Chess Olympiad; ಭಾರತಕ್ಕೆ ಅವಳಿ ಸ್ವರ್ಣ ಸಂಭ್ರಮ
Team Udayavani, Sep 22, 2024, 10:42 PM IST
ಬುಡಾಪೆಸ್ಟ್ (ಹಂಗೇರಿ): 45ನೇ ಚೆಸ್ ಒಲಿಂಪಿಯಾಡ್ನಲ್ಲಿ ಭಾರತದ ಪುರುಷರ ಮತ್ತು ಮಹಿಳಾ ತಂಡಗಳೆರಡೂ ಬಂಗಾರ ಜಯಿಸಿ ಇತಿಹಾಸ ನಿರ್ಮಿಸಿವೆ.
ಅರ್ಜುನ್ ಎರಿಗೇಸಿ, ಡಿ. ಗುಕೇಶ್, ಆರ್. ಪ್ರಜ್ಞಾನಂದ, ಪಿ. ಹರಿಕೃಷ್ಣ ಮತ್ತು ಶ್ರೀನಾಥ್ ನಾರಾಯಣನ್ (ನಾಯಕ) ಅವರಿದ್ದ ಪುರುಷರ ತಂಡ ಮುಕ್ತ ವಿಭಾಗದಲ್ಲಿ ಚೊಚ್ಚಲ ಬಂಗಾರ ಜಯಿಸಿತು. ಬಳಿಕ ದ್ರೋಣವಲ್ಲಿ ಹರಿಕಾ, ದಿವ್ಯಾ ದೇಶ್ಮುಖ್, ಆರ್. ವೈಶಾಲಿ ಮತ್ತು ವಂತಿಕಾ ಅಗರ್ವಾಲ್ ಅವರಿದ್ದ ಮಹಿಳಾ ತಂಡವೂ ಚಿನ್ನಕ್ಕೆ ಕೊರಳೊಡ್ಡಿತು. ಪುರುಷರ ತಂಡ ಸ್ಲೊವೇ ನಿಯಾ ವಿರುದ್ಧ ಗೆಲುವು ದಾಖಲಿಸಿತು. ಮಹಿಳಾ ತಂಡ ಅಜರ್ಬೈಜಾನ್ ವಿರುದ್ಧ 3.5-0.5ರಿಂದ ಗೆದ್ದು ಬೀಗಿತು.
ಪುರುಷರ ವಿಭಾಗದಲ್ಲಿ ಅರ್ಜುನ್ ಎರಿಗೇಸಿ ಸ್ಲೊವೇನಿಯಾದ ಜಾನ್ ಸುಬೆಲ್ಜ್ ವಿರುದ್ಧ ಗೆದ್ದರೆ, ವಿಶ್ವ ಚೆಸ್ ಚಾಂಪಿಯನ್ಶಿಪ್ ಸ್ಪರ್ಧಿ ಡಿ. ಗುಕೇಶ್, ವ್ಲಾಡಿಮಿರ್ ಫೆಡೊಸೀವ್ ವಿರುದ್ಧ ಗೆದ್ದು ಆರಂಭಿಕ ಮುನ್ನಡೆ ಕೊಡಿಸಿದರು. ಬಳಿಕ ಪ್ರಜ್ಞಾನಂದ ಕೂಡ ಗೆಲುವು ದಾಖಲಿಸಿದರು.
ಪುರುಷರ 11ನೇ ಹಾಗೂ ಅಂತಿಮ ಸುತ್ತಿನಲ್ಲಿ ಚೀನ ತಂಡ ಅಮೆರಿಕ ವಿರುದ್ಧ ಸೋತಿತು. ಚಿನ್ನದ ರೇಸ್ನಲ್ಲಿದ್ದ ಮತ್ತೂಂದು ತಂಡ ಸ್ಲೊವೇನಿಯಾ ಭಾರತದ ವಿರುದ್ಧ ಎಡವಿತು.
10ನೇ ಸುತ್ತಿನಲ್ಲಿ ಭಾರತದ ಪುರುಷರ ತಂಡ ಬಲಿಷ್ಠ ಅಮೆರಿಕ ವಿರುದ್ಧ 2.5-1.5 ಅಂತರದಿಂದ ಜಯಿಸಿತು. ಮುಕ್ತ ವಿಭಾಗದಲ್ಲಿ ಅಮೆರಿಕದ ತಾರೆ ಫ್ಯಾಬಿಯಾನೊ ಕರುವಾನ ಎದುರು ಡಿ. ಗುಕೇಶ್ 1-0 ಅಂತರದಿಂದ ಗೆದ್ದು ಗಮನ ಸೆಳೆದರು.
ಇದಕ್ಕೂ ಮುನ್ನ, 2020ರ ಕೋವಿಡ್ ಅವಧಿಯಲ್ಲಿ ನಡೆದ ವರ್ಚುವಲ್ ಒಲಿಂಪಿಯಾಡ್ ಚೆಸ್ ಸ್ಪರ್ಧೆಯಲ್ಲಿ ಭಾರತ-ರಷ್ಯಾ ಚಿನ್ನ ಹಂಚಿಕೊಂಡಿದ್ದವು. 2022 (ಚೆನ್ನೈ) ಮತ್ತು 2014ರ (ನಾರ್ವೆ) ಸ್ಪರ್ಧೆಗಳಲ್ಲಿ ಕಂಚು ಗೆದ್ದ ಸಾಧನೆ ಭಾರತದ್ದಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.