Bengaluru: ಅಕ್ರಮ ಸಂಬಂಧವೇ ನೇಪಾಲಿ ಮಹಿಳೆಯ ಕೊಲೆಗೆ ಕಾರಣ
ಪ್ರಿಯಕರನ ಜೊತೆಗೆ ಸಂಬಂಧ ಹೊಂದಿದ್ದ ಮಹಾಲಕ್ಷ್ಮೀ, ಇದೇ ವಿಚಾರವಾಗಿ ಕೊಲೆಗೈದಿದ್ದ ಪ್ರಿಯಕರ: ತನಿಖೆಯಲ್ಲಿ ಮಾಹಿತಿ
Team Udayavani, Sep 24, 2024, 7:25 AM IST
ಬೆಂಗಳೂರು: ಮೂರು ದಿನಗಳ ಹಿಂದೆ ವೈಯಾಲಿಕಾವಲ್‌ನಲ್ಲಿ ನಡೆದ ಮಹಾಲಕ್ಷಿ$¾à ಭೀಕರ ಹತ್ಯೆಗೆ ಅಕ್ರಮ ಸಂಬಂಧವೇ ಕಾರಣ ಎಂಬುದು ಇದುವರೆಗಿನ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಪಶ್ಚಿಮ ಬಂಗಾಳ ಅಥವಾ ಒಡಿಶಾ ಮೂಲದ ಆಕೆಯ ಪ್ರಿಯಕರನೇ ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದಾನೆ ಎಂಬುದು ಗೊತ್ತಾಗಿದೆ. ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಹಾಲಕ್ಷ್ಮೀ ಕೃತ್ಯ ಎಸಗಿದ ಆರೋಪಿ ಜತೆ ಅಕ್ರಮ ಸಂಬಂಧ ಹೊಂದಿರುವುದು ಪತ್ತೆಯಾಗಿದ್ದು, ಈಕೆ ಈ ಮಧ್ಯೆ ಬೇರೊಬ್ಬ ವ್ಯಕ್ತಿ ಜತೆ ಓಡಾಡುತ್ತಿದ್ದಳು ಎಂದು ಹೇಳಲಾಗಿದೆ. ಅದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಉಂಟಾಗಿದ್ದು, ಅದು ವಿಕೋಪಕ್ಕೆ ಹೋದಾಗ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಮಿಷನರ್ ಬಿ.ದಯಾನಂದ, ಕೊಲೆ ಆರೋಪಿಯ ಗುರುತು ಪತ್ತೆಯಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು. ಕೊಲೆ ಆರೋಪಿಯು ಹೊರರಾಜ್ಯದವನು ಎಂಬುದು ಗೊತ್ತಾಗಿದೆ. ಆತ ನಗರದಲ್ಲಿ ವಾಸವಾಗಿದ್ದ. ಮಹಾಲಕ್ಷ್ಮೀಯನ್ನು ಆತನೇ ಕೊಲೆ ಮಾಡಿರುವ ಕೆಲ ಸಾಕ್ಷ್ಯಗಳು ಲಭ್ಯವಾಗಿದೆ. ಕೊಲೆ ನಂತರ ಆತ ಹೊರರಾಜ್ಯಕ್ಕೆ ಪರಾರಿಯಾಗಿದ್ದಾನೆ. ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಒಂದು ತಂಡ ಹೊರರಾಜ್ಯಕ್ಕೆ ಹೋಗಿದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡುತ್ತಿದ್ದೇವೆ. ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದು, ವರದಿ ಕೈ ಸೇರಿದ ನಂತರ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿದೆ ಎಂದು ಹೇಳಿದರು.
ವರದಿ ಕೇಳಿದ ಮಹಿಳಾ ಆಯೋಗ:
ಮಹಾಲಕ್ಷ್ಮೀ ಹತ್ಯೆ ಹಂತಕನನ್ನು ಶೀಘ್ರವೇ ಬಂಧಿಸುವಂತೆ ಮತ್ತು ಪ್ರಕರಣ ಸಂಬಂಧ 3 ದಿನದೊಳಗೆ ಸಮಗ್ರ ವರದಿ ನೀಡುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಬೆಂಗಳೂರು ಪೊಲೀಸರಿಗೆ ಕೋರಿದೆ ಎಂದು ತಿಳಿದು ಬಂದಿದೆ. ಕಾಲಮಿತಿಯೊಳಗೆ ತನಿಖೆ ಪೂರ್ಣಗೊಳಿಸಬೇಕೆಂದು ಆಯೋಗವು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಆಕ್ಸೆ„ಲ್ ಬ್ಲೇಡ್, ಮಾಂಸ ಕತ್ತರಿಸುವ ಚಾಕು ಬಳಕೆ!
ನೇಪಾಳಿ ಮೂಲದ ಮಹಿಳೆ ಮಹಾಲಕ್ಷ್ಮೀಯನ್ನು ಪ್ರಿಯಕರ ಆಕ್ಸೆ„ಲ್ ಬ್ಲೇಡ್, ಮಾಂಸ ಕತ್ತರಿಸುವ ಚೂರಿಯಿಂದ ಆಕೆಯ ದೇಹವನ್ನು 50 ತುಂಡು ಮಾಡಿದ್ದಾನೆ. ಬಳಿಕ ಸೂಟ್‌ಕೇಸ್‌ನಲ್ಲಿ ದೇಹದ ತುಂಡುಗಳನ್ನು ಕೊಂಡೊಯ್ಯಲು ಪ್ರಯತ್ನಿಸಿದ್ದಾನೆ. ಇದು ಸಾಧ್ಯವಾಗದಿದ್ದಾಗ ಫ್ರಿಡ್ಜ್ನಲ್ಲಿ ಇರಿಸಿ, ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಫ್‌ಎಸ್‌ಎಲ್‌ಗೆ ಫ್ರಿಜ್ ರವಾನೆ
ಮಹಾಲಕ್ಷ್ಮೀಯ ಮೃತದೇಹಗಳನ್ನು ಇಟ್ಟಿರುವ ಫ್ರಿಡ್ಜ್ ಅನ್ನು ಸೋಮವಾರ ಎಫ್ಎಸ್‌ಎಲ್ ಅಧಿಕಾರಿಗಳು ಕೊಂಡೊಯ್ದಿದ್ದಾರೆ. ತನಿಖೆಗೆ ಪೂರಕವಾಗಿ ಎಲ್ಲಾ ರೀತಿಯ ಸ್ಯಾಂಪಲ್ ಮತ್ತು ಸಾಕ್ಷ್ಯಧಾರ ಸಂಗ್ರಹಿಸಿದ್ದ ತಜ್ಞರು, ಮನೆಯಲ್ಲಿ ರಕ್ತದ ಕಲೆಗಳು ಸಿಕ್ಕಿಲ್ಲ. ಕೊಲೆ ಆರೋಪಿ ಯಾವುದೇ ಗುರುತು ಸಿಗದಂತೆ ಮನೆಯನ್ನು ಸ್ವತ್ಛ ಮಾಡಿ, ಪರಾರಿಯಾಗಿದ್ದಾನೆ. ಹೀಗಾಗಿ ಫ್ರಿಡ್ಜ್ ಕೊಂಡೊಯ್ಯಲಾಗಿದೆ.
ಎಫ್‌ಎಸ್‌ಎಲ್ ತಜ್ಞರು ಲುಮಿನಾಲ್ ಎಂಬ ರಾಸಾಯನಿಕ ಬಳಸಿ ರಕ್ತದ ಕಲೆಗಳನ್ನು ಪತ್ತೆ ಹಚ್ಚುತ್ತಾರೆ. ಆದರೆ, ಕೊಲೆ ಪ್ರಕರಣದಲ್ಲಿ ಲುಮಿನಾಲ್ ರಾಸಾಯನಿಕ ಬಳಸಿದರೂ ರಕ್ತದ ಕಲೆಗಳು ಪತ್ತೆಯಾಗಿಲ್ಲ ಎನ್ನಲಾಗಿದೆ. ಹೀಗಾಗಿ, ಕೊಲೆ ಆರೋಪಿಯು ಯಾವುದೊ ರಾಸಾಯನಿಕ ಬಳಸಿ ಮನೆ ಸ್ವತ್ಛ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.