![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 22, 2024, 4:00 PM IST
ಗುಂಟೂರು: ತಿರುಪತಿ ತಿರುಮಲ ದೇವಸ್ಥಾನದ ಲಡ್ಡು ಪ್ರಸಾದ ಅಪವಿತ್ರ ಗೊಂಡಿರುವ ಪ್ರಾಯಶ್ಚಿತ ಎಂಬಂತೆ ನಾನು ಈ 11 ದಿನಗಳ ಉಪವಾಸ ಕೈಗೊಂಡು ವೆಂಕಟೇಶ್ವರನ ಕ್ಷಮೆ ಕೇಳುತ್ತೇನೆ” ಎಂದು ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ, ಜನಸೇನಾ ನಾಯಕ ಪವನ್ ಕಲ್ಯಾಣ್ ಭಾನುವಾರ(ಸೆ22) ಹೇಳಿಕೆ ನೀಡಿದ್ದಾರೆ.
”ಹಿಂದೂ ದೇವಾಲಯಗಳನ್ನು ಅಪವಿತ್ರಗೊಳಿಸಿದಾಗ ನಾವು ಮೌನವಾಗಿರಬಾರದು.ಇದು ಮಸೀದಿ ಅಥವಾ ಚರ್ಚ್‌ಗಳಲ್ಲಿ ಸಂಭವಿಸಿದ್ದರೆ, ರಾಷ್ಟ್ರದಲ್ಲಿ ಪರಿಸ್ಥಿತಿ ಸ್ಫೋಟಗೊಳ್ಳುತ್ತಿತ್ತು” ಎಂದು ಡಿಸಿಎಂ ಪವನ್ ಕಲ್ಯಾಣ್ ಕಿಡಿ ಕಾರಿದ್ದಾರೆ.
”ವೈಎಸ್‌ಆರ್‌ಸಿಪಿ ಆಡಳಿತದಲ್ಲಿ 219 ದೇವಸ್ಥಾನಗಳನ್ನು ಧ್ವಂಸಗೊಳಿಸಲಾಗಿತ್ತು, ಈ ದೇವಾಲಯಗಳನ್ನು ನಾಶಪಡಿಸಿದ್ದನ್ನು ನಾನು ಪ್ರಶ್ನಿಸಿತ್ತಿದ್ದು ಇದನ್ನು ಸಹಿಸುವುದಿಲ್ಲ, ಕಠಿನ ಕ್ರಮ ಕೈಗೊಳ್ಳಲಾಗುವುದು” ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
”ಕಳೆದ ಐದು ವರ್ಷಗಳಲ್ಲಿ ಟಿಟಿಡಿ ಮಂಡಳಿ ಏನು ಮಾಡಿದೆ ಎಂದು ಹಿಂದೂ ಭಕ್ತರು ಧ್ವನಿ ಎತ್ತಬೇಕು.ಒಂದು ಕಾಲದಲ್ಲಿ ಪವಿತ್ರವಾಗಿದ್ದುದು ಈಗ ಅಪವಿತ್ರಗೊಂಡಿದೆ. ತಪ್ಪಿತಸ್ಥರು ಶಿಕ್ಷೆಗೆ ಗುರಿಯಾಗಲೇಬೇಕು” ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.