India; ಒಂದು ದೇಶ, ಎರಡು ಚಿನ್ನ: ಚೆಸ್ ವೀರರಿಗೆ ಅಭಿನಂದನೆ
ಭಾರತೀಯರ ಸಾಧನೆ ಕೊಂಡಾಡಿದ ಪ್ರಧಾನಿ ಮೋದಿ, ವಿಶ್ವನಾಥನ್ ಆನಂದ್, ಸಚಿನ್ ತೆಂಡುಲ್ಕರ್
Team Udayavani, Sep 23, 2024, 11:58 PM IST
ಹೊಸದಿಲ್ಲಿ: ಚೆಸ್ ಒಲಿಂಪಿಯಾಡ್‌ನಲ್ಲಿ ಐತಿಹಾಸಿಕ ಬಂಗಾರ ಗೆದ್ದ ಭಾರತೀಯ ಪುರುಷರ ಮತ್ತು ಮಹಿಳಾ ತಂಡಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಪ್ರಧಾನಿ ನರೇಂದ್ರ ಮೋದಿ, ಚೆಸ್ ದಂತಕತೆ ವಿಶ್ವನಾಥನ್ ಆನಂದ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಸೇರಿ ಅನೇಕರು ಶುಭ ಹಾರೈಸಿದ್ದಾರೆ. “ಒಂದು ದೇಶ, ಎರಡು ಚಿನ್ನ’ ಎಂಬುದು ತೆಂಡುಲ್ಕರ್ ಶ್ಲಾಘನೆ.
ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಮುಕ್ತಾಯಗೊಂಡ 45ನೇ ಚೆಸ್ ಒಲಿಂಪಿಯಾಡ್‌ನ 11ನೇ ಮತ್ತು ಅಂತಿಮ ಸುತ್ತಿನಲ್ಲಿ ಭಾರತ ಪುರುಷರ ತಂಡ ಸ್ಲೊವೇನಿಯಾ ವಿರುದ್ಧ, ಮಹಿಳಾ ತಂಡ ಅಜರ್‌ಬೈಜಾನ್ ವಿರುದ್ಧ ಗೆದ್ದು ಎರಡೂ ವಿಭಾಗಳಲ್ಲೂ ಬಂಗಾರದ ಮೆರಗು ಮೂಡಿಸಿತ್ತು. ಈ ಕೂಟದಲ್ಲಿ ಭಾರತದ ಎರಡೂ ತಂಡಗಳಿಗೆ ಒಲಿದ ಚೊಚ್ಚಲ ಬಂಗಾರವಿದು. ಹೀಗಾಗಿ ಇಡೀ ಕ್ರೀಡಾಲೋಕವೇ ಈಗ ಭಾರತೀಯ ಚೆಸ್‌ನತ್ತ ತಿರುಗಿ ನೋಡುತ್ತಿದೆ.
ವಿಶ್ವನಾಥನ್ ಆನಂದ್ ಮೆಚ್ಚುಗೆ
ಬಂಗಾರ ಗೆದ್ದ ಭಾರತೀಯ ಚೆಸ್ ತಂಡದ ಸಾಧನೆಗೆ 5 ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾನೊಂದು ವೇಳೆ ಆಡಲು ಬಯಸಿದ್ದರೆ, ಇಂಥ ತಂಡದೊಂದಿಗೆ ಆಡುತ್ತಿದ್ದೆ ಎಂದು ವಿಶಿ ಹೇಳಿದ್ದಾರೆ. ವಿಜೇತರಿಗೆ ಆನಂದ್ ಅವರೇ ಟ್ರೋಫಿ ನೀಡಿದ್ದು ವಿಶೇಷವಾಗಿತ್ತು.
ಡಿ. ಗುಕೇಶ್, ಆರ್.ಪ್ರಜ್ಞಾನಂದ, ಅರ್ಜುನ್ ಎರಿಗೇಸಿ ಮತ್ತು ಆರ್. ವೈಶಾಲಿ ಅವರೆಲ್ಲ “ವೆಸ್ಟ್ ಬ್ರಿಡ್ಜ್ ಆನಂದ್ ಚೆಸ್ ಅಕಾಡೆಮಿ’ಯಲ್ಲಿ ಪಳಗಿದವರು ಎನ್ನುವುದು ವಿಶೇಷ.
ಸಚಿನ್ ಅಭಿನಂದನೆ
ಚೆಸ್ ಬಂಗಾರ ಗೆದ್ದ ಭಾರತೀಯ ತಂಡಗಳಿಗೆ ಅಭಿನಂದಿಸಿರುವ ಸಚಿನ್ ತೆಂಡುಲ್ಕರ್, “ಒಂದು ದೇಶ, ಎರಡು ಚಿನ್ನ’ ಎಂದು ಶ್ಲಾಘಿಸಿದ್ದಾರೆ.
ರೋಹಿತ್ ಶೈಲಿ ಅನುಕರಣೆ
ಚೆಸ್ ಒಲಿಂಪಿಯಾಡ್ ಟ್ರೋಫಿ ವಿತರಿಸುವಾಗ ಗುಕೇಶ್ ಮತ್ತು ಡಿ. ಹರಿಕಾ ಇಬ್ಬರೂ, ಟಿ20 ವಿಶ್ವಕಪ್ ಪ್ರಶಸ್ತಿ ವಿತರಣೆ ವೇಳೆ ಭಾರತದ ನಾಯಕ ರೋಹಿತ್ ಶರ್ಮ ಮೆಲ್ಲನೆ ಹೆಜ್ಜೆಯಿಟ್ಟು ಟ್ರೋಫಿಯೆಡೆಗೆ ಬಂದಂತೆ ಅನುಕರಿಸಿ ಗಮನ ಸೆಳೆದರು. ಅಂದು ರೋಹಿತ್, ಫುಟ್‌ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿ ಅವರಂತೆ ಸ್ಲೋ ವಾಕ್ ಸಂಭ್ರಮಾಚರಣೆ ಮಾಡಿದ್ದರು.
ಭಾರತ ಕನಸುಗಳಿಂದ ತುಂಬಿದೆ: ಮೋದಿ
ಪ್ರಧಾನಿ ನರೇಂದ್ರ ಮೋದಿ ಯವರು ಅಮೆರಿಕದಿಂದಲೇ ಭಾರತದ ಚೆಸ್ ತಂಡಗಳಿಗೆ ಅಭಿನಂದಿಸಿದ್ದಾರೆ. ಭಾರತೀಯರ ಚೆಸ್ ಸಾಧನೆಯನ್ನು ಮುಂದಿಟ್ಟು ನ್ಯೂಯಾರ್ಕ್‌ನಲ್ಲಿ ಮಾತನಾಡಿ ರುವ ಮೋದಿ, ಭಾರತ ದೇಶ ಶಕ್ತಿ ಮತ್ತು ಕನಸುಗಳಿಂದ ತುಂಬಿದೆ ಎಂದು ಕೊಂಡಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.