Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

ಕಳರಿ ತುಳುನಾಡ ಕಲೆ: ಹಲವು ಪುರಾವೆಗಳು ಲಭ್ಯ; ಗದ್ದೆ ನಡುವೆ ಇದೆ ನಾನಯರ ಸಮಾಧಿ

Team Udayavani, Sep 22, 2024, 1:39 PM IST

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

ಕಾಪು: ಪಾಂಗಾಳದ ನಾನಯರ ಗರಡಿಯಲ್ಲಿ  ಕಳರಿ ಸೇರಿದಂತೆ ಸಮರ ಕಲೆಗಳನ್ನು ಅಧ್ಯಯನ ಮಾಡಿದ್ದ  ತುಳುನಾಡಿನ ಅವಳಿ ವೀರರಾದ ಕೋಟಿ-ಚೆನ್ನಯರು ಈಜುತ್ತಿದ್ದರು ಎಂದು ಹೇಳಲಾದ ಕಟ್ಟಿಕೆರೆ ಮತ್ತು ನಾನಯರ ಸಮಾಧಿಗಳು ಈಗಲೂ ಇವೆ. ಇದರ ಜತೆಗೆ  ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರಸಿದ್ಧಿ ಪಡೆದಿರುವ ಕಳರಿ ಸಮರಾಭ್ಯಾಸ ಕಲೆಗೆ ತುಳುನಾಡು ಮೂಲವಾಗಿತ್ತು ಎಂಬುದಕ್ಕೆ ಪೂರಕವಾಗಿಯೂ ಕೆಲವು ದಾಖಲೆಗಳು  ಒದಗಿವೆ.

16ನೇ ಶತಮಾನದಲ್ಲಿ ಪಾಂಗಾಳದ ನಾನಯರ ಗುರುಮಠದ ಗುರುಗಳಾದ ಕಿನ್ನಿಂಗದೇವ ನಾನಯರ ಸಲಹೆಯಂತೆ ಅವರ ಶಿಷ್ಯಂದಿರಾದ ಬಲಿಪ ನಾನಯ ಮತ್ತು ಪಿಲಿಪ ನಾನಯ ಅವರು, ಕೋಟಿ-ಚೆನ್ನಯರಿಗೆ  ಯುದ್ಧ ವಿದ್ಯೆಗಳನ್ನು ಕಲಿಸಿದ್ದರು. ತುಳುನಾಡಿನಲ್ಲಿ ಮಲ್ಲ ವಿದ್ಯೆಯನ್ನು ಕಲಿಸುವ ಹಲವಾರು ಗರಡಿಗಳಿದ್ದವು. ಇಲ್ಲಿ ಮೂರು ವರ್ಷದ ತರಬೇತಿ ನೀಡುತ್ತಿದ್ದು ಇದನ್ನು ಕೇರಳದಲ್ಲಿ ತುಳುನಾಡನ್‌ ವಿದ್ಯೆ ಎಂದು ಕರೆಯುತ್ತಿದ್ದರು. ಈ ಮಲ್ಲ ವಿದ್ಯೆಗಳಿಗಾಗಿ ಮಲ್ಲಕಂಬಗಳನ್ನು ಬಳಸಲಾಗುತ್ತಿತ್ತು. ತುಳುನಾಡಿನ ಹಲವಾರು ಗರೋಡಿಗಳಲ್ಲಿ ಕಾಣಸಿಗುವ ಗುರು ಕಂಬಗಳಿಗೂ, ಕಳರಿ ಸಮರಾಭ್ಯಾಸದ ಮಲ್ಲ ಕಂಬಗಳಿಗೂ ಪರಸ್ಪರ ಸಂಬಂಧಗಳಿವೆ.

ಮಲಯಾಳಿ ಸಾಹಿತ್ಯದಲ್ಲೂ ಉಲ್ಲೇಖ: ಮಾರ್ಷಲ್‌ ಆರ್ಟ್‌ಗೆ ಸಮಾನವಾಗಿರುವ ಕಳರಿ ಸಮರ ಕಲೆಯು ನಮ್ಮ ತುಳುನಾಡಿನ ಮೂಲ ಕಲೆ ಎನ್ನುವುದನ್ನು ವಿದೇಶಿ ಸಂಶೋಧಕರೂ ಒಪ್ಪಿಕೊಂಡಿದ್ದಾರೆ. ತುಳುನಾಡಿನಿಂದ ಉತ್ತರ ಕೇರಳಕ್ಕೆ ಹೋಗಿ, ಅಲ್ಲಿಂದ ದಕ್ಷಿಣ ತಮಿಳುನಾಡಿನವರೆಗೂ ವ್ಯಾಪಿಸಿರುವ ಕಳರಿ ಕಲೆಯ ಬಗ್ಗೆ ಈಗಾಗಲೇ ಹಲವಾರು ರೀತಿಯ ಅಧ್ಯಯನಗಳು ನಡೆದಿವೆ. ಬಹುತೇಕ ರಾಜ್ಯಗಳ ಸಂಗಮ ಸಾಹಿತ್ಯಗಳಲ್ಲಿ ಕಳರಿ ವಿದ್ಯೆಗಳ ಬಗ್ಗೆ ಉಲ್ಲೇಖವಿದ್ದು ಮಲಯಾಳಿ ಸಾಹಿತ್ಯಗಳಲ್ಲೂ ಇದರ ಬಗ್ಗೆ ಉಲ್ಲೇಖವಿದೆ ಎನ್ನುತ್ತಾರೆ ಕಳರಿ ಸಮರಾಭ್ಯಾಸದ ಬಗ್ಗೆ ಅಧ್ಯಯನಶೀಲರಾಗಿರುವ ಪತ್ರಕರ್ತ, ಚಿಂತಕ ಶ್ರೀಕಾಂತ್‌ ಶೆಟ್ಟಿ ಕಾರ್ಕಳ. ಈ ನಡುವೆ, ಕಳರಿ ಕಲೆಯೇ ಕರಾಟೆ ಆಗಿರಬಹುದು ಎನ್ನುವ ಒಂದು ವಾದ ಶಶಿಕಾಂತ್‌ ಶೆಟ್ಟಿ ಕಟಪಾಡಿ ಅವರದ್ದು.

ನಾನಯರ ಗರಡಿಯಲ್ಲಿ ಏನೇನಿವೆ?

ಶ್ರೀ ಚಂಡಿಕಾ ಪರಮೇಶ್ವರಿ ದೇವಿ ಇಲ್ಲಿನ ಶಕ್ತಿ ದೇವತೆಯಾಗಿದ್ದು ಗಣಪತಿ, ಬ್ರಹ್ಮ, ವೀರಭದ್ರ, ಈಶ್ವರ, ಕುಮಾರನ್ನೊಳಗೊಂಡ ಪಂಚದೈವಿಕ ಸಾನಿಧ್ಯಗಳಿವೆ. ಕೋಟಿ ಚೆನ್ನಯ್ಯರ ಶಸ್ತ್ರ ತರಬೇತಿ ಗುರುಗಳಾದ ಬಲಿಪ ನಾನಯ ಮತ್ತು ಪಿಲಿಪ ನಾನಯರ ಸಮಾಧಿ, ಕೋಟಿ ಚೆನ್ನಯ್ಯರ ಸಹಿತವಾಗಿ ಅನೇಕರು ಸಾಧನೆಗೈಯ್ಯುತ್ತಿದ್ದ ಕಟ್ಟಿಕೆರೆ ಸದ್ಯಕ್ಕೆ ಇಲ್ಲಿ ತೋರಿ ಬರುತ್ತಿರುವ ಪುರಾವೆಗಳು.

ಗುರು ಸ್ಮರಣೆಗಾಗಿ 66 ಗರಡಿ ನಿರ್ಮಾಣ

ಸಾಯನ ಬೈದ್ಯರ ಸೂಚನೆಯಂತೆ ಕೋಟಿ-ಚೆನ್ನಯ್ಯರಿಗೆ ಪಾಂಗಾಳ ನಾನಯರ ಗರಡಿಯಲ್ಲಿ ಬಲಿಪ ನಾನಯ ಮತ್ತು ಪಿಲಿಪ ನಾನಯರೆಂಬ ಅವಳಿ ಪುರುಷರ ಬಳಿ ಕಳರಿ ವಿದ್ಯೆ ಸಹಿತ ಪರಿಪೂರ್ಣ ಅಂಗ ಸಾಧನೆ ಕಲಿಸಲಾಗುತ್ತದೆ. ಅಲ್ಲಿ ಗುರುಕಾಣಿಕೆ ವಿಷಯ ಬಂದಾಗ ಗುರುಗಳು ನಿರಾಕರಿಸುತ್ತಾರೆ. ಅದಕ್ಕೆ ಪ್ರತಿಯಾಗಿ ಗುರು ವಿದ್ಯೆ ಕಲಿತ ಸ್ಮರಣೆಗಾಗಿ 66 ಗರಡಿ ನಿರ್ಮಿಸುವುದಾಗಿ ಬಲಿಪ ಮತ್ತು ಪಿಲಿಪ ನಾನಯರಿಗೆ ವಾಗ್ಧಾನ ನೀಡುತ್ತಾರೆ. ಮರಣ  ಕಾಲಕ್ಕೆ 66 ಗರಡಿ ನಿರ್ಮಾಣ ಮಾಡುವಂತೆ ಬಲ್ಲಾಳರಿಗೆ ಸೂಚನೆ ನೀಡಿದ್ದು, ಪಾಂಗಾಳ ನಾನಯರ ಗರಡಿಯ ಆಯವನ್ನು ಮಾದರಿಯನ್ನಾಗಿಸಿಕೊಂಡು 66 ಗರಡಿ ನಿರ್ಮಾಣವಾಗಿರುವುದನ್ನು ಸ್ಮರಿಸಿಕೊಳ್ಳಬಹುದಾಗಿದೆ.
-ಸುಧಾಕರ್‌ ಡಿ. ಅಮೀನ್‌, ಪಾಂಗಾಳ ಗುಡ್ಡೆ ಗರಡಿಮನೆ

ಕೇರಳದಲ್ಲಿ 14 ಗ್ರಾಮಗಳು ಉಂಬಳಿ!

ಪಾಂಗಾಳ ನಾನಯರ ಗರಡಿಯಲ್ಲಿ ಕೇರಳದ ವಿದ್ಯಾರ್ಥಿಗಳು ಕೂಡಾ ಕಳರಿ ಕಲಿಯಲು ಬರುತ್ತಿದ್ದರು. ಇದಕ್ಕೆ ಪ್ರತಿಯಾಗಿ ಕೇರಳದ ಅಲೆಪ್ಪಿ ಜಿಲ್ಲೆಯ ಮುದ್ದು ಕುಳಂ, ಚಂಬ ಕುಳಂ ಸಹಿತ 14 ಗ್ರಾಮಗಳನ್ನು ಗುರುದಕ್ಷಿಣೆ ರೂಪದಲ್ಲಿ ನಾನಯರ ಕುಟುಂಬಸ್ಥರಿಗೆ ಉಂಬಳಿ ರೂಪದಲ್ಲಿ ಬಿಡಲಾಗಿತ್ತು. ಅದರಲ್ಲಿ ಮುದ್ದು ಕುಳಂ, ಚಂಬ ಕುಳಂನ ಜಮೀನು ಉಳುವನೇ ಹೊಲದೊಡೆಯ ಕಾನೂನಿನಲ್ಲಿ ಕಳೆದುಹೋಗಿದೆ, ಮುದ್ದು ಕುಳಂನಲ್ಲಿ ಗುರು ಮಠ, ಮನೆ ಮತ್ತು ಪಾಂಗಾಳದಿಂದ ಕೊಂಡೊಯ್ದು ಪ್ರತಿಷ್ಠಾಪಿಸಲಾಗಿರುವ ವೀರಭದ್ರ ದೇವಸ್ಥಾನದಲ್ಲಿ ಈಗಲೂ ಆರಾಧನೆ ನಡೆಯುತ್ತಿದೆ. ನಾನಯ ಕುಟುಂಬದ ಸದಸ್ಯರು ಈಗಲೂ ಮಠದಲ್ಲಿ ವಾಸವಿದ್ದಾರೆ ಎನ್ನುತ್ತಾರೆ ಪಾಂಗಾಳದ ನಾನಯರ ಗರಡಿಯ ಕರುಣಾಕರ ಶೆಟ್ಟಿ.

-ರಾಕೇಶ್‌ ಕುಂಜೂರು

ಟಾಪ್ ನ್ಯೂಸ್

Thirupathi-Laddu

Tirupati Laddu Row: ತಿರುಪತಿ ಶ್ರೀವಾರಿ ಲಡ್ಡು ಈಗ ಪರಿಶುದ್ಧ: ದೇವಸ್ಥಾನ ಸಮಿತಿ

1-siddu-aa

TB Dam; ಮೈತುಂಬಿಕೊಂಡ ತುಂಗಭದ್ರೆಗೆ ಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌

1-tirupati-laddu

Tirupati laddu ಅಪವಿತ್ರ: ಎಸ್ ಐಟಿ ತನಿಖೆಗೆ ಆಗ್ರಹಿಸಿ ಸುಪ್ರೀಂನಲ್ಲಿ ಪಿಐಎಲ್ ಸಲ್ಲಿಕೆ

1-pavan

Tirupati laddu; ಪ್ರಾಯಶ್ಚಿತ ಎಂಬಂತೆ 11 ದಿನಗಳ ಉಪವಾಸ ಕೈಗೊಳ್ಳಲಿರುವ ಪವನ್ ಕಲ್ಯಾಣ್

Pushpa 2: ಅಲ್ಲು ಅರ್ಜುನ್‌ ʼಪುಷ್ಪ-2ʼನಲ್ಲಿ ಕ್ರಿಕೆಟಿಗ ಡೇವಿಡ್‌ ವಾರ್ನರ್?‌- ಫೋಟೋ ವೈರಲ್

Pushpa 2: ಅಲ್ಲು ಅರ್ಜುನ್‌ ʼಪುಷ್ಪ-2ʼನಲ್ಲಿ ಕ್ರಿಕೆಟಿಗ ಡೇವಿಡ್‌ ವಾರ್ನರ್?‌- ಫೋಟೋ ವೈರಲ್

ಟಿಟಿಡಿಯಿಂದ ನಂದಿನಿ ತುಪ್ಪಕ್ಕೆ ಮತ್ತೆ ಬೇಡಿಕೆ:‌ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್

LadduCase; ಟಿಟಿಡಿಯಿಂದ ನಂದಿನಿ ತುಪ್ಪಕ್ಕೆ ಮತ್ತೆಬೇಡಿಕೆ:‌ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

puttige

Puthige Swamiji; ಗೀತಾರ್ಥ ಚಿಂತನೆ 42: ಆನಂದಕ್ಕಾಗಿ ಕೆಲಸ, ಕೆಲಸದಲ್ಲಿ ಆನಂದ

pejawara

Tirupati Laddu Case; ದೇವಳಗಳನ್ನು ಸರ್ಕಾರದ ಸ್ವಾಧೀನದಿಂದ ಮುಕ್ತಗೊಳಿಸಿ: ಪೇಜಾವರ ಶ್ರೀ

Colera

Udupi: ಜಿಲ್ಲೆಯಲ್ಲಿ ಕಾಲರಾ 8 ಪ್ರಕರಣ ಸಕ್ರಿಯ

Puttige-Shree

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಿ ಅಪಚಾರ: ಪರ್ಯಾಯ ಪುತ್ತಿಗೆ ಶ್ರೀ

Muloor: ಮಹಿಳೆಗೆ ರಿಕ್ಷಾ ಢಿಕ್ಕಿ ; ಗಾಯ

Muloor: ಮಹಿಳೆಗೆ ರಿಕ್ಷಾ ಢಿಕ್ಕಿ ; ಗಾಯ

MUST WATCH

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

ಹೊಸ ಸೇರ್ಪಡೆ

9

Karkala: ವಿದ್ಯಾರ್ಥಿನಿ ರೂಪಿಸಿದ ವಿಜ್ಞಾನ ಮಾದರಿಗೆ  ರಾಷ್ಟ್ರ ಪ್ರಶಸ್ತಿ ಗರಿ

8

Kundapura-ಬೈಂದೂರು ಹೆದ್ದಾರಿ: ಬೆಳಗದ ಬೀದಿ ದೀಪಗಳು

Thirupathi-Laddu

Tirupati Laddu Row: ತಿರುಪತಿ ಶ್ರೀವಾರಿ ಲಡ್ಡು ಈಗ ಪರಿಶುದ್ಧ: ದೇವಸ್ಥಾನ ಸಮಿತಿ

puttige

Puthige Swamiji; ಗೀತಾರ್ಥ ಚಿಂತನೆ 42: ಆನಂದಕ್ಕಾಗಿ ಕೆಲಸ, ಕೆಲಸದಲ್ಲಿ ಆನಂದ

7(1)

Health: ಆಹಾರ ಚೆನ್ನಾಗಿ ಜಗಿದು ನುಂಗಿ ನೆತ್ತಿಗೆ ಹತ್ತದಿರಲಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.