MeToo Case: ಅತ್ಯಾಚಾರ ಆರೋಪದಲ್ಲಿ ನಟ, ಶಾಸಕ ಮುಕೇಶ್‌ ಬಂಧಿಸಿದ ಪೊಲೀಸರು

ನಟ ಸಿದ್ದೀಕ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Team Udayavani, Sep 24, 2024, 3:55 PM IST

10

ತಿರುವನಂತಪುರಂ: ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಮಂಗಳವಾರ(ಸೆ.24ರಂದು) ನಟ, ಶಾಸಕ ಎಂ. ಮುಖೇಶ್(MLA M Mukesh) ಅವರನ್ನು ಬಂಧಿಸಲಾಗಿದೆ.

ಹೇಮಾ ಸಮಿತಿ ವರದಿ (Hema Committee Report) ಸಲ್ಲಿಕೆಯಾದ ಬಳಿಕ ಮಾಲಿವುಡ್‌ನ(Mollywood) ಕೆಲ ಖ್ಯಾತ ಕಲಾವಿದರ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬರುತ್ತಿದೆ. ನಟ, ಶಾಸಕ ಮುಕೇಶ್‌ ವಿರುದ್ಧವೂ ಅತ್ಯಾಚಾರ ಆರೋಪ ಕೇಳಿ ಬಂದಿತ್ತು.

ಮುಕೇಶ್‌ ಮೇಲಿನ ಆರೋಪವೇನು?:

2010ರಲ್ಲಿ ಕೊಚ್ಚಿಯಲ್ಲಿರುವ ತನ್ನ ಫ್ಲಾಟ್‌ನಲ್ಲಿ ಕಲಾವಿದರ ಸಂಘವಾದ ʼಅಮ್ಮಾʼ ಸದಸ್ಯತ್ವ ನೀಡುತ್ತೇನೆ ಎಂದು ಭರವಸೆ ನೀಡಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಮಾಜಿ ನಟಿರೊಬ್ಬರು ಆರೋಪಿಸಿದ್ದರು.

ಈ ಸಂಬಂಧ ಮಂಗಳವಾರ ಎಸ್‌ಐಟಿ ಮುಕೇಶ್‌ ಅವರನ್ನು ವಿಚಾರಣೆ ನಡೆಸಿದೆ. ಎಐಜಿ ಪೂಂಗಾಝಾಲಿ ನೇತೃತ್ವದಲ್ಲಿ ನಡೆದ ವಿಚಾರಣೆಯ ನಂತರ ಮುಕೇಶ್ ಅವರನ್ನು ಬಂಧಿಸಲಾಗಿದೆ.

ಮುಖೇಶ್ ಅವರು ತಮ್ಮ ವಕೀಲರೊಂದಿಗೆ ಎರ್ನಾಕುಲಂನಲ್ಲಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ಹಾಜರಾಗಿದ್ದರು ಅಲ್ಲಿ ಅವರನ್ನು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿ, ಬಂಧಿಸಲಾಗಿದೆ.

ಈ ಪ್ರಕರಣ ಸಂಬಂಧ ಸೆಪ್ಟೆಂಬರ್ 5 ರಂದು ಎರ್ನಾಕುಲಂ ಪ್ರಿನ್ಸಿಪಲ್ ಸೆಷನ್ಸ್ ನ್ಯಾಯಾಲಯವು ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು. ಅವರು ಯಾವುದೇ ದಿನ ಬೆಳಿಗ್ಗೆ 9 ಗಂಟೆಗೆ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು ಮತ್ತು ತನಿಖೆಗೆ ಸಹಕರಿಸಬೇಕು ಎನ್ನುವ ಷರತ್ತು ಹಾಕಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಲಾಗಿತ್ತು.

ಬಂಧನದ ಬಳಿಕ ನಿರೀಕ್ಷಣಾ ಜಾಮೀನು ಆಧಾರದ ಮೇಲೆ ಅವರನ್ನು ಬಿಡುಗಡೆಗೊಳಿಸಲಾಗಿದೆ.

ವಡಕ್ಕಂಚೇರಿ ,ಮರಡು ಠಾಣೆಯಲ್ಲಿ ಮುಕೇಶ್‌ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.

ಇನ್ನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನಟ ಸಿದ್ದೀಕ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರವಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದೀಕ್‌ ಅವರನ್ನು ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.

ಟಾಪ್ ನ್ಯೂಸ್

HDK-1

MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾನು ಒತ್ತಾಯಿಸಲ್ಲ: ಕೇಂದ್ರ ಸಚಿವ ಎಚ್‌ಡಿಕೆ 

12-mng

ಮುಡಾ ಪ್ರಕರಣ;ಸಿ.ಎಂ.ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದ.ಕ. ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ

18-nail-polish

Nail Polish: ಉಗುರುಗಳ ಅಂದ ಹೆಚ್ಚಿಸುವ ನೈಲ್ ಪಾಲಿಶ್ ನಲ್ಲಿದೆ ಕ್ಯಾನ್ಸರ್ ನ ರಾಸಾಯನಿಕ ಅಂಶ

Mangaluru: ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ; ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Mangaluru: ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ; ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

11-bellary

Bellary: ದರ್ಶನ್ ನನ್ನು ಭೇಟಿಯಾದ ವಕೀಲ ಸುನೀಲ್; ಹಲವು ವಿಚಾರಗಳ ಬಗ್ಗೆ ಚರ್ಚೆ

CM-preess

MUDA Scam: ಹೈಕೋರ್ಟ್‌ ಅಭಿಯೋಜನೆಗೆ ತಿರಸ್ಕರಿಸಿ ತನಿಖೆಗಷ್ಟೇ ಅನುಮತಿ ಕೊಟ್ಟಿದೆ: ಸಿಎಂ

ಧಾರವಾಡ: ವರ್ಷವಿಡೀ ಕಬ್ಬಿನ ಹಾಲು ಕೆಡದಂತೆ ಇಡುವ ತಂತ್ರ ಶೋಧಿಸಿದ ರೈತ

ಧಾರವಾಡ: ವರ್ಷವಿಡೀ ಕಬ್ಬಿನ ಹಾಲು ಕೆಡದಂತೆ ಇಡುವ ತಂತ್ರ ಶೋಧಿಸಿದ ರೈತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

088

Devara: ಅಡ್ವಾನ್ಸ್‌ ಬುಕಿಂಗ್‌ನಲ್ಲೇ ಕೋಟಿ- ಕೋಟಿ ಗಳಿಸಿದ ʼದೇವರʼ; ಎಲ್ಲಿ ಎಷ್ಟು ಗಳಿಕೆ?

Devara: ನಿರೀಕ್ಷೆಗೂ ಮೀರಿದ ಜನ; ಕೊನೆ ಕ್ಷಣದಲ್ಲಿ ʼದೇವರʼ ಪ್ರೀ ರಿಲೀಸ್‌ ಇವೆಂಟ್‌ ರದ್ದು

Devara: ನಿರೀಕ್ಷೆಗೂ ಮೀರಿದ ಜನ; ಕೊನೆ ಕ್ಷಣದಲ್ಲಿ ʼದೇವರʼ ಪ್ರೀ ರಿಲೀಸ್‌ ಇವೆಂಟ್‌ ರದ್ದು

Chiranjeevi: 69ರ ವಯಸ್ಸಿನಲ್ಲಿ ಗಿನ್ನಿಸ್ ದಾಖಲೆಗೆ ಸೇರಿತು ಮೆಗಾಸ್ಟಾರ್‌ ಚಿರಂಜೀವಿ ಹೆಸರು

Chiranjeevi: 69ರ ವಯಸ್ಸಿನಲ್ಲಿ ಗಿನ್ನಿಸ್ ದಾಖಲೆಗೆ ಸೇರಿತು ಮೆಗಾಸ್ಟಾರ್‌ ಚಿರಂಜೀವಿ ಹೆಸರು

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌

Pushpa 2: ಅಲ್ಲು ಅರ್ಜುನ್‌ ʼಪುಷ್ಪ-2ʼನಲ್ಲಿ ಕ್ರಿಕೆಟಿಗ ಡೇವಿಡ್‌ ವಾರ್ನರ್?‌- ಫೋಟೋ ವೈರಲ್

Pushpa 2: ಅಲ್ಲು ಅರ್ಜುನ್‌ ʼಪುಷ್ಪ-2ʼನಲ್ಲಿ ಕ್ರಿಕೆಟಿಗ ಡೇವಿಡ್‌ ವಾರ್ನರ್?‌- ಫೋಟೋ ವೈರಲ್

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

HDK-1

MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾನು ಒತ್ತಾಯಿಸಲ್ಲ: ಕೇಂದ್ರ ಸಚಿವ ಎಚ್‌ಡಿಕೆ 

21

Saligrama: ಚತುಷ್ಪಥ ರಸ್ತೆಯ ಅನಧಿಕೃತ  ಒತ್ತುವರಿ ತೆರವಿಗೆ ಅಂತಿಮ ಹಂತದ ಸಿದ್ಧತೆ

18(1)

Udupi: ಕತ್ತಲಲ್ಲಿ ಶೀಂಬ್ರಾ ಸೇತುವೆ: ಅಕ್ರಮಗಳ ಅಡ್ಡೆ!

3 ಡಿ ಮ್ಯೂರಲ್ ಹೃದಯಗಳೊಂದಿಗೆ ಕೆಂಪಾದ ಬೆಂಗಳೂರು ನಗರ

3 ಡಿ ಮ್ಯೂರಲ್ ಹೃದಯಗಳೊಂದಿಗೆ ಕೆಂಪಾದ ಬೆಂಗಳೂರು ನಗರ

12-mng

ಮುಡಾ ಪ್ರಕರಣ;ಸಿ.ಎಂ.ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದ.ಕ. ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.