Belthangady: ತೋಡಿಗೆ ಅಡಿಕೆ ಮರವೇ ಸಂಕ!

ಬೆಳ್ತಂಗಡಿಯ ದಿಡುಪೆ ದರ್ಕಾಸು ಕೆಮ್ಮಟೆಗೆ ಬೇಕು ಶಾಶ್ವ ತ ಕಾಲುಸಂಕ 2019ರ ಮಹಾನೆರೆಗೆ ಕೊಚ್ಚಿ ಹೋಗಿದ್ದು ಮತ್ತೆ ನಿರ್ಮಾಣವಾಗಲೇ ಇಲ್ಲ

Team Udayavani, Sep 22, 2024, 12:51 PM IST

Belthangady: ತೋಡಿಗೆ ಅಡಿಕೆ ಮರವೇ ಸಂಕ!

ಬೆಳ್ತಂಗಡಿ: ಅರಣ್ಯದಂಚಿನ ಪ್ರದೇಶಗಳ ನಿವಾಸಿಗಳು ವರ್ಷದ ಹೆಚ್ಚಿನ ಸಮಯದಲ್ಲಿ ತುಂಬಿಯೇ ಇರುವ ತೊರೆ, ಹಳ್ಳಗಳನ್ನು ಅಪಾಯಕಾರಿಯಾಗಿಯೇ ದಾಟುತ್ತಿದ್ದಾರೆ. ಅದೇ ರೀತಿ ಮಲವಂತಿಗೆ ಗ್ರಾಮದ ದಿಡುಪೆ ದರ್ಕಾಸು ಸಾಗುವ ರಸ್ತೆಯ ಕೆಮ್ಮಟೆ ಸಮೀಪ ಅಡಿಕೆ ಮರಗಳೇ ಸಂಕವಾಗಿ ಆಸರೆಯಾಗಿದೆ. ಇಲ್ಲಿಗೆ ಶಾಶ್ವತ ಕಾಲು ಸಂಕದ ಬೇಡಿಕೆ ಇದೆ.

ಬೆಳ್ತಂಗಡಿ ಗ್ರಾಮದ ಅಂಚಿನಲ್ಲಿರುವ ಮಲವಂತಿಗೆ ನಿವಾಸಿಗಳಿಗೆ ಕಾಡಾನೆ, ಕಾಡುಪ್ರಾಣಿಗಳು ಕೃಷಿ ನಾಶದ ಭಯವೊಂದೆಡೆಯಾದರೆ, 2019 ನೆರೆಬಳಿಕ ಭೂ ಕುಸಿತದ ಬಳಿಕ ಆತಂಕದಲ್ಲೇ ದಿನ ದೂಡುವಂತಾಗಿದೆ. ಈ ನಡುವೆ ರಸ್ತೆ, ಕಾಲುಸಂಕದ ಕೊರತೆ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸುವಂತೆ ಮಾಡಿದೆ. ದಿಡುಪೆ ಐದು ಸೆಂಟ್ಸ್‌ ಕಾಲನಿ ಮಾರ್ಗವಾಗಿ ದರ್ಕಾಸು ಕೆಮ್ಮಟೆಗೆ ಸಾಗುವಲ್ಲಿ ಹಿಂದೆ ನಂದಿಕಾಡು ಹೊಳೆಗೆ ಅಡ್ಡಲಾಗಿ ಕಿರು ಸೇತುವೆಯೊಂದು ಮಂಡಲ ಪಂಚಾಯತ್‌ ಅವಧಿಯಲ್ಲಿ ನಿರ್ಮಾಣವಾಗಿತ್ತು. ಆದರೆ 2019ರ ನೆರೆ ಅದನ್ನು ಕೊಚ್ಚಿ ತನ್ನ ಪಾಲಾಗಿಸಿತ್ತು. ಬಳಿಕ ದಿನನಿತ್ಯದ ಓಡಾಟಕ್ಕೆ ಅಡಿಕೆ ಪಾಲದ ಕಾಲು ಸಂಕವನ್ನೇ ಅವಲಂಬಿಸಿದ್ದಾರೆ.

ಗ್ರಾಪಂ ಗೆ ಮನವಿ
ಈ ಹಿಂದೆ ಇದ್ದ ಕಿರು ಕಾಲುಸಂಕ ಬಳಿ ಮತ್ತೆ ಕಾಲು ಸಂಕ ನಿರ್ಮಿಸಿದರೆ ಎರಡೆರಡು ಬೇಕಾಗುತ್ತದೆ. ಪೆರ್ನಡ್ಕ ಹೊಳೆಗೆ ದರ್ಕಾಸು ಬಳಿ ಕಾಲುಸಂಕ ನಿರ್ಮಿಸಿದರೆ ಕೆಮ್ಮಟೆ, ಪೆರ್ನಡ್ಕ, ಪರಂಬೇರು, ಆಯರೆನಂದಿಕಾಡು ಸುತ್ತಮುತ್ತ ಅನುಕೂಲವಾಗಲಿದೆ ಎಂಬುದು ಊರವರ ಅಭಿಪ್ರಾಯ. ಅವರು ಪಂಚಾಯತ್‌ಗೆ ಈ ನಿಟ್ಟಿನಲ್ಲಿ ಮನವಿ ಮಾಡಿದ್ದಾರೆ.

ದಿನ ನಿತ್ಯದ ಓಡಾಟಕ್ಕೆ ಆತಂಕ
ಈ ಪ್ರದೇಶದಲ್ಲಿ 15ರಿಂದ 20 ಮನೆಗಳಿವೆ. ಇಲ್ಲಿನ 10ಕ್ಕೂ ಅಧಿಕ ಅಂಗನವಾಡಿ ಮಕ್ಕಳು, ಅಂಗವಿಕಲರು, ವೃದ್ಧರು ಇದೇ ಕಾಲು ಸಂಕ ಬಳಸಬೇಕಾಗಿದೆ. ಸುಮಾರು 20 ಅಡಿ ಉದ್ದ, 15 ರಿಂದ 20 ಅಡಿ ಆಳವಿರುವ ಈ ಕಾಲು ಸಂಕದಲ್ಲೇ ಆಸ್ಪತ್ರೆಗೆ, ಹೈನುಗಾರಿಕೆ, ಅಗತ್ಯ ಕಾರ್ಯಗಳಿಗೆ ದಿಡುಪೆಗೆ ಓಡಾಡಬೇಕು. ಕಾಲು ಸಂಕದವರೆಗೆ ವಾಹನ ಸಾಗಲು ಕಿರಿದಾದ ರಸ್ತೆಯಿದೆ. ಬಳಿಕ ವೃದ್ಧರನ್ನು ಆಸ್ಪತ್ರೆಗೆ ಸಾಗಿಸಲೂ ಹರಸಾಹಸ ಪಡಬೇಕಿದೆ. ಮಳೆಗಾಲದಲ್ಲಿ ನೆರೆ ಅಧಿಕವಾದರೆ ಕಾಲುಸಂಕ ಮುಳುಗುತ್ತದೆ. ಅಂಗನವಾಡಿ ಮಕ್ಕಳು ಭಯದಲ್ಲೇ ಸಾಗಿ ಒಂದುವರೆ ಕಿ.ಮೀ.ದೂರದ ಅಂಗನವಾಡಿ ಸೇರುತ್ತಿದ್ದಾರೆ.
ಗರ್ಭಿಣಿಯರು, ವೃದ್ಧರು, ಸಣ್ಣಪುಟ್ಟ ಮಕ್ಕಳು ಪಾಲದಲ್ಲಿ ಓಡಾಡುವುದು ಕಷ್ಟ. ಕೆಳಗೆ ಬದಿ ಜಾರಿಬಿದ್ದರೆ ಬಂಡೆಕಲ್ಲುಗಳ ರಾಶಿಯಿದೆ. ಮಲವಂತಿಗೆ ಗ್ರಾಪಂಗೆ ಮನವಿ ನೀಡಿದ್ದೇವೆ. ಸಂಘ ಸಂಸ್ಥೆಗಳಾದರೂ ಕಾಲು ಸಂಕ ನಿರ್ಮಿಸಿ ಕೊಟ್ಟರೆ ಸಹಕಾರವಾಗಲಿದೆ.
– ರಮೇಶ್‌ ದರ್ಕಾಸು, ಸ್ಥಳೀಯ ನಿವಾಸಿ

ಹಿಂದೆ ಇದ್ದ ಕಾಲು ಸಂಕ ನೆರೆಗೆ ಕೊಚ್ಚಿ ಹೋಗಿದೆ. ನೂತನ ಕಾಲು ಸಂಕ ನಿರ್ಮಾಣಕ್ಕೆ ಅನುದಾನ ಬಂದಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು. ಸದ್ಯ ಗ್ರಾಮ ಪಂಚಾಯತ್‌ ವತಿಯಿಂದ ಅಡಿಕೆ
ಪಾಲದ ಸಂಕ ನಿರ್ಮಿಸಿಕೊಡಲಾಗಿದೆ.
– ಪ್ರಕಾಶ್‌ ಕುಮಾರ್‌ಜೈನ್‌ ಅಧ್ಯಕ್ಷರು, ಮಲವಂತಿಗೆ ಗ್ರಾಪಂ

ಮಲವಂತಿಗೆ ಗ್ರಾಮ ಸಹಿತ ಬೆಳ್ತಂಗಡಿ ತಾಲೂಕಿನಲ್ಲಿ 70ಕ್ಕೂ ಅಧಿಕ ಸಣ್ಣಪುಟ್ಟ ಕಾಲುಸಂಕಗಳಿವೆ. ಕೆಲವು ಖಾಸಗಿ ಸ್ಥಳದಲ್ಲಿವೆ. ಅಗತ್ಯ ಅನುದಾನದಲ್ಲಿ ಸಾಧ್ಯವಾದಷ್ಟು ಅನುಕೂಲ ಕಲ್ಪಿಸಲು ಕ್ರಮ ವಹಿಸಲಾಗುವುದು.
– ಭವಾನಿ ಶಂಕರ್‌, ತಾ.ಪಂ. ಇಒ ಬೆಳ್ತಂಗಡಿ

ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

1-siddu-aa

TB Dam; ಮೈತುಂಬಿಕೊಂಡ ತುಂಗಭದ್ರೆಗೆ ಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌

1-tirupati-laddu

Tirupati laddu ಅಪವಿತ್ರ: ಎಸ್ ಐಟಿ ತನಿಖೆಗೆ ಆಗ್ರಹಿಸಿ ಸುಪ್ರೀಂನಲ್ಲಿ ಪಿಐಎಲ್ ಸಲ್ಲಿಕೆ

1-pavan

Tirupati laddu; ಪ್ರಾಯಶ್ಚಿತ ಎಂಬಂತೆ 11 ದಿನಗಳ ಉಪವಾಸ ಕೈಗೊಳ್ಳಲಿರುವ ಪವನ್ ಕಲ್ಯಾಣ್

Pushpa 2: ಅಲ್ಲು ಅರ್ಜುನ್‌ ʼಪುಷ್ಪ-2ʼನಲ್ಲಿ ಕ್ರಿಕೆಟಿಗ ಡೇವಿಡ್‌ ವಾರ್ನರ್?‌- ಫೋಟೋ ವೈರಲ್

Pushpa 2: ಅಲ್ಲು ಅರ್ಜುನ್‌ ʼಪುಷ್ಪ-2ʼನಲ್ಲಿ ಕ್ರಿಕೆಟಿಗ ಡೇವಿಡ್‌ ವಾರ್ನರ್?‌- ಫೋಟೋ ವೈರಲ್

ಟಿಟಿಡಿಯಿಂದ ನಂದಿನಿ ತುಪ್ಪಕ್ಕೆ ಮತ್ತೆ ಬೇಡಿಕೆ:‌ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್

LadduCase; ಟಿಟಿಡಿಯಿಂದ ನಂದಿನಿ ತುಪ್ಪಕ್ಕೆ ಮತ್ತೆಬೇಡಿಕೆ:‌ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್

Kadur: ಅಪ್ರಾಪ್ತ ವಯಸ್ಕ ಬಾಲಕಿಗೆ ಸಲೂನ್‌ ನಲ್ಲಿ ಲೈಂಗಿಕ ಕಿರುಕುಳ ಆರೋಪ

Kadur: ಅಪ್ರಾಪ್ತ ವಯಸ್ಕ ಬಾಲಕಿಗೆ ಸಲೂನ್‌ ನಲ್ಲಿ ಲೈಂಗಿಕ ಕಿರುಕುಳ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Panemangalore ಗ್ರಾಮ ಆಡಳಿತ ಕಚೇರಿ; ಶಿಥಿಲ ಕಟ್ಟಡದಲ್ಲೇ ಕಾರ್ಯಾಚರಣೆ

Panemangalore ಗ್ರಾಮ ಆಡಳಿತ ಕಚೇರಿ; ಶಿಥಿಲ ಕಟ್ಟಡದಲ್ಲೇ ಕಾರ್ಯಾಚರಣೆ

Belthangady: ಧರ್ಮಸ್ಥಳದಲ್ಲಿ 26 ನೇ ವರ್ಷದ ಭಜನಾ ತರಬೇತಿ ಕಮ್ಮಟ

Belthangady: ಧರ್ಮಸ್ಥಳದಲ್ಲಿ 26 ನೇ ವರ್ಷದ ಭಜನಾ ತರಬೇತಿ ಕಮ್ಮಟ

Aranthodu: ವಿದ್ಯಾರ್ಥಿಯ ಮರ್ಮಾಂಗ ಹಿಡಿದೆಳೆದು ಹಲ್ಲೆ

Aranthodu: ವಿದ್ಯಾರ್ಥಿಯ ಮರ್ಮಾಂಗ ಹಿಡಿದೆಳೆದು ಹಲ್ಲೆ

Fraud: ಕ್ರೆಡಿಟ್‌ ಕಾರ್ಡ್‌ ಆ್ಯಕ್ಟಿವೇಶನ್‌ ಹೆಸರಲ್ಲಿ ವಂಚನೆ

Fraud: ಕ್ರೆಡಿಟ್‌ ಕಾರ್ಡ್‌ ಆ್ಯಕ್ಟಿವೇಶನ್‌ ಹೆಸರಲ್ಲಿ ವಂಚನೆ

Kumapala

Legislative Council: ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹ: ಕುಂಪಲ

MUST WATCH

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

ಹೊಸ ಸೇರ್ಪಡೆ

1-siddu-aa

TB Dam; ಮೈತುಂಬಿಕೊಂಡ ತುಂಗಭದ್ರೆಗೆ ಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌

1-dddasasa

Paris; ಸಂಗೀತ ಕಾರ್ಯಕ್ರಮದಲ್ಲಿ ಭಾರತೀಯ ಗಾಯಕನ ಮೇಲೆ ಮೊಬೈಲ್ ಎಸೆತ!

POlice

Huvina Hadagali: ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ; ಪ್ರಕರಣ ದಾಖಲು

1-tirupati-laddu

Tirupati laddu ಅಪವಿತ್ರ: ಎಸ್ ಐಟಿ ತನಿಖೆಗೆ ಆಗ್ರಹಿಸಿ ಸುಪ್ರೀಂನಲ್ಲಿ ಪಿಐಎಲ್ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.