Rabkavi Banhatti: ಸೆ. 24 ರಿಂದ ಉತ್ತರ ಕರ್ನಾಟಕದ ಮದ್ದಿನ(ಪಟಾಕಿ) ಜಾತ್ರೆ

ಭಾವೈಕ್ಯತೆಯ ಹರಿಕಾರ ಬೆಡಗಿನ ವಚನಕಾರ, ಶ್ರೀ ಕಾಡಸಿದ್ದೇಶ್ವರರ ಮಹಾಜಾತ್ರೆ

Team Udayavani, Sep 23, 2024, 6:23 PM IST

RabkaviRabkavi Banhatti: ಸೆ. 24 ರಿಂದ ಉತ್ತರ ಕರ್ನಾಟಕದ ಮದ್ದಿನ(ಪಟಾಕಿ) ಜಾತ್ರೆ

ರಬಕವಿ-ಬನಹಟ್ಟಿ : ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಬನಹಟ್ಟಿ ನಗರವು ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ಸಹಕಾರ, ಜವಳಿ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಯನ್ನು ನಾಡಿಗೆ ನೀಡುತ್ತಾ ಬಂದಿದೆ, ಈ ನಗರದ ಆರಾಧ್ಯ ದೇವರು ಶ್ರೀ ಕಾಡಸಿದ್ದೇಶ್ವರರ ಜಾತ್ರೆ ಅತಿ ವಿಜೃಂಭಣೆಯಿಂದ ಪ್ರತಿ ವರ್ಷ ನಡೆಯುತ್ತದೆ. ಜಾತ್ರೆಯಲ್ಲಿ ಜಾತಿ ಬೇಧ ಭಾವವಿಲ್ಲದೆ ಹರಕೆ ರೂಪದಲ್ಲಿ ಅಪಾರ ಪ್ರಮಾಣದ ಮದ್ದು ಸುಡುವುದು ವಿಶೇಷವಾಗಿದ್ದು, ಮದ್ದಿನ ಜಾತ್ರೆಯೆಂದೆ ಹೆಸರಾಗಿರುವ ಜಾತ್ರಾ ಮಹೋತ್ಸವವು ಇದೇ ಸೆ. 24 ರಿಂದ 3 ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ.

ಶತ ಶತಮಾನಗಳಿಂದಲೂ ಶರಣರು, ಸತ್ಪುರುಷರು, ತಪಸ್ವಿಗಳು, ಪವಾಡಪುರುಷರು ತಮ್ಮದೇ ಆದ ಮಹಿಮೆಯಿಂದ ಲೋಕೋದ್ಧಾರ ಗೈಯುತ್ತ ಬಂದಿದ್ದಾರೆ. ಅಂತಹ ಮಹಾಮಹಿಮರಲ್ಲಿ ವಚನ ಸಾಹಿತ್ಯ ಸೃಷ್ಠಿಗೆ ಕಾರಣಿಕರ್ತರಲ್ಲಿ ಪ್ರಮುಖರಾಗಿರುವ ಪವಾಡ ಪುರುಷ ಶ್ರೀ ಕಾಡಸಿದ್ದೇಶ್ವರರು `ಕಾಡನೊಳಗಾದ ಶಂಕರಪ್ರಿಯ ಚನ್ನ ಕದಂಬ ಲಿಂಗನಿರ್ಮಾಯ ಪ್ರಭುವೇ’ ಎಂಬ ಅಂಕಿತ ನಾಮದಿಂದ 517 ಬೆಡಗಿನ ವಚನಗಳನ್ನು ರಚಿಸಿದ್ದಾರೆ.

ಶ್ರೀ ಕಾಡಸಿದ್ಧೇಶ್ವರರು ತಾತ್ವಿಕವಾಗಿ ವೀರಶೈವ ಧರ್ಮ ಪ್ರವರ್ತಕರು. ಗುರು ಸಂಗಮೇಶ್ವರ ದೇವರಿಂದ ಅನುಗ್ರಹಿತರಾಗಿ ಶಿವಯೋಗ ಸಾಧನೆಗೈದವರು. ಅವರ ಬೆಡಗಿನ ವಚನಗಳಲ್ಲಿ ಜೀವತತ್ವ ಹಾಗೂ ಶಿವತತ್ವಗಳನ್ನು ಸಂಯೋಗಗೊಳಿಸಿ ತಮ್ಮನ್ನು ಶೂನ್ಯದಲ್ಲಿ ನಿರಾಳವಾಗಿಸಿಕೊಂಡ ಶಿವಯೋಗಿಗಳು. ಸಮಗ್ರ ವಚನ ಸಂಪುಟ ಜನಪ್ರಿಯ ಆವೃತ್ತಿಯ ಸಂಕೀರ್ಣ ಸಂಪುಟ ಐದರಲ್ಲಿ ಶ್ರೀ ಕಾಡಸಿದ್ಧೇಶ್ವರರ ಎಲ್ಲ ವಚನಗಳನ್ನು ಪರಿಷ್ಕರಿಸಿ ಪ್ರಕಟಿಸಲಾಗಿದೆ. ಇದರಿಂದಾಗಿ ಅವರ ಎಲ್ಲ517ವಚನಗಳ ಸಮಗ್ರ ಅಧ್ಯಯನಕ್ಕೆ ತುಂಬ ಅನುಕೂಲವಾಗಿದೆ.

ಕಾಡಸಿದ್ಧೇಶ್ವರರು ಸಿದ್ಧ ಸಂಪ್ರದಾಯಕ್ಕೆ ಸೇರಿದವರು. ಈ ಪಂಥ ಸ್ವರೂಪ ಕಾಲಾನಂತರ ರೂಪಾಂತರಗೊಂಡು, ಅನ್ಯ ಪಂಥಗಳೊಂದಿಗೆ ಲೀನವಾಯಿತು. ವೀರಶೈವರಲ್ಲಿ ರೇವಣಸಿದ್ದ, ಅಮೋಘಸಿದ್ಧ ಇವರನ್ನೊಳಗೊಂಡ ಸಂಪ್ರದಾಯವಿದೆ. ಇದಕ್ಕೆ ಹೊರತಾಗಿ ಸಿದ್ಧಗಿರಿ ಮಠದ ಒಂದು ಸಂಪ್ರದಾಯ ಪ್ರತ್ಯೇಕವಾಗಿ ಬೆಳೆದು ಬಂದಿದೆ. ವಚನಕಾರ ಕಾಡಸಿದ್ದೇಶ್ವರರು ಈ ಸಿದ್ಧಗಿರಿಮಠದ ಪರಂಪರೆಗೆ ಸೇರಿದ ಪೀಠಾಪತಿಗಳಲ್ಲಿ ಒಬ್ಬರಾಗಿದ್ದರೆಂದು ವಿದ್ವಾಂಸರು ತಿಳಿಸಿದ್ದಾರೆ.

ಮೂಲ ಹಾಗೂ ಹಿನ್ನಲೆ :
ಮೂಲ ಶ್ರೀ ಕಾಡಸಿದ್ದೇಶ್ವರರು 13ನೇ ಶತಮಾನದಲ್ಲಿ ಅಥಣಿ ಸಮೀಪದ ಶೇಗುಣಸಿ ಗೌಡರ ಮನೆತನದಲ್ಲಿ ಜನ್ಮತಾಳಿದವರಾಗಿದ್ದು, ಅವರ ಜೀವನ ಚರಿತ್ರೆಯಂತೆ ಜೀವಿ ಕಾಲದ ಬಗೆಗೂ ಭಿನ್ನಾಭಿಪ್ರಾಯಳಿವೆ. ಅವರ ವಚನಗಳನ್ನು ದ್ವಿತೀಯ ಬಾರಿಗೆ ಪ್ರಕಟಿಸಿದ ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರಿಗಳು 12 ನೇ ಶತಮಾನವೆಂದು ಹೇಳಿದರೆ, ಶ್ರೀ ಕಾಡಸಿದ್ದೇಶ್ವರರು ಕ್ರಿ.ಶ. 1725 ರಲ್ಲಿ ಇದ್ದಿರಬಹುದೆಂದು ಆರ್. ನರಸಿಂಹಾಚಾರ್ಯರು ಕವಿಚರಿತ್ರೆಯ 2ನೇ ಭಾಗದಲ್ಲಿ ಊಹೆ ಮಾಡಿದ್ದಾರೆ. ಚಾಯಪ್ಪ ದೇಸಾಯಿ ಕುವಲಯಾನಂದ (1734)ದಲ್ಲಿ ಕಾಡಸಿದ್ದೇಶ್ವರರ ಉಲ್ಲೇಖವಿರುವುದರಿಂದ ಕವಿಚರಿತ್ರೆಕಾರರ ಅಭಿಪ್ರಾಯ ಸರಿಯೆನಿಸುತ್ತದೆ. ಇದಕ್ಕೆ ಪೂರಕ ಎನ್ನುವಂತೆ ಇವರ ವಚನಗಳಲ್ಲಿ ಅನೇಕ ಉರ್ದು ಪದಗಳು ಸಿಗುತ್ತವೆ. ಹೀಗಾಗಿ ಇವರ ಕಾಲದ ಕುರಿತು ಒಮ್ಮತವಿಲ್ಲ. ಅವರ ಬದುಕು ರೋಚಕವಾದದ್ದು.

ಗುಂಡೇವಾಡಿ, ಯಡೂರು, ಸಿದ್ಧಗಿರಿ ಇನ್ನಿತರೆ ಸ್ಥಳಗಳಲ್ಲಿ ತಪಗೈದು ಕರ್ನಾಟಕ ತುಂಬೆಲ್ಲಾ ಸಂಚರಿಸಿ ಧಾರ್ಮಿಕ ಜಾಗತಿಯನ್ನುಂಟು ಮಾಡಿದ್ದಾರೆ. ಕೊಲ್ಲಾಪುರ ಸಮೀಪ ಇರುವ ಸಿದ್ಧಗಿರಿ ಅವರ ಸಾಧನೆಯ ಮುಖ್ಯ ಕ್ಷೇತ್ರ ಹಾಗೂ ಪೀಠವಾಗಿತ್ತು.

ಶಿರಸಂಗಿಯ ದೇಸಾಯಿ ಮನೆತನದವರು ಕಾಡಸಿದ್ದೇಶ್ವರರಲ್ಲಿ ಅಪಾರ ಭಕ್ತಿ, ಗೌರವವುಳ್ಳವರಾಗಿದ್ದರಿಂದ ಅವರನ್ನು ಕುಲಗುರುವನ್ನಾಗಿ ಮಾಡಿಕೊಂಡಿದ್ದರು. ದೇವತಾ ಸ್ವರೂಪವಾಗಿದ್ದ ಶ್ರೀ ಕಾಡಸಿದ್ದೇಶ್ವರರು ಭಂಗಿಯ ಅವತಾರ ತಾಳಿ ಮಾಯೆಯನ್ನು ಗೆದ್ದರೆಂಬ ಖ್ಯಾತಿ ಇದೆ. ಅವರು ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಅಪಾರ ಶಿಷ್ಯ ಸಮೂಹವನ್ನು ಹೊಂದಿದ್ದರು.

ಶ್ರೀ ಕಾಡಸಿದ್ದೇಶ್ವರರ ಮೊದಲನೇ ತಪ್ಪಸಿನ ಸ್ಥಳ ಗುಂಡೇವಾಡಿಯಾಗಿದ್ದು. ಇದು ಅಥಣಿ ನಗರದ ಉತ್ತರಕ್ಕೆ ಎಂಟು ಮೈಲು ದೂರದಲ್ಲಿದೆ. ಅಲ್ಲಿ ಕಾಡಸಿದ್ದೇಶ್ವರ ಮಠವಿದ್ದು, ಒಮ್ಮೆ ಅಲ್ಲಿಯ ಜನರಿಗೆ ನೀರಿನ ತೊಂದರೆಯಾಗಿ ಹಾಹಾಕಾರವೆದ್ದಾಗ ಜನರು ಇವರಿಗೆ ಮೊರೆಯಿಡಲು ತಮ್ಮ ಹಸ್ತದಿಂದ ನೆಲಕ್ಕೆ ಅಪ್ಪಳಿಸಿದರು. ಆಗ ನೆಲದಿಂದ ನೀರು ಉತ್ಪತ್ತಿಯಾಗಿ ಹಳ್ಳವಾಗಿ ಹರಿದು ಅದು ಇಂದಿಗೂ ವಿಭೂತಿ ಹಳ್ಳವಾಗಿ ಪ್ರಸಿದ್ಧಿಯಾಗಿದೆ.

ಶ್ರೀ ಕಾಡಸಿದ್ದೇಶ್ವರರು ಮಿರ್ಜಿಯ ಮೀರಾಸಾಹೇಬರ ಎದುರು ಅಡ್ಡ ಗೋಡೆ ಮೇಲೆ ಕುಳಿತು, ಅದನ್ನು ನಡೆಸಿ ಪವಾಡ ಮಾಡಿದ ಕಥೆ ಜನಜನಿತವಾಗಿದೆ. ಈಗಲೂ ಕಾಡಸಿದ್ದೇಶ್ವರರ ದೇವಸ್ಥಾನದಲ್ಲಿ ಮೀರಾಸಾಬರ ನೆನಪಿಗೆ ಒಂದು ಕಟ್ಟೆಯಿರುವುದು ಗಮನಾರ್ಹ.

ಜಾತ್ರೆ :
ಶ್ರೀ ಕಾಡಸಿದ್ದೇಶ್ವರರು ಧರ್ಮ ಪ್ರಚಾರ ಮಾಡುತ್ತ ಬನಹಟ್ಟಿಗೆ ಆಗಮಿಸಿ ಇಲ್ಲಿ ತಪಗೈದ ಕಾರಣ, ಪುರದ ಆರಾಧ್ಯ ದೈವರಾಗಿದ್ದಾರೆ.

ಬನಹಟ್ಟಿಯ ದಕ್ಷಿಣ ದಿಕ್ಕಿನಿಂದ ಉತ್ತರ ದಿಕ್ಕಿಗೆ ಎದುರು ಹರಿಯುವ ಹಳ್ಳದ ಎತ್ತರದ ಬೆಟ್ಟದಲ್ಲಿ ಸುಂದರವಾದ ಶ್ರೀ ಕಾಡಸಿದ್ದೇಶ್ವರರ ದೇವಸ್ಥಾನವಿದ್ದು, 1883 ರಲ್ಲಿ ಕೊಣ್ಣೂರ ಮನೆತನದವರು ಈ ದೇವಸ್ಥಾನದ ಸ್ಥಾಪನೆಗೆ ಮೂಲ ಕಾರಣಿಕರ್ತರೆಂದು ಹೇಳಲಾಗಿದೆ.

ದೇವಸ್ಥಾನದ ಮುಖ್ಯ ದ್ವಾರವು ಕ್ರಿ.ಶ. 1942ರಲ್ಲಿ ಸ್ಥಾಪಿತಗೊಂಡಿದೆ. ಅಲ್ಲದೆ 1949ರಲ್ಲಿ ಶ್ರೀ ಕಾಡಸಿದ್ದೇಶ್ವರ ಸೇವೆಗಾಗಿ ಜಮಖಂಡಿಯ ಮಹಾರಾಜರ ಮನವೊಲಿಸಿ ರಥ ತಂದಿದ್ದಾರೆ. ಜಾತ್ರೆಯ ದಿನ ರಥವನ್ನು ಹೂವು, ಕಂಠಮಾಲೆ ಹಾಗೂ ವಿದ್ಯುತ್ ದೀಪಾಲಂಕಾರಗಳಿಂದ ಶೃಂಗರಿಸುತ್ತಾರೆ.

ಮೂರು ದಿನಗಳ ಕಾಲ ಅತೀ ವಿಜೃಂಭಣೆಯಿಂದ ನೆರವೇರುವ ಈ ಜಾತ್ರೆಯಲ್ಲಿ ಮದ್ದು ಸುಡುವುದು ವಿಶೇಷವಾಗಿದ್ದು ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಶ್ರೀ ಕಾಡಸಿದ್ಧೇಶ್ವರರಲ್ಲಿ ಮದ್ದು ಸುಡುವ ಹರಕೆ ಹೊತ್ತು ಕೊಳ್ಳುತ್ತಾರೆ. ಮತ್ತು ಜಾತ್ರೆಯ ದಿನ ಬೇರೆ ಬೇರೆ ಊರಿಗೆ ತೆರಳಿದ ಸ್ಥಳೀಯರು ಹಾಗೂ ಭಕ್ತರು ಅಂದು ನಗರಕ್ಕೆ ಆಗಮಿಸಿ ಲಕ್ಷಾಂತರ ರೂಪಾಯಿಗಳ ಮದ್ದನ್ನು ಸುಡುತ್ತಾರೆ. ಇದರಿಂದ ಶ್ರೀ ಕಾಡಸಿದ್ಧೇಶ್ವರರು ತಮ್ಮ ಇಷ್ಟಾರ್ಥ ನೆರವೇರಿಸುತ್ತಾರೆ ಎಂಬುದು ಇಲ್ಲಿಯ ಜನರ ಅಭಿಪ್ರಾಯವಾಗಿದೆ. ಮೂರು ದಿನಗಳವರೆಗೆ ನಡೆಯುವ ಜಾತ್ರೆ ಮೊದಲನೆಯ ದಿನ ರಥೋತ್ಸವ, ಎರಡನೆಯ ದಿನ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗಳು ಹಾಗೂ ಮೂರನೆಯ ಹಾಗೂ ಕೊನೆಯ ದಿನ ಕಳಸೋತ್ಸವ ಜರಗುತ್ತದೆ.

“ಶ್ರೀ ಕಾಡಸಿದ್ದೇಶ್ವರರು ಅದ್ವೈತವನ್ನು ಪ್ರತಿಪಾದಿಸುವುದರ ಜೊತೆಗೆ ಸಮಾಜದಲ್ಲಿನ ಕಂದಚಾರ, ಮೂಢನಂಬಿಕೆಗಳನ್ನು ಖಂಡಿಸಿದ ಪ್ರಗತಿಪರ ವಿಚಾರಧಾರೆಯ ವಚನಕಾರರು. ದೇಶ ಸಂಚಾರ ಮಾಡುತ್ತ, ಅನೇಕ ಸ್ಥಳಗಳಲ್ಲಿ ಅನುಷ್ಠಾನಗೈದವರು. ಅಂಥ ಸ್ಥಳಗಳಲ್ಲಿ ಬನಹಟ್ಟಿಯೂ ಒಂದು”
-ಮಲ್ಲಿಕಾರ್ಜುನ ಹುಲಗಬಾಳಿ ಹಿರಿಯ ಸಾಹಿತಿಗಳು, ಬನಹಟ್ಟಿ

-ಕಿರಣ ಶ್ರೀಶೈಲ ಆಳಗಿ

ಟಾಪ್ ನ್ಯೂಸ್

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

4-mudhol

Mudhol: ಟ್ರ್ಯಾಕ್ಟರ್ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.