America: 1951ರಲ್ಲಿ ಕಿಡ್ನಾಪ್‌ ಆದ ಬಾಲಕ 70 ವರ್ಷಗಳ ಬಳಿಕ ವಾಪಸ್…ಪತ್ತೆ ಕಾರ್ಯವೇ ರೋಚಕ!

ಯಾರು ಅಪಹರಿಸಿದ್ದು, ಯಾರ ಜೊತೆ ಬೆಳೆದಿದ್ದೆ ಎಂಬ ವಿಚಾರದ ಬಗ್ಗೆ ಯಾವುದೇ ಉತ್ತರ ನೀಡುತ್ತಿಲ್ಲ

Team Udayavani, Sep 23, 2024, 4:15 PM IST

America: 1951ರಲ್ಲಿ ಕಿಡ್ನಾಪ್‌ ಆದ ಬಾಲಕ 70 ವರ್ಷಗಳ ಬಳಿಕ ವಾಪಸ್…ಪತ್ತೆ ಕಾರ್ಯವೇ ರೋಚಕ!

ವಾಷಿಂಗ್ಟನ್:‌ ಮನೆಯಿಂದ ತಂದೆ, ತಾಯಿ, ಸಹೋದರ, ಸಹೋದರಿ ಹೀಗೆ ಯಾವುದೋ ಕಾರಣಕ್ಕೆ ಮನೆ ಬಿಟ್ಟು ಹೋಗುವುದು, ಅಪಹರಣಕ್ಕೊಳಗಾಗಿ ಕೆಲವು ವರ್ಷಗಳ ನಂತರ ಮರಳಿ ಬರುವುದು, ಬಾರದೇ ಇರುವ ಘಟನೆಗಳು ನಡೆದಿರುವುದನ್ನು ಕೇಳಿರುತ್ತೀರಿ. ಅದಕ್ಕೊಂದು ಸೇರ್ಪಡೆ ಇದು…ಬರೋಬ್ಬರಿ 70 ವರ್ಷಗಳ ಹಿಂದೆ ಅಪಹರಣಕ್ಕೊಳಗಾಗಿದ್ದ 6 ವರ್ಷದ ಬಾಲಕ ಇದೀಗ ಜೀವಂತವಾಗಿ ಪತ್ತೆಯಾಗಿರುವ ಘಟನೆ ಅಮೆರಿಕದಲ್ಲಿ ನಡೆದಿರುವುದಾಗಿ ತಡವಾಗಿ ಬೆಳಕಿಗೆ ಬಂದಿದೆ.

ಅಂದು ನಡೆದ ಘಟನೆ ಹಿನ್ನಲೆ:

ಕ್ಯಾಲಿಫೋರ್ನಿಯಾದ ವೆಸ್ಟ್‌ ಓಕ್ಲಾಂಡ್‌ ಪಾರ್ಕ್‌ ನಲ್ಲಿ 1951ರ ಫೆಬ್ರುವರಿ 21ರಂದು ಲೂಯಿಸ್‌ ಅರ್ಮಾಂಡೋ ಅಲ್ಬಿನೋ ಎಂಬ 6 ವರ್ಷದ ಬಾಲಕ ತನ್ನ ಸಹೋದರ ರೋಜರ್‌ (10ವರ್ಷ) ಜೊತೆ ಆಟವಾಡುತ್ತಿದ್ದ. ಈ ಸಂದರ್ಭದಲ್ಲಿ ಮಹಿಳೆಯೊಬ್ಬಳು ಲೂಯಿಸ್‌ ಗೆ ಸಿಹಿ ತಿಂಡಿ ತೆಗೆದುಕೊಡುವುದಾಗಿ ಆಮಿಷವೊಡ್ಡಿ ಕರೆದೊಯ್ದಿದ್ದಳು! ಹೀಗೆ ಅಪಹರಣಕ್ಕೊಳಗಾಗಿದ್ದ ಲೂಯಿಸ್‌ ಹಲವು ದಶಕಗಳು ಕಳೆದರೂ ಸುಳಿವೇ ಸಿಕ್ಕಿರಲಿಲ್ಲವಾಗಿತ್ತು. ಅಂತೂ ಕುಟುಂಬದವರ ನಿರಂತರ ಪ್ರಯತ್ನ, ಡಿಎನ್‌ ಎ ಪರೀಕ್ಷೆ ಮೂಲಕ ಕೊನೆಗೂ ಲೂಯಿಸ್‌ ವೃದ್ಧಾಪ್ಯದಲ್ಲಿ ಕುಟುಂಬಸ್ಥರ ಜೊತೆ ಸೇರುವಂತಾಗಿದೆ.

ಚಿಕ್ಕಪ್ಪನ ಶೋಧಕ್ಕೆ ಸೋದರನ ಪುತ್ರಿಯ ಛಲ:

ಲೂಯಿಸ್‌ ಅಲ್ಬಿನೋ ಸೋದರ ರೋಜರ್‌ ಪುತ್ರಿ ಅಲಿಡಾ ಅಲೆಕ್ವಿನ್‌ (64ವರ್ಷ) ತನ್ನ ಚಿಕ್ಕಪ್ಪನ ಪತ್ತೆಗಾಗಿ ಆಕೆ ಪಟ್ಟ ಪ್ರಯತ್ನ ಒಂದೆರಡಲ್ಲ. ಡಿಎನ್‌ ಎ ಪರೀಕ್ಷೆ, ಪತ್ರಿಕಾ ವರದಿಗಳ ಕ್ಲಿಪ್ಪಿಂಗ್ಸ್‌, ಓಕ್ಲಾಂಡ್‌ ಪೊಲೀಸ್‌ ಇಲಾಖೆ, ಎಫ್‌ ಬಿಐ ಮತ್ತು ಜಸ್ಟೀಸ್‌ ಡಿಪಾರ್ಟ್‌ ಮೆಂಟ್ ನ ನೆರವಿನೊಂದಿಗೆ ಲೂಯಿಸ್‌ ಪತ್ತೆಗೆ ಮುಂದಾಗಿದ್ದರು. ಕೊನೆಗೂ ತನ್ನ ಚಿಕ್ಕಪ್ಪ ಲೂಯಿಸ್‌ ಅವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಲೂಯಿಸ್‌ ಅಲ್ಬಿನೋ ಅಗ್ನಿಶಾಮಕ ದಳ ಇಲಾಖೆಯಿಂದ ನಿವೃತ್ತರಾಗಿದ್ದಾರೆ.

ಜೂನ್‌ ತಿಂಗಳಿನಲ್ಲಿ ಲೂಯಿಸ್‌ ಅಲ್ಬಿನೋ (79ವರ್ಷ) ತನ್ನ ಹಿರಿಯ ಸಹೋದರ ರೋಜರ್‌ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಪುನರ್ ಜತೆಗೂಡಿದ್ದಾರೆ. ಅಲ್ಬಿನೋ ಮತ್ತು ರೋಜರ್‌ ಒಬ್ಬರನ್ನೊಬ್ಬರು ಬಿಗಿಯಾಗಿ ತಬ್ಬಿಕೊಂಡು ಆನಂದ ಬಾಷ್ಪ ಸುರಿಸಿದ್ದರು ಎಂದು ಅಲಿಡಾ ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ಕಳೆದ ತಿಂಗಳು ರೋಜರ್‌ (82ವರ್ಷ) ಕ್ಯಾನ್ಸರ್‌ ನಿಂದ ಕೊನೆಯುಸಿರೆಳೆದಿದ್ದರು.

ಅಲ್ಬಿನೋ ತನ್ನ ಅಪಹರಣದ ನಂತರದ ಜೀವನವನ್ನು ನೆನಪಿಸಿಕೊಳ್ಳುತ್ತಿದ್ದು, ತನ್ನನ್ನು ಯಾರು ಅಪಹರಿಸಿದ್ದು, ಯಾರ ಜೊತೆ ಬೆಳೆದಿದ್ದೆ ಎಂಬ ವಿಚಾರದ ಬಗ್ಗೆ ಯಾವುದೇ ಉತ್ತರ ನೀಡುತ್ತಿಲ್ಲ. ಕೆಲವೊಂದು ವಿಚಾರ ಗುಪ್ತವಾಗಿರಬೇಕೆಂಬುದು ಅಲ್ಬಿನೋ ಅಭಿಪ್ರಾಯವಂತೆ. ದುರದೃಷ್ಟ ಅಲ್ಬಿನೋ ತಾಯಿಯದ್ದು, ತನ್ನ ಮಗು (ಅಲ್ಬಿನೋ) ಏನಾಯ್ತು ಎಂಬ ಕೊರಗಿನಲ್ಲೇ 2005ರಲ್ಲಿ ಕೊನೆಯುಸಿರೆಳೆದಿದ್ದರು.

ಟಾಪ್ ನ್ಯೂಸ್

Rain

Rain: ದ.ಕ.ಜಿಲ್ಲೆಯ ಹಲವೆಡೆ ಮಳೆ; ಸೆ.24ಕ್ಕೆ ಕರಾವಳಿಗೆ ರೆಡ್‌ ಅಲರ್ಟ್‌

1-ravi

Secularism ಯುರೋಪಿಯನ್ ಪರಿಕಲ್ಪನೆ, ಭಾರತದಲ್ಲಿ ಅಗತ್ಯವಿಲ್ಲ: ತಮಿಳುನಾಡು ರಾಜ್ಯಪಾಲ

Yadagiri

Yadagiri: ಸಿಡಿಲು ಬಡಿದು‌ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತ್ಯು!

1-udaaa

Israeli ಪಡೆಗಳಿಂದ ಲೆಬನಾನ್ ಮೇಲೆ ಭಾರೀ ದಾಳಿ: 182 ಕ್ಕೂ ಹೆಚ್ಚು ಮೃ*ತ್ಯು

Kannan

ಪ್ರಸ್ತುತ ರಾಜಕೀಯ ನಾಯಕರಿಗೆ ಸಮಾಜ ಕಟ್ಟುವ ಕೈಂಕರ್ಯ ಮರೆತಿದೆ: ಹಿರೇಮಗಳೂರು ಕಣ್ಣನ್ 

1-dssadas

Badlapur ಪೊಲೀಸ್ ರಿವಾಲ್ವರ್ ಕಸಿದು ಗುಂಡು ಹಾರಿಸಿದ ರೇ*ಪ್ ಆರೋಪಿ!!

siddanna-2

MUDA ಹಗರಣ: ಸಿಎಂ ಸಿದ್ದರಾಮಯ್ಯ ಭವಿಷ್ಯ ಹೈಕೋರ್ಟ್ ನಲ್ಲಿ ನಾಳೆ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-udaaa

Israeli ಪಡೆಗಳಿಂದ ಲೆಬನಾನ್ ಮೇಲೆ ಭಾರೀ ದಾಳಿ: 182 ಕ್ಕೂ ಹೆಚ್ಚು ಮೃ*ತ್ಯು

Israel: ವೈಮಾನಿಕ ದಾಳಿಯಲ್ಲಿ ಹಮಾಸ್‌ ನಾಯಕ ಯಾಹ್ಯಾ ಸಾವು? ಇಸ್ರೇಲ್‌ ತನಿಖೆ

Israel: ವೈಮಾನಿಕ ದಾಳಿಯಲ್ಲಿ ಹಮಾಸ್‌ ನಾಯಕ ಯಾಹ್ಯಾ ಸಾವು? ಇಸ್ರೇಲ್‌ ತನಿಖೆ

Sri Lanka: ಶ್ರೀಲಂಕಾ ನೂತನ ಅಧ್ಯಕ್ಷರಾಗಿ ದಿಸ್ಸಾನಾಯಕೆ ಆಯ್ಕೆ- ಭಾರತಕ್ಕೆ ಹೊಸ ಸಮಸ್ಯೆ!

Sri Lanka: ಶ್ರೀಲಂಕಾ ನೂತನ ಅಧ್ಯಕ್ಷರಾಗಿ ದಿಸ್ಸಾನಾಯಕೆ ಆಯ್ಕೆ- ಭಾರತಕ್ಕೆ ಹೊಸ ಸಮಸ್ಯೆ!

ಪ್ರಧಾನಿ ಮೋದಿ ಶಾಂತಿಮಂತ್ರಕ್ಕೆ ಅಮೆರಿಕ ಶ್ಲಾಘನೆ

PM Modi ಶಾಂತಿಮಂತ್ರಕ್ಕೆ ಅಮೆರಿಕ ಶ್ಲಾಘನೆ

arrested

Italy; ಅತ್ಯಾ*ಚಾರಿಗೆ ಪುರುಷತ್ವ ಹರಣ : ಶೀಘ್ರ ಹೊಸ ಕಾನೂನು?

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

8

Virajpete: ಮನೆಯಂಗಳದಲ್ಲಿ ಕಾಡಾನೆ; ಗ್ರಾಮಸ್ಥರಲ್ಲಿ ಆತಂಕ

1-rrrr

Embarrassing; ಹಣ ನೀಡದೆ ಮದ್ಯದ ಬಾಟಲಿ ಸಮೇತ ಪರಾರಿಯಾಗಿ ಬಂಧನಕ್ಕೊಳಗಾದ ಪೊಲೀಸ್!

Rain

Rain: ದ.ಕ.ಜಿಲ್ಲೆಯ ಹಲವೆಡೆ ಮಳೆ; ಸೆ.24ಕ್ಕೆ ಕರಾವಳಿಗೆ ರೆಡ್‌ ಅಲರ್ಟ್‌

1-ravi

Secularism ಯುರೋಪಿಯನ್ ಪರಿಕಲ್ಪನೆ, ಭಾರತದಲ್ಲಿ ಅಗತ್ಯವಿಲ್ಲ: ತಮಿಳುನಾಡು ರಾಜ್ಯಪಾಲ

Untitled-1

Udupi-D.K; ಪ್ರತ್ಯೇಕ ಪ್ರಕರಣ: ನಾಲ್ವರು ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.