Cash Theft: ಕಾಣಿಯೂರು: ದೇಗುಲದಲ್ಲಿ ಕಾಣಿಕೆ ಡಬ್ಬಿ ಕಳವು
Team Udayavani, Sep 23, 2024, 1:44 AM IST
![theft-temple](https://www.udayavani.com/wp-content/uploads/2024/09/theft-temple-620x372.jpg)
![theft-temple](https://www.udayavani.com/wp-content/uploads/2024/09/theft-temple-620x372.jpg)
ಕಾಣಿಯೂರು: ಕಾಣಿಯೂರು ಶ್ರೀ ಅಮ್ಮನವರ ಕ್ಷೇತ್ರದ ಕಾಣಿಕೆ ಡಬ್ಬಿಯಿಂದ ನಗದು ಕದ್ದೊಯ್ದ ಘಟನೆ ಸೆ 21ರ ರಾತ್ರಿ ನಡೆದಿದೆ. ಕಾಣಿಯೂರು-ಸುಬ್ರಹ್ಮಣ್ಯ ರಸ್ತೆಯ ಬದಿಯಲ್ಲಿರುವ ಕ್ಷೇತ್ರದ ಹೊರಾಂಗಣದಲ್ಲಿರುವ ಕಾಣಿಕೆ ಡಬ್ಬಿ ಒಡೆದು ಕಳ್ಳತನ ಮಾಡಲಾಗಿದೆ.
ಬೆಳ್ಳಾರೆ ಠಾಣಾಧಿಕಾರಿ ಡಿ.ಎನ್. ಈರಯ್ಯ ಸ್ಥಳಕ್ಕೆ ಬಂದು ತನಿಖೆ ನಡೆಸಿದ್ದಾರೆ. ಈ ಹಿಂದೆ ಕಾಣಿಯೂರಿನಲ್ಲಿ ಅಡಿಕೆ ಅಂಗಡಿಯಿಂದ ಅಡಿಕೆ ಕಳ್ಳತನವಾಗಿತ್ತು. ತೆಂಗಿನಕಾಯಿ ಮಾರಾಟ ಅಂಗಡಿ ಯಿಂದ ಹಾಡಹಗಲೇ ಹಣ ಕಳ್ಳತನ ಸೇರಿದಂತೆ ಹಲವಾರು ಕಳ್ಳತನ ಪ್ರಕರಣ ನಡೆದರೂ, ಈವರೆಗೂ ಪತ್ತೆಯಾಗಿಲ್ಲ.