D. K. Shivakumar: ನೀರು ಕಡಿಮೆಯಾದಾಗ ತುಂಗಭದ್ರಾ ಅಣೆಕಟ್ಟೆಗೆ ಹೊಸ ಕ್ರೆಸ್ಟ್‌ಗೇಟ್‌


Team Udayavani, Sep 22, 2024, 11:39 PM IST

D. K. Shivakumar: ನೀರು ಕಡಿಮೆಯಾದಾಗ ತುಂಗಭದ್ರಾ ಅಣೆಕಟ್ಟೆಗೆ ಹೊಸ ಕ್ರೆಸ್ಟ್‌ಗೇಟ್‌

ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ನೀರು ಕಡಿಮೆಯಾದ ಬಳಿಕ ಹೊಸ ಕ್ರೆಸ್ಟ್‌ಗೇಟ್‌ಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ತುಂಗಭದ್ರಾ ಜಲಾಶಯ ಬಾಗಿನ ಸಮರ್ಪಣೆ ಅನಂತರ ಮುನಿರಾಬಾದ್‌ನಲ್ಲಿ ರವಿವಾರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತುಂಗಭದ್ರಾ ಬೋರ್ಡ್‌ ಜತೆ ಚರ್ಚೆ ನಡೆಸಿ ಒಂದು ವರ್ಷದೊಳಗೆ ನೂತನ ಗೇಟ್‌ ಅಳವಡಿಕೆ ಮಾಡಲಾಗುವುದು. ಆ ಮೂಲಕ ರೈತರ ರಕ್ಷಣೆ ಮಾಡಲಾಗುವುದು. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗುವುದು. ಕ್ರೆಸ್ಟ್‌ಗೇಟ್‌ ಕಿತ್ತು ಹೋಗಿದ್ದ ವೇಳೆ ನಮ್ಮ ಸರಕಾರ ರೈತರ ಪರವಾಗಿ ನಿಂತು ತಜ್ಞರ ಶ್ರಮದಿಂದ ಮತ್ತೆ ಡ್ಯಾಂನಲ್ಲಿ ನೀರುಳಿಸುವ ಕೆಲಸ ಮಾಡಿದೆ. ಈ ಅವಕಾಶ ನನಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಸಿಕ್ಕಿರುವುದು ನಮ್ಮ ಭಾಗ್ಯ ಎಂದರು.

ಕನ್ನಯ್ಯರ ಕಾರ್ಯ ಶ್ಲಾಘನೆ
ಕಷ್ಟಕಾಲದಲ್ಲಿ ಕನ್ನಯ್ಯ ನಾಯ್ಡು ಅವರು ನಮ್ಮ ಜೊತೆ ನಿಂತು, 20 ಟಿಎಂಸಿಯಷ್ಟು ನೀರು ಉಳಿಸಿದರು. 9 ಲಕ್ಷ ಎಕರೆಗೆ ಬೆಳೆ ಹಾಗೂ ನಮ್ಮ ರೈತರನ್ನು ಉಳಿಸಿದರು. ಇವರೊಟ್ಟಿಗೆ ನಾರಾಯಣ, ಹಿಂದೂಸ್ಥಾನ್‌ ಎಂಜಿನಿಯರಿಂಗ್‌, ಜಿಂದಾಲ್‌ ಸಹಕಾರ ದೊರೆಯಿತು. ಗೇಟ್‌ ಕಿತ್ತ ಒಂದೇ ವಾರದಲ್ಲಿ ದುರಸ್ತಿ ಮಾಡಿದ್ದು ನಮಗೆಲ್ಲ ಸಂತಸ ತರಿಸಿದೆ ಎಂದರು.

ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿಕೊಂಡ ಕಾರಣ ಸುಮಾರು 33 ಟಿಎಂಸಿಯಷ್ಟು ನಮ್ಮ ಪಾಲಿನ ನೀರು ಸಿಗುತ್ತಿಲ್ಲ. ಇದಕ್ಕೆಲ್ಲ ಪರಿಹಾರ ನವಲಿ ಸಮತೋಲಿತ ಅಣೆಕಟ್ಟು. ಇದರ ನಿರ್ಮಾಣಕ್ಕೆ ಈಗಾಗಲೇ ಡಿಪಿಆರ್‌ ತಯಾರಿಸಲಾಗಿದೆ. 15 ಸಾವಿರ ಎಕರೆ ಭೂಮಿ, 9 ಸಾವಿರ ಕೋಟಿ ರೂ. ಅಗತ್ಯವಿದೆ. ಈ ಕುರಿತು ಆಂಧ್ರ-ತೆಲಂಗಾಣ ಸರಕಾರಗಳ ಸಿಎಂ ಹಾಗೂ ಆ ರಾಜ್ಯದ ನೀರಾವರಿ ಸಚಿವರನ್ನು ಶೀಘ್ರದಲ್ಲೇ ಭೇಟಿ ಮಾಡಿ ಚರ್ಚೆ ನಡೆಸಲಾಗುವುದು ಎಂದರು.

ಟಾಪ್ ನ್ಯೂಸ್

Hospital

Mangaluru: ಮದ್ಯಸೇವಿಸಿ ತೂರಾಡುತ್ತಾ ಐಸಿಯುಗೆ ಬಂದ ಪಿಜಿ ವೈದ್ಯ!

BK-hariprasad

Arkavathi: 25 ವರ್ಷಗಳ ಅಕ್ರಮ ಸುಪ್ರೀಂ ನ್ಯಾಯಮೂರ್ತಿಯವರಿಂದ ತನಿಖೆಯಾಗಲಿ: ಹರಿಪ್ರಸಾದ್‌

Udupi: ಗೀತಾರ್ಥ ಚಿಂತನೆ-43; ದೈವೀಸಂಪತ್ತಿನವರಿಗೆ ಭಗವದನುಗ್ರಹ

Udupi: ಗೀತಾರ್ಥ ಚಿಂತನೆ-43; ದೈವೀಸಂಪತ್ತಿನವರಿಗೆ ಭಗವದನುಗ್ರಹ

Yashpal1

Thirupathi Laddu: ಹಿಂದೂಗಳ ಭಾವನೆಗೆ ಧಕ್ಕೆ ಹುನ್ನಾರ: ಶಾಸಕ ಯಶ್‌ಪಾಲ್‌

Udupi-Shashti

Vishwa Hindu Parishad: ದೇಗುಲಗಳಲ್ಲಿ ಮಾರ್ಗದರ್ಶನ ಮಂಡಳಿ ರಚನೆಯಾಗಲಿ: ಭಂಡಾರಕೇರಿ ಶ್ರೀ

shShiruru Landslide Tragedy: ಟ್ಯಾಂಕರ್‌ ಎಂಜಿನ್‌, ಸ್ಕೂಟಿ ಪತ್ತೆ

Shiruru Landslide Tragedy: ಟ್ಯಾಂಕರ್‌ ಎಂಜಿನ್‌, ಸ್ಕೂಟಿ ಪತ್ತೆ

election

Election Schedule: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣೆ ನೀತಿ ಸಂಹಿತೆ: ಮಾರ್ಗಸೂಚಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM Siddaramaiah: ತಜ್ಞರ ವರದಿಯಂತೆ ಅಣೆಕಟ್ಟು ನಿರ್ವಹಣೆ

CM Siddaramaiah: ತಜ್ಞರ ವರದಿಯಂತೆ ಅಣೆಕಟ್ಟು ನಿರ್ವಹಣೆ

1-siddu-aa

TB Dam; ಮೈತುಂಬಿಕೊಂಡ ತುಂಗಭದ್ರೆಗೆ ಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ

Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ ಸುಪ್ರೀಂ ಕೋರ್ಟ್

Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ, ಸುಪ್ರೀಂ ಕೋರ್ಟ್

ಸಿದ್ದರಾಮಯ್ಯ

Koppala; ತುಂಗಭದ್ರಾ ಜಲಾಶಯಕ್ಕಿಂದು ಬಾಗಿನ ಅರ್ಪಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ

ಕುಶಾಲನಗರ ಪ.ಪಂ ಚುನಾವಣೆ ಗೊಂದಲ: ವಿಪಕ್ಷ ನಾಯಕ ಅಶೋಕ್‌ ಅಸಮಾಧಾನ

ಕುಶಾಲನಗರ ಪ.ಪಂ ಚುನಾವಣೆ ಗೊಂದಲ: ವಿಪಕ್ಷ ನಾಯಕ ಅಶೋಕ್‌ ಅಸಮಾಧಾನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

theft-temple

Cash Theft: ಕಾಣಿಯೂರು: ದೇಗುಲದಲ್ಲಿ ಕಾಣಿಕೆ ಡಬ್ಬಿ ಕಳವು

Hospital

Mangaluru: ಮದ್ಯಸೇವಿಸಿ ತೂರಾಡುತ್ತಾ ಐಸಿಯುಗೆ ಬಂದ ಪಿಜಿ ವೈದ್ಯ!

BK-hariprasad

Arkavathi: 25 ವರ್ಷಗಳ ಅಕ್ರಮ ಸುಪ್ರೀಂ ನ್ಯಾಯಮೂರ್ತಿಯವರಿಂದ ತನಿಖೆಯಾಗಲಿ: ಹರಿಪ್ರಸಾದ್‌

Uppinagdy-Miss

Uppinangady: ನೆಲ್ಯಾಡಿಯ ಕಾಲೇಜು ವಿದ್ಯಾರ್ಥಿ ನಾಪತ್ತೆ

Udupi: ಗೀತಾರ್ಥ ಚಿಂತನೆ-43; ದೈವೀಸಂಪತ್ತಿನವರಿಗೆ ಭಗವದನುಗ್ರಹ

Udupi: ಗೀತಾರ್ಥ ಚಿಂತನೆ-43; ದೈವೀಸಂಪತ್ತಿನವರಿಗೆ ಭಗವದನುಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.