Farmers: ಕೃಷಿ ಪಂಪ್‌ಸೆಟ್‌-ಆಧಾರ್‌ ಲಿಂಕ್‌: ಇಂದು ಕೊನೇ ದಿನ

ಜೋಡಣೆ ಮಾಡದವರಿಗೆ ಸಬ್ಸಿಡಿ ಬಿಡುಗಡೆ ಇಲ್ಲ?

Team Udayavani, Sep 23, 2024, 7:15 AM IST

fFarmers: ಕೃಷಿ ಪಂಪ್‌ಸೆಟ್‌-ಆಧಾರ್‌ ಲಿಂಕ್‌: ಇಂದು ಕೊನೇ ದಿನ

ಬೆಂಗಳೂರು: ರಾಜ್ಯದ ಕೃಷಿ ಪಂಪ್‌ಸೆಟ್‌ಗಳಿಗೆ ರೈತರು ತಮ್ಮ ಆಧಾರ್‌ ಜೋಡಣೆ ಮಾಡಿಕೊಳ್ಳಲು ಸೋಮವಾರ, ಸೆ. 23 ಕೊನೆಯ ದಿನವಾಗಿದ್ದು, ಹೀಗೆ ಜೋಡಣೆ ಮಾಡಿಕೊಳ್ಳದವರಿಗೆ ಬರುವ ತಿಂಗಳ ಸಹಾಯಧನ ಬಿಡುಗಡೆಯಲ್ಲಿ ತೊಂದರೆ ಯಾಗುವ ಸಾಧ್ಯತೆ ಇದೆ.

10 ಎಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ಗಳ ಸ್ಥಾವರಗಳನ್ನು ಆಧಾರ್‌ ಸಂಖ್ಯೆ ಯೊಂದಿಗೆ ಜೋಡಣೆ ಮಾಡಿಸಿಕೊಳ್ಳ ದವರಿಗೆ ಇಂಥದ್ದೊಂದು ಸುಳಿವನ್ನು ಇಂಧನ ಇಲಾಖೆ ನೀಡಿದೆ. ಅದರಂತೆ ಕೃಷಿ ಪಂಪ್‌ಸೆಟ್‌ಗಳಿಗೆ ನೀಡಲಾಗುತ್ತಿರುವ ಸಹಾಯಧನವನ್ನು ಎಂದಿ ನಂತೆ ಬರುವ ಅಕ್ಟೋಬರ್‌ನಲ್ಲಿ ವ್ಯವಸ್ಥಿತ ರೂಪದಲ್ಲಿ ಪಡೆಯಲು ಆಧಾರ್‌ ಜೋಡಣೆ ಪ್ರಕ್ರಿಯೆಯನ್ನು ಸೆ. 23ರ ಒಳಗೆ ಪೂರ್ಣಗೊಳಿಸಿ, ಸೆ. 24ಕ್ಕೆ ಸರಕಾರಕ್ಕೆ ವರದಿ ನೀಡಬೇಕು ಎಂದು ಸೂಚನೆ ನೀಡಿದೆ. ನಿಗದಿತ ಅವಧಿಯೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಇಲ್ಲವಾದರೆ ಮುಂದೆ ಉಂಟಾಗುವ ಸಹಾಯಧನ ಬಿಡುಗಡೆಯ ವ್ಯತಿರಿಕ್ತ ಪರಿಣಾಮಗಳಿಗೆ ಆಯಾ ಎಸ್ಕಾಂಗಳನ್ನು ನೇರ ಹೊಣೆಯಾಗಿ ಮಾಡಲಾಗುವುದು ಎಂದು ಇಂಧನ ಇಲಾಖೆ ಸ್ಪಷ್ಟ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ಸಹಜವಾಗಿ ಎಸ್ಕಾಂಗಳು ಆಯಾ ವ್ಯಾಪ್ತಿಯ ಫ‌ಲಾನುಭವಿಗಳಿಗೆ ಗಡುವು ನೀಡಲಿದ್ದು, ಮುಂಬರುವ ದಿನಗಳಲ್ಲಿ ಇದರ ಬಿಸಿ ತಟ್ಟುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಸುಮಾರು 1.92 ಲಕ್ಷ ರೈತರು ಇನ್ನೂ ಆಧಾರ್‌ ಜೋಡಣೆ ಮಾಡಿಕೊಂಡಿಲ್ಲ. ಈ ಹಿಂದೆ ಆ. 25ರ ಒಳಗೆ ಆಧಾರ್‌ ಜೋಡಣೆ ಪ್ರಕ್ರಿಯೆ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು. ಬಳಿಕ ಗಡುವನ್ನು ಸೆ. 23ಕ್ಕೆ ವಿಸ್ತರಿಸಲಾಗಿತ್ತು. ಈವರೆಗೆ 10 ಎಚ್‌ಪಿವರೆಗಿನ 33.83 ಲಕ್ಷ ಕೃಷಿ ಪಂಪ್‌ಸೆಟ್‌ಗಳ ಪೈಕಿ 31.90 ಲಕ್ಷ ಪಂಪ್‌ಸೆಟ್‌ಗಳು ಆಧಾರ್‌ ಜೋಡಣೆ ಆಗಿದ್ದು, ಬಾಕಿ ಉಳಿದ 1.92 ಲಕ್ಷ ಪಂಪ್‌ಸೆಟ್‌ಗಳ ಪೈಕಿ ಹಲವು ಕಾರಣಗಳಿಂದ 68,858 ಪಂಪ್‌ಸೆಟ್‌ಗಳು ತಿರಸ್ಕೃತಗೊಂಡಿವೆ. 1.17 ಲಕ್ಷ ಪಂಪ್‌ಸೆಟ್‌ಗಳ ಆಧಾರ್‌ ಸಂಖ್ಯೆಗಳು ಜೋಡಣೆ ಆಗಬೇಕಿದೆ.

ವರದಿ ಸಲ್ಲಿಸುವಂತೆ ಸೂಚನೆ
ಈಗಾಗಲೇ ಆಧಾರ್‌ ಜೋಡಣೆಯಾದ ಶೇ. 94.30ರಷ್ಟು ನೀರಾವರಿ ಪಂಪ್‌ಸೆಟ್‌ಗಳ ಮಾಲಕತ್ವ, ಭೂ ವಿಸ್ತೀರ್ಣ ಮತ್ತು ಇತರ ಅಂಶಗಳ ಬಗ್ಗೆ ವಿಶ್ಲೇಷಣೆಯ ವಿವರಗಳನ್ನೂ ಸರಕಾರಕ್ಕೆ ಸಲ್ಲಿಸುವಂತೆ ಇಂಧನ ಇಲಾಖೆ ಎಸ್ಕಾಂಗಳಿಗೆ ಸೂಚನೆ ನೀಡಿದೆ.

ಟಾಪ್ ನ್ಯೂಸ್

6

Terrace garden: ಗೃಹಿಣಿಯ ಮಾನಸಿಕ ಖಿನ್ನತೆಗೆ ಔಷಧಿಯಾದ ತಾರಸಿ ಕೈತೋಟ

Pocso: ಮಕ್ಕಳ ಅಶ್ಲೀಲ ವಿಡಿಯೋ ನೋಡುವುದು, ಸಂಗ್ರಹಿಸುವುದು ಪೋಕ್ಸೋ ಅಡಿ ಅಪರಾಧ: ಸುಪ್ರೀಂ

Pocso: ಮಕ್ಕಳ ಅಶ್ಲೀಲ ವಿಡಿಯೋ ನೋಡುವುದು, ಸಂಗ್ರಹಿಸುವುದು ಪೋಕ್ಸೋ ಅಡಿ ಅಪರಾಧ: ಸುಪ್ರೀಂ

ಕರಾವಳಿ ಭಾಗದಲ್ಲಿ ಸೆ.23ರಂದು ಭಾರೀ ಮಳೆ? 9 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ

ಕರಾವಳಿ ಭಾಗದಲ್ಲಿ ಸೆ.23ರಂದು ಭಾರೀ ಮಳೆ? 9 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ

Magadi: ವಾಸವಿ ದೇವಾಲಯದ ಖಜಾಂಚಿ ಮನೆಗೆ ಕನ್ನ… 4 ಕೆಜಿ ಚಿನ್ನಾಭರಣ ಕಳವು

Magadi: ವಾಸವಿ ದೇವಾಲಯದ ಖಜಾಂಚಿ ಮನೆಗೆ ಕನ್ನ… 4 ಕೆಜಿ ಚಿನ್ನಾಭರಣ ದೋಚಿ ಪರಾರಿ

Bigg Boss 18: ಬಿಗ್‌ ಬಾಸ್‌ ಆರಂಭಕ್ಕೆ ಡೇಟ್‌ ಫಿಕ್ಸ್; ನಿರೂಪಣೆಗೆ ರೆಡಿಯಾದ ಸಲ್ಮಾನ್

Bigg Boss 18: ಬಿಗ್‌ ಬಾಸ್‌ ಆರಂಭಕ್ಕೆ ಡೇಟ್‌ ಫಿಕ್ಸ್; ನಿರೂಪಣೆಗೆ ರೆಡಿಯಾದ ಸಲ್ಮಾನ್

Viral Video: ಟಿಕೆಟ್ ಇಲ್ಲದೆ ರೈಲಿನ ಎಸಿ ಕೋಚ್ ನಲ್ಲಿ ಪ್ರಯಾಣಿಸಿದ ಹಾವು…

Viral Video: ಟಿಕೆಟ್ ಇಲ್ಲದೆ ರೈಲಿನ ಎಸಿ ಕೋಚ್ ನಲ್ಲಿ ಪ್ರಯಾಣಿಸಿದ ಹಾವು…

Will continue acting even if Bhairadevi wins: Radhika Kumaraswamy

Radhika Kumaraswamy: ಭೈರಾದೇವಿ ಗೆದ್ದರಷ್ಟೇ ನಟನೆ ಮುಂದುವರಿಸುವೆ!: ರಾಧಿಕಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿ ಭಾಗದಲ್ಲಿ ಸೆ.23ರಂದು ಭಾರೀ ಮಳೆ? 9 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ

ಕರಾವಳಿ ಭಾಗದಲ್ಲಿ ಸೆ.23ರಂದು ಭಾರೀ ಮಳೆ? 9 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ

Magadi: ವಾಸವಿ ದೇವಾಲಯದ ಖಜಾಂಚಿ ಮನೆಗೆ ಕನ್ನ… 4 ಕೆಜಿ ಚಿನ್ನಾಭರಣ ಕಳವು

Magadi: ವಾಸವಿ ದೇವಾಲಯದ ಖಜಾಂಚಿ ಮನೆಗೆ ಕನ್ನ… 4 ಕೆಜಿ ಚಿನ್ನಾಭರಣ ದೋಚಿ ಪರಾರಿ

Shivamogga: ಮಲೆನಾಡಲ್ಲಿ ಮುಂದುವರೆದ ಕಾಡಾನೆ ಹಾವಳಿ… ಬೆಳೆ ನಾಶ, ರೈತರ ಆಕ್ರೋಶ

Shivamogga: ಮಲೆನಾಡಲ್ಲಿ ಮುಂದುವರೆದ ಕಾಡಾನೆ ಹಾವಳಿ… ಬೆಳೆ ನಾಶ, ರೈತರ ಆಕ್ರೋಶ

Belagavi: ಈದ್ ಮಿಲಾದ್ ಮೆರವಣಿಗೆ ಮುಗಿಸಿ ಹೋಗುವಾಗ ತಲವಾರ್ ದಿಂದ ಹೊಡೆದಾಟ: ಮೂವರಿಗೆ ಗಾಯ

Belagavi: ಈದ್ ಮಿಲಾದ್ ಮೆರವಣಿಗೆ ಮುಗಿಸಿ ಹೋಗುವಾಗ ತಲವಾರ್ ದಿಂದ ಹೊಡೆದಾಟ: ಮೂವರಿಗೆ ಗಾಯ

Mudhol: ಬಾಲಕಿಗೆ ಲೈಂಗಿಕ‌‌ ಕಿರುಕುಳ… ಫೋಕ್ಸೊ ಪ್ರಕರಣ ದಾಖಲು

Mudhol: ಬಾಲಕಿಗೆ ಲೈಂಗಿಕ‌‌ ಕಿರುಕುಳ… ಫೋಕ್ಸೊ ಪ್ರಕರಣ ದಾಖಲು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

6

Terrace garden: ಗೃಹಿಣಿಯ ಮಾನಸಿಕ ಖಿನ್ನತೆಗೆ ಔಷಧಿಯಾದ ತಾರಸಿ ಕೈತೋಟ

Pocso: ಮಕ್ಕಳ ಅಶ್ಲೀಲ ವಿಡಿಯೋ ನೋಡುವುದು, ಸಂಗ್ರಹಿಸುವುದು ಪೋಕ್ಸೋ ಅಡಿ ಅಪರಾಧ: ಸುಪ್ರೀಂ

Pocso: ಮಕ್ಕಳ ಅಶ್ಲೀಲ ವಿಡಿಯೋ ನೋಡುವುದು, ಸಂಗ್ರಹಿಸುವುದು ಪೋಕ್ಸೋ ಅಡಿ ಅಪರಾಧ: ಸುಪ್ರೀಂ

ಕರಾವಳಿ ಭಾಗದಲ್ಲಿ ಸೆ.23ರಂದು ಭಾರೀ ಮಳೆ? 9 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ

ಕರಾವಳಿ ಭಾಗದಲ್ಲಿ ಸೆ.23ರಂದು ಭಾರೀ ಮಳೆ? 9 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ

5

Tragic: ರೀಲ್ಸ್ ಮಾಡಲು ಕೆರೆಗೆ ಇಳಿದ ಯುವಕ ಸಾವು

Bengaluru: ಡಿಜೆ ವಿಚಾರ; ಎಸಿಪಿ ಚಂದನ್‌, ಮುತಾಲಿಕ್‌ ವಾಗ್ವಾದ

Bengaluru: ಡಿಜೆ ವಿಚಾರ; ಎಸಿಪಿ ಚಂದನ್‌, ಮುತಾಲಿಕ್‌ ವಾಗ್ವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.