ಪ್ರಸ್ತುತ ರಾಜಕೀಯ ನಾಯಕರಿಗೆ ಸಮಾಜ ಕಟ್ಟುವ ಕೈಂಕರ್ಯ ಮರೆತಿದೆ: ಹಿರೇಮಗಳೂರು ಕಣ್ಣನ್ 

ದಿ. ಉಲ್ಲಾಳ ದಯಾನಂದ ನಾಯಕರ ಜನ್ಮ ಶತಾಬ್ಧಿ ಕಾರ್ಯಕ್ರಮ, ದಯಾನಂದ ನಾಯಕರ ಜೀವನ ಹಲವರಿಗೆ ಮಾದರಿ

Team Udayavani, Sep 23, 2024, 7:49 PM IST

Kannan

ಮೂಡಿಗೆರೆ: ನಿಮ್ಮ ಹೃದಯದಲ್ಲಿ ನನ್ನ ಜೀವನದ ನೆನಪು ಮರಣದ ನಂತರವೂ ಸಾವಿರ ಕಾಲ ಇರುವ ರೀತಿ ಬಾಳಿ ಬದುಕಬೇಕು ಎಂದು ಹಿರೇಮಗಳೂರು ಕಣ್ಣನ್ ತಿಳಿಸಿದರು.

ಇಲ್ಲಿನ ಜೆಸಿ ಭವನದಲ್ಲಿ ನಡೆದ ದಿ. ಉಲ್ಲಾಳ ದಯಾನಂದ ನಾಯಕರ ಜನ್ಮ ಶತಾಬ್ಧಿ ಕಾರ್ಯಕ್ರಮದಲ್ಲಿ ಮಾತನಾಡಿ ಮೇಲಿನ ವಾಕ್ಯ ನಾಯಕರಿಗೆ ಸದಾ ಪ್ರಸ್ತುತ ಹುಟ್ಟಿದಾಗ ಉಸಿರಿರುತ್ತದೆ ನಂತರ ಹೆಸರು ಬರುವುದು ಆ ಹೆಸರು ಚಿರಸ್ಥಾಯಿಯಾಗಿರಬೇಕು ಆದರೆ ಧಾರ್ಮಿಕವಾಗಿ ಇಂದು ಹಬ್ಬ ಹರಿದಿನಗಳಲ್ಲಿ ಸಂತೋಷವಾಗಿ ಕುಣಿಯೋಣ ಬಾರ ಎಂದರೆ. ಕೆಲವರು ಕೆಣಕೋಣ ಬಾರ ಎಂದರೆ, ರಾಜಕೀಯ ನಾಯಕರು ನುಂಗೋಣ ಬಾರ ಎನ್ನುತ್ತಿದ್ದು. ಸಮಾಜ ಕಟ್ಟುವ ಕೈಂಕರ್ಯ ಮರೆತು ಹೋಗಿದೆ. ದೇಶ ಭಕ್ತ, ದೇಶ ಪ್ರೇಮಿ ಎಂಬ ವಾಕ್ಯಗಳೇ ನಾಶವಾಗಿವೆ. ಮನುಷ್ಯನಲ್ಲಿ ಸಮಾಜ ಕಟ್ಟುವ ಸುಗುಣಗಳಿರಬೇಕು. ಮತ್ಸರ ಬಿಟ್ಟು ಸಮಾಜ ಬೆಳೆಸಬೇಕು ಎಂದರು.

ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಮಾತನಾಡಿ ದಯಾನಂದ ನಾಯಕರ ಬಗ್ಗೆ ಮಾತನಾಡುವುದು ಸೂರ್ಯನಿಗೆ ಬೆಟ್ಟು ಮಾಡಿದಷ್ಟು ಸಮ. ವ್ಯಾಪಾರಕ್ಕಾಗಿ ಬಂದವರು. ಅನ್ನಕ್ಕಾಗಿ ಮಾತ್ರ ಉಳಿಸಿಕೊಂಡು ಉಳಿದೆಲ್ಲ ಸಮಾಜಕ್ಕೆ ದಾನ ಮಾಡಿದವರು. ಜೀವನದ ದಾರಿ ಹೇಗೆ ನಡೆಸಬೇಕು ಎಂಬ ಸಂದರ್ಭದಲ್ಲಿ ಸಂಸ್ಕಾರ ನೀಡುವ ಶಿಕ್ಷಣ ಕೊಡಿಸಿದರು. ಸಮಾಜದಲ್ಲಿ ಯುವಕರಲ್ಲಿ ದೇಶಾಭಿಮಾನ ಹುಟ್ಟುವ ಕೆಲಸದ ಜೊತೆಗೆ ಸಿದ್ದಾಂತದಲ್ಲಿ ರಾಜಿ ಆಗದೆ ಜಾತಿ, ಮತ, ಭೇದ ಮೀರಿ ದೇಶಕ್ಕೆ ಏನು ಕೊಡಬೇಕು ಎಂಬ ಮನಸ್ಸಿನ ಯುವ ಪೀಳಿಗೆ ತಯಾರು ಮಾಡಿದರು. ರಾಜಕಾರಣದಲ್ಲಿ ವೈಯಕ್ತಿಕ ಬೇಡವೇ ಬೇಡ ನಿಸ್ವಾರ್ಥವಾಗಿ ಬದುಕೋಣ ಎಂದು ತೋರಿಸಿದರು ಎಂದರು.

ಸ್ವಾರ್ಥಕ್ಕಾಗಿ ಸಮಾಜ ಬಳಸಿಕೊಂಡಿಲ್ಲ:  
ಮಾಜಿ ಸಚಿವ ಬಿ.ಎಲ್. ಶಂಕರ್ ಮಾತನಾಡಿ ದಯಾನಂದ ನಾಯಕರು ಸಂಘಟನೆಗಾಗಿ ದುಡಿದವರು, ರಾಜಕೀಯಕ್ಕಾಗಿ ಆಸೆ ಪಟ್ಟವರಲ್ಲ. ಠಾಕ್ರೆ,  ಯಡಿಯೂರಪ್ಪ, ವಾಜಪೇಯಿ, ಆಡ್ವಾಣಿಯವರ ಸಂಪರ್ಕವಿದ್ದರೂ ತನಗಾಗಿ ಬಳಸದೆ ಸಮಾಜಕ್ಕಾಗಿ ಬಳಸಿಕೊಂಡವರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ  ಸಂಘವನ್ನು ನಿಷೇಧಿಸಿದಾಗ ಮೂರು ಬಾರಿ ಸಂಘಟನೆಗಾಗಿ ಜೈಲು ಸೇರಿದ್ದರು. ಎಲ್ಲಾ ಸಂಘಟನೆಯಲ್ಲೂ ಒಳ್ಳೆಯವರು ಇರಬೇಕು ಎನ್ನುವ ಅಭಿಪ್ರಾಯ ನಾಯಕರು ಹೊಂದಿದ್ದರು. ಸಮಾಜದಲ್ಲಿ ಇಂದು ಭ್ರಷ್ಟಾಚಾರ, ಹಣ ಮಾಡುವ ಕುತಂತ್ರಿಗಳೇ ತುಂಬಿದ್ದು ಈ ಕ್ಯಾನ್ಸರ್ ಗುಣ ಮಾಡಿದರೆ ಮಾತ್ರ ಸಮಾಜ ಉಳಿಯಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸೀತಾರಾಮ್ ಕೆದಿಲಾಯ, ಕಾಸ ನಿರ್ಮಲ್ ಕುಮಾರ್, ಸುಮತಿ ದಯಾನಂದ ನಾಯಕ್, ಎಂ. ಆರ್. ಜಗದೀಶ್, ಎನ್ಎಲ್ ಸುಂದರೇಶ್ವರ್ ಎಂಜಿ ದಿನೇಶ್, ಕೆಂಜಿಗೆ ಕೇಶವ್, ಪ್ರಶಾಂತ್ ಚಿಪ್ರಗುತ್ತಿ, ದೀಪಕ್ ದೊಡ್ಡಯ್ಯ, ಜೈರಾಮ್ ಬಿದ್ರಹಳ್ಳಿ, ಸುಂದರೇಶ್ ಕೊಣಗೆರೆ, ಮನಮೋಹನ್,  ಜಗದೀಪ್,  ಸುರೇಶ್ ಮತ್ತಿತರರಿದ್ದರು.

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kottigehara-Bill

Kottigehara: 35 ವರ್ಷಗಳ ಹಿಂದೆ ಸೇವಿಸಿದ್ದ ಊಟದ ಬಿಲ್‌ ಪಾವತಿ!

13-kudremukh-1

Kudremukh-ಎಸ್.ಕೆ.ಬಾರ್ಡರ್ ರಾಜ್ಯ ಹೆದ್ದಾರಿ; ಗುಂಡಿಗಳ ರಸ್ತೆ

1-ckm

Chikkamagaluru: ಕಿರುಕುಳ, ಮಹಿಳೆ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ಸರ್ವೇ ಸಿಬಂದಿ ಆತ್ಮಹತ್ಯೆ

Sringeri ವಿಧುಶೇಖರ ಶ್ರೀಗಳ 40 ದಿನಗಳ ಯಾತ್ರೆ ಸಂಪನ್ನ

Sringeri ವಿಧುಶೇಖರ ಶ್ರೀಗಳ 40 ದಿನಗಳ ಯಾತ್ರೆ ಸಂಪನ್ನ

12

Mudigere: ನೇಣು ಬಿಗಿದುಕೊಂಡು‌ ಆತ್ಮಹ*ತ್ಯೆಗೆ ಶರಣಾದ ಸರ್ವೇ ಅಧಿಕಾರಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.