ ಎದೆನೋವು: ಬ್ರೇಕ್‌ ಹಾಕಿ ಅಪಾಯ ತಪಿಸಿದ ಎಎಸ್‌ಐ

16-flipkart

Flipkart Big Billion Day ಸೆ. 27 ರಿಂದ ಆರಂಭ

MUST WATCH

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

ಹೊಸ ಸೇರ್ಪಡೆ

Shimoga; ಎಲ್ಲರ ಮನ ಗೆದ್ದಿದ್ದ ಇಟ್ಟಿಗೆ ಹಳ್ಳಿಯ ʼ108 ಆಂಬುಲೆನ್ಸ್ʼ ಹೋರಿ ಇನ್ನಿಲ್ಲ…!

Shimoga; ಎಲ್ಲರ ಮನ ಗೆದ್ದಿದ್ದ ಇಟ್ಟಿಗೆ ಹಳ್ಳಿಯ ʼ108 ಆಂಬುಲೆನ್ಸ್ʼ ಹೋರಿ ಇನ್ನಿಲ್ಲ…!

11

KS Eshwarappa: ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೋ,ಇಲ್ಲ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ

Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ ಸುಪ್ರೀಂ ಕೋರ್ಟ್

Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ, ಸುಪ್ರೀಂ ಕೋರ್ಟ್

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

Kiccha Sudeep: ನಮ್ಮ ಚಿತ್ರರಂಗದ ಬಗ್ಗೆ ಹೆಮ್ಮೆ ಇದೆ: ಸುದೀಪ್‌

Kiccha Sudeep: ನಮ್ಮ ಚಿತ್ರರಂಗದ ಬಗ್ಗೆ ಹೆಮ್ಮೆ ಇದೆ: ಸುದೀಪ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.